ಪುಟ:ಭಾರತ ದರ್ಶನ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಭಾರತ ದರ್ಶನ

ಹೇಳಿದಂತೆ, ಏಕೆಂದರೆ ವ್ಯಕ್ತ ಪ್ರಪಂಚದಲ್ಲಿ ಕರ್ಮ ಬಂಧನವೇ ಹೆಚ್ಚಾದರೆ ಇನ್ನೊಂದು ಪ್ರಪಂಚವೇ ಮರೆತು ಮಾಯವಾಗುತ್ತದೆ ಮತ್ತು ಆ ಕರ್ಮ ಅಂತಿಮ ಗುರಿಯಿಲ್ಲದುದಾಗುತ್ತದೆ.

ಭಾರತೀಯ ಮನಸ್ಸಿನ ಈ ಮೊದಲ ಸಾಹಸೋದ್ಯಮಗಳಲ್ಲಿ ಸತ್ಯಕ್ಕೆ ಮಹತ್ವವಿದೆ, ಸತ್ಯದ ಅವಲಂಬನೆಯಿದೆ, ಸತ್ಯ ಪರಾಯಣತೆ ಇದೆ. ಜಾತಿ ಮತ ಸಿದ್ಧಾಂತಗಳು ಅಪೌರುಷೇಯ ದರ್ಶನಗಳೂ ಆ ಮಟ್ಟಕ್ಕೆ ಏರಲಾರದ ಅಲ್ಪಮತಿಗಳಿಗೆ ಮಾಸಲಾಗಿದೆ. ಸ್ವಾನುಭವದ ಜ್ಞಾನ ಪ್ರಯೋಗದಿಂದ ವಿಷಯ ಪ್ರವೇಶ ಮಾಡುತ್ತಿದ್ದ ಕಾಲ ಅದು. ಎಲ್ಲ ಭಾವಮಯ ಮತ್ತು ಭೌತಾತೀತ ಅನುಭವಗಳಂತೆ ಅವ್ಯಕ್ತ ಪ್ರಪಂಚದ ಆ ಅನುಭವ ವ್ಯಕ್ತ ಬಾಹ್ಯ ಪ್ರಪಂಚದ ಅನುಭವಕ್ಕಿಂತ ಭಿನ್ನ ವಿರುತ್ತಿತ್ತು. ನಮಗೆ ಗೋಚರವಿರುವ ಮೂರು ಪರಿಮಾಣಗಳ ಪ್ರಪಂಚವನ್ನು ಮಾರಿದ ಬೇರೊಂದು ವಿಶಾಲ ಪ್ರಪಂಚಕ್ಕೆ ಹೋಗುತ್ತಿದ್ದಂತೆ ಭಾಸವಾಗುತ್ತಿತ್ತು. ಅದನ್ನು ಮೂರು ಪರಿಮಾಣಗಳಲ್ಲಿ ವಿವರಿಸುವುದೂ ಶಕ್ಯವಿರಲಿಲ್ಲ. ಆ ಅನುಭವ ಏನು, ಅದು ಸತ್ಯ ಮತ್ತು ವಾಸ್ತವಿಕತೆಯ ಅಂಶ ಏನಾದರೂ ಇರುವ ಒಂದು ದಿವ್ಯ ದೃಷ್ಟಿಯೇ ಅಥವ ಸಿದ್ದಿಯ ಅಥವ ಕಾಲ್ಪನಿಕ ದೃಷ್ಟಿ ಭ್ರಮೆಯೆ ನನಗೆ ತಿಳಿಯದು. ಪ್ರಾಯಶಃ ಅನೇಕ ವೇಳೆ ಆತ್ಮವಂಚನೆಯೂ ಇರಬಹುದು. ಆದರೆ ಮತತತ್ವದ ದೇವತಾಶಾಸ್ತ್ರದ ಅವಲಂಬನೆಯಿಲ್ಲದೆ ಸ್ವಪ್ರಯತ್ನದಿಂದ ಜೀವನದ ಬಾಹ್ಯ ವಿಷಯದಾಚೆ ಏನಿದೆ ಎಂದು ಕಂಡುಹಿಡಿ ಯಲು ಹೊರಟ ಪ್ರಯತ್ನ ಮತ್ತು ಪ್ರವೇಶ ನನಗೆ ಅತಿ ಮುಖ್ಯ.

ಭಾರತದಲ್ಲಿ ತಾತ್ವಿಕ ಅನ್ವೇಷಣೆ ಕೇವಲ ಕೆಲವು ತಾತ್ವಿಕರ ಅಥವ ಪ೦ಡಿ ತರ ಸ್ವತ್ತಾಗಿರಲಿಲ್ಲ ದರ್ಶನವು ಜನತೆಯ ಸಾಮಾನ್ಯ ಧರ್ಮದ ಒಂದು ಮುಖ್ಯ ಅಂಶವಾಗಿತ್ತು. ಕಂಡೂ ಕಾಣದಂತೆ ಹೇಗೋ ಜನ ಜೀವನದಲ್ಲಿ ಪ್ರವಹಿಸಿ ಚೀನದಂತೆ ಇಂಡಿಯದಲ್ಲ ಒಂದು ದಾರ್ಶನಿಕ ದೃಷ್ಟಿಯನ್ನು ಹುಟ್ಟಿಸಿತು. ಕೆಲವರು ಆ ದರ್ಶನವನ್ನು ಎಲ್ಲ ಘಟನೆಗಳ ಕಾರಣ ಮತ್ತು ಸಿದ್ಧಾಂತಗಳನ್ನು ತಿಳಿದುಕೊಳ್ಳುವ ಗಾಢವಾದ ಜಟಿಲ ಪ್ರಯತ್ನ, ಜೀವನದ ಗುರಿಯನ್ನು ಅರಿಯುವ ಪ್ರಯತ್ನ, ಜೀವನದ ಅನೇಕ ವಿರೋಧಾಭಾಸಗಳಲ್ಲಿ ಒಂದು ನೈಸರ್ಗಿಕ ಐಕ್ಯತೆಯನ್ನು ಕಂಡುಹಿಡಿಯುವ ಪ್ರಯತ್ನ ಎಂದು ತಿಳಿದಿದ್ದಾರೆ. ಆದರೆ ಬಹುಜನರಿಗೆ ಅದು ಸರಳವಿಷಯವಾಗಿತ್ತು. ಅದು ಅವರಿಗೆ ಅಂತಿಮ ಗುರಿಯಾಗಿ ಕಾಠ್ಯ ಕಾರಣಗಳ ಭಾವನೆಯನ್ನು ಕೊಟ್ಟು ಕಷ್ಟ ನಿಷ್ಟುರಗಳನ್ನು ಎದೆಗೊಟ್ಟು ಎದುರಿಸುವ ಮತ್ತು ಸಂತುಷ್ಟಿ ಮತ್ತು ಸಂಯಮವನ್ನು ಕಳೆದುಕೊಳ್ಳದ ಒಂದು ಅಸಾಧ್ಯ ಧೈರ್ಯವನ್ನು ಅವರಿಗೆ ಕೊಟ್ಟಿತು. * ಚೀನ ಮತ್ತು ಇಂಡಿಯದ ಸನಾತನ ವಿವೇಕ, ತಾ-ಓ ಅಥವ ಸತ್ಯಮಾರ್ಗದ ಗುರಿ, ಪೂರ್ಣತೆಯನ್ನು ಪಡೆಯುವುದು, ಜೀವನದ ವಿವಿಧ ಕಾರ್ಯವನ್ನು ಜೀವನ ಆನಂದದಲ್ಲಿ ಸಮರಸಗೊಳಿಸುವುದು ” ಎಂದು ರವೀಂದ್ರರು ಡಾಕ್ಟರ್ ತಾಮ್-ಚಿತಾವೊಗೆ ಬರೆದರು. ಈ ವಿವೇಕದ ಒಂದು ಅಂಶ ನಿರಕ್ಷರಕುಕ್ಷಿಗಳೂ ಜ್ಞಾನಶೂನ್ಯರೂ ಆದರೂ ಜನತೆಯ ಮನಸ್ಸಿನಲ್ಲಿ ಮೂಡಿತು. ಏಳುವರ್ಷಗಳ ಕಾಲ ಘೋರಯುದ್ದ ವನ್ನು ನಡೆಸಿದರೂ ಚೀನೀಯರು ತಮ್ಮ ಧರ್ಮಶ್ರದ್ದೆ ಯ ನಿಲುವನ್ನು, ಮನಸ್ಸಿನ ಹರ್ಷವನ್ನು ಕಳೆದುಕೊಳ್ಳದೆ ಇರುವುದನ್ನು ನೋಡಿದ್ದೇವೆ. ಭಾರತದಲ್ಲಿ ನಮ್ಮ ಹೋರಾಟ ಬಹುಕಾಲದಿಂದ ನಡೆದಿದೆ. ಬಡತನ, ಕಷ್ಟ ಜೀವನ ನಮ್ಮ ಬೆನ್ನು ಅಂಟಿಬಂದಿವೆ. ಆದರೂ ನಕ್ಕು, ಹಾಡಿ, ಕುಣಿದು ನಲಿಯುತ್ತಾರೆ; ಇನ್ನೂ ಜನರು ಆಶಾಶೂನ್ಯರಾಗಿಲ್ಲ.

೭. ಸಂಘಟನೆ ಮತ್ತು ಸಮಾಜ ವ್ಯವಸ್ಥೆ : ಜಾತಿ ಪದ್ಧತಿಯ ಆರಂಭ.

ಆರ್ಯರ ಆಗಮನದಿಂದ ಇಂಡಿಯದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸಿದವು.-ಜನಾಂಗದ ಸಮಸ್ಯೆ ಗಳು ಮತ್ತು ರಾಜಕೀಯ ಸಮಸ್ಯೆಗಳು, ಸೋತ ದ್ರಾವಿಡರಿಗೆ ಸಹಸ್ರಾರು ವರ್ಷಗಳ ನಾಗರಿಕತೆಯ ಹಿನ್ನೆಲೆ ಇತ್ತು; ಆರರು ದ್ರಾವಿಡರಿಗಿಂತ ತಾವು ಬಹಳ ಶ್ರೇಷ್ಠರೆಂದು ಭಾವಿಸಿದ್ದರು, ಆದ್ದರಿಂದ ಇಬ್ಬರಮಧ್ಯೆ ಅಂತರಾಳ ಬಹಳ ದೊಡ್ಡದಿತ್ತು. ಇದಲ್ಲದೆ ಕೆಲವರು ಹಿಂದುಳಿದ ಅನಾಗರಿಕ ಜನರು,