ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೮೦
ಭಾರತ ದರ್ಶನ

ವಿಭಜನೆಯ ಆರ್ಥಿಕ ಸಮಸ್ಯೆ ಯೋಚಿಸಿದರೆ ಅಖಂಡ ಭಾರತ ಬಲಿಷ್ಟವೂ ಸ್ವಯಂ ಸಂಪೂರ್ಣವೂ ಆದ ಆರ್ಥಿಕ ಪ್ರದೇಶವಾಗಿದೆ. ಅದನ್ನು ವಿಭಜಿಸುವುದೆಂದರೆ ಅದರ ಶಕ್ತಿಯನ್ನು ಮುರಿದಂತೆ ಒಂದು ಭಾಗ ಇನ್ನೊಂದನ್ನು ಅವಲಂಬಿಸಬೇಕಾಗುತ್ತದೆ. ಹಿಂದೂ ಮುಸ್ಲಿಂ ಪ್ರದೇಶಗಳೆಂದು ವಿಭಜಿಸುವುದಾದರೆ ಖನಿಜ ಸಂಪತ್ತು, ಕೈಗಾರಿಕೋದ್ಯಮಗಳು ಎಲ್ಲ ಒಂದು ಕಡೆ ಬರುತ್ತವೆ. ಈ ದೃಷ್ಟಿಯಿಂದ ಹಿಂದೂ ವಿಭಾಗಗಗಳಿಗೆ ಅಷ್ಟು ತೊಂದರೆಯಾಗುವುದಿಲ್ಲ. ಆದರೆ ಮುಸ್ಲಿಂ ವಿಭಾಗಗಳು ಆರ್ಥಿಕ ದೃಷ್ಟಿಯಿಂದ ಹಿಂದೆಬಿದ್ದು ಪರರ ನೆರವಿಗೆ ಕೈಯೊಡ್ಡುವ ಕೊರತೆಯ ಭಾಗಗಳಾಗುತ್ತವೆ. ಯಾರು ಈಗ ವಿಭಜನೆ ಅಪೇಕ್ಷೆ ಸುತ್ತಿದ್ದಾರೋ ಅವರೇ ನಾಳೆ ಸಂಕಟಕ್ಕೀಡಾಗುತ್ತಾರೆ. ಇದು ಸ್ವಲ್ಪ ತಲೆಗೆ ಹೊಳೆದು, ಈಗ ಆರ್ಥಿಕ ಸಮತೋಲನೆ ಇರುವಂತೆ ವಿಭಜನೆಯಾಗಬೇಕೆಂದು ಕೇಳುತ್ತಿದ್ದಾರೆ. ಇದು ಸಾಧ್ಯವೆ ನನಗೆ ತಿಳಿಯದು; ಅನುಮಾನ ಹಾಗೆ ಆಗಬೇಕೆಂದರೆ ಹಿಂದೂ ಮತ್ತು ಸೀಖ ಬಹು ಸಂಖ್ಯಾತರ ಭಾಗಗಳನ್ನು ಬಲಾತ್ಕಾರವಾಗಿ ಮುಸ್ಲಿಂ ಭಾಗಕ್ಕೆ ಸೇರಿಸಬೇಕು. ಅಂದರೆ ಸ್ವಯಂ ನಿರ್ಣಯ ತತ್ವಕ್ಕೆ ತಿಲಾಂಜಲಿ ಕೊಟ್ಟಂತೆ, ತಾನೆ ತಂದೆ ತಾಯಿ ಕೊಂದು ಅನಾಥನೆಂದು ನ್ಯಾಯಾಸ್ಥಾನ ಮರೆಹೊಕ್ಕ ಮೂರ್ಖನ ಕಥೆ ಜ್ಞಾಪಕಕ್ಕೆ ಬರುತ್ತದೆ.

ಇನ್ನೊಂದು ವಿಚಿತ್ರ ವಿರೋಧ ಪರಿಸ್ಥಿತಿ ಎಂದರೆ ಸ್ವಯಂ ನಿರ್ಣಯಾಧಿಕಾರ ಎಂದು ಕೂಗುತ್ತಿದ್ದರೂ ಜನ ಮತಗಣನೆಗೆ ಒಪ್ಪುತ್ತಿಲ್ಲ; ಒಪ್ಪಿದರೆ ಮುಸ್ಲಿಮರ ಮತ ಮಾತ್ರ ಕೇಳಬೇಕಂತೆ. ಬಂಗಾಳ ಮತ್ತು ಪಂಜಾಬ್ಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡ ೫೪% ಅಥವ ಇನ್ನೂ ಕಡಮೆ. ಈ ೫೪% ರಷ್ಟು ಜನ ಮಾತ್ರ ಮತಕೊಟ್ಟು ಉಳಿದ ೪೬% ರಷ್ಟು ಜನರ ಯಾವ ಅಭಿಪ್ರಾಯ ಕೇಳದೆ ಅವರ ಭವಿಷ್ಯ ನಿರ್ಧರಿಸಬೇಕಂತೆ ! ೨೮% ಜನರು ಉಳಿದ ೨೭% ಜನರ ಅದೃಷ್ಟ ನಿರ್ಧರಿಸಬಹುದು !

ಒಪ್ಪಿಗೆ ದೊರೆಯುತ್ತೆಂದು ಭಾವಿಸಿ ಈ ವಾದ ಮುಂದಿಡುವ ಧೈರ್ಯ ಸ್ವಲ್ಪ ವಿವೇಕ ಇದ್ದವರು ಮಾಡತಕ್ಕುದಲ್ಲ ಮತ ತೆಗೆದುಕೊಳ್ಳುವವರೆಗೆ ಸಂಬಂಧಪಟ್ಟ ಪ್ರದೇಶಗಳ ಮುಸ್ಲಿಮರು ಎಷ್ಟು ಜನ ವಿಭಜನೆಗೆ ಮತ ಕೊಡುತ್ತಾರೆ ಎಂದು ನಾನು ನಿರ್ಧರ ಹೇಳಲಾರೆ. ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಅನೇಕ ಮುಸ್ಲಿಂ ಸಂಸ್ಥೆಗಳು ಅದಕ್ಕೆ ವಿರುದ್ಧ ಇವೆ. ಮುಸ್ಲಿಮೇತರರು ಹಿಂದೂ, ಸೀಖ, ಪಾರ್ಶಿ, ಕ್ರಿಶ್ಚಿಯನ್ ಯಾರೇ ಇರಲಿ ಅದನ್ನು ವಿರೋಧಿಸಿದಾರೆ. ಮುಂದೆ ಭಾರತದಲ್ಲೇ ಉಳಿಯಬೇಕಾದ ಭಾಗಗಳ ಅಲ್ಪ ಸಂಖ್ಯಾತ ಮುಸ್ಲಿಮರಲ್ಲಿ ಮಾತ್ರ ಈ ವಿಭಜನೆಯ ಭಾವನೆ ಹೆಚ್ಚು ಬೆಳೆದಿರುವುದು. ಮುಸ್ಲಿ ಮರೇ ಬಹು ಸಂಖ್ಯಾತರಾಗಿರುವ ಪ್ರಾಂತಗಳ ಮುಸ್ಲಿಮರಿಗೆ ಅದು ಬೇಕಿಲ್ಲ; ಅದು ಸ್ವಾಭಾವಿಕವೂ ಇದೆ. ಅವರು ತಮ್ಮ ಕಾಲ ಮೇಲೆ ತಾವು ನಿಲ್ಲಬಲ್ಲರು; ಇತರ ಪಂಗಡಗಳ ಭಯ ಅವರಿಗಿಲ್ಲ. ಶೇಕಡ ೯೫% ರಷ್ಟು ಮುಸ್ಲಿಮರೇ ಇರುವ ವಾಯವ್ಯ ಪ್ರಾಂತ್ಯದ ಧೀರ, ಆತ್ಮಾವಲಂಬಿ ಪಠಾಣರಿಗೆ ಇದು ಬೇಕಿಲ್ಲ. ಅವರಿಗೆ ಭಯವೆಂಬುದೇ ತಿಳಿಯದು. ಈ ರೀತಿ ಮುಸ್ಲಿಂ ಲೀಗಿನ ವಿಭಜನೆಯ ಸಲಹೆಗೆ ಮುಸ್ಲಿಮರು ಬಹು ಸಂಖ್ಯಾಕರಿರುವ ಪ್ರಾಂತಗಳಿಗಿಂತ ಹೆಚ್ಚಾಗಿ ಮುಸ್ಲಿಮರು ಅಲ್ಪ ಸಂಖ್ಯಾತರಿರುವ ಪ್ರದೇಶಗಳಲ್ಲೇ ಬೆಂಬಲ ಹೆಚ್ಚು ಆದರೂ ಅನೇಕ ಮುಸ್ಲಿಮರು ಈ ಪ್ರಶ್ನೆಯ ಲಾಭಾಲಾಭ ಯೋಚಿಸದೆ ಈ ವಿಭಜನೆಯ ಭಾವನೆಗೆ ಮನ ಸೋತಿದ್ದಾರೆ. ಆ ಭಾವನೆಯೇ ಇನ್ನೂ ಅಸ್ಪಷ್ಟ ಕಲ್ಪನಾ ಪ್ರಪಂಚದಲ್ಲಿಯೇ ಇದೆ. ವಿವರ ತಿಳಿಸಲು ಎಷ್ಟು ಕೇಳಿದಾಗ್ಯೂ ಇನ್ನೂ ತಿಳಿಸಿಲ್ಲ.

ಅದೊಂದು ಕೃತಕ ಕಲ್ಪನೆ; ಮುಸ್ಲಿಂ ಮನಸ್ಸಿನಲ್ಲಿ ಅದು ನಾಟಿಲ್ಲವೆಂದು ನನ್ನ ಭಾವನೆ. ಆದರೆ ತಾತ್ಕಾಲಿಕ ಭಾವನೆಯಾದರೂ ಮುಂದೆ ಮಹತ್ಪರಿಣಾಮಮಾಡಿ ಹೊಸ ಪರಿಸ್ಥಿತಿಯನ್ನೇ ತಂದೊಡ್ಡಬಹುದು. ಸಾಮಾನ್ಯವಾಗಿ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕಾಗುತ್ತದೆ; ಆದರೆ ಅಧಿಕಾರವೆಲ್ಲ ವಿದೇಶೀಯರ ಕೈಲಿ ಕೇಂದ್ರೀಕೃತವಾಗಿರುವ ಇಂದಿನ ಭಾರತದ ವಿಚಿತ್ರ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು. ನಿಜವಾದ ಒಪ್ಪಂದ ಏನೇ ಆಗಲಿ ಅದು ಸಂಬಂಧಪಟ್ಟವರೆಲ್ಲರ ಪರಸ್ಪರ ಸೌಹಾರ್ದದಿಂದ, ಮತ್ತು ಸರ್ವರ ಹಿತಕ್ಕಾಗಿ ಎಲ್ಲ ಪಕ್ಷಗಳೂ ಸಹಕರಿಸಬೇಕೆಂಬ ಪ್ರೇರಣೆಯಿಂದ ಆಗಬೇಕಾದ್ದು. ಅಂಥ ಧ್ಯೇಯ ಸಾಧನೆಗೆ ಯಾವ ತ್ಯಾಗವಾದರೂ ಅಲ್ಪ. ಪ್ರತಿಯೊಂದು ಪಂಗಡಕ್ಕೂ ತತ್ವಶಃ ಮತ್ತು