ಪುಟ:ಭಾರತ ದರ್ಶನ.djvu/೪೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪೪

ಭಾರತ ದರ್ಶನ

ಸದುದ್ದೇಶದಲ್ಲಿ ನಂಬಿಕೆ ಇಡದೆ ಬ್ರಿಟಿಷರನ್ನು ಎದುರಿಸಲು ಧೈರ್ಯಮಾಡಿದವರನ್ನು ಬ್ರಿಟಿಷರಸೈನ್ಯ ಮತ್ತು ಭಾರತೀಯ ಪೋಲೀಸ್ ದಳದವರು ಸೋಲಿಸಿ ಬ್ರಿಟಿಷರ ಮತ್ತು ಸಾಮ್ರಾಜ್ಯದ ನ್ಯಾಯ ಪರತೆಯನ್ನು ದೃಢಪಡಿಸಿದ್ದರು. “ಬ್ರಿಟಿಷ್ ಸಾಮ್ರಾಜ್ಯ ಛಿದ್ರಗೊಳಿಸಲು ನಾನು ಬ್ರಿಟಿಷ್ ದೊರೆಯ ಮುಖ್ಯ ಪ್ರಧಾನಿಯಾಗಿಲ್ಲ” ಎಂದು ಚರ್ಚಿಲ್ ಭಾರತದ ವಿಷಯ ಮಾತನಾಡುತ್ತ ಹೇಳಿದನು. ಚರ್ಚಿಲ್ ಈ ಅಭಿಪ್ರಾಯ ವ್ಯಕ್ತಪಡಿಸಿದಾಗ ಅದು, ಮೊದಲು ಸಾಮ್ರಾಜ್ಯ ತತ್ವ ಮತ್ತು ರೀತಿನೀತಿ ಟೀಕೆ ಮಾಡುತ್ತಿದ್ದ ಜನರ ಅಭಿಪ್ರಾಯ ಸೇರಿ ಎಲ್ಲ ಬ್ರಿಟಿಷರ ಬಹು ಜನಾಭಿಪ್ರಾಯವಾಗಿತ್ತು. ಸಾಮ್ರಾಜ್ಯ ಸಂಪ್ರದಾಯ ರಕ್ಷಣೆಯಲ್ಲಿ ತಾವು ಯಾರಿಗೂ ಹಿಂದೆ ಇಲ್ಲವೆಂದು ತೋರಿಸಲು ಬ್ರಿಟಿಷ್ ಲೇಬರ್ ಪಕ್ಷದ ನಾಯಕರು ಚರ್ಚಿಲ್ ಹೇಳಿಕೆಗೆ ಬೆಂಬಲಕೊಟ್ಟರು. ಮತ್ತು “ಯುದ್ಧಾ ನಂತರ ಸಹ ಸಾಮಾಜ್ಯ ಭದ್ರತೆ ಕಾಪಾಡುವುದೇ ಬ್ರಿಟಿಷ್ ಜನರ ಸಂಕಲ್ಪ” ಎಂದು ಸ್ಪಷ್ಟಗೊಳಿಸಿದರು.

ದೂರದ ಭಾರತದ ಮೇಲೆ ಆಸಕ್ತಿ ತೋರಿದ ಅಮೆರಿಕನರಲ್ಲಿ ಭಿನ್ನಾಭಿಪ್ರಾಯವಿತ್ತು. ಬ್ರಿಟಿಷ್ ಆಡಳಿತವರ್ಗದವರೆಲ್ಲ ಸತ್ಯಸಂಧರೆಂದು ಅವರು ನಂಬಿಯೂ ಇರಲಿಲ್ಲ ಮತ್ತು ಪರರ ಸಾಮ್ರಾಜ್ಯವೆಂದರೆ ಅವರಿಗೆ ಒಪ್ಪಿಗೆಯೂ ಇರಲಿಲ್ಲ. ಜಪಾನ್ ಮೇಲಿನ ಯುದ್ಧದಲ್ಲಿ ಭಾರತದ ಪೂರ್ಣ ಸಹಾನುಭೂತಿಯಿಂದ ಭಾರತದ ಪೂರ್ಣ ಸಾಧನ ಸಂಪತ್ತನ್ನು ಉಪಯೋಗಿಸಿಕೊಳ್ಳಬೇಕೆಂಬ ಆಸಕ್ತಿಯೂ ಇತ್ತು. ಆದರೂ ಬ್ರಿಟಿಷರ ಏಕಪಕ್ಷೀಯ ಪ್ರಚಾರದಿಂದ ಸ್ವಲ್ಪ ಪರಿಣಾಮವಾಯಿತು; ಭಾರತದ ಪ್ರಶ್ನೆ ತಮ್ಮಿಂದ ಬಿಡಿಸಲಾಗದ ಸಮಸ್ಯೆ ಎಂಬ ಭಾವನೆ ಬೆಳೆಯಿತು; ಏನೆ ಆಗಲಿ ಮಿತ್ರ ರಾಷ್ಟ್ರವಾದ ಬ್ರಿಟನ್ನಿನ ಪ್ರಶ್ನೆಯಲ್ಲಿ ಪ್ರವೇಶ ಮಾಡಲು ಕಷ್ಟವೆನಿಸಿತು.

ರಷ್ಯದ ಆಡಳಿತವರ್ಗ ಮತ್ತು ಜನತೆಗೆ ಭಾರತದ ವಿಷಯ ಯಾವ ಅಭಿಪ್ರಾಯ ಇತ್ತೊ ತಿಳಿಯದು. ಅವರ ಅದ್ಭುತ ಯುದ್ಧ ಸನ್ನದ್ಧತೆಯಲ್ಲಿ ಮತ್ತು ಶತ್ರುವನ್ನು ತಮ್ಮ ದೇಶದಿಂದ ಹೊರದೂಡುವುದರಲ್ಲಿ ತಮಗೆ ಸಂಬಂಧಪಡದ ಇತರ ವಿಷಯ ಯೋಚಿಸಲು ಅವರಿಗೆ ಬಿಡುವೇ ಇರಲಿಲ್ಲ. ಆದರೂ ಅವರು ಬಹಳ ಮುಂದಾಲೋಚನೆ ಮಾಡುವವರಾದ್ದರಿಂದ ಏಷ್ಯದಲ್ಲಿ ತಮ್ಮ ಗಡಿಗೆ ಹೊಂದಿಕೊಂಡು ಭಾರತದ ವಿಷಯ ಯೋಚಿಸಿರಲೇಬೇಕು. ಅವರ ಮುಂದಿನ ನೀತಿ ಏನೆಂದು ಹೇಳಲು ಯಾರಿಗೂ ಸಾಧ್ಯವಿರಲಿಲ್ಲ; ಆದರೆ ಅದರಿಂದ ಸೋವಿಯಟ್ ರಷ್ಯದ ಸಂಯುಕ್ತ ಸಂಸ್ಥಾನಗಳ ರಾಜಕೀಯ ಮತ್ತು ಆರ್ಥಿಕ ಶಕ್ತಿ ಅಭಿವೃದ್ಧಿಯಾಗಬೇಕೆಂಬ ಮುಖ್ಯ ವಾಸ್ತವಿಕ ಗುರಿ ಇದ್ದಿರಬಹುದೆಂದು ಮಾತ್ರ ಹೇಳಬಹುದಾಗಿತ್ತು. ಭಾರತದ ವಿಷಯ ಏನೂ ಪ್ರಸ್ತಾಪಿಸದೆ ಎಚ್ಚರದಿಂದ ಇದ್ದರು. ಆದರೆ ೧೯೪೨ನೆ ನವಂಬರ್ ತಿಂಗಳಲ್ಲಿ ಸೋವಿಯಟ್ ಕ್ರಾಂತಿಯ ಇಪ್ಪತ್ತೈದನೆಯ ವಾರ್ಷಿಕೋತ್ಸವದಲ್ಲಿ ತಮ್ಮ ಸಾಮಾನ್ಯ ನೀತಿ ಪ್ರತಿಪಾದಿ ಸುವಾಗ ಸ್ಟಾಲಿನ್ “ಜನಾಂಗ ಬಹಿಷ್ಕಾರ ನಿರ್ಮೂಲನ ರಾಷ್ಟ್ರಗಳ ಮಧ್ಯೆ ಸಮಾನತೆ, ರಾಷ್ಟ್ರಗಳ ಅಸ್ತಿತ್ವ, ರಕ್ಷಣೆ, ದಾಸ್ಯ ರಾಷ್ಟ್ರಗಳ ಬಂಧನ ವಿಮೋಚನೆ ಮತ್ತು ಅವುಗಳಿಗೆ ಪೂರ್ಣ ಸ್ವಾತಂತ್ರ್ಯ ಪ್ರತಿಯೊಂದು ಜನಾಂಗವೂ ತನ್ನ ಇಚ್ಛೆಯಂತೆ ಸ್ವತಂತ್ರ ಜೀವನ ನಡೆಸಲು ಅವಕಾಶ, ನೊಂದ ಜನಾಂಗಗಳಿಗೆ ತಮ್ಮ ಸಾಧನ ಸಂಪತ್ತನ್ನು ಅಭಿವೃದ್ಧಿಗೊಳಿಸಿಕೊಳ್ಳಲು ಸಹಾಯ, ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳ ಪುನರುತ್ಥಾನ, ಹಿಟ್ಲರನ ಸರ್ವಾಧಿಕಾರ ನಾಶ ” ತಮ್ಮ ಧ್ಯೇಯಗಳೆಂದು ಹೇಳಿದ್ದನು.

ನಮ್ಮ ಬೇರೆ ಬೇರೆ ಕಾರ್ಯಕ್ರಮದ ಮೇಲೆ ಜನರ ಪ್ರತಿಕ್ರಿಯೆ ಏನೆ ಇರಲಿ ಚೀಣದ ಜನರ ಸಹಾನುಭೂತಿಯು ಒಟ್ಟಿನಲ್ಲಿ ಭಾರತದ ಸ್ವಾತಂತ್ರ್ಯದ ಪರವಿತ್ತು. ಅದಕ್ಕೆ ಐತಿಹಾಸಿಕ ಕಾರಣವೂ ಇದ್ದುದಲ್ಲದೆ ಭಾರತವು ಸ್ವತಂತ್ರವಾಗದಿದ್ದರೆ ಅದರಿಂದ ಚೀಣದ ಸ್ವಾತಂತ್ರ್ಯಕ್ಕೂ ಅಪಾಯವೆಂದು ಮನಗಂಡಿದ್ದರು. ಚೀಣ ಮಾತ್ರವಲ್ಲದೆ ಏಷ್ಯ, ಈಜಿಪ್ಟ್ ಮತ್ತು ಮಧ್ಯ ಪ್ರಾಚ್ಯದಲ್ಲೆಲ್ಲ ಭಾರತದ ಸ್ವಾತಂತ್ರ್ಯವು ಇತರ ದಾಸ್ಯ ಮತ್ತು ಅಧೀನ ರಾಷ್ಟ್ರಗಳ ವಿಶಾಲ ಸ್ವಾತಂತ್ರ್ಯದ ಸಂಕೇತವಾಯಿತು. ಇಂದಿನ ಸತ್ವ ಪರೀಕ್ಷೆಯಾಗಿ ಮುಂದಿನ ಅಳತೆಕೋಲಾಯಿತು; ವೆಂಡೆಲ್‌ವಿಲ್ಕಿ ತನ್ನ “ಒಂದು ಪ್ರಪಂಚ" (One World) ಎಂಬ ಗ್ರಂಥದಲ್ಲಿ “ಆಫ್ರಿಕಾದಿಂದ ಅಲಾಸ್ಕವರೆಗೆ ನಾನು ಅನೇಕ ಸ್ತ್ರೀ ಪುರುಷರೊಂದಿಗೆ ಮಾತನಾಡಿದ್ದೇನೆ. ಆದರೆ ಏಷ್ಯದಲ್ಲೆಲ್ಲ ಒಂದೇ ದೃಷ್ಟಿ ಇದ್ದಂತೆ ಅವರೆಲ್ಲ ಕೇಳಿದ್ದು ಒಂದೇ ಪ್ರಶ್ನೆ: 'ಭಾರತದ ವಿಷಯವೇನು'