ಪುಟ:ಭಾರತ ದರ್ಶನ.djvu/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ ೪೭ ಮುಸ್ಲಿಂ ಲೀಗ್ ಕೇಳುವಂತೆ ಭಾರತವನ್ನು ಮತದ ದೃಷ್ಟಿ ಯಿಂದ ಹಿಂದೂಗಳು, ಮುಸ್ಲಿಮರು ಎಂದು ವಿಭಾಗಿಸುವುದಾದರೆ ಭಾರತದ ಈ ಎರಡು ಧರ್ಮಗಳ ಜನರನ್ನು ಪ್ರತ್ಯೇಕಿಸಿದಂತೆ ಆಗುವುದಿಲ್ಲ; ಏಕೆಂದರೆ ದೇಶಾದ್ಯಂತ ಅವರು ಹರಡಿದ್ದಾರೆ. ಒಂದು ಧರ್ಮದ ಬಹುಸಂಖ್ಯಾತರಿರುವ ಭಾಗವನ್ನೇ ಪ್ರತ್ಯೇಕಿಸಿದರೂ ಇನ್ನೊಂದು ಧರ್ಮದ ಅಲ್ಪಸಂಖ್ಯಾತರ ದೊಡ್ಡ ಗುಂಪು ಎರಡು ಕಡೆಯೂ ಉಳಿಯು ತದೆ. ಈ ರೀತಿ ಅಲ್ಪಸಂಖ್ಯಾತರ ಪ್ರಶ್ನೆ ನಿವಾರಿಸುವ ಬದಲು ಒಂದು ಸಮಸ್ಯೆ ಅನೇಕ ಆಗುತ್ತದೆ. ಪರಧರೀ ಯರಾದ ಸೀಖರು ಅವರ ಇಷ್ಟಕ್ಕೆ ವಿರುದ್ದ ಎರಡು ಕಡೆಯೂ ಹಂಚಿ ಹೋಗುತ್ತಾರೆ. ಒಂದು ಪಂಗಡಕ್ಕೆ ಪ್ರತ್ಯೇಕವಾಗಲು ಸ್ವಾತಂತ್ರ ಕೊಟ್ಟು, ಅಲ್ಪಸಂಖ್ಯಾಕರಾದ ಇತರ ಪಂಗಡಗಳಿಗೆ ಅದೇ ಸ್ವಾತಂತ್ರ ನಿರಾಕರಿಸುತ್ತೇವೆ. ಅವರ ಇಚ್ಛೆಗೆ ವಿರುದ್ದ ಅವರ ಪ್ರಬಲ ವಿರೋಧ ಅಲಕ್ಷಿಸಿ ಭಾರತದಿಂದ ಹೊರ ದೂಡುತ್ತೇವೆ. ಪ್ರತಿಯೊಂದು ಭಾಗದಲ್ಲಿ ಬಹುಸಂಖ್ಯಾತರ ಅಭಿಪ್ರಾಯಕ್ಕೆ ಮನ್ನಣೆ ದೊರೆಯ ಬೇಕೆಂದರೆ ವಿಭಜನೆಯ ಪ್ರಶ್ನೆಯನ್ನು ಒಟ್ಟು ಭಾರತದ ಬಹುಸಂಖ್ಯಾಕರ ಅಭಿಪ್ರಾಯದಂತೆ ಏಕೆ ತೀರ್ಮಾನಿಸಬಾರದೊ ನನಗೆ ಅರ್ಥವಾಗುವುದಿಲ್ಲ. ಪ್ರತಿಯೊಂದು ಸಣ್ಣ ಪ್ರದೇಶವೂ ತನ್ನ ಸ್ವಾತಂತ್ರದ ಪ್ರಶ್ನೆಯನ್ನು ತಾನೇ ತೀರ್ಮಾನಿಸಿ ಅಸಂಖ್ಯಾತ ಸಣ್ಣ ರಾಜ್ಯಗಳನ್ನು ರಚಿಸುವುದೆಂದರೆ ಯಾರೂ ಒಪ್ಪದ, ಅರ್ಥವಿಲ್ಲದ ಹುಚ್ಚು ಕೆಲಸ. ಎರಡೂ ಧರ್ಮಗಳ ಜನರು ದೇಶದ ಎಲ್ಲ ಕಡೆಗಳಲ್ಲೂ ಹರಡಿ ಹಚ್ಚಿದ್ದಾರೆ. ಜನಾಂಗ ವಿಭಜನೆ ಅತಿ ಕಷ್ಟತಮ ಕೆಲಸ, ಅದನ್ನು ಧರ್ಮದೃಷ್ಟಿಯಿಂದ ವಿಭಜಿಸುವುದೆಂದರೆ ಯಾವ ರೀತಿ ನೋಡಿದರೂ ಅಸಾಧ್ಯವೆಂದು ತೋರುತ್ತದೆ. ಇಂದಿನ ಆಧುನಿಕ ಪ್ರಪಂಚದಲ್ಲಿ ಯಾವುದೋ ಮಧ್ಯ ಯುಗಕ್ಕೆ ಹಿಂದಿರುಗುವ ಈ ಭಾವನೆಯು ಸರಿಹೊಂದುವುದಿಲ್ಲ. ಬಂದಿರುವವರು. ೧೯೪೪ನೆ ಅಕ್ಟೋಬರ್ ೬ನೆಯ ದಿನ ಮುಂಬೈ ನಗರದಲ್ಲಿ ಇಂಡಿರ್ಯ ಕೌನ್ಸಿಲ್ ಆಫ್ ವರ್ಲ್ಡ್ ಅಫೇಕ್ಸ್ ಸಂಸ್ಥೆಯ ಸಭೆಯಲ್ಲಿ ಮಾತನಾಡುತ್ತ “ ಭಾರತದ ಬೇರೆ ಬೇರೆ ರಾಜಕೀಯ ಮತ್ತು ಆಡಳಿತದ ವಿಭಾಗಗಳು ತಮ್ಮ ಒಡಾಳಿತದಲ್ಲಿ ಪೂರ್ಣ ಸ್ವತಂತ್ರ ಉಳಿದು ಕೇಂದ್ರ ಶಾಸನಸಭೆ ಮತ್ತು ಆಡಳಿತ ವರ್ಗಗಳ ರಚನೆ ಮತ್ತು ಕಾರ್ಯ ನಿರ್ವಹಣೆಗಾಗಿ ಸಹಕಾರದಿಂದ ಒಪ್ಪಿ ಏರ್ಪಡಿಸಿದ ಸಂಸ್ಥೆಗಳಲ್ಲಿ ಎಲ್ಲ ಸಂಸ್ಥಾನಗಳೂ ಸೇರಬೇಕು ಮತ್ತು ಸೇರುತ್ತವೆ ಎಂದು ನನ್ನ ಅಭಿಪ್ರಾಯ. ಆ ಸಂಸ್ಥೆಗಳು ಭಾರತದ ಒಳಗಡೆ ಮತ್ತು ಹೊರಗೆ ರಾಷ್ಟ್ರ ಅಂಗಾಂಗಗಳಾಗಿ, ಪ್ರತಿನಿಧಿ ಸಂಸ್ಥೆಗಳಾಗಿ ಯಶಸ್ವಿಯಾಗಿ ಕೆಲಸಮಾಡಲು ಸಾಧ್ಯವಿದೆ. ಭಾರತದ ಒಳಗೆ ಪ್ರತಿಯೊಂದು ವಿಭಾಗ ಸಮಾನ ಅಧಿಕಾರ ಇರಬೇಕು, ಒಂದರ ಮೇಲೆ ಇನ್ನೊಂದರ ಪರಮಾಧಿಕಾರ ಇರಬಾರದು, ಕೇಂದ್ರವ ಆವಶಿಷ್ಟ ಮತ್ತು ಇತರರ ಹಕ್ಕುಗಳನ್ನು ಭದ್ರವಾಗಿ ಸ್ಥಾಪಿಸಿ ಪಾಲಿಸಬೇಕು ” ಎಂದು ಹೇಳಿದ್ದಾರೆ. ಪುನಃ “ ಕೌಲು ಕರಾರಿನ ಹಕ್ಕುಗಳು ಇರಲಿ, ಇಲ್ಲದಿರಲಿ, ದೇಶೀಯ ಸಂಸ್ಥಾನಗಳು ಮತ್ತು ಬ್ರಿಟಿಷ್ ಭಾರತ ಎರಡಕ್ಕೂ ಸಂಬಂಧಿಸಿದ ವಿಷಯ ಗಳಲ್ಲಿ ಕೇಂದ್ರದ ಸಲಹೆ ಮತ್ತು ಕೇಂದ್ರದ ಆಡಳಿತಕ್ಕೆ ಒಳಪಡದೆ, ಭಾರತದ ರಾಜ್ಯಾಡಳಿತಕ್ಕಾಗಿ ಒಪ್ಪಿದ ರಾಜಕೀಯ ವ್ಯವಸ್ಥೆಗೆ ದೃಢನಿಷ್ಠ ತೋರಿಸದ, ಸ್ವಾತಂತ್ರ ಮತ್ತು ಸಮಾನತೆಯಿಂದ ಚರ್ಚೆಮಾಡಿ, ರಾಜಿಯಿಂದ ಒಪ್ಪಿದ ವಿಧಾನ ಪರಿಪಾಲಿಸದ ಯಾವ ಸಂಸ್ಥಾನಕ್ಕೂ ಭಾರತದಲ್ಲಿ ಸ್ಥಾನವಿಲ್ಲ, ಈ ನನ್ನ ಹೇಳಿಕೆಗೆ ಸ್ವಲ್ಪ ವಿರೋಧ ಬಂದರೂ ಜನರ ಹಿತ ಸಾಧನೆಯಲ್ಲಿ ಬ್ರಿಟಿಷ್ ಭಾರತಕ್ಕಿಂತ ಮುಂದೆ ಇರದಿದ್ದರೂ ಸರಿಸಮಾನ ಆದರೂ ಇರದ ಯಾವ ದೇಶೀಯ ಸಂಸ್ಥಾನಕ್ಕೂ ಸ್ಥಾನವಿಲ್ಲವೆಂದು ಘಂಟಾಘೋಪ ಹೇಳುತ್ತೇನೆ ಎಂದಿದ್ದಾರೆ, - ರಾಮಸ್ವಾಮಿ ಅಯ್ಯರ್ ೩೦೧ ಸಂಸ್ಥಾನಗಳನ್ನೂ ಸಮಾನ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಈ ೩೦೧ ಸಂಸ್ಥಾನಗಳು ೧೫-೨೦ ದೊಡ್ಡ ಸಂಸ್ಥಾನಗಳಾಗಿ ಒಟ್ಟುಗೂಡಬೇಕೆಂದೂ ಉಳಿದವು ದೊಡ್ಡ ಸಂಸ್ಥಾನಗಳಲ್ಲೊ, ಪ್ರಾಂತಗಳಲ್ಲೊ, ಸೇರಬೇಕೆಂದೂ ಹೇಳಿದಾರೆ, ಸಂಸ್ಥಾನಗಳ ಒಳಗಿನ ರಾಜಕೀಯ ಪ್ರಗತಿಗೆ ರಾಮಸ್ವಾಮಿ ಅಯ್ಯರ್ ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ. ಅಥವ ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ. ಆದರೆ ಸಂಸ್ಥಾನಗಳಲ್ಲಿ ಮುಖ್ಯವಾಗಿ ಇತರ ವಿಷಯಗಳಲ್ಲಿ ಮುಂದುವರಿದ ಸಂಸ್ಥಾನಗಳಲ್ಲಿ ಆ ರಾಜಕೀಯ ಪ್ರಗತಿ ಇಲ್ಲ ದಿದ್ದರೆ ಜನರಿಗೂ ಸಂಸ್ಥಾನಗಳ ಅಧಿಕಾರವರ್ಗಕ್ಕೂ ಹೋರಾಟ ತಪ್ಪಿದ್ದಲ್ಲ.