ಅವರು ಕಾಂಗ್ರೆಸ್ ನೀತಿಯನ್ನು ಬಹಿರಂಗ ವಿರೋಧಿಸಲು ಆರಂಭಿಸಿದರು. ೧೯೩೯ನೆಯ ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ಸು ತನ್ನ ಹಿಂದಿನ ಅಧ್ಯಕ್ಷರೊಬ್ಬರ ಮೇಲೆ ಶಿಸ್ತಿನ ಕಾರ್ಯಕ್ರಮ ಸಹ ತೆಗೆದುಕೊಳ್ಳಬೇಕಾದ ವಿಚಿತ್ರ ಪ್ರಸಂಗ ಒದಗಿತು.
೨. ಕಾಂಗ್ರೆಸ್ಸಿನ ಯುದ್ಧ ನೀತಿ
ಕಾಂಗ್ರೆಸ್ಸು ಈ ರೀತಿ ದ್ವಿಮುಖ ಯುದ್ಧ ನೀತಿಯನ್ನು ಹಾಕಿಕೊಂಡು ಅದನ್ನೇ ಪ್ರತಿಪಾದಿಸುತ್ತ ಬಂದಿತು. ಒಂದು ಕಡೆ ಫ್ಯಾಸಿಸ್ಟ್ ದೇಶಗಳ ಒಳಾಡಳಿತ ನೀತಿ ಮತ್ತು ಪರದೇಶಗಳ ಆಕ್ರಮಣ ನೀತಿಯನ್ನು ಪ್ರತಿಭಟಿಸಿ ಫ್ಯಾಸಿಸಂ, ನಾಜಿಸಂ ಮತ್ತು ಜಪಾನೀ ಸೈನ್ಯ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿತು ; ಆಕ್ರಮಣಕ್ಕೆ ಬಲಿಯಾದ ರಾಷ್ಟ್ರಗಳಿಗೆ ಪೂರ್ಣ ಸಹಾನುಭೂತಿ ವ್ಯಕ್ತಗೊಳಿಸಿತು; ಮತ್ತು ಆಕ್ರಮಣ ತಡೆಗಟ್ಟುವ ಯುದ್ಧ ಅಥವ ಇತರ ಪ್ರಯತ್ನಕ್ಕೆ ಯಾವುದೇ ಆಗಲಿ ಬೆಂಬಲ ಕೊಡುವುದಾಗಿ ಘೋಷಿಸಿತು. ಇನ್ನೊಂದು ಕಡೆ ಭಾರತದ ಸ್ವಾತಂತ್ರಕ್ಕೆ ಮಹತ್ವಕೊಟ್ಟಿತು. ಅನೇಕ ದಿನಗಳು ನಮ್ಮ ಹೋರಾಟದ ಮೂಲ ಉದ್ದೇಶ ಸ್ವಾತಂತ್ರವಾಗಿತ್ತೆಂದು ಮಾತ್ರವಲ್ಲ ; ಮುಂದಿನ ಯುದ್ಧ ದೃಷ್ಟಿಯಿಂದ ಅದು ನಮಗೆ ಅಗತ್ಯವೆನಿಸಿತು. ಭಾರತ ಸ್ವತಂತ್ರವಾದರೆ ಮಾತ್ರ ಯುದ್ದದಲ್ಲಿ ನಿಜವಾದ ಪಾತ್ರ ವಹಿಸಲು ಸಾಧ್ಯವಿತ್ತು. ಸ್ವಾತಂತ್ರ್ಯ ದೊರೆತರೆ ಮಾತ್ರ ಭಾರತ ಮತ್ತು ಬ್ರಿಟನ್ ಮಧ್ಯೆ ಇದ್ದ ಕಹಿನೆನಪು ಮರೆಯಲು ಸಾಧ್ಯವೆನಿಸಿತು. ಜನರಲ್ಲಿ ಉತ್ಸಾಹ ತುಂಬಿ ಅಪಾರ ಯುದ್ಧ ಸಾಮಗ್ರಿ ಒದಗಿಸಲು ಸಾಧ್ಯ. ಆ ಸ್ವಾತಂತ್ರ್ಯವಿಲ್ಲದೆ ಈ ಯುದ್ಧಕ್ಕೂ ಹಿಂದಿನ ಯುದ್ಧಗಳಿಗೂ ಯಾವ ಭೇದವನ್ನೂ ಕಾಣದಾದೆವು; ಎರಡು ಸಾಮ್ರಾಜ್ಯ ಶಕ್ತಿಗಳ ಮಧ್ಯೆ ಒದಗಿದ ಒಂದು ಹೋರಾಟವೆನಿಸಿತು. ಬ್ರಿಟಿಷ್ ಸಾಮ್ರಾಜ್ಯವನ್ನು ಸಂರಕ್ಷಿಸಿ, ಶಾಶ್ವತಗೊಳಿಸುವ ಪ್ರಯತ್ನವಾಗಿತ್ತು. ಬಹುಕಾಲದಿಂದ ನಾವು ಎದುರಿಸಿದ್ದ ಸಾಮ್ರಾಜ್ಯಕ್ಕೆ ಈಗ ಪುನಃ ಪ್ರೋತ್ಸಾಹಕೊಡುವುದು ತೀರ ಅಸಾಧ್ಯ ಮತ್ತು ಅವಿವೇಕವೆನಿಸಿತು. ಅನಿವಾಯ್ಯ ವಿಪತ್ತುಗಳೆರಡರಲ್ಲಿ ಕಡಮೆ ತೊಂದರೆ ಅನುಭವಿಸೋಣವೆಂದು ವಿಶಾಲ ದೃಷ್ಟಿಯಿಂದ ನೋಡಹೋದರೂ ಜನತೆ ಒಪ್ಪುವುದು ಅಸಾಧ್ಯವಿತ್ತು. ಜನರ ಮನಸ್ಸಿನಲ್ಲಿ ನೆಟ್ಟಿದ್ದ ಕಹಿ ಮನೋಭಾವ ಅಳಿಸಿ, ಉತ್ಸಾಹ ತುಂಬಿ ಜನಶಕ್ತಿ ಅಣಿಗೊಳಿಸಲು ಸ್ವಾತಂತ್ರ್ಯ ದೊರೆತರೆ ಮಾತ್ರ ಸಾಧ್ಯವಿತ್ತು. ಬೇರೆ ಮಾರ್ಗವೇ ಇರಲಿಲ್ಲ.
ಭಾರತೀಯರ ಅಥವ ಅವರ ಪ್ರತಿನಿಧಿಗಳ ಒಪ್ಪಿಗೆಯಿಲ್ಲದೆ ಭಾರತವನ್ನು ಯಾವ ಯುದ್ಧದಲ್ಲೂ ತಳ್ಳುವದಿಲ್ಲವೆಂದೂ, ಭಾರತೀಯ ಸೈನ್ಯಪಡೆಗಳನ್ನು ಯುದ್ಧಕ್ಕೆ ಹೊರಗೆ ಕಳುಹಿಸುವದಿಲ್ಲವೆಂದೂ ಕಾಂಗ್ರೆಸ್ಸು ಸರಕಾರದಿಂದ ಸ್ಪಷ್ಟ ಭರವಸೆ ಕೇಳಿತು. ಭಿನ್ನ ರಾಜಕೀಯ ಪಕ್ಷ ಪಂಗಡಗಳಿದ್ದ ಕೇಂದ್ರ ಶಾಸನ ಸಭೆಯು ಸಹ ಭಾರತೀಯ ಸೈನ್ಯಗಳನ್ನು ಹೊರಗೆ ಕಳುಹಿಸಬಾರದೆಂದು ಅಭಿಮತವನ್ನು ವ್ಯಕ್ತಗೊಳಿಸಿತ್ತು. ಯಾರ ಸ್ವಾತಂತ್ರ್ಯದ ಹೋರಾಟದಲ್ಲಿ ಭಾರತೀಯರಿಗೆ ಸಹಾನುಭೂತಿ ಇದೆಯೋ ಮತ್ತು ಯಾರೊಡನೆ ಭಾರತೀಯರಿಗೆ ಯಾವ ವ್ಯಾಜ್ಯವೂ ಇರಲಿಲ್ಲವೊ ಅಂತಹ ಜನರನ್ನು ಗೆಲ್ಲುವುದಕ್ಕೂ, ಹತ್ತಿಕ್ಕುವುದಕ್ಕೂ ಭಾರ ತೀಯ ಸೈನ್ಯವನ್ನು ಯುದ್ಧಕ್ಕೆ ಕಳುಹಿಸಿ ಬ್ರಿಟಿಷ್ ಸಾಮ್ರಾಜ್ಯದ ರಾಜಕಾರಣಗಳಿಗೆ ಭಾರತದ ಸೈನ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದಾರೆಂಬ ದೂರು ಮೊದಲಿನಿಂದಲೂ ಇತ್ತು. ಈ ರೀತಿ ಹಣದ ಆಶೆ ತೋರಿ ಭಾರತೀಯ ಪಡೆಗಳನ್ನು ಬಲ್ಮ, ಚೀಣಾ, ಇರ್ರಾ, ಮಧ್ಯ ಪ್ರಾಂತ್ಯ ಮತ್ತು ಆಫ್ರಿಕೆಯ ಅನೇಕ ಭಾಗಗಳಲ್ಲಿ ಉಪಯೋಗಿಸಿದ್ದರು. ಈ ದೇಶಗಳಲ್ಲೆಲ್ಲ ಭಾರತೀಯ ಸೈನ್ಯವು ಬ್ರಿಟಿಷ್ ಸಾಮ್ರಾಜ್ಯ ಶಕ್ತಿಯ ಸಂಕೇತವಾಗಿ ಭಾರತದ ಮೇಲೆ ಆ ಜನರ ದ್ವೇಷ ಬೆಳೆಯಲು ಅವಕಾಶವಾಯಿತು. ಒಂದು ಸಲ ಒಬ್ಬ ಈಜಿಪ್ಟ್ ದೇಶಾಭಿಮಾನಿ “ನೀವು ನಿಮ್ಮ ಸ್ವಾತಂತ್ರ್ಯ ಕಳೆದುಕೊಂಡಿರುವುದಲ್ಲದೆ ಇತರರ ಸ್ವಾತಂತ್ರ್ಯ ನಿಮ್ಮ ಸೈನ್ಯ ಒದಗಿಸಿ ಅಪಹರಿಸಲು ಬ್ರಿಟಿಷರಿಗೆ ಸಹಾಯಮಾಡುತ್ತಿದ್ದೀರಿ” ಎಂದು ಮೂದಲಿಸಿದ್ದು ಜ್ಞಾಪಕವಿದೆ.
ಈ ಇಬ್ಬಗೆಯ ನೀತಿಯ ದ್ವಿಮುಖಗಳು ಒಂದಕ್ಕೊಂದು ಹೊಂದಿಕೊಳ್ಳದೆ ಪರಸ್ಪರ ವಿರೋಧ ಬಂದಿತು, ಆದರೆ ಅದಕ್ಕೆ ಹೊಣೆಗಾರರು ನಾವಲ್ಲ; ಪರಿಸ್ಥಿತಿಯೇ ಆ ರೀತಿ ಇತ್ತು; ಮತ್ತು ಆ