ಪುಟ:ಭಾರತ ದರ್ಶನ.djvu/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪುನಃ ಅಹಮದ್ ನಗರದ ಕೋಟೆಯಲ್ಲಿ

೪೫೩

ಅದು ಇನ್ನೂ ಪೂರ್ಣವಿರದೆ ಅದರಲ್ಲಿ ಅನೇಕ ನ್ಯೂನತೆಗಳೂ ಇವೆ. ಯಾವ ಕ್ರಾಂತಿಕಾರಕ ಪರಿವರ್ತನೆಯೂ ಇಲ್ಲದೆ ಬಂಡವಾಳಗಾರರ ದೃಷ್ಟಿಕೋನಕ್ಕನುಗುಣವಾಗಿ ಅದು ರಚಿತವಾಗಿದೆ. ಆದರೂ ತಮ್ಮ ಹಳೆಯ ಜಾಡು ಬಿಟ್ಟು ಒಂದು ದೊಡ್ಡ ಮಾರ್ಗ ಹಿಡಿಯುವಂತೆ ಭಾರತದ ಘಟನೆಗಳ ಒತ್ತಡವೇ ಅವರನ್ನು ಈ ರೀತಿ ಪ್ರೇರೇಪಿಸಿತು. ಯೋಜನೆಯ ನಿರ್ಮಾಣಕರ್ತರಿಗೆ ಎಷ್ಟೇ ರುಚಿಸದಿದ್ದರೂ ಆ ಯೋಜನೆಯಲ್ಲೇ ಕ್ರಾಂತಿಕಾರಕ ಬೀಜಗಳು ಅಡಗಿವೆ. ಅವರಲ್ಲಿ ಕೆಲವರು ರಾಷ್ಟ್ರೀಯ ಯೋಜನಾ ಸಮಿತಿಯ ಸದಸ್ಯರಿದ್ದ ಕಾರಣ ಆ ಯೋಜನೆಯ ಉಪಯೋಗವನ್ನೂ ಮಾಡಿಕೊಂಡಿದ್ದಾರೆ. ಈ ಯೋಜನೆ ಅನೇಕ ಬಗೆಯಿಂದ ಮಾರ್ಪಾಟಾಗಿ, ಪುಷ್ಟಿಗೊಳ್ಳುವಂತೆ ತಿದ್ದುಪಡಿಯಾಗಬೇಕು. ಆದರೂ ಸಂಪ್ರದಾಯ ಶರಣ ಬಂಡವಲಗಾರರೇ ಭಾರತದ ಪ್ರಗತಿಗೆ ಇದರಲ್ಲಿ ಮಾರ್ಗ ಸೂಚಿಸಿರುವುದರಿಂದ ಇದಕ್ಕೆ ಬಹಳ ಮಹತ್ವವಿದೆ. ಕಾಸುಗಳ ಕೋಮಟಿಯ ಕಪಿಮುಷ್ಟಿಯು ಇಲ್ಲಿ ನಮಗೆ ಕಾಣುವುದಿಲ್ಲ; ದೇಶದ ನಿಜವಾದ ಬಂಡವಾಳವೆಂದರೆ ದೇಶದ ಪ್ರಕೃತಿ ಸಂಪತ್ತು ಮತ್ತು ಜನ ಸಂಪತ್ತು ಎಂದು ಒತ್ತಿ ಹೇಳಿದಾರೆ. ಇದರ ಅಥವ ಬೇರೆ ಯೋಜನೆಯ ಯಶಸ್ಸು ಕೇವಲ ವಸ್ತು ನಿರ್ಮಾಣ ಶಕ್ತಿಯನ್ನು ಮಾತ್ರ ಅವಲಂಬಿ ಸಿರದೆ ಅದರಿಂದ ದೊರೆಯುವ ಸಂಪದ್ವಿನಿಯೋಗ ರೀತಿಯನ್ನೂ ಅವಲಂಬಿಸಿದೆ. ಮತ್ತು ಇದಕ್ಕೆ ಪೂರ್ವ ಭಾವಿಯಾಗಿ ಭೂಮಿದಾರಿ ಪದ್ಧತಿಯ ಸುಧಾರಣೆಯೂ ಆಗಬೇಕಾಗಿದೆ.

ಯೋಜನೆ ಮತ್ತು ಯೋಜಿತ ಸಮಾಜದ ಕಲ್ಪನೆಯನ್ನು ಸ್ವಲ್ಪ ಹೆಚ್ಚು ಕಡಮೆ ಈಗ ಎಲ್ಲರೂ ಒಪ್ಪಿದ್ದಾರೆ. ಆದರೆ ಕೇವಲ ಒಂದು ಯೋಜನೆ ಸಿದ್ಧಗೊಳಿಸಿದ ಮಾತ್ರಕ್ಕೆ ಅದರಿಂದ ಯಾವ ಫಲವೂ ದೊರೆಯುವುದಿಲ್ಲ; ಯಾವ ಅರ್ಥವೂ ಇಲ್ಲ. ಆ ಯೋಜನೆಯ ಉದ್ದೇಶವೇನು? ಅದರ ಆಗು ಹೋಗುಗಳು ಯಾರ ಕೈಯಲ್ಲಿ? ಮತ್ತು ಸರಕಾರದ ಬೆಂಬಲ ಅದಕ್ಕೆ ಎಷ್ಟಿದೆ? ಎನ್ನುವುದನ್ನು ಅವಲಂಬಿಸಿದೆ. ಜನತೆಯ ಪ್ರಗತಿ ಮತ್ತು ಕಲ್ಯಾಣ ಅದರ ಮುಖ್ಯ ಗುರಿಯೇ? ಎಲ್ಲರ ಪ್ರಗತಿಗೆ ಸಂಪೂರ್ಣ ಸ್ವಾತಂತ್ರ ಮತ್ತು ಸದವಕಾಶ ಅದರಲ್ಲಿ ಇದೆಯೇ? ಸಂಘಟನೆ ಮತ್ತು ಕಾರ್ಯ ನೀತಿಯಲ್ಲಿ ಸಹಕಾರ ತತ್ವ ಮತ್ತು ನೀತಿಗೆ ಪೂರ್ಣ ಅವಕಾಶವಿದೆಯೆ? ಎಂಬುದೇ ಮುಖ್ಯ ಪ್ರಶ್ನೆ, ಅಧಿಕ ಪ್ರಮಾಣದಲ್ಲಿ ವಸ್ತು ನಿರ್ಮಾಣ ಅತ್ಯವಶ್ಯಕ ನಿಜ; ಆದರೆ ಅಷ್ಟರಿಂದ ಮಾತ್ರ ನಮ್ಮ ಸಮಸ್ಯೆಗಳು ಪರಿಹಾರವಾಗದೆ ಅವು ಇನ್ನೂ ಹೆಚ್ಚಬಹುದು. ಬೇರುಬಿಟ್ಟು ಬೆಳೆದು ಹಬ್ಬಿದ ಹಳೆಯ ಹಕ್ಕು ದಾರಿಗಳನ್ನು ಮತ್ತು ಬಂಡವಲಶಾಹಿಗಳನ್ನು ಉಳಿಸಲು ಪ್ರಯತ್ನ ಪಟ್ಟರೆ ಯೋಜನೆಯ ಮೂಲಕ್ಕೇ ಕೊಡಲಿ ಇಟ್ಟಂತೆ, ಸಮಗ್ರ ಸಮಾಜದ ಹಿತ ಸಾಧನೆಗಾಗಿ ಸಿದ್ಧಗೊಳಿಸಿದ ಕಾರ್ಯಾಚರಣೆಗೆ ಯಾವ ವಿಶೇಷ ಹಕ್ಕು ದಾರಿಗಳೂ ಅಡ್ಡ ಬರಬಾರದೆಂದು ಎಲ್ಲ ನಿಜವಾದ ಯೋಜನೆಯೂ ಅರಿತುಕೊಳ್ಳಬೇಕು. ಈ ವಿಶೇಷ ಹಕ್ಕುದಾರಿ ಸಂಸ್ಥೆಗಳನ್ನು ಮುಟ್ಟ ಬಾರದೆಂದು ೧೯೩೫ನೆ ಪಾರ್ಲಿಮೆಂಟ್ ಶಾಸನದ ಮೂಲತತ್ವವಾಗಿದ್ದುದರಿಂದ ಪ್ರಾಂತ ಕಾಂಗ್ರೆಸ್ ಸರ ಕಾರಗಳು ಉಸಿರೆತ್ತುವಂತೆ ಇರಲಿಲ್ಲ. ಭೂಮಿದಾರಿ ಪದ್ಧತಿ ಸ್ವಲ್ಪ ವ್ಯತ್ಯಾಸಗೊಳಿಸಿ, ಭೂ ವರಮಾನದ ಮೇಲೆ ತೆರಿಗೆ ವಿಧಿಸಲು ಮಾಡಿದ ಪ್ರಯತ್ನವನ್ನು ಸಹ ನ್ಯಾಯಾಸ್ಥಾನಗಳಿಗೆ ತೆಗೆದುಕೊಂಡು ಹೋಗಿ ವಿರೋಧಿಸತೊಡಗಿದರು.

ಯೋಜನೆಯ ಆಡಳಿತ ಸೂತ್ರ ಬಂಡವಲಗಾರರ ಕೈಯಲ್ಲೇ ಉಳಿದರೆ ಅವರಿಗೆ ಅಭ್ಯಾಸವಿರುವ ಚೌಕಟ್ಟಿನಲ್ಲೇ ಅದನ್ನು ಕಾರ್ಯಗತ ಮಾಡಲು ಪ್ರಯತ್ನ ಮಾಡುತ್ತಾರೆ. ಧನದಾಸೆಯಿಂದ ಲಾಭ ಸಂಪಾದನೆಯೇ ಮುಖ್ಯ ಧ್ಯೇಯವಾಗುತ್ತದೆ. ಅವರಿಗೆ ಎಷ್ಟೇ ಸದುದ್ದೇಶವಿರಲಿ-ಅವರಲ್ಲಿ ಅನೇಕರ ಉದ್ದೇಶವೂ ಒಳ್ಳೆಯದಿದೆ-ಹೊಸ ಮಾರ್ಗದಲ್ಲಿ ಯೋಚಿಸುವುದು ಅವರಿಗೆ ಅತಿಕಷ್ಟ, ಕೈಗಾರಿಕೆಯ ಮೇಲೆ ಸರಕಾರದ ಹತೋಟಿ ಇರಬೇಕೆಂದಾಗ ಸಹ ಇಂದಿನ ಸರಕಾರದಂತೆಯೇ ಮುಂದಿನ ಸರಕಾರವೂ ಇರುತ್ತೆಂಬ ಭಾವನೆ ಬಿಡಲು ಅವರಿಗೆ ಸಾಧ್ಯವಿಲ್ಲ.

ರೈಲುಮಾರ್ಗಗಳ ಸ್ವಾಮ್ಯ ಮತ್ತು ಆಡಳಿತ, ಕೈಗಾರಿಕೆ ಹಣ ಕಾಸು ಮತ್ತು ಸಾಮಾನ್ಯ ಜನ ಜೀವನದ ಮೇಲೆ ಹೆಚ್ಚಿನ ಹತೋಟಿ ಮತ್ತು ಪ್ರವೇಶಾಧಿಕಾರ ಈಗಿನ ಸರಕಾರಕ್ಕೆ ಇರುವುದರಿಂದ ಅದು ಸಮಾಜವಾದಿ ಸರಕಾರವಾಗುತ್ತಿದೆ ಎಂದು ಸಹ ವಾದಿಸುತ್ತಿದ್ದಾರೆ. ಆದರೆ ಈ ಹತೋಟ ಎಲ್ಲ ಮುಖ್ಯ