ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೬೩

ಜೊತೆಯಲ್ಲಿಯೇ ಗ್ರಾಮಕ್ಕೆಗಾರಿಕೆಗಳಿಗೂ ಪ್ರಾಮುಖ್ಯತೆ ಕೊಟ್ಟು ಅವುಗಳನ್ನು ಪುನರುಜ್ಜಿವನಮಾಡಲು ಯತ್ನಿಸಿದೆ. ಈ ಎರಡಕ್ಕೂ ಘರ್ಷಣೆ ಏನಿದೆ? ಪ್ರಾಯಶಃ ನಾವು ಕೊಟ್ಟ ಪ್ರಾಮುಖ್ಯತೆಯ ಪ್ರಮಾಣದಲ್ಲಿ ವ್ಯತ್ಯಾಸವಿರಬಹುದು. ಮುಂಚಿನಿಂದ ಭಾರತದಲ್ಲಿ ಅಲಕ್ಷ್ಯಮಾಡಿದ ಕೆಲವು ಆರ್ಥಿಕ ಮತ್ತು ಮಾನವೀಯ ಪ್ರಶ್ನೆಗಳ ಅರಿವು ಅದಕ್ಕೆ ಕಾರಣವಾಗಿರಬಹುದು. ದೊಡ್ಡ ಕೈಗಾರಿಕೆಗಳಿಗೆ ಬೆಂಬಲಕೊಟ್ಟ ಭಾರತೀಯ ಕೈಗಾರಿಕೋದ್ಯಮಿಗಳು ಮತ್ತು ರಾಜಕೀಯ ಮುಖಂಡರು ೧೯ನೆಯ ಶತಮಾನದ ಬಂಡವಾಳಷಾಹಿ ಕೈಗಾರಿಕೆ ಬೆಳವಣಿಗೆಯ ಕಡೆಗೆ ಗಮನಕೊಟ್ಟರು. ಇಪ್ಪತ್ತನೆಯ ಶತಮಾನದಲ್ಲಿ ಒದಗಿದ ಅದರ ಅನಿಷ್ಟ ಪರಿಣಾಮಗಳನ್ನು ಅಲಕ್ಷ್ಯಮಾಡಿದರು. ಭಾರತದಲ್ಲಿ ಒಂದುನೂರುವರ್ಷ ಸಾಮಾನ್ಯ ಕೈಗಾರಿಕಾ ಪ್ರಗತಿ ಸಹ ಯಾವುದೂ ಆಗಲಿಲ್ಲ. ಆದ್ದರಿಂದ ಆ ದುಷ್ಪರಿಣಾಮಗಳು ಇನ್ನೂ ಹೆಚ್ಚುವ ಸಂಭವವಿತ್ತು. ಇಂದಿನ ಆರ್ಥಿಕಸ್ಥಿತಿಯಲ್ಲಿ ಆರಂಭವಾಗುತ್ತಿದ್ದ ಮಧ್ಯವರ್ಗದ ಕೈಗಾರಿಕೆಗಳಿಂದ ನಿರುದ್ಯೋಗ ಕಡಮೆಯಾಗುವ ಬದಲು ಹೆಚ್ಚುತ್ತಿತ್ತು. ಒಂದುಕಡೆ ಬಂಡವಾಳ ಬೆಳೆಯುತ್ತಿದ್ದರೆ ಇನ್ನೊಂದು ಕಡೆ ಬಡತನ ಮತ್ತು ನಿರುದ್ಯೋಗ ಹೆಚ್ಚುತ್ತ ಇತ್ತು. ಬೇರೊಂದು ರೀತಿಯಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಿ, ಅನೇಕ ಜನರಿಗೆ ಉದ್ಯೋಗ ಕಲ್ಪಿಸಿ, ಒಂದು ಯೋಜನೆಯ ಪ್ರಕಾರ ಕೈಗಾರಿಕೆ ಅಭಿವೃದ್ಧಿಗೊಳಿಸಿ ಈ ತೊಂದರೆ ತಪ್ಪಿಸಬಹುದು.

ಜನತೆಯ ಬಡತನವು, ಈ ರೀತಿ ಹೆಚ್ಚುತ್ತಿರುವುದು ಗಾಂಧೀಜಿಯಮೇಲೆ ಮಹತ್ಪರಿಣಾಮಮಾಡಿತು. ಅವರ ಜೀವನ ದೃಷ್ಟಿಗೂ ಆಧುನಿಕ ದೃಷ್ಟಿಗೂ ವ್ಯತ್ಯಾಸವಿದೆ ಎಂಬುದು ನಿಜ. ನೈತಿಕ ಮತ್ತು ಧಾರ್ಮಿಕ ದೃಷ್ಟಿಯನ್ನು ನಾಶಮಾಡಿ ಜೀವನದಮಟ್ಟ ಏರಿಸುವುದೂ, ಭೋಗಾಸಕ್ತಿ ಹೆಚ್ಚಿಸುವುದೂ ಅವರಿಗೆ ಸಮ್ಮತವಿರಲಿಲ್ಲ. ಅವರಿಗೆ ಸುಲಭ ಜೀವನಬೇಕಿರಲಿಲ್ಲ. ಕಷ್ಟ ಜೀವನವೇ ಅವರಿಗೆ ನೇರಜಿವನ, ಭೋಗಾ ಸಕ್ತಿಯು ಮೋಸಕ್ಕೂ ಅನೀತಿಗೂ ಕಾರಣವಾಗುತ್ತದೆ. ಎಲ್ಲಕ್ಕೂ ಹೆಚ್ಚಾಗಿ ಬಡವರಿಗೂ ಶ್ರೀಮಂತರಿಗೂ ಇರುವ ಅಪಾರ ಅಂತರ, ಅವರ ಜೀವನ ರೀತಿಯಲ್ಲಿ, ಜೀವನ ಅವಕಾಶದಲ್ಲಿ ಕಂಡುಬರುವ ವ್ಯತ್ಯಾಸ ಇವುಗಳನ್ನು ಕಂಡು ಮೈನಡುಗಿದ್ದಾರೆ. ತಮ್ಮ ಮಾನಸಿಕ ಮತ್ತು ಆತ್ಮತೃಪ್ತಿಗಾಗಿ ಆ ಅಪಾರ ಅಂತರವನ್ನು ದಾಟಿ ಬಡವರ ಜೀವನವನ್ನೇ ತಾವೂ ಅವಲಂಬಿಸಿದ್ದಾರೆ. ತಮ್ಮ ಜೀವನದಲ್ಲಿ, ಉಡುಪು ಅಥವ ಅದರ ಅಭಾವದಲ್ಲಿ ಸ್ವಲ್ಪ ಉತ್ತಮ ರೀತಿಯಲ್ಲಿ ಬಡವರು ಹೇಗೆ ಜೀವಿಸಬಹುದೋ ಹಾಗೆ ಜೀವನ ನಡೆಸುತ್ತಿದ್ದಾರೆ. ಈ ಕೆಲವು ಶ್ರೀಮಂತರು ಮತ್ತು ಅರೆಹೊಟ್ಟೆಯ ಜನಕೋಟ ಇವರ ಮಧ್ಯೆ ಇರುವ ಅಂತರಕ್ಕೆ ಮುಖ್ಯ ಕಾರಣಗಳು ಎರಡೆಂದು ತೋರುತ್ತದೆ. ಪರಕೀಯರ ಆಳ್ವಿಕೆ ಮತ್ತು ಅದನ್ನು ಹಿಂಬಾಲಿಸಿ ಬಂದ ಸುಲಿಗೆ, ಮತ್ತು ಯಂತ್ರದಾಸ್ಯದ ಪಾಶ್ಚಾತ್ಯರ ಬಂಡವಳಷಾಹಿ ಕೈಗಾರಿಕಾ ನಾಗರಿಕತೆ, ಎರಡರ ಮೇಲೂ ಅವರಿಗೆ ಅಸಮಾಧಾನ ಹುಟ್ಟಿತು. ಎಲ್ಲಿ ವಸ್ತು ನಿರ್ಮಾಣ, ಹಂಚಿಕೆ ಮತ್ತು ಉಪಯೋಗ ಇವು ತಮಗೆ ತಾವೆ ಹೊಂದಿಕೊಂಡು ಸ್ವಲ್ಪ ಹೆಚ್ಚು ಕಡಮೆ ಸ್ವಯಂ ಪರಿಮಾಣ ಇವೆಯೋ ಎಲ್ಲಿ ಒಂದು ಬಗೆಯ ಸ್ವಯಮಧಿಕಾರ ಇದೆಯೋ ರಾಜಕೀಯ ಮತ್ತು ಆರ್ಥಿಕ ಅಧಿಕಾರ ಇಂದಿನಂತೆ ಕೇಂದ್ರೀಕೃತವಾಗಿರದೆ ಎಲ್ಲರಲ್ಲು ಹರಡಿರುತ್ತದೆಯೋ, ಎಲ್ಲಿ ಬಡವರಿಗೂ ಮತ್ತು ಶ್ರೀಮಂತರಿಗೂ ಅಂತರ ಬಹಳ ಕಡಮೆ ಇರುತ್ತದೆಯೋ, ಎಲ್ಲಿ ದೊಡ್ಡ ದೊಡ್ಡ ನಗರಗಳ ದುಷ್ಪರಿಣಾಮಗಳಿರುವುದಿಲ್ಲವೋ, ಎಲ್ಲಿ ಜೀವನಾಧಾರವಾದ ಮಣ್ಣಿನ ಮಧ್ಯೆ ಬಾಳಿ, ವಿಶಾಲ ಮೈದಾನಗಳ ಶುಭ್ರಗಾಳಿಯಲ್ಲಿ ಉಸಿರಾಡಬಹುದೊ ಅಂತಹ ಪ್ರಾಚೀನ ವೈಭವಯುಕ್ತ ಗ್ರಾಮ ಜೀವನವನ್ನು ಪುನರುಜ್ಜಿವನ ಗೊಳಿಸಬೇಕೆಂದು ಇಚ್ಚಿಸಿದರು.

ಜೀವನೋದ್ದೇಶ ದೃಷ್ಟಿಯಲ್ಲಿ ಗಾಂಧಿಜಿಗೂ ಇತರರಿಗೂ ಈ ಮೂಲ ವ್ಯತ್ಯಾಸವಿದ್ದ ಕಾರಣ ಅವರ ಎಲ್ಲ ಕಾಠ್ಯಕ್ರಮದಲ್ಲೂ ಈ ವ್ಯತ್ಯಾಸದ ಬಣ್ಣ ಕಾಣುತ್ತಲಿತ್ತು. ಅವರ ಭಾಷೆ ಸ್ಪಷ್ಟ ಮತ್ತು ಶಕ್ತಿ ಪೂರ್ಣ, ಅದರ ಪ್ರೇರಣೆ ಎಲ್ಲ ಇಡೀ ಪ್ರಪಂಚದ, ಮುಖ್ಯವಾಗಿ, ಭಾರತದ ಯುಗಾಂತರಗಳ ಧರ್ಮ ಮತ್ತು ನೀತಿಯಿಂದ. ನೀತಿಯ ನೆಲಗಟ್ಟು ಇರಲೇಬೇಕು. ಗುರಿ ಶ್ರೇಷ್ಠವೆಂದು ಸಾಧನೆಯ ಮಾರ್ಗ ಯೋಗ್ಯತೆ ಮರೆಯಲು ಸಾಧ್ಯವಿಲ್ಲ; ಮರೆತರೆ ವ್ಯಕ್ತಿ ಜನಾಂಗಗಳೆರಡರ ನಾಶವೂ ಖಂಡಿತ.