ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೮
ಭಾರತ ದರ್ಶನ

ಅರ್ಹರೆಂದು ಯಾರಿಗೂ ವೋಟು ಬೇಡಲಿಲ್ಲ. ವೋಟುಗಳೂ ಚುನಾವಣೆಗಳೂ ನಮ್ಮನ್ನು ಬಹು ದೂರ ಕರೆದೊಯ್ಯಲಾರವು. ಅವು ನಮ್ಮ ಮಹಾ ಯಾತ್ರೆಯಲ್ಲಿ ಒಂದು ಸಣ್ಣ ಹೆಜ್ಜೆ ಮಾತ್ರ. ಆ ಓಟಿನ ಅರ್ಥ ತಿಳಿದಿದ್ದೇವೆ ಮುಂದಿನ ಕಾರ್ಯಕ್ಕೆ ಸಿದ್ಧರಾಗಿದ್ದೇವೆ ಎಂಬ ಭರವಸೆಯ ಸೂಚನೆ ಇಲ್ಲದೆ ಸುಮ್ಮನೆ ಓಟು ತುಂಬಿ ನಮಗೆ ಮೋಸಗೊಳಿಸಿದರೆ ನಮ್ಮ ದೇಶಕ್ಕೆ ದ್ರೋಹಮಾಡಿದಂತೆ, ಗುಣಾಡ್ಯರೂ ಸತ್ಯ ನಿಷ್ಠರೂ ಆದ ವ್ಯಕ್ತಿಗಳು ನಮಗೆ ನಮ್ಮ ಪ್ರತಿನಿಧಿಗಳಾಗಿರಬೇಕಿದ್ದರೂ ಕೇವಲ ವ್ಯಕ್ತಿಗಳು ನಮಗೆ ಮುಖ್ಯವಲ್ಲ ; ನಾವು ಕೈಗೊಂಡ ಕಾರ್, ನಂಬಿದ ಸಂಸ್ಥೆ ಮತ್ತು ಯಾರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆಯೋ ಆ ಜನಾಂಗ ಮುಖ್ಯ. ಈ ಸ್ವಾತಂತ್ರ ಎಂದರೇನು, ನಮ್ಮ ಜನಕೋಟಿಗೆ ಏಕೆ ಬೇಕು ಎಂದು ವಿವರಿಸಿದೆ. ಬಿಳಿಯ ಬಣ್ಣದ ಯಜಮಾನರ ಬದಲು ಕಂದು ಬಣ್ಣದವರು ಬೇಕಿಲ್ಲ. ಜನತೆಗಾಗಿ ಜನತೆಯಿಂದ ಆರಿಸಿದ ಜನತಾ ಸರಕಾರ ಬೇಕು. ಬಡತನ, ದುಃಖ ನಾಶವಾಗಬೇಕು ಎಂದು ಹೇಳಿದೆ.

ಇದೇ ನನ್ನ ಎಲ್ಲ ಭಾಷಣಗಳ ತಿರುಳು, ಈ ಒಂದು ವ್ಯಕ್ತಿ ನಿರ್ದೆಶರಹಿತ ಭಾವನೆಯಿಂದ ಮಾತ್ರ ಚುನಾವಣಾ ಪ್ರಚಾರ ನಡೆಸಲು ನನಗೆ ಸಾಧ್ಯವಿತ್ತು. ಯಾವ ಉಮೇದುವಾರರ ಭವಿಷ್ಯ ಹೇಗಿತ್ತೋ ಅದು ನನಗೆ ಪ್ರಾಮುಖ್ಯವೆಣಿಸಲಿಲ್ಲ. ನನ್ನ ಗುರಿ ಎಲ್ಲ ನಮ್ಮ ಧೈಯದ ಕಡೆಗೆ. ಉಮೇದುವಾರರ ಜಯಾಪಜಯದ ಸಂಕುಚಿತ ಮನೋಭಾವನೆಯಿಂದ ನೋಡಿದರೂ ಇದೇ ಪ್ರಚಾರ ಮಾರ್ಗ ಉತ್ತಮವೆನಿಸಿತು. ಈ ರೀತಿ ಆ ಉಮೇದುವಾರನೂ ಅವನ ಚುನಾವಣಾ ಪ್ರಚಾರವೂ ಒಂದು ಉನ್ನತ ಮಟ್ಟಕ್ಕೆ, ಮೂಲತತ್ವಕ್ಕೆ ,-ದಾಸ್ಯ ವಿಮೋಚನೆಗಾಗಿ ನಡೆಯುತ್ತಿರುವ ರಾಷ್ಟ್ರದ ಮಹಾ ಹೋರಾಟದ ಮಟ್ಟಕ್ಕೆ, ಬಡತನದ ಬೇಗೆಯಲ್ಲಿ ಬೆಂದು ಬಾಡಿದ ಕೋಟ್ಯನುಕೋಟಿ ಬಡವರ ತಲೆ ತಲಾಂತರದ ಶಾಪವಿಮೋಚನೆಯ ಮಟ್ಟಕ್ಕೆ ಏರಿತು. ಸಮುದ್ರದ ಮೇಲಿನಿಂದ ಬೀಸಿದ ಪ್ರಚಂಡ ಮಾರುತನಂತೆ ನೂರಾರು ಪ್ರಮುಖ ಕಾಂಗ್ರೆಸ್ ಮಹಾನಾಯಕರ ಈ ಸಂದೇಶವು ನಾನಾ ಮೂಲೆ ಮೂಲೆಗಳನ್ನು ಹೊಕ್ಕು ನವ ಚೈತನ್ಯವನ್ನು ತುಂಬಿ, ಕುದ್ರ ಭಾವನೆಗಳನ್ನೂ, ಚುನಾವಣಾ ಕುತಂತ್ರಗಳನ್ನೂ ನಿರ್ಣಯಮಾಡಿತು. ನನ್ನ ಜನತಾ ಹೃದಯದ ಅರಿವು ನನಗಾಯಿತು ; ಅವರ ಮೇಲೆ ಪ್ರೇಮ ಮೂಡಿತು ; ಆ ಲಕ್ಷೇಪಲಕ್ಷ ಕಣ್ಣುಗಳು ಜನಮನವನ್ನು ನನಗೆ ತಿಳಿಸಿದವು.

ನಿತ್ಯವೂ ಚುನಾವಣೆಯ ವಿಚಾರವನ್ನೆ ಮಾತನಾಡುತ್ತಿದ್ದೆ ; ಆದರೂ ಚುನಾವಣೆಗಳು ಮಾತ್ರ ನನ್ನ ಮನಸ್ಸನ್ನು ಆಕ್ರಮಿಸಲಿಲ್ಲ ; ಅವು ಮೇಲೆ ಮೇಲೆ ತೇಲುತ್ತಿದ್ದ ನೊರೆ ಮಾತ್ರ. ನನಗೆ ಬೇಕಾಗಿದ್ದುದು ಮತದಾರರು ಮತ್ರವಲ್ಲ, ಭಾರತದ ಜನಕೋಟ; ಅವರು ಮತದಾರರಿರಲಿ, ಇಲ್ಲದಿರಲಿ, ಪ್ರತಿಯೊಬ್ಬ ಭಾರತೀಯ ಗ೦ಡಸಿಗೆ, ಹೆಂಗಸಿಗು, ಮಗುವಿಗೆ ನನ್ನ ಸಂದೇಶವನ್ನು ಸಾರುತ್ತಿದ್ದೆ. ಭಾರತ ಜನಕೋಟಿಯೊಂದಿನ ಈ ಭೌತಿಕ ಮತ್ತು ಭಾವಪೂರ್ಣ ಬಾಂಧವ್ಯವೂ ಆ ಸಾಹಸದ ಉದ್ವೇಗವೂ ಪೂರ್ತಿ ನನ್ನನ್ನು ಆವರಿಸಿತ್ತು. ಹತ್ತರಕೂಡ ಹನ್ನೊಂದು ಎಂಬ ಭಾವನೆಯಲ್ಲಿ ಜನ ಹೊರಳಿದ ಹೊರಳುವ ಭಾವನೆಯಲ್ಲ. ನನ್ನ ಕಣ್ಣುಗಳು ಆ ಲಕ್ಷೇಪಲಕ್ಷ ಕಣ್ಣುಗಳನ್ನು ಸೆಳೆದಿದ್ದವು; ಒಬ್ಬರನ್ನೊಬ್ಬರು ನೋಡಿದೆವು : ಪ್ರಥಮ ಭೇಟಿಯಾಗುವ ಅಪರಿಚಿತರಂತೆ ಅಲ್ಲ ಆದರೆ ಬಹುಕಾಲದ ಪರಿಚಯವಿದ್ದವರಂತೆ ಆ ಪರಿಚಯ ಯಾವುದು ಎಂದು ಹೇಳುವುದು ಮಾತ್ರ ಕಷ್ಟ, ಕೈ ಮುಗಿದು ನಮಸ್ಕಾರ ಮಾಡಲು ನಾನು ಕೈಗಳನ್ನು ಜೋಡಿಸಿದಾಗ ಎದುರಿಗೆ ಮುಗಿದ ಕೈಗಳ ಅರಣ್ಯವೇ ಬಂದು ಕಾಣಿಸುತ್ತ ಜನರ ಮುಖದಲ್ಲಿ ಸ್ನೇಹಪೂರ್ಣ ಮುಗುಳ್ಳಗೆ, ತೋರಿ, ಮಹಾಸಮುದ್ರದಂತೆ ನೆರೆದಿದ್ದ ಆ ಜನಸಮು ದಾಯದಿಂದ ಸ್ವಾಗತದ ಒಂದು ಕಲಕಲ ಧ್ವನಿ ಎದ್ದು ಅದರ ಆಲಿಂಗನದ ಸುಖದಲ್ಲಿ ಲೀನನಾಗುತ್ತಿದ್ದೆ. ಮಾತನಾಡಿ ನನ್ನ ಸಂತೋಷ ಸಾರುತ್ತಿದ್ದೆ ; ಆದರೆ ಅವರಿಗೆ ಎಷ್ಟು ಅರ್ಥವಾಗುತ್ತಿತ್ತೂ ನನಗೆ ತಿಳಿಯದು. ಆದರೆ ಅವರ ಕಣ್ಣುಗಳಲ್ಲಿ ಮಾತ್ರ ಒಂದು ಆಳವಾದ ದವರ್ಣನೀಯ ವರ್ಚಸ್ಸು ಪ್ರಜ್ವಲಿಸುತ್ತಿತ್ತು.