ಪುಟ:ಭಾರತ ದರ್ಶನ.djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩೮

ಭಾರತ ದರ್ಶನ

ಸಾಲದು" ಎಂದು ಹೊಗಳಿದ. “ಭಾರತದಲ್ಲಿ ಸೈನ್ಯ ಪಡೆಗಳನ್ನು ಹೆಚ್ಚಿಸಿದ್ದೇವೆ. ಈಗ ಅಲ್ಲಿರುವಷ್ಟು ಬಿಳಿಯ ಸೈನ್ಯ ಸಂಖ್ಯೆ ಬ್ರಿಟಿಷ್ ಆಡಳಿತದ ಇನ್ನಾವ ಕಾಲದಲ್ಲೂ ಇರಲಿಲ್ಲ" ಎಂದು ಹೇಳಿದ ಈ ವಿದೇಶೀ ಸೈನ್ಯವೂ ಮತ್ತು ಭಾರತೀಯ ಪೊಲೀಸ್ ಪಡೆಗಳೂ ನಿರಾಯುಧ ಭಾರತ ಜನತೆಯ ಮೇಲೆ ಯುದ್ಧ ಮಾಡಿ ದಂಗೆ ಅಡಗಿಸಿದರು; ಈ ಕಾರ್ಯದಲ್ಲಿ ಭಾರತೀಯ ಅಧಿಕಾರಿ ವರ್ಗವು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಬ್ರಿಟಿಷ್ ರಾಜ್ಯದ ನೇರವಾಗಿ ನಿಂತಿತು.

ಜನತೆಯ ಈ ಪ್ರತಿಭಟನೆಯು ಪ್ರತಿ ನಗರಕ್ಕೂ ಹಳ್ಳಿಗೂ ಹಬ್ಬಿ ದೇಶಾದ್ಯಂತ ಮೂಲೆ ಮೂಲೆಗೂ ಹರಡಿತು. ಅಧಿಕಾರಿಗಳ ಪ್ರತಿಬಂಧವೆಷ್ಟಿದ್ದರೂ ಪ್ರತಿಯೊಂದು ಪ್ರಾಂತದಲ್ಲೂ, ಅನೇಕ ದೇಶೀಯ ಸಂಸ್ಥಾನಗಳಲ್ಲೂ ಅಸಂಖ್ಯಾತ ವಿರೋಧ ಪ್ರದರ್ಶನಗಳಾದವು. ಎಲ್ಲಿ ನೋಡಿದರೂ ಹರತಾಳಗಳು; ಅಂಗಡಿಗಳನ್ನೂ, ಪೇಟೆಗಳನ್ನೂ ಮುಚ್ಚಿ ವ್ಯಾಪಾರ ನಿಲ್ಲಿಸುವುದು; ಅನೇಕ ದಿನ, ಅನೇಕ ವಾರ, ಕೆಲವುವೇಳೆ ಅನೇಕ ತಿಂಗಳಾದರೂ ಆ ಹರತಾಳ ನಿಲ್ಲಲಿಲ್ಲ. ಅದೇ ರೀತಿ ಕೂಲಿಗಾರರ ಮುಷ್ಕರಗಳು. ರಾಷ್ಟ್ರನಾಯಕರ ಬಂಧನಕ್ಕಾಗಿ ಸುಸಂಘಟಿತರೂ, ಸಂಯಮಿಗಳೂ ಆದ ಕೈಗಾರಿಕಾ ಕೂಲಿಗಾರರು ಅನೇಕ ಮುಖ್ಯ ಕೈಗಾರಿಕಾ ಕೇಂದ್ರಗಳಲ್ಲಿ ಮುಷ್ಕರ ಹೂಡಿದರು. ಉಕ್ಕಿನ ಪ್ರಮುಖ ನಗರವಾದ ಜಮಷೆಡ್ ಪುರದಲ್ಲಿ ಭಾರತದ ನಾನಾ ಮೂಲೆಗಳಿಂದ ಬಂದು ಕೆಲಸಮಾಡುತ್ತಿರುವ ಕುಶಲ ಕರ್ಮಿಗಳು ಹದಿನೈದು ದಿನಗಳ ಕಾಲ ಕೆಲಸಕ್ಕೆ ಹೋಗದೆ ಮುಷ್ಕರ ಮುಂದುವರಿಸುತ್ತಿದ್ದಾಗ ಕಾರ್ಖಾನೆಯ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಬಿಡುಗಡೆಗಾಗಿ ಮತ್ತು ರಾಷ್ಟ್ರೀಯ ಸರಕಾರ ಸ್ಥಾಪನೆಗಾಗಿ ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆಕೊಟ್ಟ ಮೇಲೆ ಮಾತ್ರ ಕೆಲಸಕ್ಕೆ ಹಿಂದಿರುಗಿದರು. ಬಟ್ಟೆಯ ಕೈಗಾರಿಕಾ ಕೇಂದ್ರವಾದ ಅಹಮದಾಬಾದಿನಲ್ಲಿ ಸಹ ಅಸಂಖ್ಯಾತ ಕಾರ್ಮಿಕರು ಗಿರಣಿ ಕಾಮಗಾರ ಸಂಘದ ಯಾವ ಆಜ್ಞೆಯೂ ಇಲ್ಲದೆ ಇದ್ದಕ್ಕಿದ್ದಂತೆ ಕೆಲಸ ಪೂರ್ಣನಿಲ್ಲಿಸಿದರು. * ಅಹಮದಾಬಾದಿನಲ್ಲಿ ಈ ಮುಷ್ಕರ ಮುರಿಯಲು
——————
* ಜಮಷೆಡ್ ಪುರ ಮತ್ತು ಅಹಮದಾಬಾದಿನ ಮುಷ್ಕರಗಳಿಗೆ ಮಾಲಿಕರೂ, ಆಡಳಿತ ವರ್ಗದವರೂ ಕಾರಣರೆಂದು ಸರಕಾರದ ಅಧಿಕಾರಿಗಳೂ ಮತ್ತು ಇನ್ನೂ ಕೆಲವರೂ ಹೇಳುತ್ತಿದಾರೆ. ಮಾಲಿಕರಿಗೆ ಅಪಾರ ನಷ್ಟವಾಗುವುದರಿಂದ ನಾನು ಈವಾದ ನಂಬಲಾರೆ. ತಮ್ಮ ಹಿತಕ್ಕೆ ವಿರುದ್ಧ ವರ್ತಿಸುವ ಕೈಗಾರಿಕೋದ್ಯಮಿಗಳನ್ನು ಇನ್ನೂ ನಾನು ಕಂಡಿಲ್ಲ. ಅನೇಕ ಕೈಗಾರಿಕೋದ್ಯಮಿಗಳಿಗೆ ಭಾರತ ಸ್ವತಂತ್ರವಾಗಬೇಕೆಂಬ ಇಚ್ಛೆ ಇದೆ ನಿಜ; ಸ್ವಾತಂತ್ರ್ಯಕ್ಕಾಗಿ ಸಹಾನುಭೂತಿ ಕೋರಿರುವುದೂ ನಿಜ. ಆದರೆ ಅವರ ಸ್ವಾತಂತ್ರ್ಯದ ಕಲ್ಪನೆಯಲ್ಲಿ ಅವರ ಸ್ಥಾನಕ್ಕೆ ಯಾವ ಚ್ಯುತಿಯೂ ಬರಬಾರದು. ಯಾವ ಕ್ರಾಂತಿಕಾರಕ ಕಾರ್ಯಕ್ರಮವೂ, ಸಮಾಜ ರಚನೆಯಲ್ಲಿ ವಿಶೇಷ ಪರಿವರ್ತನೆಯ ಅವರಿಗೆ ರುಚಿಸವು. ಪ್ರಾಯಶಃ ೧೯೪೨ನೆ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿ ದೇಶಾದ್ಯಂತ ಹರಡಿದ್ದ ಜನರ ಕೋಪಾವೇಶಗಳನ್ನು ಕಂಡು ಹೆದರಿ, ಪೋಲೀಸರೊಂದಿಗೆ ಸಹಕರಿಸಿ, ತಾವೂ ಉಗ್ರ ಕಾರ್ಯಕ್ರಮ ತೆಗೆದುಕೊಂಡು ತಮ್ಮ ಶ್ರಮಜೀವಿಗಳ ಮೇಲೆ ಕೈಮಾಡುವುದನ್ನು ನಿಲ್ಲಿಸಿರಬೇಕು; ಏಕೆಂದರೆ ಮುಷ್ಕರ ಸಮಯಗಳಲ್ಲಿ ಪೋಲೀಸರೊಂದಿಗೆ ಸಹಕರಿಸುವುದೇ ಅವರ ಸಾಮಾನ್ಯ ಕಾರನೀತಿಯಾಗಿತ್ತು.

ಬ್ರಿಟಿಷ್ ಅಧಿಕಾರಿಗಳು ಮತ್ತು ಬ್ರಿಟಿಷ್ ಪತ್ರಿಕೆಗಳು ಮಾಡುವ ಇನ್ನೊಂದು ಆರೋಪಣೆ ಎಂದರೆ ದೊಡ್ಡ ಬಂಡವಲಗಾರರು ಕಾಂಗ್ರೆಸ್ಸಿಗೆ ಧನಸಹಾಯ ಮಾಡುತ್ತಿದ್ದಾರೆಂದು ಇದರಲ್ಲಿ ಯಾವ ಸತ್ಯಾಂಶವೂ ಇಲ್ಲ. ಅನೇಕ ವರ್ಷಗಳ ಕಾಲ ನಾನು ಕಾಂಗ್ರೆಸ್ಸಿನ ಕಾರ್ಯದರ್ಶಿಯೋಗಿ ಮತ್ತು ಅಧ್ಯಕ್ಷನಾಗಿ ಕೆಲಸಮೂಡಿದ್ದೇನೆ. ನನ್ನ ಗಮನಕ್ಕೆ ಅದು ಬರದ ಇರಲು ಸಾಧ್ಯವಿಲ್ಲ. ಕೆಲವು ಬಂಡವಲಗಾರರು ಆಗಾಗ ಗಾಂಧೀಜಿಯ ಗ್ರಾಮೋದ್ಯೋಗ, ಅಸ್ಪೃಶ್ಯತಾ ನಿವಾರಣೆ, ದಲಿತ ಜನರ ಪುನುರುದ್ಧಾರ, ಮೂಲ ಶಿಕ್ಷಣ ಮುಂತಾದ ಸಮಾಜ ಸುಧಾರಣಾ ಕಾರ್ಯಗಳಿಗೆ ಕೊಡುತ್ತಿದ್ದುದು ನಿಜ. ಆದರೆ ಅವರೆಲ್ಲ ಸಾಮಾನ್ಯವಾಗಿ ಅದರಲ್ಲೂ ಮುಖ್ಯವಾಗಿ ಸರಕಾರದೊಂದಿಗೆ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ಸಿನ ರಾಜಕೀಯದಿಂದ ಬಹು ದೂರವಿರುತ್ತಿದ್ದರು. ಅವರ ತಾತ್ಕಾಲಿಕ ಸಹಾನುಭೂತಿ ಏನೆ ಇರಲಿ ಶಾಂತಿಪ್ರಿಯರೂ, ಪ್ರತಿಷ್ಟಿತರೂ ಆದ ವ್ಯಕ್ತಿಗಳಂತೆ ಅವರ ದೃಷ್ಟಿ ಎಲ್ಲ ಅವರ ಸ್ಥಾನಭದ್ರತೆಯಮೇಲೆ ಇತ್ತು. ಕಾಂಗ್ರೆಸ್ ಕೆಲಸವೆಲ್ಲ ನಡೆದಿರುವುದು ಬಹು ಸಂಖ್ಯಾಕರ ಅಲ್ಪದೇಣಿಗಳಿಂದ ಮತ್ತು ಧನಸಹಾಯದಿಂದ ಅದರಲ್ಲಿ ಬಹುಭಾಗ ನಡೆದಿರುವುದು