ಪುಟ:ಭಾರತ ದರ್ಶನ.djvu/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

400 ಭಾರತ ದರ್ಶನ ೧೪. ಜನಸಂಖ್ಯೆಯ ಸಮಸ್ಯೆ ; ಜನನ ಗತಿಯ ಇಳಿಮುಖ : ರಾಷ್ಟ್ರೀಯ ಶೋಷಣೆ, ಈ ಐದುವರ್ಷಗಳ ಯುದ್ದದಿಂದ ಮಾನವ ಇತಿಹಾಸದಲ್ಲಿ ಯಾವ ಕಾಲದಲ್ಲೂ ಆಗದ ದೊಡ್ಡ ಪ್ರಮಾಣದ ಅದ್ಭುತ ಪರಿವರ್ತನೆಗಳೂ ಮತ್ತು ಅಸಂಖ್ಯಾತ ಜನರ ಸ್ಥಾನಾಂತರಗಳೂ ಆಗಿವೆ. ವಿಶೇಷ ವಾಗಿ ಚೀನ, ರಷ್ಯ, ಪೋಲೆಂಡ್, ಜರ್ಮನಿಗಳಲ್ಲಿ ಕೋಟಿಗಟ್ಟಲೆ ಜನರು ಯುದ್ಧದಲ್ಲಿ ಮಡಿದಿರುವುದಲ್ಲದೆ ಅಸಂಖ್ಯಾತ ಜನರು ಮನೆಮಠ ಕಳೆದುಕೊಂಡು ದೇಶಭ್ರಷ್ಠರಾಗಿದ್ದಾರೆ, ಸೈನ್ಯದ ಅವಶ್ಯಕತೆಗಳಿಗೆ ಕೂಲಿ ಗಾರರ ಬೇಡಿಕೆಗಳಿಗೆ, ಬಲಾತ್ಕಾರದ ಸ್ಥಾನಾಂತರಗಳಿಗೆ ಕೊನೆ ಮೊದಲೇ ಇಲ್ಲ. ಆಕ್ರಮಣಕಾರ ಸೈನ್ಯ ಗಳೆದುರು ನಿರಾಶ್ರಿತರ ತಂಡೋಪತಂಡಗಳು ಪಲಾಯನಮಾಡಿವೆ. ಯುರೋಪಿನಲ್ಲಿ ಯುದ್ದಕ್ಕೆ ಪೂರ್ವ ಸಹ ನಾಜಿ ನೀತಿಯ ಪರಿಣಾಮವಾಗಿ ನಿರಾಶ್ರಿತರ ಸಮಸ್ಯೆ ಒಂದು ಬೃಹತ್ಸಮಸ್ಯೆಯಾಗಿತ್ತು. ಆದರೆ ಯುದ್ದ ಪರಿಣಾಮಗಳೆದುರು ಅದೆಲ್ಲ ತೃಣಕ್ಕೆ ಕಡೆಯಾಯಿತು. ಯುದ್ಧದ ಪ್ರತ್ಯಕ ಪರಿಣಾಮಗಳಲ್ಲದೆ ನಾಜಿಗಳು ಉದ್ದೇಶಪೂರ್ವಕ ಅನುಸರಿಸಿದ ಜನಾಂಗದ್ವೇಷ ನೀತಿಯೇ ಯೂರೋಪಿನ ಈ ಪರಿಸ್ಥಿತಿಗೆ ಮುಖ್ಯ ಕಾರಣ, ಲಕ್ಷಗಟ್ಟಲೆ ಯಹೂದ್ಯರನ್ನು ಕೊಲೆಮಾಡಿದರು ; ಅವರು ಆಕ್ರಮಿಸಿದ ರಾಷ್ಟ್ರಗಳ ಜನತೆಯ ಆಯಕಟ್ಟನ್ನೇ ಪುಡಿಪುಡಿಮಾಡಿದರು, ಸೋವಿಯಟ್ ಒಕ್ಕೂಟದಲ್ಲಿ ಯುದ್ಧದಿಂದ ಲಕ್ಷಾಂತರ ಜನರು ಪೂರ್ವಪ್ರಾಂತಗಳಿಗೆ ಹೊರಳಿ ಯೂರಲ್ ಪರ್ವತಗಳ ಆಚೆ ಹೊಸ ವ್ಯವಸಾಯ ಕೇಂದ್ರಸ್ಥಾಪಿಸಿದ್ದಾರೆ ; ಪ್ರಾಯಶಃ ಶಾಶ್ವತ ಅಲ್ಲಿಯೇ ಉಳಿಯಬಹುದು. ಚೀನಾದಲ್ಲಿ ಐದುಕೋಟಿ ಜನರು ಸ್ಥಾನಭ್ರಷ್ಟ ರಾಗಿ ದ್ದಾರೆಂದು ಅಂದಾಜು ಮಾಡಲಾಗಿದೆ.

  • ಈ ಜನರನ್ನೆಲ್ಲ ಅಥವ ಯುದ್ದದಲ್ಲಿ ಬದುಕಿ ಉಳಿದವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಅಥವ ಪುನಃ ನೆಲೆನಿಲ್ಲಿಸಲು ಪ್ರಯತ್ನ ಏನೋ ಮಾಡಬಹುದು; ಆದರೆ ಅದು ಅಸಾಧ್ಯತೊಡಕಿನ ಕೆಲಸ, ಅನೇಕರು ತಮ್ಮ ಮೊದಲಿನ ಊರುಗಳಿಗೆ ಬರಬಹುದು ; ಆನೇಕರು ಇರುವಲ್ಲಿಯೇ ಉಳಿಯಲು ಇಷ್ಟ ಪಡಬಹುದು. ಆದರೆ ಮುಂದೆ ಯೂರೋಪಿನಲ್ಲಿ ಆಗಬಹುದಾದ ರಾಜಕೀಯ ಬದಲಾವಣೆಗಳಿಂದ ಇನ್ನೂ ಹೆಚ್ಚಿನ ಜನರ ಸ್ಥಾನಾಂತರವೂ ಅದಲು ಬದಲೂ ಕಾದಿದೆ. * ಇವೆಲ್ಲಕ್ಕೂ ಹೆಚ್ಚು ಗಾಢವೂ ಅತ್ಯಂತ ವಿನಾಶಕಾರಕವೂ ಆದ ಪರಿವರ್ತನೆ ಎಂದರೆ ಪ್ರಪಂಚದ ಜನಸಂಖ್ಯೆ ವ್ಯತ್ಯಾಸಗೊಳಿಸುತ್ತಿರುವ ಮಾನಸಿಕ ಮತ್ತು ಜೀವನ ಬಾಂಧವ್ಯದ ಪರಿವರ್ತನೆ, ಕೈಗಾರಿ ಕೋದ್ಯಮ ಕ್ರಾಂತಿ ಮತ್ತು ಆಧುನಿಕ ವಿಜ್ಞಾನ ಸಂಶೋಧನೆಗಳಿಂದ ಯೂರೋಪಿನ ಜನಸಂಖ್ಯೆ ಮುಖ್ಯ ವಾಗಿ ವಾಯವ್ಯ ಮತ್ತು ಮಧ್ಯ ಯೂರೋಪಿನಲ್ಲಿ ಬಹುಬೇಗ ಬೆಳೆಯಿತು. ಹೊಸ ಆರ್ಥಿಕರಚನೆ ಮತ್ತು ಇತರ ಕಾರಣಗಳ ಜೊತೆಗೆ ಈ ಸಂಶೋಧನೆಯ ಜ್ಞಾನ ಸೋವಿಯಟ್ ಒಕ್ಕೂಟಕ್ಕೂ ಹರಡಿ ಅಲ್ಲಿನ ಜನಸಂಖ್ಯೆ ಇನ್ನೂ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ. ಔದ್ಯೋಗಿಕ ವಿಜ್ಞಾನ ಪ್ರಗತಿ, ವಿದ್ಯಾ ಪ್ರಗತಿ, ಸಾರ್ವಜನಿಕ ನೈರ್ಮಲ್ಯ ಮತ್ತು ಆರೋಗ್ಯಜ್ಞಾನ ಪೂರ್ವಕ್ಕೂ ಹಬ್ಬಿ, ಏಷ್ಯದ ಅನೇಕ ರಾಷ್ಟ್ರಗಳಿಗೆ ಹರಡುತ್ತದೆ. ಭಾರತದಂತೆ, ಇನ್ನು ಕೆಲವು ರಾಷ್ಟ್ರಗಳಲ್ಲಿ ಜನಸಂಖ್ಯೆ ಕಡಿಮೆಯಾದರೆ ಜೀವನ ಹೆಚ್ಚು ಸುಖಮಯವಾಗಬಹುದು,

ಈ ಮಧ್ಯೆ ಪಶ್ಚಿಮ ಯೂರೋಪಿನಲ್ಲಿ ಜನನಸಂಖ್ಯೆ ಕಡಿಮೆಯಾಗುತ್ತ ಜನಸಂಖ್ಯೆಯಲ್ಲಿ ಇನ್ನೊಂದು ತಿರುಗು ಮುರುಗು ಸಮಸ್ಯೆ ಆರಂಭವಾಗಿದೆ. ಚೀನಾ, ಭಾರತ, ಯವಾದ್ವೀಪ ಮತ್ತು ಸೋವಿಯಟ್ ಒಕ್ಕೂಟ ಬಿಟ್ಟರೆ ಉಳಿದ ಎಲ್ಲ ರಾಷ್ಟ್ರಗಳಲ್ಲೂ ಈ ಸಮಸ್ಯೆ ಉದ್ಭವಿಸಿರುವಂತೆ ತೋರುತ್ತದೆ. ಕೈಗಾರಿ ಕೋದ್ಯಮದಲ್ಲಿ ಮುಂದುವರಿದ ರಾಷ್ಟ್ರಗಳಲ್ಲೇ ಇದು ಹೆಚ್ಚು. ಫ್ರಾನ್ಸಿನ ಜನಸಂಖ್ಯೆಯ ಬೆಳವಣಿಗೆ ಅನೇಕ ವರ್ಷಗಳ ಹಿಂದೆಯೇ ನಿಂತು ಈಗ ಕ್ರಮೇಣ ಕಡಮೆಯಾಗುತ್ತಿದೆ. ಇಂಗ್ಲೆಂಡಿನಲ್ಲಿ ೧೮೮೦ರಿಂದ ಈಚೆಗೆ ಜನಸಂಖ್ಯೆ ಕ್ರಮೇಣ ಕ್ಷೀಣಿಸುತ್ತಿದೆ. ಫ್ರಾನ್ಸ್ ಬಿಟ್ಟರೆ ಯೂರೋಪ್‌ನಲ್ಲಿ ತೀರ ಕಡಮೆ ಜನನಗಳಾಗುತ್ತಿರುವುದು ಇಂಗ್ಲೆಂಡಿನಲ್ಲೇ, ಹಿಟ್ಲರ್ ಮತ್ತು ಮುಸೂಲಿನಿ ಜನಸಂಖ್ಯೆಯಗತಿ ಹೆಚ್ಚಿಸಲು ಮಾಡಿದ ಪ್ರಯತ್ನದಿಂದ ದೊರೆತಫಲ ತಾತ್ಕಾಲಿಕವಾಯಿತು ಸೋವಿಯಟ್ ಒಕ್ಕೂಟ ಬಿಟ್ಟರೆ ಪೂರ್ವ