ಪುಟ:ಭಾರತ ದರ್ಶನ.djvu/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಆ ಭಾರತ ದರ್ಶನ ಶಕ್ತಿಗಳು ತಾತ್ಕಾಲಿಕವಿರಬಹುದು, ಕೃತಕವಿರಬಹುದು, ಕ್ರಮೇಣ ನಾಶವೂ ಆಗಬಹುದು, ಆದರೆ ಇಂದು ಅವು ರೆಕ್ಕೆಗಟ್ಟಿ ಬಲಿತಿವೆ; ಅವುಗಳನ್ನು ಯಾರೂ ಅಲಕ್ಷೆಮಾಡುವಂತಿಲ್ಲ. ಈ ಎಲ್ಲ ತಪ್ಪುಗಳಿಗೆ ನಾವೇ ಕಾರಣ ; ನಮ್ಮ ಅಪರಾಧದ ಫಲ ನಾವೇ ಉಣ್ಣ ಬೇಕು. ಆದರೆ ಭಾರತ ವಿಭಜನೆಯಲ್ಲಿ ಬ್ರಿಟಿಷ್ ಅಧಿಕಾರಿಗಳು ಉದ್ದೇಶಪೂರ್ವಕ ವಹಿಸಿದ ಪಾತ್ರ ನಾನು ಎಂದೂ ಮರೆಯಲಾರೆ, ಎಂದೂ ಕ್ಷಮಿಸಲಾರೆ. ಉಳಿದೆಲ್ಲ ಗಾಯವಾಯಬಹುದು; ಆದರೆ ಈ ಗಾಯದಿಂದ ನಾವು ಬಹು ದೀರ್ಘಕಾಲ ನರಳಬೇಕಾಗುತ್ತದೆ. ಭಾರತದ ವಿಷಯ ಯೋಚಿಸಿದಾಗಲೆಲ್ಲ ಎಲ್ಲೆಂಡ್ ಮತ್ತು ಚೀಣಾ ನನಗೆ ಜ್ಞಾಪಕಕ್ಕೆ ಬರುತ್ತವೆ. ಇಂದಿನ ಮತ್ತು ಹಿಂದಿನ ಸಮಸ್ಯೆಗಳಲ್ಲಿ ದೃಷ್ಟಿಯಿಂದ ಎರಡೂ ಭಾರತದಿಂದ ತೀರ ಭಿನ್ನ ; ಅಲ್ಲದೆ ತಮ್ಮೊಳಗೂ ಭಿನ್ನ ; ಅದರೂ ಅನೇಕ ಸಾಮ್ಯಗಳಿವೆ. ನಮಗೂ ಮುಂದೆ ಅದೇ ಮಾರ್ಗ ಗತಿಯೇನು ? - ಜಿಮ್ ಫೇಲಾನ್ ತನ್ನ “ ಜೈಲುಪ್ರವಾಸ” ಎಂಬ ಗ್ರಂಥದಲ್ಲಿ ಮಾನವನ ವ್ಯಕ್ತಿತ್ವದ ಮೇಲೆ ಸೆರೆ ಮನೆಯ ಪರಿಣಾಮ ತಿಳಿಸುತ್ತಾನೆ. ದೀರ್ಘಕಾಲ ಸೆರೆಮನೆವಾಸ ಅನುಭವಿಸಿದವರಿಗೆಲ್ಲ ಅದರ ಸತ್ವ ತಿಳಿದಿದೆ. “ ಸೆರೆಮನೆ ಮಾನವನ ವ್ಯಕ್ತಿತ್ವಕ್ಕೆ ಒಂದು ಭೂತಕನ್ನಡಿ, ಪ್ರತಿಯೊಂದು ಅವಗುಣವನ್ನೂ ಹೊರಗೆಡವಿ, ಪ್ರಾಧಾನ್ಯತೆ ಕೊಟ್ಟು, ಪ್ರಚೋದಿಸಿ ದುರ್ಗುಣಿ ಖೈದಿಯ ಬದಲು ದುರ್ಗುಣವೇ ಮೂರ್ತಿ ವೆತ್ತು ಖೈದಿಯ ರೂಪದಲ್ಲಿ ಕಾಣುತ್ತದೆ ಎಂದಿದಾನೆ. ಪರಾಡಳಿತದಿಂದ ರಾಷ್ಟಶೀಲದ ಮೇಲೆ ಇದೇ ಬಗೆಯ ಪರಿಣಾಮವಾಗುತ್ತದೆ. ಜೊತೆಗೆ ಕೆಲವು ಸದ್ಗುಣಗಳೂ ಬೆಳೆಯುತ್ತವೆ ; ಪರಾಡಳಿತ ವಿರೋಧಿ ಸುವ ಶಕ್ತಿಯೂ ಕ್ರಮೇಣ ಅಭಿವೃದ್ದಿಯಾಗುತ್ತದೆ. ಆದರೆ ಆಡಳಿತ ವರ್ಗ ಒಂದನ್ನು ಪ್ರೋತ್ಸಾಹಿಸಿ ಇನ್ನೊಂದನ್ನು ತುಳಿಯುತ್ತದೆ. ಸೆರೆಮನೆಯಲ್ಲಿ ಬಂದಿಗಳೇ ತಮ್ಮ ಸಹಬಂದಿಗಳ ಮೇಲೆ ಗುಪ್ತಚಾರ ರಾಗುವುದು ಒಂದು ಪ್ರಶಸ್ತಿ ಎಂದು ಭಾವಿಸುವಂತೆ ಅಧೀನ ರಾಷ್ಟ್ರದಲ್ಲಿ ಸಹ ಅಧಿಕಾರದ ದಂಡಿಗೆ ಧರಿಸಿ ಅಧಿಕಾರಿಗಳ ಪರ ಕೆಲಸ ಮಾಡುವ ಕೈಗೊಂಬೆಗಳಿಗೆ, ಅವರ ಪಾದಸೇವಕರಿಗೆ ಏನೂ ಕೊರತೆ ಇಲ್ಲ. ಇನ್ನು ಕೆಲವರು ಉದ್ದೇಶ ಪೂರ್ವಕ ಆ ಸಾಲಿಗೆ ಸೇರದಿದ್ದರೂ ಅಧಿಕಾರ ಬಲದ ರೀತಿ ನೀತಿ ಮತ್ತು ಕಪಟೋಪಾಯಗಳಿಗೆ ಬಲಿಬೀಳುತ್ತಾರೆ. ಭಾರತ ವಿಭಾಗ ಮಾಡಬೇಕು, ಬಲಾತ್ಕಾರದ ಐಕ್ಯತೆ ಬೇಡ ಎಂಬ ತತ್ತ್ವ ಒಪ್ಪಿಕೊಳ್ಳುವ ಮುಂಚೆ ಶಾಂತ ರೀತಿ ಭಾವೋದ್ರೇಕವಿಲ್ಲದೆ ಅದರ ಪರಿಣಾಮ ಯೋಚನೆ ಮಾಡಿದರೆ ಎಲ್ಲರ ಕ್ಷೇಮದೃಷ್ಟಿಯಿಂದ ಐಕ್ಯತೆಯೇ ಉತ್ತಮವೆಂದು ತೋರಬಹುದು. ಆದರೂ ಒಮ್ಮೆ ಒಂದು ತಪ್ಪು ಹೆಜ್ಜೆ ಇಟ್ಟರೆ ಹಿಂದೆಯೇ ಅನೇಕ ತಪ್ಪು ಹೆಜ್ಜೆ ಇಡಬೇಕಾಗುವ ಅಪಾಯವಿದ್ದೇ ಇದೆ. ತಪ್ಪು ಮಾರ್ಗದಲ್ಲಿ ಒಂದು ಸಮಸ್ಯೆ ಬಿಡಿಸಲು ಯತ್ನಿಸಿದರೆ ಅದರ ಹಿಂದೆಯೇ ಅನೇಕ ಹೊಸ ಸಮಸ್ಯೆಗಳು ಉದ್ಭವಿಸಬಹುದು. ಎರಡು ಮೂರು ಭಾಗವಾಗಿ ಭಾರತ ವಿಭಜನೆ ಮಾಡುವುದೆಂದರೆ ದೊಡ್ಡ ದೊಡ್ಡ ದೇಶೀಯ ಸಂಸ್ಥಾನ ಒಳಗೂಡಿ ಸುವುದು ಕಷ್ಟವಾಗುತ್ತದೆ; ಏಕೆಂದರೆ ತಾವೂ ಪ್ರತ್ಯೇಕ ಉಳಿದು ತಮ್ಮ ಸರ್ವಾಧಿಕಾರವನ್ನೇ ಮುಂದು ವರಿಸಲು ಹೊಸದೊಂದು ಕಾರಣ ಅವುಗಳಿಗೆ ದೊರೆಯುತ್ತದೆ.*

  • ಒಟ್ಟಿನಲ್ಲಿ ದೇಶೀಯ ಸಂಸ್ಥಾನಗಳಿಗೆ ತಮ್ಮ ಆಂತರಿಕ ಸ್ವಾತಂತ್ರ ಉಳಿಸಿಕೊಳ್ಳಬೇಕೆಂದು ಕಾತರತೆ ಇದ್ದರೂ ಸಮಾನ ಹಕ್ಕು ದೊರೆತರೆ ಶಕ್ತಿಯುತ ಸಂಯುಕ್ತ ಭಾರತ ರಚನೆಯಲ್ಲಿ ತಾವು ಸೇರಲು ಸಿದ್ಧ ಎಂದು ತಮ್ಮ ಅಧಿ ಪ್ರಾಯ ತಿಳಿಸಿವೆ. ಭಾರತದ ವಿಭಜನೆಯನ್ನು ಪ್ರಮುಖ ಸಂಸ್ಥಾನ ಸಚಿವರುಗಳೂ, ರಾಜಕಾರಣಿಗಳೂ ಬಲವಾಗಿ ವಿರೋ ಧಿಸಿದ್ದಾರೆ, ಆ ರೀತಿ ಏನಾದರೂ ವಿಭಜನೆಯಾದರೆ ಸಂಸ್ಥಾನಗಳು ವಿಭಕ್ತ ಭಾರತದ ಯಾವ ಭಾಗಕ್ಕೂ ಸೇರದೆ ತಮ್ಮ ಪಾಡಿಗೆ ತಾವು ಪ್ರತ್ಯೇಕವಿರಲು ಇಷ್ಟ ಪಡಬಹುದು, ತಿರುವಾಂಕೂರಿನ ದಿವಾನರೂ, ಸಂಸ್ಥಾನ ಸಚಿವರಲ್ಲಿ ಬಹಳ ಶಕ್ತರೂ ಅನುಭವಸ್ತರೂ ಆದ ಸರ್, ಸಿ, ಪಿ ರಾಮಸ್ವಾಮಿ ಅಯ್ಯರ್ (ತಮ್ಮ ವಿರೋಧಿಗಳನ್ನು ಸದೆಬಡಿದು ನಿರಂಕುಶಾಧಿಕಾರ ನಡೆಸುವುದರಲ್ಲಿ ಪ್ರಸಿದ್ಧರಾದಾಗ) ದೇಶೀಯ ಸಂಸ್ಥಾನಗಳಲ್ಲಿ ಪೂರ್ಣ ಒಳಾಡಳಿತ ಸ್ವಾತಂತ್ರ ಇರಬೇಕೆಂದು ವಾದಿ ಸುವವರಲ್ಲಿ ಒಬ್ಬರು. ಅವರೂ ಪಾಕಿಸ್ತಾನ ಅಥವ ಯಾವುದೇ ಬಗೆಯ ವಿಭಜನೆಯನ್ನು ಬಲವಾಗಿ ವಿರೋಧಿಸುತ್ತ