ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೭೬
ಭಾರತ ದರ್ಶನ

ಯುದ್ಧದಿಂದ ಈ ಎರಡು ಪರಿಣಾಮಗಳೂ ಆಗುತ್ತವೆ; ಆದರೆ ನೈತಿಕ ಜವಾಬ್ದಾರಿಯಿಂದ ಜಾರಿಕೊಳ್ಳುವುದೂ ಮತ್ತು ನಾಗರಿಕತೆಯು ಶತಮಾನಗಳಿಂದ ಬಹು ಪ್ರಯಾಸದಿಂದ ಕಟ್ಟಿದ ಮೌಲ್ಯಗಳನ್ನು ನಾಶಮಾಡುವುದೂ ಯುದ್ಧ ರಾಷ್ಟ್ರಗಳ ಪ್ರಮುಖ ಪ್ರವೃತ್ತಿಯಾಗುತ್ತದೆ. ಯುದ್ಧದಲ್ಲಿ ಗೆಲುವು ಮತ್ತು ಆಕ್ರಮಣಗಳು ಆ ನೀತಿಗೆ ನ್ಯಾಯಸಮರ್ಥನೆ ಕೊಟ್ಟು ಅದಕ್ಕೊಂದು ಅಸ್ತಿತ್ವ ಕೊಡುತ್ತವೆ. ಮತ್ತು ಸಾಮ್ರಾಜಷಾಹಿ ಆಕ್ರಮಣಕ್ಕೂ, ಆಳರಸ ಜನಾಂಗವೆಂಬ ಅಹಂಕಾರಕ್ಕೂ ಮೂಲವಾಗುತ್ತದೆ. ಅಪ ಜಯವು ನಿರಾಶಾಭಾವನೆಗೂ, ಸೇಡಿನ ಮನೋಭಾವಕ್ಕೂ ಕಾರಣವಾಗುತ್ತದೆ. ಈ ಎರಡರಿಂದಲೂ ದ್ವೇಷವೂ ಹಿಂಸಾಪ್ರವೃತ್ತಿಯೂ ಬೆಳೆಯುತ್ತವೆ. ನಿಷ್ಕರುಣ ಪಾಶವೀವೃತ್ತಿಗೆ ಮಿತಿ ಇಲ್ಲದೆ ಪರರ ದೃಷ್ಟಿ ಅರಿಯಲು ಸಹ ತಿರಸ್ಕಾರ ಮನೋಭಾವ ಹುಟ್ಟುತ್ತದೆ. ನಮ್ಮ ಭವಿಷ್ಯದ ನಿರ್ಧಾರವಾಗುತ್ತಿರುವುದೇ ಹೀಗೆ; ಇನ್ನೂ ಯುದ್ದಗಳು, ಇನ್ನೂ ಹೋರಾಟಗಳು; ಇನ್ನೂ ಸಾವುನೋವುಗಳು.

ಭಾರತ ಮತ್ತು ಇಂಗ್ಲೆಂಡ್ ಎರಡರ ಕಳೆದ ಎರಡು ಮೂರು ವರ್ಷಗಳ ಬಲಾತ್ಕಾರದ ಬಂಧನದಿಂದ ಎರಡಕ್ಕೂ ಈ ಪ್ರಾಚೀನ ಕರ್ಮ, ಈ ಅದೃಷ್ಟ ಬೆಳೆದು ಅಂಟಿವೆ; ಎರಡರ ಪರಸ್ಪರ ಸಂಬಂಧವನ್ನೂ ಅದೇ ನಿರ್ಧರಿಸುತ್ತದೆ. ಅದರ ಬಂಧನದಲ್ಲಿ ತೊಳಲು, ಆ ಕರ್ಮಬಂಧನದಿಂದ ಪಾರಾಗಿ, ಬೇರೊಂದು ತಳಹದಿಯ ಮೇಲೆ ಹೊಸಬಾಳನ್ನು ನಡೆಸಲೆಂದು ಹೋರಾಡಿ ವಿಮುಖರಾಗಿದ್ದೇವೆ. ಕಳೆದ ಐದು ವರ್ಷಗಳ ಯುದ್ಧದಿಂದ ಆ ಪ್ರಾಚೀನ ದುಷ್ಕರ್ಮ ದುರದೃಷ್ಟವಶಾತ್ ಇನ್ನೂ ಹೆಚ್ಚಿದೆ; ಸಂಧಾನವೂ, ಸಾಮಾನ್ಯ ಪರಸ್ಪರ ವ್ಯವಹಾರವೂ ಇನ್ನೂ ಕಠಿಣವಾಗಿವೆ ಉಳಿದೆಲ್ಲದರಂತೆ ಕಳೆದ ಎರಡುನೂರು ವರ್ಷಗಳ ಇತಿಹಾಸದಲ್ಲಿ ಒಳ್ಳೆಯದೂ ಇದೆ ಕೆಟ್ಟದೂ ಇದೆ. ಆಂಗೇಯನ ದೃಷ್ಟಿಯಲ್ಲಿ ಕೆಟ್ಟದಕ್ಕಿಂತ ಒಳ್ಳೆಯದೇ ಹೆಚ್ಚು. ಭಾರತೀಯನ ದೃಷ್ಟಿಯಲ್ಲಿ ಆ ಇತಿಹಾಸವೆಲ್ಲ ದುರಂತ ಕರಾಳ ಭೀಕರ ಚಿತ್ರ. ಒಳ್ಳೆಯದು ಮತ್ತು ಕೆಟ್ಟ ದರ ಪ್ರಮಾಣ ಎಷ್ಟೇ ಇರಲಿ ಬಲಾತ್ಕಾರ ಸಂಬಂಧದಿಂದ ದ್ವೇಷವೂ, ಪರಸ್ಪರ ಕಹಿ ಮನೋವೃತ್ತಿಯೂ ಬೆಳೆದು ದುಷ್ಪರಿಣಾಮಗಳಾಗುವುದು ಅನಿವಾಯ್ಯ.

ಭಾರತದ ರಾಜಕೀಯ ಮತ್ತು ಆರ್ಥಿಕ ರಚನೆಯಲ್ಲಿ ಕ್ರಾಂತಿಕಾರಕ ಪರಿವರ್ತನೆಗಳು ಅತ್ಯವಶ್ಯಕವೂ ಅನಿವಾರವೂ ಇವೆ. ಯುದ್ಧಾರಂಭದ ೧೯೩೯ರ ಕೊನೆಯಲ್ಲಿ, ಮತ್ತೆ ಪುನಃ ೧೯೪೨ರ ಏಪ್ರಿಲ್ ತಿಂಗಳಲ್ಲಿ ಇಂಗ್ಲೆಂಡ್ ಮತ್ತು ಭಾರತಗಳ ಸಮ್ಮತಿಯಿಂದ ಆ ಬಗೆಯ ಪರಿವರ್ತನೆಗಳಾಗಬಹುದೆಂಬ ಆಸೆ ಇತ್ತು. ಎಲ್ಲ ಮೂಲ ಪರಿವರ್ತನೆಗೂ ಭಯಗೊಂಡ ಕಾರಣ ಆ ಅವಕಾಶಗಳೂ, ಸಾಧ್ಯ ಪ್ರಮೇಯಗಳೂ ಕಳೆದು ಹೋದವು. ಆದರೆ ಪರಿವರ್ತನೆಯಾಗಲೇ ಬೇಕು ಒಮ್ಮತದ ಕಾಲ ಮಿಂಚಿಹೋಯಿತೇನು? ಸಾಮಾನ್ಯ ವಿಪತ್ತುಗಳ ಎದುರಿನಲ್ಲಿ ಹಿಂದಿನ ಮನೋವಿಕಾರ ಸ್ವಲ್ಪ ಕಡಮೆಯಾಗುತ್ತದೆ, ಪ್ರಸ್ತುತ ಸಮಸ್ಯೆಗಳನ್ನು ಭವಿಷ್ಯ ದೃಷ್ಟಿಯಿಂದ ಕಾಣುತ್ತೇವೆ. ಆದರೆ ತೊಳೆಯ ದುರಂತ ಕಥೆ ಮತ್ತೊಮ್ಮೆ ಹಿಂದಿರುಗಿದೆ ಮತ್ತು ಅಧಿಕಗೊಂಡಿದೆ. ಗ್ರಾಹಕ ಮನೋಭಾವ ಮಾಯವಾಗಿ ಮನಸ್ಸನ್ನು ಕಹಿಮಾಡಿ ಕಲ್ಲುಮಾಡಿದೆ. ಇಂದೋ ನಾಳೆಯೋ, ಇನ್ನೂ ಹೆಚ್ಚು ಹೋರಾಡಿಯೋ, ಇಲ್ಲದೆಯೋ ಯಾವುದಾದರೂ ಒಂದು ಬಗೆಯ ಇತ್ಯರ್ಥವಾಗಲೇ ಬೇಕು; ಆದರೆ ಅದು ನಿಜವಾದ ವಿಶ್ವಾಸದಿಂದ, ಸಹಕಾರದಿಂದ ಆಗುವುದು ಬಹಳ ಕಷ್ಟ, ಪ್ರಾಯಶಃ ವಿಷಮ ಸಂದರ್ಭದ ಒತ್ತಾಯದಿಂದ, ಪರಸ್ಪರ ವೈರ ಮತ್ತು ಅಪನಂಬಿಕೆಯಿಂದ ಪ್ರಾಯಶಃ ಉಭಯ ಪಕ್ಷಗಳೂ ಇಷ್ಟವಿಲ್ಲದಿದ್ದರೂ ಒಂದು ಒಪ್ಪಂದಕ್ಕೆ ಬರುವುದು ಅನಿವಾರ್ಯವಾಗುತ್ತದೆ. ಭಾರತದ ಒಂದು ಅಂಗುಲ ಭೂಮಿ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿ ಉಳಿದಿರಬೇಕೆಂದರೂ ಆ ಪರಿಹಾರ ಏನೆ ಇರಲಿ ಅದನ್ನು ಒಪ್ಪುವ ಸಂಭವವೇ ಇಲ್ಲ. ಹಳೆಯ ಪಾಳೆಪಟ್ಟು ಉಳಿಸಿ ಅವುಗಳ ಬಲದ ಮೇಲೆ ರೂಪಿಸುವ ಪರಿಹಾರ ದೀರ್ಘಕಾಲ ಉಳಿಯುವುದೂ ಇಲ್ಲ.

ಭಾರತದಲ್ಲಿ ಜೀವನ ಬಹು ಸುಲಭ. ಆದ್ದರಿಂದ ನಮ್ಮ ಜೀವನ ಶೂನ್ಯವೂ ವಕ್ರವೂ, ಹುರುಳಿಲ್ಲ. ದುದೂ ಆಗಿದೆ. ಬಡತನದ ಭಯಂಕರ ಬೇಗೆ ಸದಾ ಅದನ್ನು ಆವರಿಸಿದೆ. ಬಾಹ್ಯವೋ ಅಂತರ್ಗತವೋ, ಭಾರತದ ಇಂದಿನ ದುರ್ಬಲ ವಾತಾವರಣಕ್ಕೆ ಮುಖ್ಯ ಬಡತನ ಮತ್ತು ಹಸಿವಿನ ಪರಿಣಾಮಗಳೇ ಮೂಲ. ನಮ್ಮ ಜೀವನದ ಮಟ್ಟ ಅಧೋಗತಿಗೆ ಇಳಿದಿದೆ, ಸಾವಿನ ಸಂಖ್ಯೆ ಪರಮಾವಧಿಗೆ ಏರಿದೆ. ಸಿರಿವಂತರು