ಪುಟ:ಭಾರತ ದರ್ಶನ.djvu/೪೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಕೋಟ ಅನುಭವಿಸುವ ಹಸಿವು, ಕಾಮ, ಸಾಂಕ್ರಾಮಿಕ ಜಾಡ್ಯಗಳು, ನಿರ್ವೀಯ್ರತೆ, ರೋಗ ಎದುರಿಸಲು ದೌರ್ಬಲ್ಯ ಬೆಳೆವಣಿಗೆಯ ಅಭಾವ, ಕಾಮ ಮತ್ತು ರೋಗಗಳಿಂದ ಒದಗಿದ ಸಾವು ಇವುಗಳ ಮೊತ್ತ,

  • ಈ ಬಂಡವಾಳ ಶೇಖರಣೆಯಿಂದ ತಾನು ಇಂಗ್ಲೆಂಡಿಗೆ ಕೊಡಬೇಕಾಗಿದ್ದ ಸಾಲವನ್ನೆಲ್ಲ ತೀರಿಸಿ ಭಾರತ ಈಗ ಬಂಡವಾಳಗಾರ ರಾಷ್ಟ್ರವಾಗಿದೆ. ಅಕ್ಷಮ್ಯ ಅಲಕ್ಷೆ ಮತ್ತು ಅನಾಯಕತ್ವದಿಂದ ದೇಶದ ಜನತೆ ಅನಿರ್ವಚನೀಯ ಸಂಕಟ ಅನುಭವಿಸಬೇಕಾಯಿತು. ಆದರೆ ಅತ್ಯಲ್ಪ ಕಾಲದಲ್ಲಿ ಅಪಾರ ಹಣ ಸಂಪಾದಿಸಬಲ್ಲ ಶಕ್ತಿಯನ್ನು ಮಾತ್ರ ಯಾರೂ ಅಲ್ಲಗಳೆಯುವಂತಿಲ್ಲ. ಐದು ವರ್ಷ ಭಾರತವು ಯುದ್ಧ ಕ್ಕಾಗಿ ವೆಚ್ಚ ಮಾಡಿದ ಹಣವು ಕಳೆದ ನೂರಾರುವರ್ಷ ಬ್ರಿಟಿಷರು ಭಾರತದಲ್ಲಿ ಹಾಕಿದ ಬಂಡವಾಳಕ್ಕಿಂತ ಬಹಳ ಹೆಚ್ಚಿದೆ. ಇದರಿಂದ ಕಳೆದ ಒಂದು ಶತಮಾನದ ಬ್ರಿಟಿಷ್ ಆಡಳಿತದಲ್ಲಿ ನಿರ್ಮಿಸಿದ ರೈಲುದಾರಿಗಳು, ಕೆರೆಕಟ್ಟೆ ಮುಂತಾದ ಜನೋಪಯುಕ್ತ ಕಾರ್ಯಗಳು ಎಷ್ಟು ಅತ್ಯಲ್ಪ ಎಂಬುದು ವ್ಯಕ್ತವಾಗುತ್ತದೆ ; ಮತ್ತು ಎಲ್ಲ ಕಡೆ ಮುಂದುವರಿಯಲು ಭಾರತಕ್ಕೆ ಅಪಾರ ಶಕ್ತಿ ಇದೆ ಎಂದೂ ಸ್ಪಷ್ಟ ಕಾಣುತ್ತದೆ. ಭಾರತದ ಕೈಗಾರಿಕಾ ಪ್ರಗತಿ ವಿರೋಧಿಸುವ ಪರಕೀಯ ಆಡಳಿತದ ನಿರಾಶಾದಾಯಕ ವಾತಾವರಣದಲ್ಲೇ ಇಷ್ಟು ದೊಡ್ಡ ಬಂಡವಾಳ ಸಂಪಾದಿಸ ಬಲ್ಲುದಾದರೆ ಸ್ವತಂತ್ರ ರಾಷ್ಟ್ರೀಯ ಸರಕಾರ ಬಂದು ದೇಶದ ಸಂಸದಭಿ ವೃದ್ಧಿಗೆ ಒಂದು ಯೋಜನ ಕಾಠ್ಯಕ್ರಮ ಇಟ್ಟುಕೊಂಡು ಮುಂದುವರಿದರೆ ಕೆಲವೇ ವರ್ಷಗಳಲ್ಲಿ ಭಾರತ ಪುನಃ ಭೂಸ್ವರ್ಗವಾದೀತು.

ಇಂದಿನ ಭಾರತದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ದೂರದ ಹಿಂದಿನ ಯಾವುದೋ ಒಂದು ಕಾಲಕ್ಕೆ ಹೋಲಿಸಿ ಹೆಮ್ಮೆಗೊಳ್ಳುವುದು ಬ್ರಿಟಿಷರಿಗೆ ವಾಡಿಕೆಯಾಗಿದೆ. ನೂರಾರು ವರ್ಷಗಳ ಹಿಂದಿನ ಪರಿಸ್ಥಿತಿಯೊಂದಿಗೆ ತಮ್ಮ ಸಾಧನೆ ಹೋಲಿಸಿ ತೃಪ್ತಿ ಪಡೆಯುತ್ತಾರೆ. ಔದ್ಯೋಗಿಕ ಕ್ರಾಂತಿ ಮತ್ತು ಕಳೆದ ಐವತ್ತು ವರ್ಷಗಳ ಔದ್ಯೋಗಿಕ ಸಂಶೋಧನೆಗಳು ಜೀವನದ ಗತಿಯನ್ನೂ ಮತ್ತು ಹುಮ್ಮ ಸ್ಪನ್ನೂ ಪೂರ್ಣ ಬದಲಾಯಿಸಿವೆ ಎಂದು ಭಾರತದ ವಿಷಯ ಮಾತನಾಡುವಾಗ ಪೂರ್ತಾ ಮರೆಯುತ್ತಾರೆ. ತಾವು ಭಾರತಕ್ಕೆ ಕಾಲಿಟ್ಟಾಗ ಭಾರತವು ಬರಡು ಅನಾಗರಿಕ ಮತ್ತು ಸತ್ವಹೀನ ರಾಷ್ಟವಾಗಿರದೆ ಉನ್ನತ ಸಂಸ್ಕೃತಿಯ ರಾಷ್ಟವಾಗಿತ್ತು ; ಔದ್ಯೋಗಿಕ ಪ್ರಗತಿಯಲ್ಲಿ ಮಾತ್ರ ಮುಂದುವರಿಯಲಾಗದೆ ತಾತ್ಕಾಲಿಕ ವಾಗಿ ಹಿಂದೆ ಬಿದ್ದಿತ್ತು ಎಂದು ಮರೆಯುತ್ತಾರೆ. ಈ ರೀತಿ ಹೋಲಿಸುವಾಗ ನಾವು ಉಪಯೋಗಿಸಬೇಕಾದ ಅಳತೆಗೋಲು ಯಾವುದು ? ಕೊಡ ಬೇಕಾದ ಬೆಲೆ ಏನು ? ಜಪಾನರು ಮಂಚುಕು ಜನರನ್ನು ತಮ್ಮ ಸ್ವಾರ್ಥಕ್ಕಾಗಿ ಎಂಟೇ ವರ್ಷಗಳಲ್ಲಿ ವಿಶೇಷ ಕೈಗಾರಿಕೋದ್ಯಮಿಗಳನ್ನಾಗಿ ಮಾಡಿದರು. ಭಾರತದಲ್ಲಿ ನೂರಾರು ವರ್ಷಗಳ ಬ್ರಿಟಿಷ್ ಆಡಳಿತದನಂತರ ಅಗೆದ ಕಲ್ಲಿದ್ದಲಿಗಿಂತ ಹೆಚ್ಚು ಕಲ್ಲಿದ್ದಲನ್ನು ಮಂಚುಕೊದಲ್ಲಿ ಅಗೆದರು, ಇತರ ಯಾವ ಸಾಮ್ರಾಜ್ಯಗಳೂ ಮಾಡದಷ್ಟು ಸಂಪತ್ತನ್ನು ಕೊರಿಯದಲ್ಲಿ ಜಪಾನರು ಸೂರೆಮಾಡಿದರು.* ಆದರೂ ಈ ಎಲ್ಲ ಮಹತ್ಸಾಧನೆಯ ಹಿಂದೆ ಗುಲಾಮಗಿರಿ, ದೌರ್ಜನ್ಯ, ಜನತೆಯ ಅಧಃಪತನ, ಸುಲಿಗೆ, ಜನತೆಯ ಆತ್ಮನಾಶದ ಪ್ರಯತ್ನದ ಭೀಕರ ಹಿನ್ನೆಲೆ ಇದ್ದೇ ಇದೆ. ದಲಿತ ಜನಾಂಗಗಳ ಮತ್ತು ರಾಷ್ಟ್ರಗಳ ಮೇಲೆ ರಾಕ್ಷಸೀ ದೌರ್ಜನ್ಯ ನಡೆಸುವುದರಲ್ಲಿ ನಾಜಿಗಳು ಮತ್ತು ಜಪಾನ್ ಇತರ ಎಲ್ಲರನ್ನೂ ಮರೆಸಿದ್ದಾರೆ. ಬ್ರಿಟಿಷರು ಇದನ್ನು ನಮಗೆ ತೋರಿಸಿ ತಾವು ಅಷ್ಟು ಕೆಟ್ಟವರಲ್ಲ ಎಂದು ನಮಗೆ ಹೇಳು ದಾರೆ. ಹೋಲಿಕೆ ಮತ್ತು ಗುಣಾವಗುಣ ನಿರ್ಧಾರದಲ್ಲಿ ಈ ಹೊಸ ಅಳತೆಗೋಲು ಸರಿ ಏನು ? ದೂರ ಪ್ರಾಚ್ಯದಲ್ಲಿ ಅನೇಕ ವರ್ಷಕಾಲ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಪ್ರತಿನಿಧಿಯಾಗಿದ್ದ ಹಾಲೆಟ್ ಉಬೆರ್ ತನ್ನ ಈ ಪ್ಯಾಸಿಫಿಕ್ ಥಾರ್ಟರ್ ” ಎಂಬ ಗ್ರಂಥದಲ್ಲಿ ಈ ಸಂಶದ ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ ಜವಾನರು ಕೊರಿಯದಲ್ಲಿ ಅತ್ಯದ್ಭುತಕಾರ ಸಾಧಿಸಿದ್ದಾರೆಂದು ಒಪ್ಪಲೇಬೇಕು, ಅವರು ಕೊರಿಯದಲ್ಲಿ ಕಾಲಿಟ್ಟಾಗ ಎಲ್ಲಿ ನೋಡಿದರೂ ಕೂಳೆ, ಅನಾರೋಗ್ಯ, ದಾರಿದ್ರಖಂಡವವಾಡುತ್ತಿದ್ದು, ಬೆಟ್ಟಗಳ ಆರಸಂಪತ್ತನ್ನೆಲ್ಲ ನಾಶಮಾಡಿ ದ್ಧರು, ತಗ್ಗಿನ ಕಣಿವೆಗಳು ಮೇಲಿಂದಮೇಲೆ ಪ್ರವಾಹದ ಅನಾಹುತಕ್ಕೆ ಒಳಗಾಗಿದ್ದವು, ಒಳ್ಳೆಯ ರಸ್ತೆಗಳ