ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತ ದರ್ಶನ ಇತರರ ಬಾಳನ್ನು ನಾಶಮಾಡಿ ಅವರ ಮೇಲೆ ಅಧಿಕಾರ ನ ಡ ಸ ಲಿ ಕಲ್ಲ, ವಿಶ್ವ ಸಹಕಾರದ ಎಲ್ಲ ಪ್ರಯತ್ನಗಳಿಗೆ, ವಿಶ್ವದಲ್ಲಿ ಒಂದು ಅಂತರ ರಾಷ್ಟ್ರೀಯ ವ್ಯವಸ್ಥೆ ಏರ್ಪಡಲೆಂಬ ಸಲಹೆಗೆ ಅವರ ಸ್ವಾಗತವಿದೆ ; ಆದರೆ ಹಿಂದಿನ ಆಕ್ರಮಣ ನೀತಿ ಮುಂದುವರಿಸಲು ಅದು ಒಂದು ಉಪಾ ಯವೇ ಎಂದು ಸಂಶಯ ಮತ್ತು ವಿಸ್ಮಯದಿಂದ ಅದನ್ನು ನೋಡುತ್ತಿದ್ದಾರೆ. ಏಷ್ಯ ಮತ್ತು ಆಫ್ರಿಕದ ಬಹು ಭಾಗದಲ್ಲಿ ಜನ ಎಚ್ಚತ್ತು, ಇಂದಿನ ಅಸಹ್ಯ ಪರಿಸ್ಥಿತಿಯನ್ನು ಒಂದು ನಿಮಿಷವೂ ಸಹಿಸ ಲಾರದೆಂದು ಅಸಮಾಧಾನದಿಂದ ಕುದಿಯುತ್ತಿದಾರೆ. ಏಷ್ಯದ ಬೇರೆ ಬೇರೆ ದೇಶಗಳಲ್ಲಿ ಜೀವನ ರೀತಿ ಮತ್ತು ಸಮಸ್ಯೆಗಳು ಭಿನ್ನ ಭಿನ್ನ ಇವೆ, ನಿಜ; ಆದರೆ ಯಾವುದೋ ಒಂದು ಅವ್ಯಕ್ತ ಶಕ್ತಿಯು ಚೀಣ, ಭಾರತ, ಆಸ್ಟ್ರೇಯ ಏಷ್ಯ, ಪಶ್ಚಿಮ ಏಷ್ಯ, ಅರಬ್ಬಿ ಪ್ರಪಂಚ ಈ ಎಲ್ಲ ಕಡೆ ಜನರಲ್ಲಿ ಒಂದೇ ಭಾವನೆ ತುಂಬಿ ಒಂದು ಬಾಂಧವ್ಯ ಕಲ್ಪಿಸಿ ಜನರನ್ನು ಒಟ್ಟುಗೂಡಿಸಿದೆ. ಯೂರೋಪ್ ಅಜ್ಞಾನಾಂಧಕಾರದಲ್ಲಿ ಮುಳುಗಿ ಹಿಂದೆ ಬಿದ್ದಾಗ, ಸಾವಿರಾರು ವರ್ಷಗಳ ಕಾಲ ಏಷ್ಯ ಮಾನವನ ಪ್ರಗತಿ ಶೀಲ ಮನೋಭಾವದ ಪ್ರತಿನಿಧಿಯಾಗಿತ್ತು. ಒಂದರ ಮೇಲೊಂದು ದಿವ್ಯ ಸಂಸ್ಕೃತಿಗಳ ಯುಗ ಯುಗಗಳಾಗಿ, ಮಹಾ ನಾಗರಿಕತೆ ಮತ್ತು ಶಕ್ತಿ ಕೇಂದ್ರಗಳಿಗೆ ಜನ್ಮಸ್ಥಾನವಾಯಿತು. ಸುಮಾರು ಐದು ನೂರು ವರ್ಷಗಳ ಹಿಂದೆ ಯೂರೋಪು ಚೇತನಗೊಂಡು, ಪೂರ್ವಕ್ಕೂ ಪಶ್ಚಿಮಕ್ಕೂ ತನ್ನ ಪ್ರತಿಭೆ ಹರಡಿ ಕೆಲವೇ ಶತಮಾನಗಳಲ್ಲಿ ಪ್ರಪಂಚದ ಶಕ್ತಿ, ಸಂಪತ್ತು ಮತ್ತು ಸಂಸ್ಕೃತಿಗಳಲ್ಲಿ ಮುಂದಾಳು ತನ ವಹಿಸಿತು. ಕಾಲಚಕ್ರ ಪರಿವರ್ತನೆಯಾಯಿತೆ ? ಪುನಃ ಈ ಪರಿಸ್ಥಿತಿ ವ್ಯತ್ಯಾಸಗೊಳ್ಳುವುದೆ ? ನಿಶ್ಚಯ ನೋಡಿದರೆ ಶಕ್ತಿ ಮತ್ತು ಅಧಿಕಾರ ಎರಡೂ ಈಗ ದೂರ ಪಾಶ್ಚಾತ್ಯದ ಅಮೆರಿಕೆಗೂ ಮತ್ತು ಎಂದೂ ಯೂರೋಪ್ ಸಂಸ್ಕೃತಿಯ ಅಂಗವಲ್ಲದ ಪ್ರಾಚ್ಯ ಯೂರೋಪಿಗೂ ಹೋಗಿದೆ. ಪೂರ್ವದ ಸೈಬೀರಿಯಾದಲ್ಲಿ ಸಹ ಮಹತ್ವ ಪರಿವರ್ತನೆಗಳಾಗಿವೆ, ಮತ್ತು ಇತರ ಪ್ರಾಚ್ಯ ದೇಶಗಳು ಸಹ ಪರಿವರ್ತನೆ ಗೊಂಡು ಪ್ರಗತಿ ಪಥದಲ್ಲಿ ಓಡುತ್ತಿವೆ. ಭವಿಷ್ಯದಲ್ಲಿ ಪೂರ್ವ ಪಶ್ಚಿಮಗಳೆರಡಕ್ಕೂ ಘರ್ಷಣೆ ಕಾದಿದೆಯೋ ಅಥವ ಒಂದು ಬಗೆಯ ಸಮತೂಕವೋ ? ನೋಡಬೇಕು. ಆ ಭವಿಷ್ಯವು ಇನ್ನೂ ಬಹುದೂರವಿದೆ ; ಅದರ ಚರ್ಚೆ ಇಂದು ಅಪ್ರಕೃತ, ಇಂದಿನ ಹೊರೆ ಹೊತ್ತು ಎದುರುನಿಂತ ಸಮಸ್ಯೆಗಳನ್ನು ಬಿಡಿಸಿಕೊಂಡರೆ ಸಾಕು. ಇತರ ದೇಶಗಳಂತೆ ಭಾರತದಲ್ಲಿ ಸಹ ಈ ಎಲ್ಲ ಸಮಸ್ಯೆಗಳ ಹಿಂದೆ, ಹತ್ತೊಂಭತ್ತನೆಯ ಶತಮಾನದ ಯೂರೋಪಿನಂತೆ ಇಲ್ಲಿ ಸಹ ಪ್ರಜಾ ಸರಕಾರ ಸ್ಥಾಪನೆ ಮತ್ತು ಮಹತ್ತರ ಸಾಮಾಜಿಕ ಕ್ರಾಂತಿ ಮೊದಲು ಆಗಬೇಕಾಗಿದೆ. ಅನಿವಾರ್ಯವೆನಿಸುವ ಈ ಪರಿವರ್ತನೆಯ ದವಡೆಯಲ್ಲಿ ಪ್ರಜಾಸತ್ತೆಯೂ ಸಿಕ್ಕಿಕೊಂಡಿದೆ ; ಆದ್ದರಿಂದ ಪರಿವರ್ತನೆ ಬೇಡವೆನ್ನುವ ವರಿಗೆ ಪ್ರಜಾಸತ್ತೆಯ ಉಪಯುಕ್ತತೆಯಲ್ಲಿ ಸಂಶಯ ಮತ್ತು ನಿರಾಕರಣ ಭಾವನೆ ಹುಟ್ಟಿದೆ; ಅದರ ಪರಿ ಣಾಮವಾಗಿ ಫಾಸಿಸ್ಟ್ ಮನೋಭಾವವೂ, ಸಾಮ್ರಾಜ್ಯ ದೃಷ್ಟಿಯೂ ಬಲಗೊಳ್ಳುತ್ತಿವೆ. ಭಾರತದ ನಮ್ಮ ಇಂದಿನ ಸಮಸ್ಯೆಗಳೆಲ್ಲ ಕೋಮುವಾರು ಅಥವ ಅಲ್ಪಸಂಖ್ಯಾತರ ಪ್ರಶ್ನೆ, ಭಾರತೀಯ ರಾಜರುಗಳು, ಮತ ಪಂಗಡಗಳ ವಿಶಿಷ್ಟ ಹಕ್ಕುಗಳು, ದೊಡ್ಡ ಜಾನುದಾರರು, ಭಾರತದಲ್ಲಿ ಬೇರುಬಿಟ್ಟು ಕೊಂಡಿರುವ ಬ್ರಿಟಿಷ್ ಅಧಿಕಾರ ಮತ್ತು ಕೈಗಾರಿಕೆಗಳು-ಎಲ್ಲ ಅಂತ್ಯದಲ್ಲಿ ಸಾಮಾಜಿಕ ಪರಿವರ್ತನೆಗೆ ವಿರುದ್ದ ಇವ. ನಿಜವಾದ ಪ್ರಜಾರಾಜ್ಯ ಸ್ಥಾಪನೆಯಾದರೆ ಪರಿವರ್ತನೆ ಅನಿವಾರವೆಂದು ಅರಿತು ಪ್ರಜಾರಾಜ್ಯವು ಭಾರ ತದ ಪರಿಸ್ಥಿತಿಗೆ ಸರಿ ಹೋಗುವುದಿಲ್ಲವೆಂದು ಪ್ರಜಾಸತ್ತೆಯನ್ನೇ ವಿರೋಧಿಸುತ್ತಿದಾರೆ. ಆದ್ದರಿಂದ ಮೇಲೆ ಅನೇಕ ವ್ಯತ್ಯಾಸ ಮತ್ತು ಭಿನ್ನತೆ ಕಂಡರೂ ಯುದ್ಧದಿಂದ ಮೇಲೆ ಎದ್ದ ಚೀನ, ಸ್ಪೇನ್, ಅಥವ ಯೂರೋ ಪಿನ ಇತರ ರಾಷ್ಟ್ರಗಳಂತೆ ಭಾರತದ ಸಮಸ್ಯೆಗಳ ಮೂಲ ಸ್ವಭಾವವೂ ಒಂದೇ ಇದೆ. ಯೂರೋಪ್ ರಾಷ್ಟಗಳ ವಿರೋಧ ಚಳವಳಿಗಳು ಪ್ರತಿಬಿಂಬಿಸುವುದು ಇವೇ ಘರ್ಷಣೆಯನ್ನು, ಪ್ರತಿಯೊಂದು ಕಡೆಯೂ ಹಳೆಯ ಸಾಮಾಜಿಕ ಶಕ್ತಿಗಳ ಸಮತೂಕ ತಪ್ಪಿದೆ. ಹೊಸ ಸಮತೂಕ ಏರ್ಪಡುವವರೆಗೆ ತಿಕ್ಕಾಟ ತೊಂದರೆ ಮತ್ತು ಘರ್ಷಣೆ ಅನಿವಾರ್ಯಗಳ ಈ ತಾತ್ಕಾಲಿಕ ಪ್ರಶ್ನೆಗಳಿಂದ ನಮ್ಮ ಇಂದಿನ ಏಕೈಕ ಮುಖ್ಯ ಪ್ರಶ್ನೆ ಏಳುತ್ತದೆ ಪ್ರಜಾಸತ್ತೆಯನ್ನೂ ಸಮಾಜವಾದವನ್ನೂ ಸರಿಗೂಡಿಸುವುದೆಂತು ? ವೈಯಕ್ತಿ