ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೬೧

ಕೆಲವು ಉಪಸಮಿತಿಗಳು ನಿಯತ ಕಾಲದ ಒಳಗೆ ವರದಿ ಮಾಡಲು ಆಗದೆ ಕಾಲಹರಣವಾಗಿ ಬಹಳ ಬೇಸರವಾಗುತ್ತಿತ್ತು. ಆದರೂ ಬಹಳಮಟ್ಟಿಗೆ ಯಶಸ್ವಿಯಾಗಿ ಮುಂದುವರಿದು ಅಪಾರ ಕೆಲಸ ಮುಗಿಸಿದೆವು. ವಿದ್ಯಾಭ್ಯಾಸ ವಿಷಯದಲ್ಲಿ ಎರಡು ಮುಖ್ಯ ತೀರ್ಮಾನ ಮಾಡಿದೆವು. ವಿದ್ಯಾಭ್ಯಾಸದ ಪ್ರತಿಯೊಂದು ಮಟ್ಟದಲ್ಲಿಯೂ ಹುಡುಗರಿಗೆ ಮತ್ತು ಹುಡುಗಿಯರಿಗೆ ಒಂದು ನಿಯತ ದೇಹದಾರ್ಡ್ಯವಿರುವಂತೆ ವಿಧಾಯಕ ಮಾಡಬೇಕೆಂದೂ, ಪ್ರತಿಯೊಬ್ಬ ಯುವಕ ಮತ್ತು ಯುವತಿಯೂ ತನ್ನ ೧೮ ಮತ್ತು ೨೨ ವರ್ಷಗಳ ಮಧ್ಯೆ ವ್ಯವಸಾಯ, ಕೈಗಾರಿಕೆ, ಸಾರ್ವಜನಿಕೋಪಯುಕ್ತ ಕಾರಗಳು, ಮುಂತಾದ ಯಾವುದಾದರೂ ಒಂದು ಬಗೆಯ ಸಾರ್ವಜನಿಕ ಕೆಲಸಗಳಲ್ಲಿ ನಿರತನಾಗಿ ಒತ್ತಾಯದ ಸಮಾಜಸೇವೆ ಅಥವ ಶ್ರಮಜೀವನ ನಡೆಸುವ ಒಂದು ಪದ್ದತಿ ಏರ್ಪಡಿಸಬೇಕೆಂದು ಸಲಹೆಮಾಡಿದೆವು. ದೇಹ ಅಥವ ಮಾನಸಿಕ ದೌರ್ಬಲ್ಯ ಇದ್ದವರಿಗೆ ಮಾತ್ರ ವಿನಾಯಿತಿ ಮಾಡಿದೆವು.

೧೯೩೯ ನೆಯ ಸೆಪ್ಟೆಂಬರ್‌ನಲ್ಲಿ ಪ್ರಪಂಚದ ೨ ನೇ ಯುದ್ಧ ಆರಂಭವಾದಾಗ ರಾಷ್ಟ್ರೀಯ ಯೋಜನಾ ಸಮಿತಿ ತನ್ನ ಕಾರ್ ನಿಲ್ಲಿಸಬೇಕೆಂದು ಸಲಹೆಬಂದಿತು. ನವೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಸರಕಾರಗಳು ರಾಜೀನಾಮೆ ಕೊಟ್ಟವು. ಪ್ರಾಂತಗಳಲ್ಲಿ ಗೌರರುಗಳ ನಿರಂಕುಶಾಧಿಕಾರ ಆರಂಭವಾಗಿ ನಮ್ಮ ಕೆಲಸದಲ್ಲಿ ಅವರು ಯಾರೂ ಆಸಕ್ತಿ ತೋರಲಿಲ್ಲವಾದ್ದರಿಂದ ನಮ್ಮ ಕಷ್ಟ ಇನ್ನೂ ಹೆಚ್ಚಿತು, ವರ್ತಕರು ಯುದ್ಧ ಸರಬರಾಜಿನಿಂದ ಹೆಚ್ಚು ಹಣಗಳಿಸಲು ನಿಂತರು; ಯೋಜನೆಯಲ್ಲಿ ಅವರ ಆಸಕ್ತಿ ಕಡಿಮೆಯಾಯಿತು. ನಿತ್ಯವು ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ನಮ್ಮ ಕೆಲಸ ಮಾತ್ರ ನಾವು ಮುಂದುವರಿಸಬೇಕೆಂದೂ, ಯುದ್ದ ದೆಸೆಯಿಂದಲೇ ಮುಂದುವರಿಸುವುದು ಇನ್ನೂ ಅವಶ್ಯವೆಂದೂ ತೀರ್ಮಾನಿಸಿದೆವು. ಕೈಗಾರಿಕೋದ್ಯಮಗಳ ಬೆಳೆವಣಿಗೆ ಅನಿವಾರವಾದುದರಿಂದ ನಮ್ಮ ಇದುವರೆಗಿನ ಕೆಲಸವೂ, ಮುಂದೆ ಮಾಡಲಿದ್ದ ಕೆಲಸವೂ ಅದಕ್ಕೆ ಸಹಾಯಕವಾಗಿತ್ತು. ಆಗ ನಾವು ಯಂತ್ರೋಪಕರಣಗಳ ಕೈಗಾರಿಕೆ, ಸಂಚಾರ ವಾಹನಗಳ ಕೈಗಾರಿಕೆ, ರಾಸಾಯನಿಕ ಕೈಗಾರಿಕೆ, ಕೈಗಾರಿಕಾ ಯಂತ್ರಗಳ ತಯಾರಿಕೆ ಮುಂತಾದ ಯುದ್ದದ ದೃಷ್ಟಿಯಿಂದ ಬಹು ಮುಖ್ಯವಾದ ಉಪಸಮಿತಿಗಳ ವರದಿಗಳನ್ನು ಪರಿಶೀಲಿಸುತ್ತಿದ್ದೆವು. ಆದರೆ ಸರಕಾರಕ್ಕೆ ನಮ್ಮ ಕೆಲಸ ಬೇಕಿಲ್ಲ ; ಅದನ್ನು ತಿರಸ್ಕಾರದಿಂದಲೂ ಕಂಡಿತು. ಭಂಡಾಯ ಕಾಲದ ಯುದ್ಧಾರಂಭದ ದಿನಗಳಲ್ಲಿ ಭಾರತೀಯ ಕೈಗಾರಿಕೆಗೆ ಪ್ರೋತ್ಸಾಹ ಕೊಡುವುದು ಅವರಿಗೆ ಬೇಕಿರಲಿಲ್ಲ. ಆದರೆ ಅನಂತರದ ಘಟನೆಗಳ ಒತ್ತಡದಿಂದ ಅವರು ತಮ್ಮ ಎಲ್ಲ ಅವಶ್ಯಕತೆಗಳನ್ನೂ ಭಾರತದಲ್ಲೇ ಕೊಳ್ಳುವುದು ಅನಿವಾರ್ಯವಾಯಿತು. ಆದರೂ ದೊಡ್ಡ ಕೈಗಾರಿಕೆಗಳಾವುದಕ್ಕೂ ಇಲ್ಲಿ ಅವಕಾಶ ಕೊಡಲಿಲ್ಲ. ಆದರೆ ಯಾವ ಯಂತ್ರೋಪಕರಣ ತರಿಸುವುದಕ್ಕೂ ಅವಕಾಶ ಕೊಡಲಿಲ್ಲ. ಸರಕಾರದ ಅನುಮತಿ ಇಲ್ಲದೆ ಯಂತ್ರೋಪ ಕರಣಗಳು ದೇಶದ ಒಳಗೆ ಬರುವಂತಿರಲಿಲ್ಲ.

ಯೋಜನಾಸಮಿತಿ ತನ್ನ ಕೆಲಸ ಮುಂದುವರಿಸಿ ಉಪಸಮಿತಿ ವರದಿಗಳ ಬಹುಭಾಗ ಪರಿಶೀಲನೆ ಪೂರೈಸಿತ್ತು. ಉಳಿದ ಅಲ್ಪ ಭಾಗ ಮುಗಿಸಿ ನಮ್ಮ ಸಮಗ್ರ ವರದಿಯ ಪಾಲೋಚನೆ ಮಾತ್ರ ಉಳಿದಿತ್ತು. ೧೯೪೦ ನೇ ಅಕ್ಟೋಬರ್‌ನಲ್ಲಿ ನನ್ನ ಬಂಧನವಾಗಿ ದೀರ್ಘಕಾಲದ ಶಿಕ್ಷೆಯಾಯಿತು. ಯೋಜನಾ ಸಮಿತಿಯ ಇತರ ಅನೇಕ ಸದಸ್ಯರೂ, ಉಪಸಮಿತಿಯ ಕೆಲಸ ಮುಂದುವರಿಯಬೇಕೆಂದು ಹೊರಗೆ ಇದ್ದ ನನ್ನ ಸಹೋದ್ಯೋಗಿಗಳನ್ನು ಪ್ರಾರ್ಥಿಸಿದೆ. ಅದರೆ ನಾನು ಇಲ್ಲದೆ ಅವರು ಕೆಲಸ ಮುಂದುವರಿಸಲು ಒಪ್ಪಲಿಲ್ಲ. ಯೋಜನಾ ಸಮಿತಿಯ ಕಾಗದಪತ್ರಗಳನ್ನೂ ವರದಿಗಳನ್ನೂ ಸೆರೆಮನೆಗೇ ತರಿಸಿ ಅಲ್ಲಿಯೇ ಅಭ್ಯಾಸಮಾಡಿ ಒಂದು ಕರಡು ವರದಿ ಬರೆಯಲು ಯತ್ನ ಮಾಡಿದೆ. ಇಂಡಿಯಾ ಸರಕಾರ ಅಡ್ಡ ಬಂದು ಅದಕ್ಕೆ ಅವಕಾಶ ಕೊಡಲಿಲ್ಲ. ಯಾವ ಕಾಗದವೂ ನನಗೆ ಬರಲು ಅವಕಾಶ ಕೊಡಲಿಲ್ಲ. ಯಾವ ಭೇಟಿಗೂ ಅವಕಾಶವಿರಲಿಲ್ಲ.

ಈ ರೀತಿ ನಾನು ಸೆರೆಮನೆಯಲ್ಲಿ ಕೊಳೆಯುತ್ತಿದ್ದಾಗ ರಾಷ್ಟ್ರೀಯ ಯೋಜನಾ ಸಮಿತಿಯೂ ಕುಸಿದುಬಿತ್ತು. ನಾವು ಮಾಡಿದ ಕೆಲಸ ಅಪೂರ್ಣವಾಗಿದ್ದರೂ ಯುದ್ದ ಸರಬರಾಜಿಗೆ ಉಪಯುಕ್ತವಿತ್ತು. ಆದರೂ ಅದು ನಮ್ಮ ಕಚೇರಿಯ ಕತ್ತಲು ಕೋಣೆಯಲ್ಲೇ ಉಳಿಯಿತು. ೧೯೪೧ನೇ ಡಿಸೆಂಬರ್ ತಿಂಗಳಲ್ಲಿ