ಪುಟ:ಭಾರತ ದರ್ಶನ.djvu/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೪೩
ಅನ್ವೇಷಣೆ

ಸಭೆಯನ್ನು ಪ್ರವೇಶಿಸುತ್ತಲೇ 'ಭಾರತಮಾತಾಕಿ ಜೈ' ಎಂಬ ಗಗನವನ್ನೆ ಭೇದಿಸುವ ಘೋಷವು ನನಗೆ ಸ್ವಾಗತವೀಯುತ್ತಿತ್ತು. ಈ ಘೋಷಣೆಯ ಅರ್ಥವೇನು ? ಈ ಭಾರತಮಾತೆ ಯಾರು ? ಜಯ ಯಾರಿಗೆ ? ಎಂದು ಅವರನ್ನು ಕೇಳುತ್ತಿದ್ದೆ. ನನ್ನ ಪ್ರಶ್ನೆ ಯಿಂದ ಅವರಿಗೆ ನಗು ಬರುತ್ತಿತ್ತು, ಆಶ್ಚರ್ಯವಾಗುತ್ತಿತ್ತು ; ಏನು ಹೇಳಬೇಕೆಂದು ತಿಳಿಯದೆ ಒಬ್ಬರ ಮುಖವನ್ನು ಮತ್ತೊಬ್ಬರೂ, ನನ್ನ ಮುಖವನ್ನು ಎಲ್ಲರೂ ನೋಡುತ್ತಿದ್ದರು. ಈ ಪ್ರಶ್ನೆಯನ್ನು ಕೇಳುತ್ತಲೆ ಇದ್ದೆ. ಕೊನೆಯಲ್ಲಿ ತಲೆ ತಲಾಂತರದಿಂದ ಬೇಸಾಯವನ್ನೇ ನಂಬಿದ್ದ ಜಾತ್ ರೈತನೊಬ್ಬ ಎದ್ದು ಅದು ಭೂಮಿತಾಯಿ ಎಂದು ಹೇಳುವನು. ಯಾವ ಭೂಮಿ ? ಅವರ ಹಳ್ಳಿಯ ಸುತ್ತಲ ನೆಲವೇ ? ಅಥವ ಜಿಲ್ಲೆ ಯ ನೆಲವೆ ? ಪ್ರಾಂತ್ಯವೆ ? ಅಥವ ಭಾರತದ ಇಡೀ ದೇಶವೇ ? ಇದೇ ರೀತಿ ಪ್ರಶ್ನೆ ಉತ್ತರ ನಡೆದು ಕೊನೆಗೆ ವಿಷಯವನ್ನೆಲ್ಲ ತಿಳಿಸುವಂತೆ ನನಗೇ ಹೇಳುತ್ತಿದ್ದರು. ನಾನು ಅವರಿಗೆ ವಿವರಿಸಲು ಪ್ರಯತ್ನಿಸುತ್ತ, ಇ೦ಡಿಯ ಅನ್ನುವ ಮಾತಿನಲ್ಲಿ ಅವರು ತಿಳಿದುಕೊಂಡಿದ್ದಲ್ಲಿ ಅಡಕವಾಗಿರುವುದಷ್ಟೇ ಅಲ್ಲಅದಕ್ಕೂ ಮಿಗಿಲಾದ ಭಾವನೆಯೂ ಗರ್ಭಿತವಾಗಿದೆ ಎಂದು ಹೇಳುತ್ತಿದ್ದೆ. ಭಾರತದ ಪರ್ವತ ಶ್ರೇಣಿಗಳು, ನದಿಗಳು, ಅರಣ್ಯ ಮಾಲೆಗಳು, ನಮಗೆ ಆಹಾರ ಒದಗಿಸುವ ವಿಶಾಲ ಹೊಲ ಗದ್ದೆಗಳ ಸಾಲುಗಳು, ಎಲ್ಲ ನಮ್ಮ ಅಚ್ಚು ಮೆಚ್ಚಿನ ವಸ್ತುಗಳೇ ; ಆದರೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಹರಡಿರುವ ಈ ನಮ್ಮ ನಾಡಿನ ಜನ ಅವರು ಮತ್ತು ನಾನುಎಲ್ಲಕ್ಕೂ ಮುಖ್ಯ ಎಂದು ತಿಳಿಸುತ್ತಿದ್ದೆ. ಭಾರತಮಾತೆ ಎಂದರೆ ಮುಖ್ಯವಾಗಿ ಈ ಜನಕೋಟಿ. ಭಾರತಮಾತೆಗೆ ಜಯವೆಂದರೆ ಅವರ ಜಯ. ನೀವು ಭಾರತಮಾತೆಯ ಒಂದು ಅಂಗ. 'ಭಾರತ ಮಾತೆ ' ಎಂದರೆ ನೀವೆ ಎಂದು ಹೇಳಿದೆ. ಈ ಭಾವನೆ ನಿಧಾನವಾಗಿ ಅವರ ಮನಸ್ಸಿಗೆ ಇಳಿಯುತ್ತಲೆ ಒಂದು ಹೊಸ ಶೋಧನೆಯನ್ನೇ ಮಾಡಿದವರಂತೆ ಅವರ ಕಣ್ಣುಗಳಲ್ಲಿ ಒಂದು ನವೀನ ಕಾಂತಿ ಹೊಳೆಯಿತು.

೬. ಭಾರತದ ವಿವಿಧತೆ ಮತ್ತು ಒಕ್ಕಟ್ಟು

ಭಾರತದ ವೈವಿಧ್ಯ ಅಪಾರವಾಗಿದೆ ; ಅದು ಸ್ಪಷ್ಟವಾಗಿದೆ ; ಮೇಲೆಯೇ ಕಾಣುತ್ತದೆ, ಯಾರಾದರೂ ತಿಳಿಯಬಹುದು. ಬಾಹ್ಯ ರೂಪು ರಚನೆಗಳಲ್ಲಿ, ಮನೋಭಾವನೆಯಲ್ಲಿ ಮತ್ತು ಸಂಪ್ರ ದಾಯಗಳಲ್ಲಿ ಇದು ಕಾಣಿಸುತ್ತದೆ. ಮೇಲೆ ನೋಡಿದರೆ ಗಡಿನಾಡಿನ ಪಠಾಣನಿಗೂ, ದಕ್ಷಿಣ ಭಾರತದ ತಮಿಳನಿಗೂ ಯಾವ ಸಾಮ್ಯವೂ ಇಲ್ಲ. ಅವರ ಬುಡಕಟ್ಟು ಬೇರೆ ಬೇರೆ ಆದಾಗ್ಯೂ ಇಬ್ಬರಲ್ಲೂ ಒಂದು ಬಗೆಯ ಸರ್ವಸಾಮಾನ್ಯ ತಂತುಗಳು ಇವೆ. ಮುಖ, ಆಕೃತಿ, ಅನ್ನ, ಬಟ್ಟೆ, ಭಾಷೆ ಇವುಗಳಲ್ಲೆಲ್ಲ ಭಿನ್ನ ವೆ ವಾಯವ್ಯ ಪ್ರಾಂತ್ಯದಲ್ಲಿ ಮಧ್ಯ ಏಷ್ಯದ ವಾತಾವರಣ ಇದೆ. ಗಡಿನಾಡಿನ ಅನೇಕ ಪದ್ಧತಿಗಳು ಕಾಶ್ಮೀರದಂತೆ ಹಿಮಾಲಯದಾಚೆ ಇರುವ ದೇಶಗಳ ಪದ್ದತಿಯನ್ನು ಹೋಲುತ್ತವೆ, ಪಠಾಣರ ಜನಪದ ಕುಣಿತಗಳು ರಷ್ಯದ ಕಾಸೆ ಕುಣಿತವನ್ನು ಹೋಲುತ್ತದೆ. ಇಷ್ಟೆಲ್ಲ ಭೇದವಿದ್ದರೂ ಪಠಾಣನನ್ನೇ ಆಗಲಿ, ತಮಿಳನನ್ನೇ ಆಗಲಿ ಕಂಡ ಒಡನೆ ಭಾರತೀಯ ಎಂದು ಹೇಳಬಹುದು. * ಆ ಒ೦ದು ಭಾರತ ಮುದ್ರೆ ಅವರಿಬ್ಬರ ಮುಖದಲ್ಲೂ ಕಾಣುತ್ತದೆ. ಇದಕ್ಕೆ ಕಾರಣ, ಗಡಿನಾಡು ಮತ್ತು ಆಫ್ಘಾನಿಸ್ಥಾನ ಸಹ ಸಾವಿರಾರು ವರ್ಷಗಳ ವರೆಗೆ ಭಾರತದ ಭಾಗವಾಗಿದ್ದು ವು. ಇಸ್ಲಾಂ ಪ್ರಾಬಲ್ಯಕ್ಕೆ ಮೊದಲು, ಆಫ್ಘಾನಿಸ್ಥಾನ ಮತ್ತು ಮಧ್ಯಕ್ಕೆ ಏಷ್ಯದ ಭಾಗಗಳಲ್ಲಿ ವಾಸಮಾಡುತ್ತ ಇದ್ದ ಪುರಾತನ ತುರಿ ಜನರು ಮತ್ತು ಇತರ ಜನಾಂಗಗಳು ಬೌದ್ಧರಾಗಿದ್ದರು. ಅದಕ್ಕೂ ಮುಂಚೆ ಪುರಾಣಗಳ ಕಾಲದಲ್ಲಿ ಹಿಂದೂಗಳಾಗಿದ್ದರು. ಈ ಗಡಿನಾಡು ಭಾರತೀಯ ಸಂಸ್ಕೃತಿಯ ಒಂದು ಪ್ರಧಾನ ಕೇಂದ್ರವಾಗಿತ್ತು ಈಗಲೂ ಅನೇಕ ಹಳೆಯ ಸ್ಮಾರಕಗಳ ಮತ್ತು ವಿಹಾರಗಳ ಮತ್ತು ಮುಖ್ಯವಾಗಿ, ಎರಡು ಸಾವಿರ ವರ್ಷಗಳ ಹಿಂದೆಯೆ ಕೀರ್ತಿ ಶಿಖರವನ್ನೇರಿ ಇಂಡಿಯ ಮತ್ತು ಏಷ್ಯದ ಅನೇಕ ಭಾಗಗಳಿಂದ ಶಿಷ್ಯರನ್ನು ಆಕರ್ಷಿಸುತ್ತ ಇದ್ದ ತಕ್ಷಶಿಲಾ ಮಹಾ ವಿಶ್ವವಿದ್ಯಾಲಯದ