ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೪
ಭಾರತ ದರ್ಶನ

ಪಾಳುಗಳಿಂದಲೂ ತುಂಬಿದೆ. ಪರಧರ್ಮಾವಲಂಬನೆ ಸ್ವಲ್ಪ ವ್ಯತ್ಯಾಸವನ್ನೇನೊ ಮಾಡಿತು. ಆದರೆ ಆ ಪ್ರದೇಶಗಳ ಜನರಲ್ಲಿ ಮೂಡಿದ್ದ ಮಾನಸಿಕ ಹಿನ್ನೆಲೆ ಪೂರ್ಣ ಬದಲಾವಣೆಯಾಗಲಿಲ್ಲ.

ಪಠಾಣರು ಮತ್ತು ತಮಿಳರು ಎರಡು ಕೊನೆ. ಈ ಮಧ್ಯೆ ಇತರರು ಎಷ್ಟೋ ಜನರಿದ್ದಾರೆ. ಅವರೆಲ್ಲರಿಗೂ ಭಿನ್ನ ಭಿನ್ನ ಪ್ರವೃತ್ತಿಗಳು. ಆದರೂ ಎಲ್ಲರಲ್ಲೂ ಎದ್ದು ಕಾಣುವ ಭಾರತ ಮುದ್ರೆ ಇದೆ. ನ೦ಗೀಯರು, ಮರಾಠರು, ಗುಜರಾತಿಗಳು, ತಮಿಳರು, ಆಂಧ್ರರು, ಉರಿಯದವರು, ಆಸ್ವಾಮಿನವರು, ಕನ್ನಡಿಗರು, ಮಲಯಾಳಿಗಳು, ಸಿ೦ಧೀ ಜನರು, ಪಂಜಾಬಿಗಳು, ಪಠಾಣರು, ಕಾಶ್ಮೀರಿಗಳು, ರಜಪೂತರು ಮತ್ತು ಮಧ್ಯ ರಾಷ್ಟ್ರದಲ್ಲಿನ ಹಿಂದೂಸ್ಥಾನಿ ಮಾತನಾಡುವ ಜನ, ಇವರೆಲ್ಲ ನೂರಾರು ವರ್ಷಗಳಿಂದ ತಮ್ಮ ವೈಯಕ್ತಿಕ ವೈಶಿಷ್ಟ್ಯಗಳನ್ನು ಹೇಗೆ ಉಳಿಸಿಕೊಂಡಿದ್ದಾರೆ; ಪುರಾತನ ಸಂಪ್ರದಾಯಗಳು ಮತ್ತು ಇತಿಹಾಸಗಳಲ್ಲಿ ಕಾಣುವ ಗುಣದೋಷಗಳು ಸ್ವಲ್ಪ ಹೆಚ್ಚು ಕಡಮೆ ಇವರಲ್ಲಿ ಇನ್ನೂ ಹೇಗೆ ಉಳಿದಿವೆ ; ಆದರೂ ಒ೦ದೇ ರಾಷ್ಟ್ರೀಯತೆಯ ಅಸ್ತಿತ್ವ, ಒ೦ದೇ ನೀತಿ, ಒಂದೇ ಮನೋಭಾನೆಗಳಿಂದ ಯುಗಾಂತರದಿಂದ ಭಾರತೀಯರಾಗಿ ಉಳಿದಿದ್ದಾರೆ ಎಂಬುದು ಅತ್ಯಾ ಶ್ಚರ್ಯ, ಈ ಆರ್ಜಿತಗುಣದಲ್ಲಿ ಯಾವುದೋ ಒಂದು ಚಲನಶಕ್ತಿ, ಜೀವಕಳೆ ಇತ್ತು. ಆ ಶಕ್ತಿ ಭಾರತದ ಜನ ಜೀವನದ ರೀತಿಗಳಲ್ಲಿ ಮತ್ತು ಜೀವನದರ್ಶನಗಳಲ್ಲಿ ವ್ಯಕ್ತವಾಯಿತು. ಪುರಾತನ ಇಂಡಿಯ ಪುರಾತನ ಚೀನದಂತೆ ಒಂದು ಪ್ರಪಂಚವೇ ಆಗಿತ್ತು. ಅದು ಎಲ್ಲ ವಸ್ತುಗಳಿಗೆ ಒಂದು ಮುದ್ರೆಯೊತ್ತಿದ ಒಂದು ಸಂಸ್ಕೃತಿ, ಒಂದು ನಾಗರಿಕತೆ, ಅನ್ಯದೇಶೀಯರ ಪ್ರಭಾವ ಬಿದ್ದು, ಆ ಸಂಸ್ಕೃತಿಯ ಮೇಲೆ ಸ್ವಲ್ಪ ಪ್ರತಿಭೆ ಬೀರಿದರೂ ಕೊನೆಯಲ್ಲಿ ಅನ್ಯತೆಯೂ ತಲ್ಲೀನವಾಗುತ್ತಿತ್ತು. ಛಿದ್ರ ಭಾವನೆ ಏನಾದರೂ ಕಂಡುಬಂದರೆ ಒಡನೆ ಒಟ್ಟು ಗೂಡಿಸುವ ಪ್ರಯತ್ನ ನಡೆಯುತ್ತಿತ್ತು. ನಾಗರಿಕತೆಯ ಮುಂಬೆಳಗಿನಿಂದ ಒಂದು ಬಗೆಯ ಅದೈತಭಾವನೆಯ ಕನಸು ಭಾರತೀಯ ಮನಸ್ಸನ್ನು ಆವರಿಸಿದೆ. ಈ ಏಕತೆ ಹೊರಗಿನವರು ಹೇರಿದ್ದಲ್ಲ, ಬಾಹ್ಯಾವರಣಗಳ ಅಥವಾ ನಂಬಿಕೆಗಳ ಐಕ್ಯತೆಯಲ್ಲ. ಅದು ಅಂತರಾಳದಿಂದ ಬಂದದ್ದು. ಅದರ ನೆರಳಿನಲ್ಲಿ ಎಲ್ಲ ಮತಧರ್ಮಗಳಿಗೆ ಸ್ಥಾನ ಇತ್ತು. ಎಲ್ಲ ಭಿನ್ನ ಧರ್ಮಗಳಿಗೂ ಮನ್ನಣೆ ಅಲ್ಲದೆ ಪ್ರೋತ್ಸಾಹವು ದೊರೆಯಿತು,

ಒಂದು ರಾಷ್ಟ್ರೀಯ ಪಂಗಡದಲ್ಲಿ ಸಹ, ಅದು ಎಷ್ಟೇ ನಿಕಟವಾಗಿ ಕೂಡಿಕೊಂಡಿದ್ದರೂ ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದೇ ಇರುತ್ತವೆ. ಇನ್ನೊಂದು ರಾಷ್ಟ್ರದ ಪಂಗಡಗಳೊಡನೆ ಹೋಲಿಸಿ ನೋಡಿದಾಗ ಮಾತ್ರ ಆ ರಾಷ್ಟ್ರದ ಮೂಲ ಐಕ್ಯತೆ ಗೊತ್ತಾಗುತ್ತದೆ. ಗಡಿನಾಡಿನಲ್ಲಿ ಎರಡು ರಾಷ್ಟ್ರಗಳ ಮಧ್ಯೆ ಇರುವ ಭಿನ್ನ ತೆಗಳು ಕಾಣದಿರಬಹುದು ಅಥವ ಬೆರತು ಹೋಗಿರಬಹುದು ಮತ್ತು ಆಧುನಿಕ ಪ್ರಗತಿಯಿಂದ ಎಲ್ಲ ಕಡೆಯಲ್ಲೂ ಒಂದು ಬಗೆಯ ಸಮತೆಕಾಣಬಹುದು. ಪುರಾತನ ಕಾಲದಲ್ಲಿ ಮತ್ತು ಮಧ್ಯ ಯುಗದಲ್ಲಿ ಈಗಿನ ಜನಾಂಗ ಭಾವನೆ ಇರಲಿಲ್ಲ ; ಊಳಿಗ ಮಾನ್ಯದ ಮತ್ತು ಧಾರ್ಮಿಕ, ಜಾತೀಯ, ಸಾಂಸ್ಕೃತಿಕ ಬಾಂಧವ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ಇತ್ತು. ಆದರೂ ಇತಿಹಾಸದ ಯಾವ ಕಾಲದಲ್ಲೇ ಆಗಲಿ, ಭಾರತೀಯನು ಇ೦ಡಿಯದಲ್ಲಿ ಎಲ್ಲಿದ್ದರೂ, ಹೆಚ್ಚು ಕಡಮೆ ಒಂದೇ ಮನೆಯವನಂತೆ ಭಾವಿಸುತ್ತಿದ್ದನು, ಬೇರೆ ಯಾವ ದೇಶದಲ್ಲಿದ್ದರೂ ತಾನೊಬ್ಬ ಪರಕೀಯ, ಹೊಸಬ ಎಂದು ಭಾವಿಸುತ್ತಿದ್ದ. ತನ್ನ ಧರ್ಮ ಅಥವ ಸಂಸ್ಕೃತಿಯನ್ನು ಅವಲಂಬಿಸಿದ ರಾಷ್ಟ್ರಗಳ ವಿಷಯದಲ್ಲಿ ಈ ಪರಕೀಯ ಭಾವನೆ ಅಷ್ಟು ಹೆಚ್ಚು ಇರಲಿಲ್ಲ. ಭಾರತೀಯರಲ್ಲದ ಅನ್ಯಧರ್ಮಿಯರು-ಕ್ರೈಸ್ತರು, ಜ್ಯೂಗಳು, ಪಾರ್ಸಿಗಳು, ಮುಸಲ್ಮಾನರು, ಇಂಡಿಯಾ ದೇಶಕ್ಕೆ ಬಂದು ನೆಲಸಿದ, ಕೆಲವು ತಲೆಮಾರುಗಳಲ್ಲಿ ಭಾರತೀಯರೇ ಆದರು. ಈ ಪರಧರ್ಮಗಳನ್ನವಲಂಬಿಸಿದ ಭಾರತೀಯರು ಮತಾಂತರ ಹೊಂದಿದರೂ ಭಾರತೀಯರಾಗಿಯೇ ಉಳಿದರು, ಇತರ ದೇಶಗಳಲ್ಲಿ, ಅವರ ಮತಧರ್ಮ ಒಂದೇ ಆಗಿದ್ದರೂ ಇವರೆಲ್ಲರನ್ನೂ ಇಂಡಿಯನರು, ಪರದೇಶೀಯರು ಎಂದು ಪರಿಗಣಿಸಲಾರಂಭಿಸಿದರು,

ಇದು ರಾಷ್ಟ್ರೀಯ ಭಾವನೆ ಮುಂದುವರಿದಿರುವ ಕಾಲ. ಇ೦ಡಿಯ ದೇಶದ ಜನರು ತಮ್ಮಲ್ಲಿ ಒಳ ಭಿನ್ನತೆಗಳೆಷ್ಟೇ ಇದ್ದರೂ ಪರರಾಷ್ಟ್ರಗಳಲ್ಲಿ ಅನೇಕ ಕಾರಣಗಳಿಂದ ತಮ್ಮದೇ ಒಂದು ಪಂಗಡ