ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪುನಃ ಅಹಮದ್‌ನಗರದ ಕೋಟೆಯಲ್ಲಿ
೪೭೧

ಸ್ವಲ್ಪ ಸಾಧ್ಯವಾಗಬಹುದು. ಪ್ಲೇಟೋನ ಮಾತುಗಳಲ್ಲಿ ಹೇಳಬಹುದಾದರೆ “ಸರ್ವ ಕಾಲಗಳ ಸರ್ವ ಜೀವಗಳ ದಿಗ್ಧರ್ಶಕರಾಗಬಹುದು”. ಮಾನವನು ಶೇಖರಿಸಿಟ್ಟಿರುವ ಅಪಾರ ಅನುಭವ ಸಂಪತ್ತಿನಿಂದ ಜೀವಾಮೃತ ಸವಿದು, ನಮ್ಮದನ್ನೂ ಅದಕ್ಕೆ ಸೇರಿಸಿ ಎರಡನ್ನೂ ಭವ್ಯಭವಿಷ್ಯದ ನಿರ್ಮಾಣ ಕಾರ್ಯದಲ್ಲಿ ವಿನಿಯೋಗಿಸಬಹುದು.

ಆಧುನಿಕ ವೈಜ್ಞಾನಿಕ ಪ್ರಗತಿ ಮತ್ತು ಅಂತರ ರಾಷ್ಟ್ರೀಯತೆಯ ಮಾತು ಬೇಕಾದಷ್ಟು ಇದ್ದರೂ ಜನಾಂಗದ್ವೇಷ ಮುಂತಾದ ವಿಧ್ವಂಸಕ ಶಕ್ತಿಗಳು ಮಾನವನ ಇತಿಹಾಸದಲ್ಲಿ ಹಿಂದೆ ಎಂದೂ ಇಲ್ಲದಷ್ಟು ಈಗ ಕಾಣುವುದು ಆಶ್ಚಯ್ಯಕರ ಮತ್ತು ಎಚ್ಚರದಿಂದ ಗಮನಿಸಬೇಕಾದ ವಿಷಯ. ಈ ಎಲ್ಲ ಪ್ರಗತಿಯಲ್ಲಿ ರಾಷ್ಟ್ರ ರಾಷ್ಟ್ರಗಳ ಮಧ್ಯೆ ಮತ್ತು ಮಾನವನ ಆತ್ಮಕ್ಕೆ ಸೌಹಾರ್ದ ಕೊಡಲಾಗದ ಯಾವುದೋ ಒಂದು ನ್ಯೂನತೆ ಇದೆ. ಪ್ರಾಯಶಃ ಮಾನವ ಕುಲದ ಅನುಭವ ಸಂಪತ್ತಾದ ಪ್ರಾಚೀನ ಪ್ರಾಜ್ಞತೆಯ ಕಡೆ ಹೆಚ್ಚಿನ ನಮ್ರತೆ ಮತ್ತು ಸಂಯೋಗ ದೃಷ್ಟಿಯಿಂದ ನೋಡಿದರೆ ನಾವು ಒಂದು ಹೊಸ ನೋಟ ಕಂಡು ಹೆಚ್ಚು ಸಾಮರಸ್ಯ ಪಡೆಯಬಹುದು. ಅದರಲ್ಲೂ ಹಿಂದಿನದನ್ನೆಲ್ಲ ಮರೆತ ಇಂದಿನ ಜ್ವರಪೀಡಿತ ಜೀವನದ ಜನರಿಗೆ ಅದು ಇನ್ನೂ ಅತ್ಯವಶ್ಯಕ. ಆದರೆ ಭಾರತದಂಥ ದೇಶಗಳಲ್ಲಿ ಬೇರೊಂದು ಬಗೆಯ ಪ್ರಾಮುಖ್ಯತೆ ಕೊಡಬೇಕಾಗಿದೆ. ಏಕೆಂದರೆ ನಾವು ಇಂದಿನದನ್ನು ಅಸಡ್ಡೆ ಮಾಡಿ ಎಲ್ಲಕ್ಕೂ ಹಿಂದಿನದನ್ನೆ ನೆಚ್ಚಿ ಕೂತಿದ್ದೇವೆ. ಸಂಕುಚಿತ ಮತದೃಷ್ಟಿಯನ್ನೂ, ನಿಸರ್ಗಾತೀತ ಕಲ್ಪನಾತ್ಮಕ ಉಹಾಪೋಹಗಳಲ್ಲಿ ಮೂಢ ನಂಬಿಕೆಯನ್ನೂ, ನಮ್ಮನ್ನೂ ಮತ್ತು ಪ್ರಪಂಚವನ್ನೂ ಅಗ್ಗ ಮಾಡಿಕೊಳ್ಳಲು ಅಡ್ಡ ನಿಂತಿರುವ ಮತೀಯ ಕರ್ಮಾಚರಣೆ ಮತ್ತು ಗೂಢ ತಾತ್ವಿಕಭಾವ ಪರವಶತೆಗಳಲ್ಲಿ ನಮ್ಮ ಮನಸ್ಸನ್ನು ಓಡಿಸುವ ಅಭ್ಯಾಸವನ್ನೂ ತ್ಯಜಿಸಬೇಕು; ಇಂದಿನ ಯುಗವನ್ನು ಇಂದಿನ ಜೀವನವನ್ನು ಇಂದಿನ ಪ್ರಪಂಚವನ್ನು ಮತ್ತು ಅನಂತ ಮುಖಗಳಿಂದ ನಮ್ಮ ಸುತ್ತಲೂ ಹರಡಿರುವ ಈ ಪ್ರಕೃತಿಯ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ಹಿಂದೂಗಳಲ್ಲಿ ಕೆಲವರು ವೇದಕಾಲಕ್ಕೆ ಹೋಗೋಣ ಎನ್ನುವವರಿದ್ದಾರೆ; ಮುಸ್ಲಿಮರಲ್ಲಿ ಕೆಲವರು ಇಸ್ಲಾಂ ಧಮ್ಮ ಸಾಮ್ರಾಜ್ಯ ಸ್ಥಾಪಿಸಬೇಕೆನ್ನುವವರಿದ್ದಾರೆ. ಹುಚ್ಚು ಭ್ರಮೆಗಳು, ಕಾಲಗತಿಯನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವಿಲ್ಲ; ಎಷ್ಟೇ ಅಪೇಕ್ಷಣೀಯವೆಂದರೂ ಅದು ಅಸಾಧ್ಯ. ಕಾಲಚಕ್ರ ತಿರುಗುವುದು ಒಂದೇ ಕಡೆಗೆ.

ಆದ್ದರಿಂದ ಭಾರತವು ತನ್ನ ಮತೀಯತೆ ಕಡಮೆಮಾಡಿ ವಿಜ್ಞಾನದ ಕಡೆ ತಿರುಗಬೇಕು. ತನ್ನ ಆತ್ಮವನ್ನು ಹಿಸುಕಿ, ಪ್ರಗತಿಗೆ ಅಡ್ಡ ಬಂದು ಸೆರೆಯಾಗಿರುವ, ವಿಚಾರಪರತೆ ಮತ್ತು ಸಮಾಜ ವ್ಯವಹಾರಗಳ ಮೇಲಿನ ಬಹಿಷ್ಕಾರ ಮನೋಬುದ್ಧಿ ಬಿಟ್ಟು ಬಿಡಬೇಕು. ಕರ್ಮಾಚರಣೆಯ ಪಾವಿತ್ರತೆಯು ಸಾಮಾಜಿಕ ವ್ಯವಹಾರಕ್ಕೆ ಅಡ್ಡಗೋಡೆ ಕಟ್ಟದೆ; ಸಾಮಾಜಿಕ ಕಾಧ್ಯಕ್ಷೇತ್ರ ಸಂಕುಚಿತಗೊಳಿಸಿದೆ. ಸಂಪ್ರದಾಯ ಶೀಲ ಹಿಂದೂವಿನ ಇಂದಿನ ಧರ್ಮವೆಲ್ಲ ಏನು ಊಟ ಮಾಡಲಿ, ಏನು ಬಿಡಲಿ, ಯಾರೊಂದಿಗೆ ಊಟ ಮಾಡಲಿ ಯಾರಿಂದ ದೂರವಿರಲಿ ಎಂಬುದರಲ್ಲೇ ಆಗಿದೆ ; ತಾತ್ವಿಕ ಮೌಲ್ಯಗಳು ಮಾಯವಾಗಿವೆ. ಅಡಿಗೆ ಮನೆಯ ನಿಯಮ ನಿಬಂಧನೆಗಳೇ ಆತನ ಸಾಮಾಜಿಕ ಜೀವನದಮೇಲೆ ಅಧಿಕಾರ ನಡೆಸುತ್ತಿವೆ. ಮುಸ್ಲಿಮರಲ್ಲಿ ಈ ಪ್ರತಿಬಂಧಕಗಳು ಇಲ್ಲ ನಿಜ; ಆದರೆ ತನ್ನ ಧರ್ಮ ಬೋಧಿಸಿದ ಸಹೋದರ ಭಾವ ಮರೆತು ತನ್ನ ಸಂಕುಚಿತ ನೀತಿ ಮತ್ತು ಕರ್ಮಾಚರಣೆ ಚಾಚೂತಪ್ಪದೆ ನಿತ್ಯವಿಧಿಯಾಗಿ ಆಚರಿಸುತ್ತಾನೆ. ಇಂದಿನ ಸಾಮಾನ್ಯ ಹಿಂದೂ ಅನೇಕ ರೀತಿ ಜೀವನಶ್ರೀಯನ್ನು ವೃದ್ಧಿಗೊಳಿಸುವ ಹಿನ್ನೆಲೆ ಮತ್ತು ಭಾವನಾ ಸ್ವಾತಂತ್ರ್ಯ ಕಳೆದುಕೊಂಡಿರುವುದರಿಂದ ಹಿಂದೂ ಧರ್ಮದ ಪ್ರತಿನಿಧಿ ಎಂದು ಹೇಳಿಕೊಳ್ಳಲು ಯೋಗ್ಯತೆ ಬಹುಮಟ್ಟಿಗೆ ಕಳೆದುಕೊಂಡಿದ್ದರೂ ಮುಸ್ಲಿಮನ ಜೀವನ ದೃಷ್ಟಿ ಈ ಹಿಂದೂ ದೃಷ್ಟಿಗಿಂತ ಹೆಚ್ಚು ಸಂಕುಚಿತ ಮತ್ತು ನಿಷ್ಟ್ರಯೋಜಕ.

ಹಿಂದೂಗಳಲ್ಲಿ ಈ ಪ್ರತ್ಯೇಕತೆಯ ಸಂಕೇತ ಮತ್ತು ಮೂರ್ತಿ ಸ್ವರೂಪವೇ ಜಾತಿ. ಜಾತಿಯ ಮೂಲ ಭಾವನೆ ಮಾತ್ರ ಉಳಿದು, ಈಚೆಗೆ ಬೆಳೆದು ಹಬ್ಬಿ ಹೆಣೆದಿರುವ ಜಟಿಲತೆಯ ಕಾಠಿಣ್ಯ ಹೋದರೆ ಸಾಕೆಂದು ಹೇಳುತ್ತಾರೆ. ಹುಟ್ಟಿಗೆ ಪ್ರತಿಯಾಗಿ ಯೋಗ್ಯತೆ ಇದ್ದರೆ ಸಾಕೆನ್ನುತ್ತಾರೆ. ಈ ಪ್ರದೇಶವೇ