ಪುಟ:ಭಾರತ ದರ್ಶನ.djvu/೫೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುನಃ ಅಹಮದ್ ನಗರದ ಕೋಟೆಯಲ್ಲಿ de, ಸ್ವಾತಂತ್ರ್ಯ ಮತ್ತು ಪ್ರಯತ್ನಕ್ಕೆ ಧಕ್ಕೆ ಮಾಡದಂತೆ ಕೇಂದ್ರಿಕೃತ ಸಮಾಜ ವ್ಯವಸ್ಥೆಯನ್ನೂ, ಜನರ ಆರ್ಥಿಕ ಜೀವನದ ಯೋಜನೆಯನ್ನೂ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳಿ ಸುವುದೆಂತು ? ೧೩. ಸ್ವಾತಂತ್ರ್ಯ ಮತ್ತು ಸಾಮ್ರಾಜ್ಯ ಭವಿಷ್ಯದಲ್ಲಿ ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಸೋವಿಯಟ್ ರಷ್ಯ ಪ್ರಮುಖ ಪಾತ್ರ ವಹಿಸುವುದು ಅನಿವಾಯ್ಯ ತೋರುತ್ತದೆ. ಎರಡು ಪ್ರಗತಿಪರ ರಾಷ್ಟ್ರಗಳ ಮಧ್ಯೆ ಎಷ್ಟು ವ್ಯತ್ಯಾಸವಿರ ಬಹುದೋ ಅಷ್ಟೂ ವ್ಯತ್ಯಾಸ ಇವೆರಡಕ್ಕೂ ಇವೆ. ಅವುಗಳ ತಪ್ಪುಗಳು ಸಹ ಬೇರೆ ಬೇರೆ ದಾರಿಯಲ್ಲಿ ಕೇವಲ ರಾಜಕೀಯ ಪ್ರಜಾಸತ್ತೆಯ ದೋಷಗಳೆಲ್ಲ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿವೆ. ರಾಜ ಕೀಯ ಪ್ರಜಾಸತ್ತೆಯ ಅಭಾವದ ದೋಷಗಳೆಲ್ಲ ಸೋವಿಯಟ್ ರಷ್ಯದಲ್ಲಿದೆ. ಆದರೆ ಸಮಾನ ಸನ್ನಿವೇಶ ಗಳೂ ಅನೇಕ ಇವೆ-ಕಾರ್ಯಶೀಲ ದೃಷ್ಟಿ, ಅಪಾರ ಪ್ರಕೃತಿ ಸಂಪತ್ತು, ಸಾಮಾಜಿಕ ನಮ್ರತೆ, ಪ್ರಾಚೀನ ಯುಗದ ಹಿನ್ನೆಲೆಯ ಅಭಾವ, ವಿಜ್ಞಾನ ಮತ್ತು ಅದರ ಪ್ರಯೋಗದಲ್ಲಿ ದೃಢ ವಿಶ್ವಾಸ, ಸಾರ್ವಜನಿಕ ವಿದ್ಯಾಪ್ರಸಾರ ಮತ್ತು ಅವಕಾಶ, ಅಮೆರಿಕ ಜನರ ವರಮಾನದಲ್ಲಿ ಅಪಾರ ಅಂತರವಿದ್ದರೂ ಇತರ ದೇಶ ಗಳಂತೆ ಕಟ್ಟುನಿಟ್ಟಾದ ಪಂಗಡಗಳಿಲ್ಲ ಒಂದು ಬಗೆಯ ಸಮಾನತೆ ಇದೆ. ಕಳೆದ ಇಪ್ಪತ್ತು ವರ್ಷಗಳ ಮಹತ್ಸಾಧನೆ ಎಂದರೆ ಜನ ಸಾಮಾನ್ಯರ ವಿದ್ಯೆ ಮತ್ತು ಸಂಸ್ಕೃತಿಯ ಅದ್ಭುತ ಪ್ರಗತಿ. ಆದ್ದರಿಂದ ಈ ಎರಡು ದೇಶಗಳಲ್ಲೂ ಪ್ರಗತಿಪರ ಪ್ರಜಾಸತ್ತಾತ್ಮಕ ಸಮಾಜಕ್ಕೆ ಅವಶ್ಯವಾದ ತಳಹದಿ ಇದೆ ; ಅದಿರದೆ ಜ್ಞಾನಾಂಧ ನಿರುತ್ಸಾಹಿ ಜನರ ಮೇಲೆ ಸಣ್ಣ ವಿದ್ಯಾವಂತರ ಗುಂಪು ಒಂದು ರಾಜ್ಯಭಾರ ಮಾಡುತ್ತಿದ್ದರೆ ಸಮಾಜರಚನೆ ಸಾಧ್ಯವಾಗುತ್ತಿರಲಿಲ್ಲ; ಅಲ್ಲದೆ ವಿದ್ಯೆ ಮತ್ತು ಸಂಸ್ಕೃತಿಯಲ್ಲಿ ಮುಂದುವರಿದ ಜನರ ಮೇಲೆ ಅಂತಹ ಒಂದು ಸಂಗಡ ಬಹು ಕಾಲ ಅಧಿಕಾರ ನಡೆಸಲು ಸಹ ಸಾಧ್ಯವಿಲ್ಲ. ಒಂದು ನೂರು ವರ್ಷಗಳ ಹಿಂದೆ ಅಂದಿನ ಅಮೆರಿಕನರ ವಿಚಾರ ಬರೆಯುತ್ತ “ ಪ್ರಜಾಸತ್ತೆಯ ದೃಷ್ಟಿಯು ಒಂದು ಕಡೆ ವಿಜ್ಞಾನಕ್ಕಾಗಿ ವಿಜ್ಞಾನ” ಎಂಬ ಜನರನ್ನು ಪ್ರೋತ್ಸಾಹಿಸದಿದ್ದರೆ ಇನ್ನೊಂದೆಡೆ ಅದರ ಪೂಜಾರರ ಸಂಖ್ಯೆ ಬೆಳೆಯುತ್ತಲೇ ಇರುತ್ತದೆ. ಜೀವನ ಸ್ಥಿತಿಯಲ್ಲಿ ಅಸಮಾನತೆಯೇ ಶಾಶ್ವತ ವಾದರೆ ಜನರಲ್ಲಿ ನಿರುಪಯುಕ್ತ ಸ್ವಾಭಿಮಾನದ ತಾತ್ವಿಕ ವಿಷಯ ಸಂಶೋಧನೆಗಳೇ ಹೆಚ್ಚುತ್ತವೆ. ಆದರೆ ಪ್ರಜಾಸತ್ತಾತ್ಮಕ ಸಾಮಾಜಿಕ ಮತ್ತು ಸಂಸ್ಥೆಗಳಲ್ಲಿ ಪ್ರಸ್ತುತ ಜೀವನಕ್ಕೆ ಉಪಯುಕ್ತ ಫಲಿತಾಂಶದ ಕಡೆ ಸಂಶೋಧನೆಯ ದೃಷ್ಟಿ ಹೋಗುತ್ತದೆ, ಈ ಪ್ರವೃತ್ತಿ ಸ್ವಾಭಾವಿಕ ಮತ್ತು ಅನಿವಾರ್ಯ ಎಂದು ತೂಕ ನಿಲ್ ಹೇಳಿದ್ದಾನೆ. ಅಂದಿನಿಂದ ಅಮೆರಿಕ ಪ್ರಗತಿ ಸಾಧಿಸಿ, ಪರಿವರ್ತನೆಗೊಂಡು, ಅನೇಕ ಜನಾಂಗಗಳ ಸಂಮಿಶ್ರಣವಾಗಿದೆ, ಆದರೆ ಅದರ ಮೂಲ ಗುಣ ಮಾತ್ರ ಕಳೆದುಕೊಂಡಿಲ್ಲ. ಅಮೆರಿಕನರ ಮತ್ತು ರಷ್ಯನರ ಇನ್ನೊಂದು ಮುಖ್ಯ ಗುಣ ಏಷ್ಯ ಮತ್ತು ಯೂರೋಪುಗಳ ಜನರಂತೆ, ಅವರ ಕಾರ್ಯ ಚಟುವಟಿಕೆ ಮತ್ತು ಹೋರಾಟಗಳನ್ನೂ ಮಿತಿಗೊಳಿಸುವ ಪ್ರಾಚೀನತೆಯ ಹೊರೆ ಅವ ರನ್ನು ಬಾಧಿಸುತ್ತಿಲ್ಲ. ಇಂದಿನ ಪೀಳಿಗೆಯ ಘೋರ ಭಾರವನ್ನು ನಮ್ಮಲ್ಲಿಯಂತೆ ಅವರೂ ಅನುಭವಿಸಲೇ ಬೇಕು. ಆದರೆ ಇತರರೊಂದಿಗೆ ಅವರ ಪೂರ್ವ ಸಂಬಂಧ ಶುಭ್ರವಿದೆ ; ಭವಿಷ್ಯ ಸಾಧನೆಯ ಮಾರ್ಗದಲ್ಲಿ ಯಾವ ಬಂಧನಕ್ಕೂ ಅವರು ಸೆರೆಯಾಗಿಲ್ಲ. - ಇದರಿಂದ ಇವರಿಗೆ ಒಂದು ದೊಡ್ಡ ಅನುಕೂಲವಿದೆ. ಹಳೆಯ ಬೇರುಬಿಟ್ಟ ಸಾಮ್ರಾಜ್ಯ ರಾಷ್ಟ್ರಗಳು ಇತರರೊಂದಿಗೆ ವ್ಯವಹರಿಸುವಾಗ ಹುಟ್ಟುವ ಪರಸ್ಪರ ಸಂಶಯಗಳ ಹಿನ್ನೆಲೆ ಯಾವುದೂ ಇಲ್ಲದೆ ಇವರು ಇತರ ರಾಷ್ಟ್ರಗಳೊಂದಿಗೆ ವ್ಯವಹರಿಸಬಹುದು. ಅವರ ಪೂರ್ವೇತಿಹಾಸದಲ್ಲಿ ಪರಿಶುದ್ದವಿದೆ. ಕಳಂಕ, ಕಲ್ಮಲ, ಸಂಶಯ ಇಲ್ಲವೆಂದಲ್ಲಅಮೆರಿಕನರ ನೀಗೋ ಪ್ರಶ್ನೆ ಅವರ ಪ್ರಜಾಸತ್ತೆಯ ಮತ್ತು ಸಮಾನ ತೆಯ ಸೋಗಿಗೆ ಒಂದು ದೊಡ್ಡ ಕಳಂಕ, ಪೂರ್ವ ಯೂರೋಪಿನಲ್ಲಿ ರಷ್ಯನರ ಹಳೆಯ ದ್ವೇಷಾಸೂಯೆಗಳು ಇನ್ನೂ ಅಳಿಸಿಲ್ಲ ; ಇಂದಿನ ಯುದ್ದ ಅದನ್ನೂ ಇನ್ನೂ ಹೆಚ್ಚಿಸುತ್ತಿದೆ. ಅದರೂ ಇತರ ರಾಷ್ಟ್ರಗಳೊಂದಿಗೆ ಅಮೆರಿಕನರು ಸ್ನೇಹ ಬೆಳೆಸುತ್ತಲಿದ್ದಾರೆ ; ರಷ್ಯನರಲ್ಲಿ ಯಾವ ಬಗೆಯ ಜನಾಂಗ ವೈರವೂ ಇರುವುದಿಲ್ಲ.