ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೨೯

ಅನುಭವಿಸಬೇಕಾಯಿತು. ಆದರೆ ಅದೆಲ್ಲ ಸ್ವಾಪೇಕ್ಷೆಯಿಂದಾದ್ದರಿಂದ ಶಕ್ತಿವರ್ಧಕವಿದ್ದವು. ಬೇಡದವನಿಗೆ ನಿರ್ಬಂಧ ಪಡಿಸಿದರೆ ಆಗುವ ನಿರಾಶೆ ಅಸಹಾಯಕತ್ವವಲ್ಲ. ಸರ್ಕಾರದ ದಬ್ಬಾಳಿಕೆಯ ವಿಶಾಲಬಲೆಯಲ್ಲಿ ಇತರರೂ ಬಲಿಬಿದ್ದರು. ಅನೇಕವೇಳೆ ತಾನೇ ಇಷ್ಟ ಪಟ್ಟು ಬಂದವರು ಆ ಸಂಕಟ ತಾಳಲಾರದೆ ಕಾಲು ಕಿತ್ತರು; ಆದರೆ ಅನೇಕರು ಪುಟಕ್ಕೆ ಹಾಕಿದ ಚಿನ್ನದಂತೆ ಯಾವ ನೋವಿಗೂ ಕುಗ್ಗದೆ ಭದ್ರನಿಂತರು. ತೀರ ನೆಲಹತ್ತಿದಾಗ ಸಹ ಕಾಂಗ್ರೆಸ್ ಪರಕೀಯರ ಆಡಳಿತಕ್ಕಾಗಲಿ, ಅವರ ಅಪಾರ ಶಕ್ತಿಗಾಗಲಿ ಎಂದೂ ತಲೆಬಾಗಲಿಲ್ಲ. ರಾಷ್ಟ್ರದ ಬಿಡುಗಡೆಯ ಮಹದಾಶೆ ಮತ್ತು ಪರಾಡಳಿತ ಎದುರಿಸಬೇಕೆಂಬ ಸಂಕಲ್ಪಗಳ ಸಂಕೇತವಾಗಿ ಹೆಡೆಎತ್ತಿ ನಿಂತಿತು. ಅಸಂಖ್ಯಾತ ಭಾರತೀಯರು ಸ್ವಭಾವತಃ ಅಶಕ್ತರೂ ಅಂಜುಬುರುಕರೂ ಇದ್ದರೂ ಮತ್ತು ಸ್ವತಃ ತಮ್ಮಿಂದ ಏನೂ ಸಾಧ್ಯವಿಲ್ಲದಿದ್ದರೂ ಅನುಪಮ ಸಹಾನುಭೂತಿ ತೋರಿ, ಕಾಂಗ್ರೆಸ್ಸಿನ ನಾಯಕತ್ವ ಒಪ್ಪಿದುದಕ್ಕೆ ಇದೇ ಕಾರಣ. ಒಂದು ದೃಷ್ಟಿಯಿಂದ ಕಾಂಗ್ರೆಸ್ ಒಂದು ಪಕ್ಷ ನಿಜ; ಇನ್ನೊಂದು ದೃಷ್ಟಿಯಿಂದ ಅದು ಅನೇಕ ಪಕ್ಷಗಳಿಗೆ ಒಂದು ವೇದಿಕೆ. ಆದರೆ ಇದಕ್ಕೆಲ್ಲಕ್ಕೂ ಹೆಚ್ಚಾಗಿ ಅದು ಪ್ರತಿಬಿಂಬಿಸಿದ್ದು ದೇಶದ ಅಸಂಖ್ಯಾತ ಜನರ ಅಂತರಂಗದ ಅಭಿಲಾಷೆಯನ್ನು, ಸದಸ್ಯರ ಪಟ್ಟಿಯಲ್ಲಿ ಕಂಡ ಸಂಖ್ಯೆಯೇ ತಕ್ಕಷ್ಟು ದೊಡ್ಡದಿದ್ದರೂ ಈ ದೃಷ್ಟಿಯಿಂದ ಜನತೆಯ ಪ್ರತಿನಿಧಿತ್ವದ ಅಲ್ಪಾಂಶಮಾತ್ರವಾಗಿತ್ತು. ಎಷ್ಟು ಹಳ್ಳಿಗಳಿಗೆ ಹೋಗಲು ನಮಗೆ ಸಾಧ್ಯವಿತ್ತೋ ಆ ಶಕ್ತಿಯನ್ನು ಅವಲಂಬಿಸಿತ್ತು. ಅನೇಕ ಬಾರಿ ನಮ್ಮ ಸಂಸ್ಥೆ ಶಾಸನ ವಿರುದ್ಧ ಸಂಸ್ಥೆಯಾಯಿತು. ನಮ್ಮ ಪುಸ್ತಕಗಳು, ಕಾಗದ ಪತ್ರಗಳು ಎಲ್ಲವೂ ಪೊಲೀಸರ ಕೈಯಲ್ಲಿ.

ಶಾಸನ ಭಂಗ ಚಳುವಳಿ ಇಲ್ಲದಾಗ ಸಹ ಭಾರತ ಸರಕಾರದ ಬ್ರಿಟಿಷ್ ಆಡಳಿತ ಯಂತ್ರದೊಡನೆ ನಮ್ಮ ಸಾಮಾನ್ಯ ನೀತಿಯು ಉಗ್ರನೀತಿಯದಲ್ಲದಿದ್ದರೂ ಅಸಹಕಾರ ಮನೋಭಾವನೆಯದೇ ಆಗಿತ್ತು. ಇದು ಇಂಗ್ಲಿಷ್ ಜನರೊಡನೆ ಅಸಹಕಾರವಾಗಿರಲಿಲ್ಲ. ಪ್ರಾಂತ್ಯಗಳಲ್ಲಿ ಸರಕಾರಗಳು ಅಧಿಕಾರಕ್ಕೆ ಬಂದಾಗ ಅಧಿಕಾರವರ್ಗದೊಡನೆ ಸರಕಾರಿ ಕೆಲಸಗಳಲ್ಲಿ ಕಾಂಗ್ರೆಸ್ ಸಹಕರಿಸಬೇಕಾದ್ದು ಅನಿವಾರ್ಯವಾಯಿತು. ಆದರೂ ನಮ್ಮ ರಾಜಕೀಯದ ಹಿನ್ನೆಲೆಯಲ್ಲಿ ಯಾವ ವ್ಯತ್ಯಾಸವೂ ಆಗಲಿಲ್ಲ. ಸರಕಾರಿ ಕೆಲಸ ಬಿಟ್ಟು ಉಳಿದ ಸಮಯಗಳಲ್ಲಿ ಕಾಂಗ್ರೆಸ್ಸಿನವರ ವರ್ತನೆ ಏನಿರಬೇಕೆಂದು ಸಲಹೆ ಕೊಡಲಾಯಿತು. ತಾತ್ಕಾಲಿಕ ಒಪ್ಪಂದ ಮತ್ತು ಅನುಸರಣೆ ಕೆಲವುವೇಳೆ ಅವಶ್ಯವಾದರೂ ಭಾರತೀಯ ರಾಷ್ಟ್ರೀಯ ಭಾವನೆಗೂ ಪರಕೀಯ ಸಾಮ್ರಾಜ್ಯಶಕ್ತಿಗೂ ಶಾಂತಿಯು ಅಸಾಧ್ಯವಾಯಿತು. ಸ್ವತಂತ್ರ ಭಾರತ ಮಾತ್ರ ಸಮಾನ ಸೌಹಾರ್ದದಿಂದ ಸಹಕರಿಸಲು ಸಾಧ್ಯವಿತ್ತು.

೩. ಪ್ರಾಂತಗಳಲ್ಲಿ ಕಾಂಗ್ರೆಸ್ ಸರಕಾರಗಳು'

ಅನೇಕ ವರ್ಷಗಳ ಕಾಲ ಕಮಿಷನ್ಗಳು, ಸಮಿತಿಗಳು, ಚರ್ಚೆಗಳು ಆದನಂತರ ಬ್ರಿಟಿಷ್ ಪಾರ್ಲಿಮೆಂಟ್ ೧೯೩೫ರಲ್ಲಿ ಭಾರತ ಸರಕಾರ ಶಾಸನವನ್ನು ಅಂಗೀಕರಿಸಿತು. ಇದರಲ್ಲಿ ಸ್ವಲ್ಪ ಪ್ರಾಂತ್ಯಸ್ವರಾಜ್ಯ ಮತ್ತು ಸಂಯುಕ್ತ ರಾಜ್ಯ ಪದ್ಧತಿಯ ಸಲಹೆ ಇತ್ತು ; ಆದರೆ ರಾಜಕೀಯ ಮತ್ತು ಆರ್ಥಿಕ ಅಧಿಕಾರವೆಲ್ಲ ಬ್ರಿಟಿಷ್ ಸರಕಾರದ ಕೈಯಲ್ಲಿ ಕೇಂದ್ರೀಕೃತವಾಗುವಂತೆ ಅಧಿಕಾರ ಮಿತಿಗಳನ್ನು ಕಲ್ಪಿಸಲಾಗಿತ್ತು. ನಿಜವಾಗಿ ನೋಡಿದರೆ ಕೆಲವು ಸಂದರ್ಭಗಳಲ್ಲಿ ಆ ಬ್ರಿಟಿಷ್ ಸರಕಾರಕ್ಕೆ ಜವಾಬ್ದಾರರಾದ ಅಧಿಕಾರಿಗಳಿಗೇ ಹೆಚ್ಚು ಅಧಿಕಾರ ಕೊಡಲಾಗಿತ್ತು, ಸಂಯುಕ್ತ ರಾಜ್ಯವಿಧಾನ ರಚನೆಯಲ್ಲಿ ಯಾವ ಪ್ರಗತಿಯೂ ಸಾಧ್ಯವಿರಲಿಲ್ಲ. ಬ್ರಿಟಷರ ಹಿಡಿತದಲ್ಲಿದ್ದ ಆಡಳಿತ ಯಂತ್ರ ಅಲುಗಾಡಿಸಲು ಭಾರತೀಯ ಪ್ರತಿನಿಧಿಗಳಿಗೆ ಏನೂ ಸಾಧ್ಯವಿಲ್ಲದಂತೆ ಎಲ್ಲ ಭದ್ರತೆಯನ್ನೂ ಮಾಡಲಾಗಿತ್ತು, ಆಡಳಿತ ಹಂಚಿಕೆ ಅಥವ ಬದಲಾವಣೆ ಏನಿದ್ದರೂ ಬ್ರಿಟಿಷ್ ಪಾರ್ಲಿಮೆಂಟಿನಿಂದಲೇ ಬರಬೇಕು. ಆ ಸಂವಿಧಾನ ರಚನೆಯು ಪ್ರತಿಗಾಮಿ ಇದ್ದುದಲ್ಲದೆ ಕ್ರಾಂತಿ ಒಂದಲ್ಲದೆ ಬೇರೆ ಬೆಳೆವಣಿಗೆಯ ಮಾರ್ಗ ಯಾವುದೂ ಅದರಲ್ಲಿ ಇರಲಿಲ್ಲ. ಬ್ರಿಟಿಷ್ ಸರಕಾರಕ್ಕೂ ರಾಜರುಗಳು, ಜಮೀನುದಾರರುಗಳು ಮತ್ತು ಭಾರತದಲ್ಲಿನ ಇತರ ಪ್ರತಿಗಾಮಿ ಶಕ್ತಿಗಳಿಗೂ ಇದ್ದ ಸಂಬಂಧ

23