ಪುಟ:ಭಾರತ ದರ್ಶನ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂತ

೩೧೯

೧೯೨೦ರಲ್ಲಿ ಮಾತ್ರ. ಈ ಶ್ರಮಜೀವಿಗಳ ಸಂಖ್ಯೆಯು ಭಾರತದ ರಾಜಕೀಯ ರಂಗದಲ್ಲಿ ಯಾವ ಪರಿಣಾಮ ಮಾಡುವಷ್ಟು ದೊಡ್ಡದಾಗಿರಲಿಲ್ಲ. ಅಸಂಖ್ಯಾತ ವ್ಯವಸಾಯಗಾರರ ಮತ್ತು ಅವರ ಶ್ರಮಜೀವಿಗಳ ಮಧ್ಯೆ ಸಮುದ್ರದಲ್ಲಿ ಒಂದು ಹನಿಯಂತೆ ಇದ್ದರು. ೧೯೨೦ ರಿಂದ ೧೯೩೦ರವರೆಗೆ ಅವರ ಕೂಗು ಕೇಳಿ ಬರುತ್ತಿದ್ದರೂ ಅವರಲ್ಲಿ ಯಾವ ಶಕ್ತಿಯೂ ಇರಲಿಲ್ಲ; ಅಲಕ್ಷೆ ಸಹ ಮಾಡಬಹುದಾಗಿತ್ತು, ಆದರೆ ರಷ್ಯದ ಕ್ರಾಂತಿಯಿಂದ ಕೈಗಾರಿಕಾ ಶ್ರಮಜೀವಿಗಳಿಗೆ ಒಂದು ಪ್ರಾಮುಖ್ಯತೆ ದೊರೆಯಿತು. ಕೆಲವು ದೊಡ್ಡ ಸುವ್ಯವಸ್ಥಿತ ಮುಷ್ಕರಗಳಿಂದ ಅವರ ಕಡೆ ಗಮನಕೊಡುವುದು ಅನಿವಾರವಾಯಿತು.

ವ್ಯವಸಾಯಗಾರನು ಎಲ್ಲ ಕಡೆಯಲ್ಲೂ ಇದ್ದರೂ ಮತ್ತು ಆತನ ಸಮಸ್ಯೆಯೇ ಭಾರತದ ಸಮಸ್ಯೆ ಆದರೂ ಆತನಿಗೆ ಬಾಯಿಯೇ ಇರಲಿಲ್ಲ. ರಾಜಕಾರಣಿಗಳೂ ಸರಕಾರವೂ ಆತನನ್ನು ಮರೆತರು. ರಾಜ ಕೀಯ ಚಳುವಳಿಯ ಆರಂಭದ ದಿನಗಳಲ್ಲಿ ಮಧ್ಯಮವರ್ಗದ ಉನ್ನತ ಜನರು ಮುಖ್ಯವಾಗಿ ಸರ್ಕಾರದ ಉದ್ಯೋಗಗಳಿಗಾಗಿ ಹಾತೊರೆಯುತ್ತಿದ್ದ ವಿದ್ಯಾವಂತರು ಆ ಚಳವಳಿಯ ನಾಯಕರಾದರು. ೧೮೮೫ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಮಹಾಸಭೆ ಪ್ರಾಪ್ತ ವಯಸ್ಸಿಗೆ ಬಂದಾಗ ಅಧಿಕಾರ ಧಿಕ್ಕರಿಸುವ ಉಗ್ರ ಪಕ್ಷದ ಹೊಸ ನಾಯಕತ್ವ ರೂಪುಗೊಂಡು ಮಧ್ಯಮವರ್ಗದ ಕೆಳದರ್ಜೆಯ ಜನರನ್ನೂ ವಿದ್ಯಾರ್ಥಿಗಳು ಮತ್ತು ಯುವಕರನ್ನೂ ಆಕರ್ಷಣೆಮಾಡಿತು. ಬಂಗಾಲದ ವಿಭಜನೆ ವಿರುದ್ಧ ಹೂಡಿದ ಚಳುವಳಿಯಲ್ಲಿ ದಕ್ಷರೂ ಉಗ್ರವಾದಿಗಳೂ ಆದ ಈ ಬಗೆಯ ನಾಯಕರು ಬಂಗಾಲದಲ್ಲಿ ಮುಂದೆ ಬಂದರು. ಆದರೆ ಈ ಹೊಸ ಯುಗದ ಮುಖ್ಯ ನಾಯಕನೆಂದರೆ ಮಹಾರಾಷ್ಟ್ರದ ಬಾಲಗಂಗಾಧರ ತಿಲಕ್, ಹಳೆಯ ಮುಖಂಡತ್ವದ ಪ್ರತಿನಿಧಿಯೂ ಮಹಾರಾಷ್ಟ್ರದ ವ್ಯಕ್ತಿಯೇ ಆಗಿದ್ದ. ಬಹಳ ಶಕ್ತನೂ, ಯುವಕನೂ ಆದ ಗೋಪಾಲ ಕೃಷ್ಣ ಗೋಖಲೆ ಆ ವ್ಯಕ್ತಿ, ಕ್ರಾಂತಿಕಾರಕ ಘೋಷಣೆಗಳಿದ್ದವು, ಕೋಪತಾಪಗಳಿದ್ದವು, ಪರಸ್ಪರ ಹೋರಾಟ ಅನಿವಾರವಾಯಿತು. ಈ ಘರ್ಷಣೆ ತಪ್ಪಿಸಲು ಕಾಂಗ್ರೆಸ್‌ನ ಅತ್ಯಂತ ಹಳೆಯ ನಾಯಕನಾಗಿ ರಾಷ್ಟ್ರಪಿತ ಎಂದು ಎಲ್ಲರ ಗೌರವಕ್ಕೆ ಪಾತ್ರನಾದ ದಾದಾಭಾಯಿ ನವರೋಜಿ ವಿಶ್ರಾಂತಿ ಪಡೆಯುತ್ತಿದ್ದವನು ಪುನಃ ಕಾರಕ್ಕಿಳಿಯಬೇಕಾಯಿತು. ಈ ಶಾಂತಿ ಬಹಳ ದಿನ ಉಳಿಯಲಿಲ್ಲ. ೧೯೦೭ರಲ್ಲಿ ಪುನಃ ಘರ್ಷಣೆಯಾಗಿ ಹಿಂದಿನ ಮಂದಪಕ್ಷದವರಿಗೆ ಗೆಲುವಾಯಿತು, ಸಂಸ್ಥೆಯ ಆಡಳಿತ ತಮ್ಮ ಕೈಯಲ್ಲಿದ್ದುದರಿಂದಲೂ ಮತ್ತು ಕಾಂಗ್ರೆಸ್ಸಿನಲ್ಲೂ ಮತದಾನ ಪದ್ಧತಿ ಬಹಳ ಕಠಿನವಿದ್ದುದರಿಂದಲೂ ಈ ಜಯವು ಸಾಧ್ಯ ವಾಯಿತು. ಆದರೆ ರಾಜಕೀಯ ಭಾವನೆಯ ಬಹುಸಂಖ್ಯಾತರು ತಿಲಕರ ಪರ ಇದ್ದರೆಂಬುದಕ್ಕೆ ಅನು ಮಾನವಿರಲಿಲ್ಲ. ಕಾಂಗ್ರೆಸ್ಸಿನ ಪ್ರಭಾವ ಕಡಮೆಯಾಗಿ ಜನರ ಮನಸ್ಸು ಬೇರೆ ದಾರಿ ಹಿಡಿಯಿತು. ಬಂಗಾಲದಲ್ಲಿ ಕ್ರಾಂತಿಕಾರಕ ಚಟವಟಿಕೆಗಳು ಆರಂಭವಾದವು. ರಷ್ಯ ಮತ್ತು ವಿಶ್ಲೇಂಡಿನ ಕ್ರಾಂತಿಕಾರಕ ಪಂಗಡದವರ ಮಾರ್ಗಾನುಸರಣೆಗೆ ಇಲ್ಲಿಯೂ ಆರಂಭವಾಯಿತು.

ಮುಸ್ಲಿಂ ಯುವಕರಲ್ಲಿ ಸಹ ಈ ಕ್ರಾಂತಿಕಾರಕ ಭಾವನೆ ಉತ್ಪನ್ನ ವಾಗಲಾರಂಭಿಸಿತು. ಈ ಮನೋ ಭಾವನೆ ತಡೆಗಟ್ಟಲು ಅಲಿಘಡದ ಕಾಲೇಜು ಪ್ರಯತ್ನ ಮಾಡಿತ್ತು. ಸರಕಾರದ ಪ್ರೇರಣೆಯಿಂದ ಆಗರ್ಖಾ ಮುಂತಾದವರು ಮುಸ್ಲಿಂ ಲೀಗನ್ನು ಸ್ಥಾಪಿಸಿ, ಮುಸ್ಲಿಮರಿಗೆ ಒಂದು ರಾಜಕೀಯ ವೇದಿಕೆ ಕೊಟ್ಟು ಕಾಂಗ್ರೆಸಿನಿಂದ ದೂರ ನಿಲ್ಲಿಸಿದರು. ಭಾರತದ ಮುಂದಿನ ಭವಿಷ್ಯದ ದೃಷ್ಟಿಯಿಂದ ಬಹು ಮುಖ್ಯವಾದ ಇನ್ನೊಂದು ವಿಶೇಷ ಘಟನೆ ಎಂದರೆ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆ ಏರ್ಪಡಿಸಲು ಸರ್ಕಾರ ತೀರ್ಮಾನ ಮಾಡಿತು. ಇನ್ನೂ ಮುಂದೆ ಮುಸ್ಲಿಂ ಕ್ಷೇತ್ರಗಳಾದ ಮುಸ್ಲಿಮರು ಮಾತ್ರ ಚುನಾವಣೆಗೆ ನಿಂತುಕೊಳ್ಳಲು ಸಾಧ್ಯವಿತ್ತು. ಉಳಿದ ಭಾರತೀಯರಿಂದ ಅವರನ್ನು ಪ್ರತ್ಯೇಕ್ಷಿಸಿ ಒಂದು ರಾಜಕೀಯ ಅಡ್ಡಗೋಡೆ ಹಾಕಿದ. ಅನೇಕ ಶತಮಾನಗಳ ಸಾಮೂಹಿಕ ಜೀವನ ಮತ್ತು ಈಚಿನ ಔದ್ಯೋಗಿಕ ಪ್ರಗತಿಯಿಂದ ತಾನಾಗಿ ಬೆಳೆದು ರೂಪುಗೊಳ್ಳುತ್ತಿದ್ದ ಸಂಘಟನೆ ಮತ್ತು ಸಮ್ಮಿಲನ ಕಾರ್ಯದ ಗತಿಯನ್ನು ಹಿಂದಿರುಗಿಸಿದರು. ಆರಂಭದಲ್ಲಿ ಮತದಾನ ಮಾಡುವವರ ಸಂಖ್ಯೆ ಅತ್ಯಲ್ಪವಿದ್ದುದರಿಂದ ಈ ವಿಭಜನೆ ಅಷ್ಟು ಅನರ್ಥಕಾರಿ ಎನಿಸಲಿಲ್ಲ. ಆದರೆ ಕ್ರಮೇಣ ಮತದಾನ ಮಾಡುವವರ ಸಂಖ್ಯೆ ಅತ್ಯಲ್ಪ ವಿದ್ದುದರಿಂದ ಈ ವಿಭಜನೆ ಅಷ್ಟು ಅನರ್ಥಕಾರಿ ಎನಿಸಲಿಲ್ಲ. ಆದರೆ ಕ್ರಮೇಣ ಮತದಾನ ಮಾಡುವವರ