ಪುಟ:ಭಾರತ ದರ್ಶನ.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೬೩
ಭಾರತ ಸಂಶೋಧನೆ

ಭಾರತೀಯರು, ತಮ್ಮ ಸಂಸ್ಕೃತಿಯ ಎಲ್ಲ ಉಚ್ಛಾಯಸ್ಥಿತಿಗಳಲ್ಲಿ ಜೀವನದಲ್ಲಿಯೂ ಪ್ರಕೃತಿ ಯಲ್ಲಿ ಯೂ ಪೂರ್ಣ ಆನಂದಾನುಭವವನ್ನು ಪಡೆಯುತ್ತಿದ್ದರು. ಜೀವನರೀತಿ, ಸಂಗೀತ, ಸಾಹಿತ್ಯ, ಗಾನ, ನೃತ್ಯ, ಚಿತ್ರಕಲೆ, ನಾಟಕ ಇವುಗಳ ಪ್ರಗತಿಯಲ್ಲಿ, ವಿಡಂಬನಾತ್ಮಕ ಲೈಂಗಿಕ ಶಾಸ್ತ್ರದ ಪ್ರಗತಿ ಯಲ್ಲಿ ಸಹ ಒಂದು ಪರಮ ಸುಖವನ್ನು ಕಾಣುತ್ತಿದ್ದರು. ಪರಲೋಕಚಿಂತನೆ ಅಥವ ಇಹಲೋಕದ ನಿಸ್ಸಾರತೆಯ ಆಧಾರದ ಮೇಲೆ ನಿಂತ ಯಾವ ಜೀವನ ದೃಷ್ಟಿ ಯಲ್ಲ, ಸಂಸ್ಕೃತಿಯಲ್ಲೂ ಈ ಬಗೆಯ ವಿವಿಧ ರೀತಿಯ ಪೂರ್ಣ ತೇಜಸ್ವಿ ಜೀವನದ ನಿದರ್ಶನಗಳನ್ನು ಕಾಣಲು ಸಾಧ್ಯವಿಲ್ಲ. ಮೂಲತಃ ಪರಲೋಕ ಚಿಂತನೆಯಲ್ಲೇ ಮಗ್ನವಾದ ಯಾವ ಸಂಸ್ಕೃತಿಯ ಸಾವಿರಾರು ವರ್ಷಗಳು ಬಾಳಿ ಬದುಕಲೂ ಸಾಧ್ಯವಿಲ್ಲ.

ಆದರೂ ಕೆಲವರು ಭಾರತೀಯ ಭಾವನೆ ಮತ್ತು ಸಂಸ್ಕೃತಿ ಎಂದರೆ ಮುಖ್ಯವಾಗಿ ಜೀವನ ನಿರಸನ ತತ್ವವನ್ನು ಅವಲಂಬಿಸಿದೆ, ಜೀವನದ ಅಸ್ತಿತ್ವವನ್ನಲ್ಲ ಎಂದು ಭಾವಿಸಿದ್ದಾರೆ. ಈ ಎರಡು ತತ್ವಗಳೂ ಸ್ವಲ್ಪ ಹೆಚ್ಚು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಎಲ್ಲ ಪುರಾತನ ಸಂಸ್ಕೃತಿಗಳಲ್ಲ ಧರ್ಮ ಗಳಲ್ಲೂ ಕಂಡು ಬರುತ್ತದೆ. ಆದರೂ, ಕೆಲವು ದರ್ಶನಗಳು ಜೀವನ ನಿರಸನಕ್ಕೆ ಪ್ರಾಮುಖ್ಯತೆ ತೋರಿದರೂ, ಭಾರತೀಯ ಸಂಸ್ಕೃತಿ ಮಾತ್ರ ಒಟ್ಟಿನಲ್ಲಿ ಜೀವನ ನಿರಸನಕ್ಕೆ ಪ್ರಾಮುಖ್ಯತೆ ಕೊಡ ಲಿಲ್ಲ. ಇದರಲ್ಲಿ ಕಂಡುಬರುವ ನಿರಸನ ದೃಷ್ಟಿ ಸಹ ಕ್ರೈಸ್ತ ಮತದಲ್ಲಿ ಕಾಣುವುದಕ್ಕಿಂತ ಕಡಮೆ. ಬೌದ್ದ ಮತ್ತು ಜೈನ ಧರ್ಮಗಳು ಜೀವನದ ವಿಮುಖತೆಯನ್ನು ಬೋಧಿಸಿದವು. ಭಾರತೀಯ ಇತಿ ಹಾಸದಲ್ಲಿ, ಒಂದು ಕಾಲದಲ್ಲಿ, ಜನರು ಅಧಿಕ ಸಂಖ್ಯೆಯಲ್ಲಿ ಬೌದ್ಧ ವಿಹಾರಗಳಲ್ಲಿ ವಾಸಮಾಡುತ್ತ ಇದ್ದಾಗ ಜನತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವನವಿಮುಖತೆಯನ್ನು ಕಾಣಬಹುದಿತ್ತು. ಇದಕ್ಕೆ ಕಾರಣ ನನಗೆ ತಿಳಿಯದು. ಇದೇ ರೀತಿ ಅಥವ ಇನ್ನು ದೊಡ್ಡ ಪ್ರಮಾಣದಲ್ಲಿ ಯೂರೋಪಿನ ಮಧ್ಯ ಯುಗದಲ್ಲಿ ಪ್ರಪಂಚ ಮುಳುಗಿ ಹೋಗುತ್ತದೆ, ಎಂಬ ಭಾವನೆ ಬಹುಜನರಲ್ಲಿ ಹರಡಿದ್ದುದನ್ನು ಕಾಣ ಬಹುದು. ಪ್ರಾಯಶಃ ರಾಜಕೀಯ ಆರ್ಥಿಕ ಕಾರಣಗಳಿಂದ ಉಂಟಾದ ನಿರಾಶಾಭಾವನೆಯಿಂದ ಈ ರೀತಿ ಆತ್ಮತ್ಯಾಗದ ಜೀವನವು ನಿರಸನ ಬುದ್ದಿಯನ್ನು ಹುಟ್ಟಿಸಿರಬಹುದು.

ತಾತ್ವಿಕ ಪ್ರವೇಶ ಅಥವ ಪ್ರದೇಶಗಳು ಏನೆ ಇರಲಿ, ಬೌದ್ದ ಮತ ವಿಪರೀತಕ್ಕೆ ಹೋಗುವುದಿಲ್ಲ. ಮಧ್ಯವರ್ತಿಯಾದ ಸ್ವರ್ಣಮಾರ್ಗದ ಮತ ಅದು, ನಿರ್ವಾಣದ ಕಲ್ಪನೆ ಸಹ ಅನೇಕರು ತಿಳಿದಿರು ವಂತೆ ಒಂದು ಬಗೆಯ ಶೂನ್ಯತೆಯಲ್ಲ. ಅದು ಒಂದು ನಿಯತಸ್ಥಿತಿ. ಆದರೆ ಮಾನವನ ಕಲ್ಪನೆಗೆ ಎಟುಕದ ಕಾರಣ ಅದನ್ನು ನಿಷೇಧಾರ್ಥಕ ಶಬ್ದಗಳಿಂದ ವಿವರಿಸಿದರು. ಭಾರತೀಯ ಭಾವನೆ ಮತ್ತು ಸಂಸ್ಕೃತಿಯ ಆದರ್ಶಫಲವಾದ ಬೌದ್ದ ಮತ ಜೀವನ ನಿರಸನ ಅಥವ ತ್ಯಾಗದ ಧರ್ಮವಾ ಗಿದ್ದರೆ ಅದರ ಪ್ರಭಾವ ಕೋಟ್ಯಂತರ ಬೌದ್ಧ ಧರ್ಮಿಗಳ ಮೇಲೆ ಆಗಬೇಕಾಗಿತ್ತು. ಆದರೆ ನಿಶ್ಚಯವಾಗಿ ನೋಡಿದರೆ ಬೌದ್ಧ ಧರ್ಮ ಹರಡಿರುವ ರಾಷ್ಟ್ರಗಳಲ್ಲಿ ಅದರ ವಿರೋಧವೇ ಕಾಣು ತಿದೆ. ಜೀವನದಲ್ಲಿ ಆಸ್ತಿಕತೆಯಿಂದ ಏನಾಗಬಹುದು ಎಂಬುದಕ್ಕೆ ದೊಡ್ಡ ನಿದರ್ಶನ ಅದು,

ಭಾರತೀಯ ದರ್ಶನಗಳು ಜೀವನದ ಅಂತಿಮ ಗುರಿಯ ಕಡೆ ಹೆಚ್ಚು ಗಮನ ಕೊಡುತ್ತಿದ್ದು ದೆ ಈ ಒಂದು ಗೊಂದಲಕ್ಕೆ ಕಾರಣವಿರಬಹುದು. ತನ್ನ ತತ್ವದ ಪಾರಲೌಕಿಕ ವಿಷಯವನ್ನು ಮರೆ ಯಲು ಅದಕ್ಕೆ ಎಂದೂ ಸಾಧ್ಯವಿಲ್ಲ. ಆದ್ದರಿಂದ ತುಂಬು ಜೀವನವನ್ನು ಸ್ವೀಕರಿಸಿದರೂ, ಜೀವನ ದಾಸ್ಯಕ್ಕೆ ಜೀವನದ ಬಲಿಗೆ ಒಪ್ಪಲಿಲ್ಲ. ನಿಮ್ಮ ಸರ್ವ ಬಲವನ್ನೂ, ಶಕ್ತಿಯನ್ನೂ ಉಪಯೋಗಿಸಿ ನ್ಯಾಯವಾದ ಕರ್ಮಮಾಡಿ, ಕರ್ಮಕ್ಕೆ ದಾಸರಾಗಬೇಡಿ, ಆ ಕರ್ಮದ ಫಲಕ್ಕಾಗಿ ಕಾತರರಾಗಬೇಡಿ ಎಂದು ಸಾರಿತು. ಜೀವನದಲ್ಲಿ, ಕರ್ಮದಲ್ಲಿ ಒಂದು ನಿಷ್ಕಾಮ ಭಾವನೆಯನ್ನು ಕಲಿಸಿತು; ಅವುಗಳಿಂದ ವಿಮುಖತೆಯನ್ನಲ್ಲ. ಇತರ ಅನೇಕ ದರ್ಶನಗಳಲ್ಲಿ ಕಂಡು ಬರುವಂತೆ ಭಾರತೀಯ ಭಾವನೆ ಮತ್ತು ದರ್ಶನದಲ್ಲಿ ಈ ನಿಷ್ಕಾಮಭಾವನೆ ಉದ್ದಕ್ಕೂ ಹರಿದುಬಂದಿದೆ. ಇದು ವ್ಯಕ್ತ ಮತ್ತು ಅವ್ಯಕ್ತ ಪ್ರಪಂಚ ಗಳ ಮಧ್ಯೆ ಸರಿಯಾದ ಸಮತೂಕ ಮತ್ತು ನಿಲುವು ಇರುವುದು ಅವಶ್ಯವೆಂದು ಇನ್ನೊಂದು ರೀತಿಯಲ್ಲಿ