ಇ೦ಡಿಯ ದೇಶವಾಗಲಿ ಬೇರೆ ಯಾವ ದೇಶವೇ ಆಗಲಿ ಒಂದೇ ಮಾನವ ಜಾತಿಗೆ ಸೇರಿದೆ ಎಂದು ಭಾವಿಸುವುದು ಮೂರ್ಖತನ. ಭಾರತೀಯರ ಜೀವನ ವಿಭೇದಗಳು, ವ್ಯತ್ಯಾಸಗಳು, ಪಂಗಡಗಳು, ಜಾತಿಗಳು, ಮತಧರ್ಮಗಳು ಮತ್ತು ಬುಡಕಟ್ಟು ಗಳು ವಿವಿಧ ಮಟ್ಟದ ಸಾಂಸ್ಕೃತಿಕ ಬೆಳವಣಿಗೆಗಳು ಇದೆಲ್ಲ ನನಗೆ ತಿಳಿದಿತ್ತು. ಆದರೂ ಒಂದು ಸನಾತನ ಸಂಸ್ಕೃತಿಯ ಹಿನ್ನೆಲೆ, ಒಂದು ಸಾರ್ವತ್ರಿಕ ಜೀವನೋದ್ದೇಶ ಉಳ್ಳ ಜನತೆಗೆ ಅವರದೇ ಆದ ಒಂದು ವೈಶಿಷ್ಟ ಭಾವನೆ ಬೆಳೆಯುಅನುಕೂಲತತ್ತದೆ; ಮತ್ತು ಆ ಜನಾಂಗದ ಪೀಳಿಗೆಯಲ್ಲಿ ಎಷ್ಟೋ ವೈವಿಧ್ಯ ತೋರಿದರೂ ಆ ಭಾವನೆಯ ಛಾಯೆಯು ಮಾತ್ರ ಅವರಲ್ಲಿ ಎದ್ದು ಕಾಣುತ್ತದೆ. ಚೀನದಲ್ಲಿ ಸಂಪ್ರದಾಯಶರಣ ಅಧಿಕಾರಿಯನ್ನಾಗಲಿ, ಹಳೆಯ ಕಟ್ಟು ಗಳನ್ನೆಲ್ಲ ಕಿತ್ತೊಗೆದ ಕಮ್ಯೂನಿಸ್ಟ್ ನನ್ನಾ ಗಲಿ ನೋಡಿ, ಆ ಛಾಯೆ ಇದ್ದೇ ಇದೆ. ನನಗೆ ಬೇಕಾಗಿದ್ದದ್ದು ಭಾರತೀಯರ ಈ ವೈಶಿಷ್ಟ, ಕುತೂಹಲ ನನ್ನಲ್ಲಿದ್ದರೂ ಕೇವಲ ಕಾಲಹರಣ ಮಾಡುವ ಕುತೂಹಲದಿಂದಲ್ಲ. ಆದರೆ ಅದರ ಮೂಲಕ ನನ್ನ ಜನರನ್ನು , ದೇಶವನ್ನು ಅರ್ಥಮಾಡಿಕೊಳ್ಳಲು ಒಂದು ಬೆಳಕು ದೊರೆಯಬಹುದು, ಮುಂದಿನ ಕಾರ್ಯಕ್ಕೆ ಕಾರ್ಯಾಲೋಚನೆಗೆ ದಾರಿ ಕಾಣಬಹುದು ಎಂದು. ರಾಜಕೀಯವೂ ಮತ್ತು ಚುನಾವಣೆಗಳೂ ದೈನಂದಿನ ಕೆಲಸವಾಗಿತ್ತು, ಬಾಹ್ಯಾಲಂಕಾರಗಳಿಂದ ಉದ್ರೇಕಗೊಳ್ಳು ವಕಾಲ ಅದು. ಆದರೆ ಭಾರತದ ಭವಿಷ್ಯ ಭವನವನ್ನು ಭದ್ರವಾಗಿ, ಭವ್ಯವಾಗಿ ಸುಂದರವಾಗಿ ಕಟ್ಟಬೇಕಾದರೆ ನಮ್ಮ ತಳಹದಿ ಬಹಳ ಆಳವಾಗಿರಬೇಕು.
೫. ಭಾರತ ಮಾತಾ
ಸಭೆ ಸಭೆಯಲ್ಲಿ ಭಾರತದ ಈ ನನ್ನ ಶೋತೃವೃಂದಕ್ಕೆ ಹಿಂದೂಸ್ಥಾನ ಮತ್ತು ನಮ್ಮ ಮೂಲ ಪುರಾಣ ಪುರುಷ ಭರತನಿಂದ ಸಂಸ್ಕೃತದಲ್ಲಿ ಹೆಸರು ಪಡೆದ ಭಾರತದ ವಿಷಯವಾಗಿ ಉಪನ್ಯಾಸ ಮಾಡಿದ್ದೇನೆ. ನಗರಗಳ ಜನ ಅತಿ ಬುದ್ದಿವಂತರು, ಅವರಿಗೆ ಇನ್ನೂ ಸ್ವಲ್ಪ ಬಿರುಸುಮಾತು ಬೇಕು. ಆದ್ದರಿಂದ ಅಲ್ಲಿ ಈ ವಿಷಯ ಮಾತನಾಡುತ್ತ ಇರಲಿಲ್ಲ. ಆದರೆ ಮಿತ ದೃಷ್ಟಿ ಯ ರೈತರಿಗೆ ನಮ್ಮ ದೇಶ, ಅದರ ಸ್ವಾತಂತ್ರ್ಯಕ್ಕಾಗಿ ನಮ್ಮ ಹೋರಾಟ, ಒಂದೊಂದು ಪ್ರಾಂತ್ಯಕ್ಕೂ ವ್ಯತ್ಯಾಸ ಕಂಡರೂ ನಾವೆಲ್ಲ ಭಾರತೀಯರು, ಉತ್ತರದಿಂದ ದಕ್ಷಿಣಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಿ ಹೋದರೂ ರೈತನ ಸಮಸ್ಯೆಗಳು ಒಂದೇ, ಸ್ವರಾಜ್ಯವೆಂಬುದು ಕೆಲವರಿಗೆ ಮಾತ್ರವಲ್ಲ, ಎಲ್ಲರಿಗೆ ಮತ್ತು ಎಲ್ಲ ಪ್ರಾಂತ್ಯಗಳಿಗೆ ಎಂದು ಮುಂತಾಗಿ ಭಾಷಣಮಾಡುತ್ತಿದ್ದೆ. ಬೈಬರ್ ಕಣಿವೆಯಿಂದ ಕನ್ಯಾಕುಮಾರಿಯವರಿಗೆ ಎಲ್ಲಿ ಹೋದರೂ ಪ್ರಶ್ನೆ ಗಳೆಲ್ಲ ಒಂದೇ. ಕಾರಣ ರೈತರ ಸಮಸ್ಯೆಗಳು ಒಂದೇ-ಬಡತನ ಸಾಲ ಸ್ವಾಮಿ, ಜಮೀನುದಾರ, ಸಾಲಗಾರ : ಗೇಣಿಯ ಹೊರೆ, ಕಂದಾಯ, ಪೊಲೀಸರ ಹಿಂಸೆ, ವಿದೇಶಿ, ಯರ ಆಶ್ರಯದಲ್ಲಿ ಇವೆಲ್ಲ ಕೊಡುತ್ತಿರುವ ಕಿರುಕುಳ, ಎಲ್ಲರಿಗೂ ಬೇಕಾದ ಈ ದಾಸ್ಯ ವಿಮೋಚನೆ. ಭಾರತವೆಲ್ಲ ಒಂದು, ಪ್ರಪಂಚದಲ್ಲಿ ನಾವೂ ಒಂದು ಭಾಗವಾದ್ದರಿಂದ ಪ್ರಪಂಚ ಕ್ಕೂ ನಮಗೂ ಸಂಬಂಧವಿದೆ ಎಂದು ಯೋಚಿಸಲು ಹೇಳಿದೆ. ಚೀಣ ಸ್ಪೇನ್, ಅಬಿಸೀನಿಯ, ಮಧ್ಯ ಯೂರೋಪ್, ಈಜಿಪ್ಟ್, ಪಶ್ಚಿಮ ರಷ್ಯದ ರಾಷ್ಟ್ರಗಳು ಇವುಗಳಲ್ಲಿ ನಡೆಯುತ್ತಿರುವ ಹೋರಾಟದ ವಿಷಯ ತಿಳಿಸಿದೆ. ಸೋವಿಯೆಟ್ ಯೂನಿಯನ್ ನಲ್ಲಿ ಆಗಿರುವ ವಿಸ್ಮಯಕಾರಕ ಬದಲಾವಣೆಗಳೂ ಅಮೆರಿಕದ ಅಸಾಧ್ಯ ಪ್ರಗತಿಯ ವಿಷಯವನ್ನೂ ತಿಳಿಸಿದೆ. ಕೆಲಸವೇನೋ ಸುಲಭವಿರಲಿಲ್ಲ, ಆದರೂ ಎಷ್ಟು ಕಷ್ಟವೆಂದು ಭಾವಿಸಿದ್ದೆ ನೋ, ಅಷ್ಟು ಕಠಿಣವೂ ಕಾಣಲಿಲ್ಲ. ಅವರಿಗೆ ಚಿರ ಪರಿಚಯವಿದ್ದ ಪುರಾಣಗಳು, ಇತಿಹಾಸಗಳು, ಕತೆಗಳಿಂದ ಭಾರತ ಅವರಿಗೆ ಪರಿಚಯವಾಗಿತ್ತು. ಅವರಲ್ಲಿ ಕೆಲವರು ಭಾರತದ ನಾಲ್ಕು ದಿಕ್ಕುಗಳಲ್ಲಿರುವ ಪುಣ್ಯಸ್ಥಳಗಳಿಗೆ ಯಾತ್ರೆ ಹೋಗಿ ದೇಶವನ್ನು ನೋಡಿದ್ದರು. ಇನ್ನು ಕೆಲವರು ಮೊದಲನೆಯ ಪ್ರಪಂಚ ಯುದ್ದದಲ್ಲಿ ಮತ್ತು ಇತರ ದಂಡಯಾತ್ರೆಗಳಲ್ಲಿ ಭಾಗವಹಿಸಿದ್ದ ಸೈನಿಕರಿದ್ದರು. ೧೯೩೦ ರ ನಂತರ ಇಡೀ ಪ್ರಪಂಚವನ್ನೇ ಆವರಿಸಿದ ಆರ್ಥಿಕ ಮುಗ್ಗಟ್ಟಿನ ಅನುಭವದಿಂದ ವಿದೇಶಗಳ ವಿಷಯ ನಾನು ಮಾತನಾಡುತ್ತಿದ್ದರೂ ಅದು ಅವರಿಗೆ ಹೊಸದಾಗಿ ಕಾಣಲಿಲ್ಲ. ನಾನು