ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೩
೩೭೭

ಯುದ್ದಕ್ಕೆ ಪ್ರವೇಶ ಮಾಡಿದ್ದು, ಸ್ಕಾಂಡಿನೇವಿಯ ದೇಶಗಳು, ಹಾಲೆಂಡ್ ಮತ್ತು ಬೆಲ್ಜಿಯಂ ಜೀವ ಸಹಿತ ಉಳಿದರೆ ಸಾಕೆಂದು ಯಾರ ಸೆಳೆತಕ್ಕೂ ಸಿಕ್ಕದೆ ಯುದ್ಧದಿಂದ ದೂರವಿರಲು ಪ್ರಯತ್ನಿಸಿ ಮೊದಲೇ ಯುದ್ಧದಲ್ಲಿ ಆಹುತಿಯಾದವು. ಕೇವಲ ರಾಷ್ಟ್ರೀಯ ಭಾವನೆಯ ದೃಷ್ಟಿಯಿಂದ ತುರ್ಕಿಯು ಕಳೆದ ಐದು ವರ್ಷಗಳಿಂದ ತಾಟಸ್ಥ ನೀತಿಯ ಅಲಗಿನ ಮೇಲೆ ನಿಂತಿದೆ. ನೆಪಮಾತ್ರದ ಸ್ವಾತಂತ್ರದಿಂದ ಈಜಿಪ್ಟ್ ಒಂದು ಅಧೀನ ರಾಷ್ಟ್ರವಾಗಿ ತಾನೇ ಒಂದು ದೊಡ್ಡ ಯುದ್ಧ ರಂಗವಾಗಿ ವಿಚಿತ್ರ ಪರಿಸ್ಥಿತಿಯಲ್ಲಿದೆ. ಸಂಯುಕ್ತ ಮಿತ್ರ ರಾಷ್ಟ್ರಗಳ ಶಸ್ತ್ರಸಜ್ಜಿತ ಸೈನ್ಯಗಳ ಅಧೀನದಲ್ಲಿ ಎಲ್ಲ ದೃಷ್ಟಿಯಿಂದ ದೊಡ್ಡ ಯುದ್ಧ ರಂಗವಾದರೂ ತತ್ವಶಃ ಅದು ಯುದ್ದದಿಂದ ಹೊರಗೆ !

ಭಿನ್ನ ಭಿನ್ನ ಸರಕಾರಗಳು, ದೇಶಗಳು ಅನುಸರಿಸುತ್ತಿರುವ ಈ ಕಾರನೀತಿಗೆ ಏನಾದರೂ ಸಮರ್ಥನೆ ಇರಬಹುದು ಅಥವ ಅವು ಕ್ಷಮಾರ್ಹ ಇರಬಹುದು. ತನ್ನ ಜನತೆಯನ್ನು ಸಿದ್ಧಗೊಳಿಸದೆ, ಅವರ ಸಹಾಯ ಪಡೆಯದೆ ಯುದ್ದದಲ್ಲಿ ಧುಮುಕಲು ಯಾವ ಪ್ರಜಾಪ್ರಭುತ್ವಕ್ಕೂ ಸಾಧ್ಯವಿಲ್ಲ. ನಿರಂಕುಶ ಪ್ರಭುತ್ವಕ್ಕೆ ಸಹ ಪೂರ್ವ ಸಿದ್ಧತೆ ಬೇಕು. ಆದರೆ ಕಾರಣ ಏನೆ ಇರಲಿ ಯುದ್ದ ಸಮಯದಲ್ಲಿ ರಾಷ್ಟ್ರೀಯ ಭಾವನೆಗೆ ಮಾತ್ರ ಮಹತ್ವ ದೊರೆಯುತ್ತದೆಯೇ ಹೊರತು ಇತರ ಭಾವನೆಗಳಿಗೆ ಅವಕಾಶವೇ ಇಲ್ಲ. ಅವು ಗಳಿಗೆ ಅದುವರೆಗೆ ಇದ್ದ ಬೆಲೆಎಲ್ಲ ಕೊಚ್ಚಿ ಹೋಗುತ್ತದೆ. ಮೂನಿಚ್ ಘಟನೆ ನಡೆದ ಒಡನೆ ಯುರೋಪಿ ನ ನೂರಾರು ಅಂತರ ರಾಷ್ಟ್ರೀಯ ಸಂಸ್ಥೆಗಳು, ಫ್ಯಾಸಿಸ್ಟ್ ವಿರೋಧಿ ಸಂಸ್ಥೆಗಳು ಬಾಲ ಮುದುರಿಕೊಂಡು ಶಕ್ತಿಗುಂದಿ, ತೆಪ್ಪಗಾದುದು ಒಂದು ಆಶ್ಚರ್ಯ. ವ್ಯಕ್ತಿಗಳಿಗೆ ಅಥವ ಸಣ್ಣ ಪುಟ್ಟ ಸಂಸ್ಥೆಗಳಿಗೆ ಅಂತರ ರಾಷ್ಟ್ರೀಯ ಭಾವನೆ ಸುಲಭ. ಒಂದು ಉನ್ನತ ಧ್ಯೇಯಕ್ಕಾಗಿ ತಮ್ಮ ಮತ್ತು ತಮ್ಮ ದೇಶದ ರಾಷ್ಟ್ರೀಯ ಹಿತವನ್ನು ತ್ಯಾಗಮಾಡಲು ಸಿದ್ದವಿರಬಹುದು; ಆದರೆ ಅದು ರಾಷ್ಟ್ರಗಳಿಂದ ಸಾಧ್ಯವಿಲ್ಲ. ಅಂತರ ರಾಷ್ಟ್ರೀಯ ಪ್ರಶ್ನೆಗಳು ರಾಷ್ಟ್ರೀಯ ಪ್ರಶ್ನೆಗಳೊಂದಿಗೆ ಹೊಂದಿಕೊಂಡಾಗ ಮಾತ್ರ ಅಂತರ ರಾಷ್ಟ್ರೀಯ ಭಾವನೆಯಲ್ಲಿ ಸ್ವಲ್ಪ ಆಸಕ್ತಿ ಹುಟ್ಟುತ್ತದೆ. ಈಗ ಕೆಲವು ದಿನಗಳ ಹಿಂದೆ ಲಂಡನ್ “ಎಕಾನಮಿಸ್ಟ್" ಪತ್ರಿಕೆಯು ಬ್ರಿಟಿಷ್ ವಿದೇಶಾಂಗ ನೀತಿ ಚರ್ಚೆಮಾಡುತ್ತ ರಾಷ್ಟ್ರೀಯ ಹಿತಕ್ಕೆ ಪೂರ್ಣ ರಕ್ಷಣೆ ಮತ್ತು ಮನ್ನಣೆ ಕೊಡುವ ವಿದೇಶಾಂಗ ನೀತಿ ಮಾತ್ರ ನಿರಾತಂಕ ಮುಂದುವರಿಯಲು ಸಾಧ್ಯ. ತನ್ನ ರಾಷ್ಟ್ರೀಯ ಹಿತಕ್ಕಿಂತ ಅಂತರ ರಾಷ್ಟ್ರೀಯ ಹಿತಕ್ಕೆ ಯಾವ ರಾಷ್ಟ್ರವೂ ಹೆಚ್ಚಿನ ಬೆಲೆಕೊಡಲು ಸಿದ್ಧವಿಲ್ಲ. ಎರಡರ ಹಿತವೂ ಒಂದೇ ಆದಾಗ ಮಾತ್ರ ಅಂತರ ರಾಷ್ಟ್ರೀಯ ಭಾವನೆ ಪರಿಣಾಮಕಾರಿಯಾಗಬಹುದು” ಎಂದು ಹೇಳಿದೆ.

ಸ್ವತಂತ್ರ ರಾಷ್ಟ್ರದಲ್ಲಿ ಮಾತ್ರ ಅಂತರ ರಾಷ್ಟ್ರೀಯ ಭಾವನೆ ಬೆಳೆಯಲು ಸಾಧ್ಯ. ಪರದಾಸ್ಯದಲ್ಲಿರುವ ರಾಷ್ಟ್ರದ ಯೋಚನೆ ಮತ್ತು ಶಕ್ತಿ ಎಲ್ಲವೂ ತನ್ನ ಬಿಡುಗಡೆಯ ಕಡೆಗೆ, ಗುಲಾಮಗಿರಿ ಎಂದರೆ ದೇಹಕ್ಕೆ ಕುಷ್ಟರೋಗ ಒದಗಿದಂತೆ, ಇತರ ಅಂಗಾಂಗಗಳನ್ನು ನವೆಸುವುದರ ಜೊತೆಗೆ ಮನಸ್ಸನ್ನೂ ಸದಾ ಕೊರೆಯುತ್ತದೆ; ಎಲ್ಲ ಭಾವನೆ ಮತ್ತು ಕಾಠ್ಯಕ್ಕೂ ಬೇರೊಂದು ಬಣ್ಣ ಕೊಡುತ್ತದೆ; ಹೆಜ್ಜೆ ಹೆಜ್ಜೆಗೂ ಹೋರಾಟ; ಎಲ್ಲ ದೃಷ್ಟಿಯೂ ಆ ಹೋರಾಟದ ಮೇಲೆ; ಉಳಿದ ಯಾವ ದೊಡ್ಡ ವಿಷಯಗಳಿಗೂ ಅವ ಕಾಶವೇ ಇಲ್ಲ; ವ್ಯಕ್ತಿಯ ಮತ್ತು ರಾಷ್ಟ್ರದ ಮನಸ್ಸಿನಲ್ಲಿ ಕಳೆದ ಹೋರಾಟದ ಮತ್ತು ಅನುಭವಿಸಿದ ಸಂಕಟಗಳ ಇತಿಹಾಸವೇ ಸದಾ ಮೂಡಿರುತ್ತದೆ; ಅದೇ ಒಂದು ಭಾವೋದ್ರೇಕವಾಗುತ್ತದೆ; ಹುಚ್ಚಾಗುತ್ತದೆ. ಮೂಲಕಾರಣ ನಿವಾರಣೆಯಾಗುವವರೆಗೆ ಆ ಹುಚ್ಚು ಇಳಿಯುವುದಿಲ್ಲ. ಆಗಲೂ ಸಹ, ದಾಸ್ಯದಿಂದ ವಿಮುಕ್ತರಾದೆವೆಂದಾಗಲೂ ದೇಹಾಲಸ್ಯಕ್ಕಿಂತ ಮನೋರೋಗ ಗುಣವಾಗುವುದು ತುಂಬ ನಿಧಾನ; ಆದ್ದರಿಂದ ಮನಸ್ಸು ತಿಳಿಯಾಗಲು ಬಹಳ ಕಾಲ ಬೇಕಾಗುತ್ತದೆ.

ಭಾರತದಲ್ಲಿ ಈ ಹಿನ್ನೆಲೆಯು ಬಹಳ ಕಾಲದಿಂದ ಇತ್ತು. ಆದರೂ ಗಾಂಧೀಜಿ ಭಾರತದ ರಾಷ್ಟ್ರೀಯ ಚಳವಳಿಗೆ ಒಂದು ಹೊಸ ಸ್ವರೂಪಕೊಟ್ಟು ಅದರ ನಿರಾಶಾಭಾವನೆಯನ್ನೂ ಕಹಿಯನ್ನೂ ಬಹಳ ಮಟ್ಟಿಗೆ ಕಡಿಮೆ ಮಾಡಿದರು. ಆ ನಿರಾಶಾಭಾವನೆಗಳು ಇದ್ದೇ ಇದ್ದವು ; ಆದರೂ ದ್ವೇಷರಹಿತ ರಾಷ್ಟ್ರೀಯ