ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೬೫

ಅಲೆಮಾರಿಗಳು, ಕಾಡು ಜನರು ಇದ್ದರು. ಈ ಜನಗಳ ಮಧ್ಯದ ಹೋರಾಟ ಮತ್ತು ಪರಸ್ಪರ ಪರಿ ಣಾಮದಿಂದ ಮುಂದಿನ ಶತಮಾನಗಳಲ್ಲಿ ಭಾರತೀಯ ಜೀವನದಲ್ಲಿ ಪ್ರಚಂಡ ಪರಿಣಾಮವಾಡಿದ ಜಾತಿ ಪದ್ಧತಿಯು ಕ್ರಮೇಣ ರೂಪುಗೊಂಡಿತು. ಪ್ರಾಯಶಃ ಇದು ಆರ್ಯರದೂ ಅಲ್ಲ ದ್ರಾವಿಡರದೂ ಅಲ್ಲ. ಅಂದಿನ ವಾಸ್ತವ ಪರಿಸ್ಥಿತಿಗನುಗುಣವಾಗಿ ವಿವಿಧ ಜನಾಂಗಗಳನ್ನು ಒಂದು ಸಮಾಜ ರಚನೆ ಯಲ್ಲಿ ಒಟ್ಟು ಗೂಡಿಸುವ ಪ್ರಯತ್ನ, ಆದರೆ ಅದರ ಬೆಲೆಯನ್ನು ತದನಂತರದ ಮೌಲ್ಯಗಳಿಂದ ಅಥವ ಬೆಳವಣಿಗೆಯಿಂದ ನಿಷ್ಕರ್ಷೆಮಾಡಲು ಸಾಧ್ಯವಿಲ್ಲ. ಆ ಕಾಲಕ್ಕೆ ಅದು ಸರಿತೋರಿತು. ಪ್ರಾಯಶಃ ಚೀನಾ ಒಂದು ಬಿಟ್ಟರೆ ಉಳಿದೆಲ್ಲ ನಾಗರಿಕತೆಗಳಲ್ಲಿ ಈ ಬಗೆಯ ಒಂದು ವಿಂಗಡಣೆ ನಡೆದಿದೆ. ಇರಾಣದಲ್ಲಿ ಸಸ್ಟೇನಿಯನ್ ಯುಗದಲ್ಲಿ ಆರ್ಯರ ಇನ್ನೊಂದು ಶಾಖೆಯಲ್ಲಿ ನಾಲ್ಕು ಪಂಗಡಗಳಿದ್ದವು. ಆದರೆ ಅವು ಕಠಿಣ ಜಾತಿಗಳಾಗಿ ಪರಿಣಮಿಸಲಿಲ್ಲ. ಗ್ರೀಸ್ ಮೊದಲುಗೊಂಡು ಈ ಎಲ್ಲ ಪುರಾತನ ನಾಗರೀಕತೆಗಳಲ್ಲಿ ಸಾಮೂಹಿಕ ಗುಲಾಮಗಿರಿಯಿತ್ತು. ಮನೆಯ ಆಳುಗಳು ಕೆಲವರಿದ್ದರೂ ಭಾರತದಲ್ಲಿ ಅ ಬಗೆಯ ಸಾಮೂಹಿಕ ದಾಸ್ಯ ಇರಲಿಲ್ಲ. ಪ್ಲೇಟೊ ತನ್ನ - ರಿಪಬ್ಲಿಕ್ ನಲ್ಲಿ ಚಾತುರ್ವಣ್ರಕ್ಕೆ ಸಮಾನವಾದ ನಾಲ್ಕು ಪಂಗಡಗಳನ್ನು ಹೇಳುತ್ತಾನೆ. ಮಧ್ಯಯುಗದ ಕ್ಯಾಥೋಲಿಕ್‌ ಮತದಲ್ಲಿ ಸಹ ಈ ಬಗೆಯ ಭೇದಗಳಿದ್ದವು,

ಆರ್ಯರು ಮತ್ತು ಅನಾರ್ಯರ ಮಧ್ಯೆ ಗೆರೆ ಕೊರೆದಂತೆ ಕಟ್ಟು ನಿಟ್ಟಾದ ವಿಭಜನೆಯಿಂದ ಜಾತಿ ಗಳಾದವು. ಅನಾರ್ಯರನ್ನು ಪುನಃ ದ್ರಾವಿಡ ಜನಾಂಗಗಳು, ಅನಾಗರಿಕರು ಎಂದು ವಿಂಗಡಿಸಿ ದರು. ಆರ್ಯರೆಲ್ಲ ಒಂದೇ ಗುಂಪಿನವರಾಗಿದ್ದರು. ಒಳಭೇದಗಳಿರಲಿಲ್ಲ. ಆರ್ಯ ಶಬ್ದದ ಮೂಲಧಾತುವಿನ ಅರ್ಥ ' ಉಳು' ಎಂದು, ಆರ್ಯರೆಲ್ಲರೂ ಕೃಷಿಕರಾಗಿದ್ದರು. ವ್ಯವಸಾಯದಲ್ಲಿ ನಿರತರಾಗಿರುವವರಿಗೆ ಗೌರವವಿತ್ತು. ನೆಲವನ್ನು ಉಳುವ ಕೃಷಿಕ ಪುರೋಹಿತನಾಗಿ, ಸೈನಿಕನಾಗಿ, ವ್ಯಾಪಾರಿಯಾಗಿ ಕೆಲಸಮಾಡುತ್ತಿದ್ದ. ಪೌರೋಹಿತ್ಯಕ್ಕೆಂದು ಒಂದು ಮಾಸಲಾದ ಪಂಗಡವಿರಲಿಲ್ಲ. ಆರ್ಯರನ್ನು ಅನಾರ್ಯರಿಂದ ಪ್ರತ್ಯೇಕಿಸಲು ವ್ಯವಸ್ಥೆಗೊಳಿಸಿದ ಜಾತಿ ವಿಭಜನೆಗಳು ಆರ್ಯರ ಮೇಲೆ ಪರಿಣಾಮವಾಡಿದವು. ಕಾರ್ಯವಿಭಜನೆ, ಪ್ರಾವೀಣ್ಯತೆ ಹೆಚ್ಚಿದಂತೆ ಹೊಸ ಪಂಗಡಗಳಾಗಿ ಹೊಸಜಾತಿಗಳಾದವು.

ಗೆದ್ದವರು ಸೋತವರನ್ನು ನಿರ್ನಾಮಮಾಡುವುದು ಅಥವ ಗುಲಾಮರನ್ನಾಗಿ ಮಾಡುವುದೇ ವಾಡಿಕೆಯಾಗಿದ್ದ ಕಾಲದಲ್ಲಿ ಈ ಜಾತಿ ಪದ್ಧತಿಯು ಬಹುವಿಧ ಕಾರ್ಯವೈಶಿಷ್ಟಕ್ಕನುಗುಣವಾಗಿ ಒಂದು ಶಾಂತಿಯುತ ಪರಿಹಾರ ಮಾರ್ಗವನ್ನು ತೋರಿತು. ಜೀವನವಿಭಜನೆಗಳಾದವು. ಕೃಷಿಕ ಜನಸಮುದಾಯದಿಂದ ಕೃಷಿ, ಕೈಗಾರಿಕೆ, ವ್ಯಾಪಾರವನ್ನವಲಂಬಿಸಿದವರು ವೈಶ್ಯರಾದರು ; ರಾಜರು, ಯೋಧರು, ಕ್ಷತ್ರಿಯರಾದರು; ರಾಷ್ಟ್ರದ ಆದರ್ಶಗಳನ್ನು ಕಾಪಾಡಿಕೊಂಡು ಬಂದು, ಅನುಷ್ಠಾನ ದಲ್ಲಿಟ್ಟು, ರಾಷ್ಟ್ರ ನೀತಿಯ ಮಾರ್ಗದರ್ಶಕರಾದ ಪುರೋಹಿತರು ಮತ್ತು ಜ್ಞಾನಿಗಳು ಬ್ರಾಹ್ಮಣ ರಾದರು. ಈ ಮೂರು ವರ್ಣಗಳ ಕೆಳಗೆ ಶ್ರಮಜೀವಿಗಳು, ಕೂಲಿಮಾಡುವವರು, ಇತರ ಕೃಷಿಕರು ಶೂದ್ರರಾದರು. ಸ್ಥಳೀಯ ಪಂಗಡಗಳು ಕ್ರಮೇಣ ಕೊನೆಯ ಶೂದ್ರ ಜಾತಿಯಲ್ಲಿ ಸೇರಿಕೊಂಡು ಶೂದ್ರರಾದರು. ಈ ಸಮ್ಮಿಶ್ರಣ ಕಾರ್ಯ ತಡೆಯಿಲ್ಲದೆ ನಡೆದಿದೆ. ಮೊದಲು ಮೊದಲು ಜಾತಿಗಳು ಒಂದ ಕ್ಕೊಂದು ಬೆರೆಯುತ್ತಿದ್ದವು ; ಕಾಠಿನ್ಯತೆ ಬಂದುದು ಬಹಳ ದಿನಗಳಾದ ಮೇಲೆ, ರಾಜ್ಯಾಡಳಿತ ಗಾರರಿಗೆ ಹೆಚ್ಚು ಸ್ವಾತಂತ್ರ್ಯವಿತ್ತು. ಯುದ್ಧದಲ್ಲಿ ಗೆದ್ದೋ ಅಥವಾ ಇನ್ನಾವ ರೀತಿಯಲ್ಲೂ ಅಧಿ ಕಾರ ದೊರೆತೊಡನೆ ಯಾವ ಜಾತಿಯವನಾದರೂ ಕ್ಷತ್ರಿಯನಾಗುತ್ತಿದ್ದ; ಪುರೋಹಿತನ ಸಹಾಯದಿಂದ ಯಾವುದೋ ಒಂದು ಸನಾತನ ಆರ್ಯಪುರುಷನ ವಂಶಜನೆಂದು ವಂಶವೃಕ್ಷವನ್ನು ಸೃಷ್ಟಿಸುತ್ತಿದ್ದ.

ಕ್ರಮೇಣ ಆರ್ಯ ಎಂಬ ಶಬ್ದಕ್ಕೆ ಜನಾಂಗದ ಅರ್ಥ ಹೋಗಿ ಕುಲೀನ ಎಂಬ ಅರ್ಥ ಬಂದಿತು, ಅಂತೆಯೇ ಅನಾರ್ಯ ಎಂದರೆ ನಿಕೃಷ್ಟ ಎಂದು ಅರ್ಥವಾಗಿ, ಸಾಮಾನ್ಯವಾಗಿ ಕಾಡುಜನರ ಅಲೆಮಾರಿಗಳ ಹೆಸರಾಯಿತು.

5