ಪುಟ:ಭಾರತ ದರ್ಶನ.djvu/೪೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೫೪

ಭಾರತ ದರ್ಶನ

ವಿದೇಶೀಯರ ಕೈಯಲ್ಲಿ. ಅಲ್ಲದೆ, ಪ್ರಜಾಪ್ರಭುತ್ವದ ಸೊಂಕಿಲ್ಲದ ಸರಕಾರದ ಆ ವಾದದಲ್ಲಿ ಏನೂ ಹುರುಳಿಲ್ಲ. ಬಂಡವಲಗಾರರ ಸ್ವಚ್ಚಾ ಪ್ರವರ್ತನೆಗೆ ಸ್ವಲ್ಪ ಮಿತಿ ಕಲ್ಪಿಸಿದ್ದರೂ, ಅವರ ಹಕ್ಕು ದಾರಿ ರಕ್ಷಣೆಯ ಆ ನೀತಿಯ ತಳಹದಿ. ಈ ವಿಶೇಷ ಹಕ್ಕುದಾರಿಗಳ ರಕ್ಷಣೆ ಬಿಟ್ಟು ಆರ್ಥಿಕ ಸಮಸ್ಯೆ ಯಾವುದೂ ಆ ಹಳೆಯ ಸಾಮ್ರಾಜ್ಯಷಾಹಿ ಪದ್ಧತಿಗೆ ಬೇಕಿರಲಿಲ್ಲ. ತನ್ನ ಹಿಂದಿನ ತಾಟಸ್ಥ ನೀತಿಯಿಂದ ನೂತನ ಪರಿಸ್ಥಿತಿಯ ಅವಶ್ಯಕತೆ ಪೂರೈಸಲು ಸಾಧ್ಯವಾಗದೆ ಇದ್ದರೂ ತನ್ನ ಅಧಿಕಾರ ಸಂರಕ್ಷಣೆಗಾಗಿ ಫಾಸಿಸ್ ತತ್ವದ ಸರ್ವಾಧಿಕಾರ ವಹಿಸಿಕೊಳ್ಳುವುದು ಅನಿವಾರವಾಯಿತು. ಸರ್ವಾಧಿಕಾರವು ಆರ್ಥಿಕ ಚಲನವಲನಕ್ಕೆ ಅಡ್ಡಿ ಬರುತ್ತದೆ; ಇರುವ ಅಲ್ಪ ಸ್ವಲ್ಪ ನಾಗರಿಕ ಸ್ವಾತಂತ್ರವನ್ನು ಮೊಟಕುಮಾಡುತ್ತದೆ ; ತನ್ನ ನಿರಂಕುಶ ಅಧಿಕಾರ ಮತ್ತು ಬಂಡವಲಷಾಹಿ ಪದ್ದತಿಯನ್ನು ಸ್ವಲ್ಪ ವ್ಯತ್ಯಾಸ ಮಾಡಿಕೊಂಡು ಹೊಸ ಸನ್ನಿವೇಶ ಎದುರಿಸಲು ಸಿದ್ದವಾಗುತ್ತದೆ. ಆದ್ದರಿಂದ ಅದು ಫ್ಯಾಸಿಸ್ಟ್ ದೇಶಗಳಂತೆ ಕೈಗಾರಿಕೋದ್ಯಮ ಮತ್ತು ರಾಷ್ಟಜೀವನದ ಮೇಲೆ ಆದಷ್ಟು ಹೆಚ್ಚು ಹತೋಟ ಇಟ್ಟುಕೊಂಡು, ವ್ಯಾಪಾರೋದ್ಯಮದಲ್ಲಿ ವ್ಯಕ್ತಿ ಸ್ವಾತಂತ್ರಕ್ಕೆ ಅನೇಕ ಮಿತಿ ಕಲ್ಪಿಸಿ ತನ್ನ ಹಳೆಯ ತಳಹದಿಯ ಮೇಲೆಯೇ ಒಂದು ಅಖಂಡ ಬಂಡೆಯಂಥ ಕೇಂದ್ರೀಕೃತ ಸರಕಾರ ಸ್ಥಾಪನೆ ಮಾಡಲು ಯತ್ನಮಾಡುತ್ತದೆ. ಈ ಸರ್ವಾಧಿಕಾರಕ್ಕೂ ಸಮಾಜವಾದಕ್ಕೂ ಅಜಗಜಾಂತರ; ಪರಕೀಯರ ಆಡಳಿತ ದಾಸ್ಯಕ್ಕೆ ಸಿಕ್ಕಿ ಬಿದ್ದಿರುವ ದೇಶದಲ್ಲಿ ಸಮಾಜವಾದದ ಮಾತನ್ನಾಡುವುದೇ ಅವಿವೇಕ, ಆ ಪ್ರಯತ್ನಕ್ಕೆ ತಾತ್ಕಾಲಿಕ ಯಶಸ್ಸು ದೊರೆಯುತ್ತೆನ್ನುವುದೂ ಅನುಮಾನ; ಅದರ ಬದಲು ಆ ಸಮಸ್ಯೆಗಳೇ ಇನ್ನೂ ಕಠಿಣವಾಗಬಹುದು. ಆದರೆ ಯುದ್ದ ಕಾಲದಲ್ಲಿ ಆರೀತಿ ಕೆಲಸ ಮಾಡಲು ಸ್ವಲ್ಪ ಅನುಕೂಲ ಪರಿಸ್ಥಿತಿ ದೊರೆಯುತ್ತದೆ. ಪ್ರಜಾಪ್ರಭುತ್ವ ಸರಕಾರ ಸ್ಥಾಪನೆ ಮಾಡದೆ ಕೈಗಾರಿಕೆ ಸಂಪೂರ್ಣ ರಾಷ್ಟ್ರೀಕರಣ ಮಾಡಿದರೆ ಬೇರೊಂದು ಬಗೆಯ ಸುಲಿಗೆಗೆ ಅವಕಾಶದೊರೆಯುತ್ತದೆ. ಏಕೆಂದರೆ, ಕೈಗಾರಿಕೆ ಸರಕಾರದ್ದಾದರೂ ಸರಕಾರದ ಮೇಲೆ ಜನರ ಹತೋಟ ಏನೂ ಇರುವುದಿಲ್ಲ.

ನಮ್ಮ ಸಮಸ್ಯೆಗಳು ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ಕೃಷಿಕ, ಸಂಸ್ಥಾನಿಕ ಮತ್ತು ಜಾತೀಯ -ಯಾವುದೇ ಇರಲಿ ಇಂದಿನ ರಾಜಕೀಯ ಚೌಕಟ್ಟಿನಲ್ಲಿ ನಾವು ಅದನ್ನು ಯೋಚಿಸುತ್ತಿರುವುದೇ ನಮ್ಮ ಎಲ್ಲ ಮುಖ್ಯ ತೊಂದರೆಗಳಿಗೂ ಕಾರಣ. ವಿಶೇಷ ಹಕ್ಕುದಾರಿ ಮತ್ತು ಸ್ಥಾನಮಾನಗಳ ರಕ್ಷಣೆ ಆ ಚೌಕಟ್ಟಿನ ಮುಖ್ಯ ಲಕ್ಷಣ. ಅದನ್ನು ಉಳಿಸಿಕೊಂಡು ಸಮಸ್ಯೆ ಪರಿಹಾರಮಾಡುವುದೆಂದರೆ ಅದು ಅಸಾಧ್ಯ. ವಿಷಮ ಪರಿಸ್ಥಿತಿಯಿಂದ ಪಾರಾಗಲು ತೇಪೆ ಕೆಲಸದ ಪರಿಹಾರ ಕಾರ್ಯ ಕೈಗೊಂಡರೆ ಅದು ಬಹುಕಾಲ ಬಾಳಲಾರದು. ಹಳೆಯ ಸಮಸ್ಯೆಗಳು ಬಗೆಹರಿಯದೆ ಹಾಗೇ ಉಳಿಯುತ್ತವೆ. ಹೊಸ ಸಮಸ್ಯೆಗಳೂ, ಅಥವ ಹಳೆಯ ಸಮಸ್ಯೆಗಳ ಹೊಸ ರೂಪಗಳೂ ಅವುಗಳ ಜೊತೆಯಲ್ಲಿ ಸೇರಿಕೊಳ್ಳುತ್ತವೆ. ನಮ್ಮ ಜೀರ್ಣ ಸಂಪ್ರದಾಯಗಳು ಮತ್ತು ಜೀವನ ರೀತಿ ಈ ನಮ್ಮ ದೃಷ್ಟಿಗೆ ಸ್ವಲ್ಪ ಕಾರಣವಾದರೂ ಅದಕ್ಕೆ ಮುಖ್ಯ ಕಾರಣ ಬ್ರಿಟಿಷ್ ಸರಕಾರದ ಉಕ್ಕಿನ ಚಕ್ರವ್ಯೂಹ. ಅದಿಲ್ಲದಿದ್ದರೆ ಆ ಮುರುಕು ಮನೆ ಎಂದೋ ಮಣ್ಣು ಗೂಡುತ್ತಿತ್ತು.

ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಭಿನ್ನತೆಗಳು ಯುದ್ಧದಿಂದ ಇನ್ನೂ ಉಲ್ಬಣಿಸಿವೆ. ರಾಜಕೀಯದಲ್ಲಿ ಭಾರತದ ಬಿಡುಗಡೆ ಮತ್ತು ಸ್ವಾತಂತ್ರ್ಯ ವಿಷಯದ ಮಾತಿಗೆ ತುದಿ ಮೊದಲಿಲ್ಲ. ಆದರೆ ನಿರ೦ ಕು ತ ಸವಾ೯ಧಿಕಾರದ ಬಂಧನ ಬಲೆಯಲ್ಲಿ ಬಿದ್ದು ದೇಹಾದ್ಯಂತ ದಬ್ಬಾಳಿಕೆಗೆ ಇಂದು ಬಲಿಯಾಗಿರುವಂತೆ ತಮ್ಮ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಬೇರೆ ಯಾವಾಗಲೂ ಇರಲಿಲ್ಲ. ಆರ್ಥಿಕ ನೀತಿಯಲ್ಲಿ ಬ್ರಿಟಿಷರ ಪ್ರಾಬಲ್ಯಕ್ಕೆ ಪ್ರಾಧಾನ್ಯ; ಆದರೂ ಭಾರತೀಯ ಆರ್ಥಿಕ ಜೀವನದ ವಿಕಸನ ಪ್ರಯತ್ನವು ಕೊರಳು ಕುಣಿಕೆಯನ್ನೇ ಕೀಳುವಂತೆ ಇದೆ; ಒಂದು ಕಡೆ ಕ್ಷಾಮ ಮತ್ತು ಅಪಾರ ಸಂಕಟ ಇನ್ನೊಂದು ಕಡೆ ಹೊನ್ನಿನ ಹುಚ್ಚು ಹೊಳೆ, ಬಡತನ ಶ್ರೀಮಂತಿಕೆ, ಕಟ್ಟುವುದು ಒಡೆಯುವುದು; ಸಂಘಟನೆ ವಿಭಜನೆ; ಜೀರ್ಣ ಭಾವನೆ ನೂತನ ಭಾವನೆ, ಇವು ಒಂದರ ಹಿಂದೆ ಒಂದು ಬರುತ್ತಲೇ ಇವೆ. ಆದರೂ ಈ ಎಲ್ಲ ಶೂನ್ಯ ನಿರಾಸೆಯ ಕಗ್ಗತ್ತಲ ಮಧ್ಯೆ ಅದುಮಲಾಗದ ಅಂತಃಶಕ್ತಿಯ ಅಮೃತ ಬೀಜದ ಅಂಕುರ ಒಂದಿದೆ.