ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೩
೩೮೧

ಪರಿಸ್ಥತಿಯಲ್ಲಿ ಅನುಸರಿಸಿದ ನಮ್ಮ ನೀತಿಯಲ್ಲಿ ಅದು ಪ್ರತಿಬಿಂಬಿತವಾಗಬೇಕಾದ್ದೂ ಸ್ವಾಭಾವಿಕವಿತ್ತು. ಒಂದು ಕಡೆ ಫ್ಯಾಸಿಸಂ ಮತ್ತು ನಾಜಿಸಂ ಖಂಡಿಸುವುದೂ, ಅದೇ ಉಸಿರಿನಲ್ಲೇ ಸಾಮ್ರಾಜ್ಯ ನೀತಿಗೆ ಬೆಂಬಲ ಕೊಡುವುದೂ ಪರಸ್ಪರ ವಿರುದ್ಧವೆಂದು ಮೇಲಿಂದ ಮೇಲೆ ಹೇಳುತ್ತಲೇ ಬಂದೆವು. ಫ್ಯಾಸಿಸಂ ಮತ್ತು ನಾಜಿಸಂ ಹೆಸರಿನಲ್ಲಿ ಭಯಂಕರ ಅತ್ಯಾಚಾರ ನಡೆದು ಭಾರತ ಮತ್ತು ಇತರ ಕಡೆಗಳಲ್ಲಿ ಸಾಮ್ರಾಜ್ಯ ಆಡಳಿ ತವು ಸ್ತಿಮಿತದಲ್ಲಿದ್ದುದೂ ನಿಜ. ವ್ಯತ್ಯಾಸ ಏನಿದ್ದರೂ ಕಾಲ ಮತ್ತು ಗತಿಯಲ್ಲೇ ಹೊರತು ನೀತಿಯಲ್ಲಿ ಏನೂ ಇರಲಿಲ್ಲ. ಫ್ಯಾಸಿಸ್ಟ್ ಮತ್ತು ನಾಜಿ ತತ್ವಗಳು ನಮಗೆ ದೂರ ಇದ್ದವು; ಅವುಗಳ ಪರಿಚಯ ಏನಿದ್ದರೂ ಗ್ರಂಥಸ್ತವಿತ್ತು. ಆದರೆ ಸಾಮ್ರಾಜ್ಯದ ಬಿಗಿತವು ಬಾಗಿಲು ದಾಟಿದರೆ ಸಾಕು ಇಡೀ ವಾತಾವರಣವನ್ನೆ ಆವರಿಸಿ ನಮ್ಮ ಉಸಿರನ್ನೆ ಕಟ್ಟಿತ್ತು. ಹೊರಗೆ ಪ್ರಜಾಸತ್ತೆಯ ಧ್ವಜವನ್ನೆತ್ತಿ ಹಿಡಿದು ಭಾರತದಲ್ಲಿ ನಿರಾಕರಿಸುವುದು ತಿಳಿಗೇಡಿತನವೆಂದು ತಿಳಿಸಿದೆವು.

ನಮ್ಮ ದ್ವಿಮುಖ ನೀತಿಯಲ್ಲಿ ಏನೇ ಪರಸ್ಪರ ವಿರೋಧವಿದ್ದರೂ, ದೇಶದ ರಕ್ಷಣೆ ಮತ್ತು ಪರಾಕ್ರ ಮಣ ವಿರೋಧಕ್ಕೆ ಸೈನ್ಯ ಉಪಯೋಗಿಸಲು ನಮ್ಮ ಅಹಿಂಸಾತತ್ವವು ಅಡ್ಡಿ ಬರಲಿಲ್ಲ.

೧೯೩೮ನೆಯ ಬೇಸಗೆಯಲ್ಲಿ ನಾನು ಇಂಗ್ಲೆಂಡ್ ಮತ್ತು ಯೂರೋಪಿನಲ್ಲಿ ಇದ್ದೆ. ನನ್ನ ಭಾಷಣಗಳಲ್ಲಿ, ಬರವಣಿಗೆಯಲ್ಲಿ ಮತ್ತು ವ್ಯಕ್ತಿಶಃ ಸಂಭಾಷಣೆಗಳಲ್ಲಿ ನಮ್ಮ ಈ ನೀತಿ ವಿವರಿಸಿ ಮುಂದೆಯೂ ಇದೇ ರೀತಿ ಬಿಟ್ಟರೆ ಅಥವ ವೃಥಾ ಕಾಲಹರಣ ಮಾಡಿದರೆ ಅನಾಹುತ ಅನಿವಾದ್ಯವೆಂದು ಎಚ್ಚರಿಸಿದೆ. ಸೂಡೆಟನ್‌ಲ್ಯಾಂಡ್ ಸಮಸ್ಯೆ ಬಿಗಡಾಯಿಸಿದ್ದಾಗ ಯುದ್ಧ ಒದಗಿದರೆ ಭಾರತ ಏನುಮಾಡುತ್ತದೆ ಎಂದು ಅನೇಕ ಜೆಕ್ಕರು ಕಾತರರಾಗಿ ಕೇಳಿದರು. ಅತಿ ಭಯಂಕರ ಅಪಾಯದ ಎದುರಿನಲ್ಲಿದ್ದರು; ನಮ್ಮ ದೀರ್ಘಕಾಲದ ವ್ಯಾಜ್ಯ ಅಥವ ನಯವಾದ ತರ್ಕ ಕೇಳಿ ತಿಳಿದುಕೊಳ್ಳಲು ಅವರಿಗೆ ಸಮಯವಿರಲಿಲ್ಲ. ಆದರೂ ನನ್ನ ವಾದವನ್ನು ಅವರು ಅರಿತು ಅದರ ನ್ಯಾಯಪರತೆಯನ್ನು ಒಪ್ಪಿದರು.

೧೯೩೯ರ ಮಧ್ಯ ಭಾಗದಲ್ಲಿ ಭಾರತೀಯ ಸೈನ್ಯಗಳನ್ನು ಸಮುದ್ರದಾಚೆ ಸಿಂಗಪುರಕ್ಕೂ ಮಧ್ಯಪ್ರಾಚ್ಯಕ್ಕೊ ಕಳುಹಿಸುವುದಾಗಿ ತಿಳಿಯಬಂದಿತು. ಭಾರತದ ಪ್ರತಿನಿಧಿಗಳ ಒಪ್ಪಿಗೆಯಿಲ್ಲದೆ ಈ ರೀತಿ ಕಳುಹಿಸಿದ್ದಕ್ಕೆ ವಿರೋಧವೆದ್ದಿತು. ಕಷ್ಟ ಪರಿಸ್ಥಿತಿಯಲ್ಲಿ ಸೈನ್ಯದ ಓಡಾಟ ಗುಪ್ತವಾಗಿಡಬೇಕಾದ್ದು ಸಾಮಾನ್ಯ ನೀತಿ ನಿಜ, ಆದರೂ ಭಾರತೀಯ ನಾಯಕರ ಅಭಿಮತ ಪಡೆಯಲು ಅನೇಕ ಮಾರ್ಗಗಳಿದ್ದವು. ಕೇಂದ್ರ ಶಾಸನ ಸಭೆಯ ಪಕ್ಷಗಳ ನಾಯಕರು ಇದ್ದರು. ಪ್ರಾಂತ್ಯಗಳಲ್ಲಿ ಪ್ರಜಾಸತ್ತಾತ್ಮಕ ಸರಕಾರಗಳಿದ್ದವು. ಸಾಧಾರಣವಾಗಿ ಕೇಂದ್ರ ಸರಕಾರವು ಪ್ರಾಂತ್ಯ ಮಂತ್ರಿಮಂಡಲಗಳೊಡನೆ ಅನೇಕ ವಿಷಯಗಳಲ್ಲಿ ಗುಪ್ತಾಲೋಚನೆ ಸಲಹೆ ಪಡೆದು ಅವರ ವಿಶ್ವಾಸದಿಂದ ಕೆಲಸಮಾಡಬೇಕಾದ್ದು ಸಹಜ. ಆದರೆ ಈ ವಿಷಯದಲ್ಲಿ ರಾಷ್ಟ್ರದ ಅಭಿಮತಕ್ಕೆ ಮತ್ತು ಪ್ರಜಾಪ್ರತಿನಿಧಿಗಳಿಗೆ ನೆಪಮಾತ್ರ ಯಾವ ಗೌರವವನ್ನು ಸಹ ಕೊಡಲಿಲ್ಲ. ಪ್ರಾಂತ ಸರಕಾರಗಳಿಗೆ ಅಧಿಕಾರಕೊಟ್ಟ ೧೯೩೫ನೆ ಇಂಡಿಯಾ ಸರಕಾರ ಶಾಸನವನ್ನು ಸಹ ತಿದ್ದುಪಡಿ ಮಾಡಲು ಪಾರ್ಲಿಮೆಂಟಿನಲ್ಲಿ ಪ್ರಯತ್ನ ನಡೆದಿತ್ತು. ಯುದ್ಧ ಒದಗಿದರೆ ಆ ಮೂಲಕ ಎಲ್ಲ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ತೆಗೆದುಕೊಳ್ಳುವ ಯತ್ನ ನಡೆದಿತ್ತು. ಪ್ರಜಾಪ್ರಭುತ್ವ ಇರುವ ರಾಷ್ಟ್ರದಲ್ಲಿ, ಪಕ್ಷಗಳ ಅನುಮತಿ ಪಡೆದು ಆ ರೀತಿ ಮಾಡಿದರೆ ಅದು ಸಹಜ ಹೌದು ಸಕಾರಣವೂ ಹೌದು. ಸಂಯುಕ್ತ ರಾಜ್ಯ ಪದ್ಧತಿಯಲ್ಲಿ, ಘಟಕ ರಾಜ್ಯಗಳು, ಪ್ರಾಂತ್ಯಗಳು, ಸ್ವತಂತ್ರ ಭಾಗಗಳು ವಿಷಮ ಪರಿಸ್ಥಿತಿ ಮತ್ತು ಯುದ್ದ ಸಮಯಗಳಲ್ಲಿ ಸಹ ಕೇಂದ್ರ ಸರಕಾರಕ್ಕೆ ತಮ್ಮ ಅಧಿಕಾರ ಬಿಟ್ಟು ಕೊಡಲು ಒಪ್ಪುವುದು ಸುಲಭವಲ್ಲ. ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ಈ ಜಗ್ಗಾಟ ಇದ್ದೇ ಇದೆ. ಯುದ್ದಕ್ಕಾಗಿ ಮತ್ತು ಯುದ್ದ ಸಮಯದಲ್ಲಿ ಮಾತ್ರ ರಾಜ್ಯಗಳ ಅಧಿಕಾರ ಮೊಟಕು ಮಾಡಿ ಕೇಂದ್ರ ಕಾಮನ್ ವೆಲ್ತ್ ಸರಕಾರಕ್ಕೆ ವಹಿಸಲು ಆಸ್ಟ್ರೇಲಿಯ ಜನಗಣತೆಯು ಒಪ್ಪಲಿಲ್ಲವೆಂದು ಈ ಮಸಿಯು ಹಸಿ ಇರುವಾಗಲೇ ಕೇಳುತ್ತಿದ್ದೇನೆ. ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ಆಸ್ಟ್ರೇಲಿಯದಲ್ಲಿ ಕೇಂದ್ರ ಸರಕಾರವು ಪ್ರಜಾಸತ್ತಾತ್ಮಕವಿದೆ; ಅದೇ ರಾಜ್ಯಗಳ ಪ್ರತಿನಿಧಿಗಳೇ ಕೇಂದ್ರದಲ್ಲೂ ಇದ್ದಾರೆ. ಆದರೆ ಭಾರತದಲ್ಲಿನ ಕೇಂದ್ರ ಸರಕಾರ