ಪುಟ:ಭಾರತ ದರ್ಶನ.djvu/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್‌ನಗರದ ಕೋಟೆಯಲ್ಲಿ

೪೫೧

ಯುದ್ಧ ಪರಿಸ್ಥಿತಿಯಿಂದ ಕ್ಷಾಮ ಒದಗಿ ಅದನ್ನು ತಡೆಗಟ್ಟಲು ಸಾಧ್ಯವಿದ್ದಿತಾದರೂ, ಕ್ಷಾಮಕ್ಕೆ ಇನ್ನೂ ಕೆಲವು ಮೂಲ ಕಾರಣಗಳೂ ಇವೆ. ಭಾರತದ ಬಡತನ ವರ್ಷವರ್ಷವೂ ಹೆಚ್ಚಿ ಕೋಟ್ಯಾನು ಕೋಟಿ ಜನರು ಅರೆಹೊಟ್ಟೆಯಲ್ಲಿದ್ದಾರೆ. ೧೯೩೩ರಲ್ಲಿ ಇಂಡಿಯ ವೈದ್ಯ ಇಲಾಖೆಯ ಮುಖ್ಯ ಅಧಿಕಾರಿ ಮೇಜರ್ ಜನರಲ್ ಸರ್ ರ್ಜಾ ಮೇಗಾ ಭಾರತದ ಸಾರ್ವಜನಿಕ ಆರೋಗ್ಯದ ವಿಷಯ ಬರೆಯುತ್ತ “ಆಸ್ಪತ್ರೆಯ ಡಾಕ್ಟರುಗಳ ಅಭಿಪ್ರಾಯದಂತೆ ಭಾರತದಲ್ಲಿ ಶೇಕಡ ೩೯ರಷ್ಟು ಜನರಿಗೆ ಮಾತ್ರ ಪುಷ್ಟಿಕರ ಆಹಾರವೂ ಶೇಕಡ ೪೧ರಷ್ಟು ಜನರಿಗೆ ಸಾಧಾರಣ ಪುಷ್ಟಿಕರ ಆಹಾರವೂ ಶೇಕಡ ೨೦ ರಷ್ಟು ಯಾವ ಪುಷ್ಟಿಯೂ ಇಲ್ಲದ ಆಹಾರವೂ ದೊರೆಯುತ್ತಿದೆ ಎಂದಿದ್ದಾನೆ. ಬಂಗಾಲದಲ್ಲಿ ಶೇಕಡ ೨೨ ರಷ್ಟು ಜನರಿಗೆ ಮಾತ್ರ ಪುಷ್ಟಿಯಾದ ಆಹಾರ ದೊರೆಯುತ್ತಿದೆ, ಶೇಕಡ ೩೧ರಷ್ಟು ಜನ ಏನೂ ಪುಷ್ಟಿ ಇಲ್ಲದ ಆಹಾರ ತಿನ್ನುವವರು.

ಬಂಗಾಲದ ದುರಂತ, ಒರಿಸ್ಸ, ಮಲಬಾರ್ ಮತ್ತು ಇತರ ಕಡೆಗಳ ಕ್ಷಾಮಗಳು ಭಾರತದ ಬ್ರಿಟಿಷ್ ಆಡಳಿತ ದಕ್ಷತೆಗೆ ಅಂತ್ಯ ತೀರ್ಪು. ಬ್ರಿಟಿಷರು ಭಾರತ ಬಿಟ್ಟು ಹೊರಡುವುದು ಖಂಡಿತ; ಅವರ ಭಾರತ ಸಾಮ್ರಾಜ್ಯವೂ ಒಂದು ಕನಸಾಗುತ್ತದೆ; ಆದರೆ ಬಿಟ್ಟು ಹೊರಡುವಾಗ ಇಲ್ಲಿ ಬಿಟ್ಟು ಹೋಗುವುದೇನು? ಏನು ಮಾನವೀಯತೆಯ ಅಧೋಗತಿ ಮತ್ತು ಎಷ್ಟು ಸಂಕಟ ಪರಂಪರೆ? ಠಾಕೂರರು ತಮ್ಮ ಮರಣ ಶಯ್ಯೆಯಲ್ಲಿಯೇ ಆ ಚಿತ್ರ ಕಂಡರು. "ಅವರು ಬಿಟ್ಟು ಹೋಗುವ ಭಾರತ ಎಂಥದು? ಏನು ಗೋಳಿನ ಕತೆ? ಅವರ ಶತಮಾನಗಳ ಆಡಳಿತ ವಾಹಿನಿ ಬತ್ತಿದಾಗ ಕೊನೆಗೆ ಹಿಂದೆ ಉಳಿಯುವುದು ಕೆಸರು ಮತ್ತು ಕೊಚ್ಚೆ ಮಾತ್ರ” ಎಂದರು.
——————
ಮುಂಬರುವ ಆಪತ್ಕಾಲಕ್ಕೆ ದೂರದೃಷ್ಟಿಯಿಂದ ಮುಂಜಾಗ್ರತೆ ತೆಗೆದುಕೊಳ್ಳಲು ಅಸಮರ್ಥರಾದುದನ್ನೂ; ಕ್ಷಾಮ ಒದಗಿದ ಮೇಲೆ ಸಹ ಕ್ಷಾಮ ಘೋಷಣೆಮಾಡಿ ಕ್ಷಾಮವಿದೆ, ಎಂದು ಒಪ್ಪಲು ನಿರಾಕರಿಸಿದುದನ್ನೂ; ಆ ವಿಷಮಪರಿಸ್ಥಿತಿ ಎದುರಿಸಲು ಇದ್ದ ಅಲ್ಪ ಅಸಮರ್ಪಕ ಏರ್ಪಾಟನ್ನೂ ಖಂಡಿಸಿದ್ದಾರೆ. ಅಲ್ಲದೆ “ಎಲ್ಲ ಸಂದರ್ಭಗಳನ್ನೂ ಗಮನಿಸಿದರೆ ಬಂಗಾಲ ಸರಕಾರ ಸಕಾಲಕ್ಕೆ ಧೈರ್ಯದಿಂದ, ಸ್ಥಿರ ಮನಸ್ಸಿನಿಂದ ಯೋಗ್ಯಕಾರ್ಯಕ್ರಮ ತೆಗೆದುಕೊಂಡಿದ್ದರೆ ಈ ಕ್ಷಾಮದಿಂದ ಒದಗಿದ ದುರಂತ ತಪ್ಪಿಸಲು ಬಹುಮಟ್ಟಿಗೆ ಸಾಧ್ಯವಿತ್ತು, ಎಂದು ನಾವು ಹೇಳಲೇ ಬೇಕು. ಅಲ್ಲದೆ ಇಂಡಿಯಾ ಸರಕಾರ ಒಂದು ಯೋಜನೆಯ ಪ್ರಕಾರ ಆಹಾರ ಧಾನ್ಯಗಳನ್ನು ಒದಗಿಸಲು ಒಂದು ಕಾರ್ಯಕ್ರಮದ ಅವಶ್ಯಕತೆಯನ್ನು ಮುಂಚೆಯೇ ಕಂಡುಕೊಳ್ಳದೆ ಕರ್ತವ್ಯಲೋಪಮಾಡಿತು. ೧೯೪೩ ನೇ ಮಾರ್ಚಿ ತಿಂಗಳಿನಲ್ಲಿಯೇ ನಿರ್ಯಾತ ರದ್ದುಗೊಳಿಸುವುದಾಗಿ ಮಾಡಿದ ಆಜ್ಞೆಗೆ ಬಂಗಾಲ ಸರಕಾರದೊಂದಿಗೆ ಇಂಡಿಯ ಸರಕಾರವೂ ಜವಾಬ್ದಾರಿ ವಹಿಸಿಕೊಳ್ಳಬೇಕು. ಭಾರತದ ಬಹು ಭಾಗದಲ್ಲಿ ನಿರಾತಂಕ ವ್ಯಾಪಾರ ನಡೆಯಲು ಅವಕಾಶಕೊಡುವುದಾಗಿ ಇ೦ಡಿಯ ಸರಕಾರ ನಿರ್ಣಯಿಸಿದ್ದು ಶುದ್ಧ ಅನ್ಯಾಯ ಮತ್ತು ಆ ಸಂಹ ಮಾಡಬಾರದಾಗಿತ್ತು. ಅನೇಕ ಪ್ರಾಂತಗಳು ಮತ್ತು ಸಂಸ್ಥಾನಗಳು ವಿರೋಧಿಸಿದ ಈ ಸಲಹೆಯನ್ನೇನಾದರೂ ಆಚರಣೆಗೆ ತಂದಿದ್ದರೆ ಭಾರತದ ಇತರ ಕಡೆಗಳಲ್ಲೂ ಮಹಾ ಅನರ್ಥವುಂಟಾಗುತ್ತಿತ್ತು ಎಂದಿದ್ದಾರೆ. ಕೇಂದ್ರ ಮತ್ತು ಪ್ರಾ೦ತ ಸರಕಾರಗಳ ಆಡಳಿತ ಯಂತ್ರದ ಅಲಕ, ಮತ್ತು ಅವ್ಯವಸ್ಥೆ ತಿಳಿಸಿ, ಬಂಗಾಲದ ಸಾರ್ವಜನಿಕರಲ್ಲಿ ಕೆಲವರಾದರೂ ಇದಕ್ಕೆ ಜವಾಬ್ದಾರರಿದ್ದಾರೆ ಎಂದು ಹೇಳಿದ್ದಾರೆ. "ನಿಯಂತ್ರಣವಿಲ್ಲದ ಸಮಯದಲ್ಲಿ ಭಯ ಮತ್ತು ಸಂಶಯದ ವಾತಾವರಣದಲ್ಲಿ ಬೆಲೆ ಹೇಗೆ ಏರುತ್ತದೆ ಎಂಬುದನ್ನು ತಿಳಿಸಿದ್ದೇವೆ. ಈ ಅಪತ್ಸಮಯವನ್ನು ಉಪಯೋಗಮಾಡಿಕೊಂಡು ಕೆಲವರು ಅಪಾರ ಲಾಭ ಸಂಪಾದಿಸಿದರು; ಅಂದರೆ ಜನರ ಸಾವುನೋವು ಕೆಲವರ ಲಾಭ. ಕೆಲವರು ಹಸಿವಿನಿಂದ ಸಾಯುವಾಗ ಇನ್ನೂ ಕೆಲವರು ತಿಂದು ತೇಗುತ್ತಿದ್ದರು; ಸಂಕಟದ ಎದುರಿನಲ್ಲೂ ಅಲಕ್ಷ್ಯಭಾವನೆ. ಪ್ರಾಂತದಲ್ಲಿ ಎಲ್ಲ ಕಡೆಯಲ್ಲಿ ಮತ್ತು ಸಮಾಜದ ಅನೇಕ ಗುಂಪುಗಳಲ್ಲಿ ಲಂಚಕ್ಕೆ ಮಿತಿ ಇರಲಿಲ್ಲ” ಎಂದಿದ್ದಾರೆ. ಈ ಹಸಿವಿನ ಸಾವಿನಿಂದ ಪಡೆದ ಲಾಭ ೧೫ ಕೋಟಿ ರೂಪಾಯಿಗಳಾಗಬಹುದೆಂದು ಊಹಿಸಲಾಗಿದೆ. ಅಂದರೆ ಸತ್ಯ ೧೫ಲಕ್ಷ ಜನರ ಪ್ರತಿ ಸಾವಿಗೆ ಸಾವಿರ ರೂಪಾಯಿ ಲಾಭ!