ಇತರ ಸೆರೆಮನೆಗಳಂತೆ ಇಲ್ಲಿಯೂ ಅಹಮದ್‌ನಗರ ಕೋಟೆಯಲ್ಲಿ ತೋಟದ ಕೆಲಸಕ್ಕೆ ತೊಡಗಿ ಸೂರನ ತಾಪ ಹೆಚ್ಚು ಇದ್ದಾಗಲೂ ನೆಲವನ್ನು ಅಗಿಯುತ್ತ, ಹೂಗಿಡಗಳಿಗೆ ಪಾತಿಯನ್ನು ಮಾಡುತ್ತ ದಿನವೂ ಅನೇಕ ಗಂಟೆಗಳನ್ನು ಕಳೆಯುತ್ತಿದ್ದೆ, ನೆಲ ಬಹು ಬಿರುಸಾಗಿತ್ತು, ಕಲ್ಲು, ಹಿಂದಿನ ಕಟ್ಟಡ ಗಳ ಹಾಳು ಗೋಡೆಗಳು, ಪುರಾತನ ವಸ್ತುಗಳ ಅವಶೇಷಗಳಿಂದ ತುಂಬಿತ್ತು. ಕಾರಣ ಇದೊಂದು ಐತಿಹಾಸಿಕ ಸ್ಥಳ, ಪೂರ್ವಕಾಲದಲ್ಲಿ ಆನೇಕ ಯುದ್ಧಗಳ, ಅರಮನೆಯ ಒಳ ಸಂಚುಗಳ ಬೀಡು. ಆದರೆ ಭಾರತೀಯ ಇತಿಹಾಸದ ಪ್ರಕಾರ ಆ ಇತಿಹಾಸ ಬಹಳ ಹಳೆಯದಲ್ಲ. ಅಥವ ವಿಶಾಲ ವಸ್ತು ವಿನ್ಯಾಸದಲ್ಲಿ ಅತಿ ಮುಖ್ಯವೂ ಅಲ್ಲ. ಆದರೆ ಒಂದು ವಿಷಯ ಮಾತ್ರ ಎದ್ದು ಕಾಣುತ್ತದೆ. ಅದ ನ್ಯಾರೂ ಮರೆಯುವಂತಿಲ್ಲ ; ಈ ಕೋಟೆಯನ್ನು ಕಾಪಾಡಿದ ಒಬ್ಬ ಸುಂದರ ಸ್ತ್ರೀ ಚಾಂದ್ ಬೀಬಿಯ ಧೈರ್ಯ, ಕೈಲಿ ಕತ್ತಿಯನ್ನು ಸೆಳೆದು, ಸಾಮ್ರಾಟ್ ಅಕ್ಷರನ ಸೈನ್ಯಗಳನ್ನು ಎದುರಿಸಿದಾಕೆ. ಆಕೆಯ ಸೈನ್ಯದಲ್ಲಿದ್ದವನೇ ಒಬ್ಬ ಆಕೆಯನ್ನು ಕೊಲೆಮಾಡಿದ.
ಈ ದುರದೃಷ್ಟ ಭೂಮಿಯಲ್ಲಿ ಅಗಿಯುತ್ತ, ಹಳೆಯ ಗೋಡೆಗಳ ಭಾಗಗಳು, ಅರಮನೆಗಳ ಮುರುಕು ಗೋಪುರಗಳು ನೆಲಮಟ್ಟದಿಂದ ಕೆಳಗೆ ಭೂಮಿಯಲ್ಲಿ ಹೂತದ್ದನ್ನು ಕಂಡಿದ್ದೇವೆ. ಆಳ ವಾದ ಅಗೆತ, ಪ್ರಾಕ್ತನ ವಿಮರ್ಶನ ಅಧಿಕಾರಿಗಳಿಗೆ ಸರಿಬೀಳದ ಕಾರಣ, ಬಹಳ ಕೆಳಗೆ ಅಗೆಯ ಲಾಗಲಿಲ್ಲ. ಆ ರೀತಿ ಅಗೆಯಲು ಸಾಧನಗಳೂ ಇರಲಿಲ್ಲ. ಒಂದು ಸಲ ಒಂದು ಗೋಡೆಯ ಪಕ್ಕ ದಲ್ಲಿ ಕಲ್ಲಿನಲ್ಲಿ ಕಟ್ಟಿದ ಒಂದು ಸೊಗಸಾದ ಕಮಲವು ನಮ್ಮ ಕಣ್ಣಿಗೆ ಬಿತ್ತು. ಪ್ರಾಯಶಃ ಬಾಗಿಲಿನ ಮೇಲು ಚೌಕಟ್ಟಿರಬಹುದು.
ಡೆಹ್ರ ಡೂನ್ ಸೆರೆಮನೆಯಲ್ಲಿ ಇನ್ನೊ೦ದು ದುರದೃಷ್ಟ ಶೋಧನೆ ಮಾಡಿದೆ. ಮೂರು ವರ್ಷ ಗಳ ಕೆಳಗೆ ನನ್ನ ಸಣ್ಣ ಹಿತ್ತಲಿನಲ್ಲಿ ಅಗೆಯುತ್ತಿರುವಾಗ ಯಾವುದೋ ಕಾಲದ ಒಂದು ಆಶ್ಚರ್ಯಕರ ಅವಶೇಷ ನನಗೆ ದೊರೆಯಿತು. ನೆಲಮಟ್ಟದಿಂದ ಸ್ವಲ್ಪ ಆಳದಲ್ಲಿ ಎರಡು ಪುರಾತನ ಗುಡ್ಡೆಗಳು ಸಿಕ್ಕವು. ಎಲ್ಲರೂ ಕುತೂಹಲದಿಂದ ಪರೀಕ್ಷಿಸಿದೆವು. ಮೂವತ್ತು ನಲವತ್ತು ವರ್ಷಗಳ ಹಿಂದೆ ಅಲ್ಲಿ ಉಪಯೋಗದಲ್ಲಿದ್ದ ವಧಾಸ್ಥಾನದ ಭಾಗಗಳಾಗಿದ್ದವು. ಆದರೆ ಸೆರೆಮನೆಯಲ್ಲಿ ಗಲ್ಲಿಗೆ ಏರಿಸುವುದನ್ನು ನಿಲ್ಲಿಸಿ ಹಳೆಯ ಗಲ್ಲಿನ ಮರವನ್ನು ಗುರುತಿಲ್ಲದಂತೆ ಹೊರಗೆ ತೆಗೆದಿದ್ದರು. ನಾವು ಅದರ ತಳಪಾಯ 'ವನ್ನು ಕಂಡುಹಿಡಿದು, ಹೊರಗೆಡವಿದ್ದೆವು. ಆ ಕೆಲಸದಲ್ಲಿ ಸಹಾಯಮಾಡಿದ್ದ ನನ್ನ ಜೊತೆಯವರೆಲ್ಲ ಒಂದು ಅಪಶಕುನ ಹೋಯಿತೆಂದು ತೃಪ್ತಿಗೊಂಡರು,
ಈಗ ನನ್ನ ಗುದ್ದಲಿಯನ್ನು ಬದಿಗಿಟ್ಟು ಲೇಖನಿಯನ್ನು ತೆಗೆದುಕೊಂಡಿದ್ದೇನೆ. ಪ್ರಾಯಶಃ ಈಗ ನಾನು ಬರೆಯುವುದು ಸಹ ಡೆಹರರ್ಡೂನಲ್ಲಿ ಅರ್ಧ ಬರೆದ ನನ್ನ ಹಸ್ತ ಪ್ರತಿಯ ಗತಿಯನ್ನೇ ಕಾಣಬಹುದು. ಕಾರ್ಯತಃ ಅನುಭವಿಸಲು ಸ್ವತಂತ್ರನಲ್ಲದಿರುವಾಗ ಪ್ರಸಕ್ತ ವಿಷಯ ಬರೆಯಲು ನನಗೆ ಸಾಧ್ಯವಿಲ್ಲ. ಪ್ರಸಕ್ತ ಕಾಲದ ಕಾರ್ಯಾವಶ್ಯಕತೆಯೇ ನನಗೆ ಸ್ಪಷ್ಟ ಹಿಡಿಸಬಹುದಾದದ್ದು. ಆಗ ಒಂದು ವಿಧವಾದ ಲೀಲೆಯಿಂದ ಸುಲಭವಾಗಿ ಬರೆಯಬಲ್ಲೆ. ಸೆರೆಮನೆಯಲ್ಲಿ ಅದು ಇಂದಿನ ಕೋಲಾ ಹಲವಾಗಿ ಅನುಭವಿಸಲಾಗದ ಅಥವ ನನ್ನ ಹಿಡಿತಕ್ಕೆ ನಿಲುಕದ ಯಾವುದೋ ಅಸ್ಪಷ್ಟ ಛಾಯೆ ಯಂತಿದೆ. ನಿಜವಾಗಿ ಹೇಳುವುದಾದರೆ ನಾನು ಪ್ರಸಕ್ತ ವಿಷಯವೆಂದು ಹೇಳಲಾರೆ. ಆದರೂ ಭೂತಕಾಲದ ನಿಶ್ಚಲ ಶಿಲಾಮೌನದಂತೆ ಗತ ವಿಷಯವೂ ಅಲ್ಲ.
ನಾನೊಬ್ಬ ಪ್ರವಾದಿಯ ವೇಷ ತಾಳಿ ಭವಿಷ್ಯ ವಿಷಯ ಬರೆಯಲೂ ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಅನೇಕ ಬಾರಿ ಆ ವಿಷಯ ಯೋಚಿಸಿದ್ದೇನೆ. ಅದರ ಮೇಲ್ಮುಸುಕನ್ನು ಕಿತ್ತೊಗೆದು ನನ್ನ ದೇ ಆದ ಉಡುಗೆಯಲ್ಲಿ ಅಲಂಕರಿಸಲು ಯತ್ನಿಸಿದ್ದೇನೆ. ಆದರೆ ಅವೆಲ್ಲ ನಿರರ್ಥಕ ಕಲ್ಪನೆಗಳು; ಮತ್ತು ಭವಿಷ್ಯವು ಅನಿಶ್ಚಿತ, ಅಜೇಯವಾಗಿಯೇ ಇದೆ. ಪುನಃ ನಮ್ಮ ಆಶೆಗಳನ್ನೆಲ್ಲ ಮಣ್ಣು ಪಾಲು ಮಾಡಿ, ಮಾನವಕುಲದ ಕನಸುಗಳನ್ನೆಲ್ಲ ಒಡೆದುಹಾಕುವದಿಲ್ಲವೆಂಬ ಭರವಸೆಯಂತೂ ಇಲ್ಲವೇ ಇಲ್ಲ.
ಉಳಿದಿದೆ ಗತಕಾಲ: ಇತಿಹಾಸಕಾರನಂತೆ ಪಂಡಿತನಂತೆ ಹಿಂದಿನ ಘಟನೆಗಳ ವಿಷಯ