ಎಂದು.... ಕೈರೊ ಪಟ್ಟಣ ಬಿಟ್ಟ ಮೇಲೆ ಎಲ್ಲಿ ತಿರುಗಿದರೂ ಇದೇ ಪ್ರಶ್ನೆ. ಚೀಣದ ವೃದ್ಧನೊಬ್ಬ 'ಭಾರತದ ಸ್ವಾತಂತ್ರ್ಯದ ಆಸೆ ಪೂರೈಸದೆ ಮುಂದೆ ತಳ್ಳಿದ್ದರಿಂದ ದೂರ ಪ್ರಾಚ್ಯದಲ್ಲಿ ತಲೆತಗ್ಗಿಸಬೇಕಾದುದು ಬ್ರಿಟನ್ ಅಲ್ಲ; ಸಂಯುಕ್ತ ಸಂಸ್ಥಾನಗಳು ಎಂದ " ಎಂದು ಹೇಳಿದ್ದಾನೆ.
ಭಾರತದಲ್ಲಿನ ಘಟನೆಗಳಿಂದ ಯುದ್ಧದ ವಿಷಮಸ್ಥಿತಿಯಲ್ಲಿ ಸಹ ಪ್ರಪಂಚವು ಭಾರತದ ಕಡೆನೋಡುವಂತಾಯಿತು. ಪೌರ್ವಾತ್ಯ ದೇಶಗಳ ಮೂಲ ಸಮಸ್ಯೆಯ ಕಡೆ ಗಮನಕೊಡುವುದು ಅವಶ್ಯವಾಯಿತು. ಏಷ್ಯದ ಪ್ರತಿಯೊಂದು ದೇಶದ ಜನತೆಯ ಮನಸ್ಸನ್ನೂ ಹೃದಯವನ್ನೂ ಅವು ಕಲಕಿದ್ದವು. ಬ್ರಿಟಿಷ್ ಸಾಮ್ರಾಜ್ಯದ ಕಪಿಮುಷ್ಟಿಯ ಹಿಡಿತದಲ್ಲಿ ಭಾರತೀಯರು ತಾತ್ಕಾಲಿಕ ದುರ್ಬಲರೆಂದು ಕಂಡರೂ ಭಾರತವು ಸ್ವತಂತ್ರವಾಗುವವರೆಗೆ ಭಾರತದಲ್ಲಿ ಮತ್ತು ಏಷ್ಯದಲ್ಲಿ ಇನ್ನು ಶಾಂತಿ ಇಲ್ಲವೆಂದು ಸ್ಪಷ್ಟವಾಯಿತು.
೫. ಭಾರತದಲ್ಲಿ ಪ್ರತಿಕ್ರಿಯೆ
ಒಂದು ನಾಗರಿಕ ಜನಾಂಗವನ್ನು ಪರಕೀಯರು ಆಳುವುದೆಂದರೆ ಅವರಲ್ಲಿ ಅನೇಕ ಅನಾನುಕೂಲತೆಗಳೂ, ಲೋಪಗಳೂ ಇರುವುದು ಅನಿವಾರ್ಯ. ಮುಖ್ಯ ಅನಾನುಕೂಲತೆ ಎಂದರೆ ಸಮಾಜದ ಅಯೋಗ್ಯ ವ್ಯಕ್ತಿಗಳ ಸಹಾಯ ಸದಾ ಅದಕ್ಕೆ ಬೇಕಾಗುತ್ತದೆ. ಉನ್ನತಧೇಯ ಉಳ್ಳವರು, ಅಭಿಮಾನಿಗಳು, ಸೂಕ್ಷ್ಮಬುದ್ಧಿಯುಳ್ಳವರು, ಆತ್ಮಗೌರವವುಳ್ಳವರು, ಪರರ ಅಧಿಕಾರಕ್ಕೆ ತಲೆಬಾಗಿ ಅಧೋಗತಿಗಿಳಿಯಲು ಒಪ್ಪದೆ ಸ್ವಾತಂತ್ರ್ಯಕ್ಕೆ ಸ್ವಲ್ಪ ಬೆಲೆಕೊಡುವವರು ಯಾರೇ ಆಗಲಿ ಸರಾಡಳಿತದಿಂದ ದೂರವಿರುತ್ತಾರೆ. ಅಥವ ಅವರೊಂದಿಗೆ ಹೋರಾಡುತ್ತಾರೆ. ಸ್ವತಂತ್ರ ರಾಷ್ಟ್ರಕ್ಕಿಂತ ಅಧೀನ ರಾಷ್ಟ್ರದಲ್ಲಿ ಅಧಿಕಾರಕ್ಕೆ ಆಶೆ ಪಡುವವರ ಮತ್ತು ಸ್ವಾರ್ಥಸಾಧಕರ ಸಂಖ್ಯೆಯೂ ಹೆಚ್ಚು. ರಾಷ್ಟ್ರ ಸ್ವತಂತ್ರವಿದ್ದರೂ ನಿರಂಕುಶಾಧಿಕಾರವಾದರೆ ಅನೇಕ ವಿಚಾರಮತಿಗಳಿಗೆ ಆ ಸರಕಾರದ ಕಾರ್ಯನೀತಿಯಲ್ಲಿ ಸಹಕರಿಸಲು ಕಷ್ಟವಾಗುತ್ತದೆ ಮತ್ತು ಆಧುನಿಕ ನೈಪುಣ್ಯತೆಯ ಅಭಿವೃದ್ಧಿಗೆ ಹೆಚ್ಚು ಅವಕಾಶವು ಇರುವುದಿಲ್ಲ. ಸದಾ ವಿರೋಧಭಾವನೆ ಮತ್ತು ದಮನ ನೀತಿಯ ವಾತಾವರಣದಲ್ಲೇ ಆಡಳಿತವು ಸಾಗಬೇಕಾದ್ದರಿಂದ ಸರ್ವಾಧಿಕಾರದಿಂದಲೇ ಆಳ ಬೇಕಾದ ಪರಾಡಳಿತದಲ್ಲಿ ಈ ಎಲ್ಲ ಅನನುಕೂಲತೆಗಳೂ ಇವೆ; ಮತ್ತು ಅವು ಹೆಚ್ಚುತ್ತಲೂ ಹೋಗುತ್ತವೆ. ಸರಕಾರ ಮತ್ತು ಜನತೆ ಎರಡಕ್ಕೂ ಭಯವೇ ಪ್ರಧಾನ ಹೇತುವಾಗಿ ಪೋಲೀಸ್ ಮತ್ತು ಗುಪ್ತಚಾರ ದಳದವರೇ ಮುಖ್ಯ ಅಧಿಕಾರಿಗಳಾಗುತ್ತಾರೆ.
ಸರಕಾರಕ್ಕೂ, ಜನತೆಗೂ ಹೋರಾಟ ನಡೆಯುತ್ತಿರುವಾಗ ಜನತೆಯಲ್ಲಿನ ಅಯೋಗ್ಯ ವ್ಯಕ್ತಿಗಳ ಸಹಾಯ ಕೋರಿ ಅವರಿಗೆ ಪ್ರೋತ್ಸಾಹಕೊಡುವುದು ಇನ್ನೂ ಅಧಿಕವಾಗುತ್ತದೆ. ಇನ್ನು ಕೆಲವರು ಆತ್ಮ ರಕ್ಷಣೆಗಾಗಿ ಅನಿವಾರ್ಯಸಂದರ್ಭದಿಂದ ಇಷ್ಟವಿರಲಿ, ಇಲ್ಲದಿರಲಿ ಸರ್ಕಾರದ ಯಂತ್ರದಲ್ಲಿ ಸಿಕ್ಕಿಬಿದ್ದು ಕೆಲಸಮಾಡಬೇಕಾಗುತ್ತದೆ. ಆದರೆ ಉನ್ನತ ಸ್ಥಾನಗಳಲ್ಲಿ ನಿಂತು ಪ್ರಮುಖ ಪಾತ್ರ ನಿರ್ವಹಿಸಬೇಕಾದ ವ್ಯಕ್ತಿಗಳನ್ನು ಅವರ ರಾಷ್ಟ್ರಘಾತಕಭಾವನೆ, ದಾಸ್ಯಮನೋಭಾವ, ಮತ್ತು ಸ್ವಜನರನ್ನು ಅದುಮಿ ಅಗೌರವ ಪಡಿಸಲು ಅವರಿಗೆ ಇರುವ ಶಕ್ತಿ, ಮುಂತಾದ ರಾಷ್ಟಘಾತಕ ಸ್ವಭಾವ ಗಮನಿಸಿ ಆರಿಸಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ವೈಯಕ್ತಿಕ ಸ್ಪರ್ಧೆಯ ಪರಿಣಾಮವಾಗಿಯೋ ಅಥವ ನಿರಾಶೆಯಿಂದಲೋ ಜನತೆಯ ಬಹುಮತದ ಆಸೆ ಆಕಾಂಕ್ಷೆಗಳಿಗೆ ಪ್ರತಿಯಾಗಿ ಆ ವ್ಯಕ್ತಿಗಳಲ್ಲಿ ಹುಟ್ಟಿದ ವಿರೋಧವೇ ಅವರ ಅತ್ಯಂತ ಶ್ರೇಷ್ಠ ಯೋಗ್ಯತೆಯಾಗುತ್ತದೆ. ಈ ಹೊಲಸಿನ ಅಹಿತವಾತಾವರಣದಲ್ಲಿ ಯಾವ ಉದಾತ್ತ ಧ್ಯೇಯ ಅಥವ ಉನ್ನತಭಾವನೆಗೂ ಅವಕಾಶವಿರುವುದಿಲ್ಲ; ಉನ್ನತ ಅಧಿಕಾರ ಮತ್ತು ಭಾರಿಸಂಬಳದ ಆಸೆ ಇವೆ ಸರಕಾರ ತೋರಿಸುವ ಗಾಳವಾಗುತ್ತವೆ. ಸರಕಾರಕ್ಕೆ ಬೆಂಬಲವಾಗಿ ನಿಂತ ಅವರ ಅಯೋಗ್ಯತೆ, ಲೋಪದೋಷಗಳಿಗೆಲ್ಲ ಸರಕಾರವು ಕಣ್ಣು ಮುಚ್ಚಿಕೊಳ್ಳಬೇಕಾಗುತ್ತದೆ ; ಏಕೆಂದರೆ, ಸರಕಾರದ ವಿರುದ್ಧ ವ್ಯಕ್ತಿಗಳನ್ನು ತುಳಿಯುವದರಲ್ಲಿ ಮಾಡಿದ ಪ್ರತ್ಯಕ್ಷ ಸಹಾಯವೇ ಮುಖ್ಯ ಯೋಗ್ಯತೆಯಾಗುತ್ತದೆ. ಇದರಿಂದ ಎಂದೂ ಹತ್ತಿರ ಸೇರಿಸದ ವಿಚಿತ್ರ ಪಂಗಡಗಳನ್ನು ಮತ್ತು ಜನರನ್ನು