ದಾರ್ಥ್ಯ ಮತ್ತು ಮನೋನೈರ್ಮಲ್ಯ ಅತ್ಯವಶ್ಯಕವೆಂದು ಉವನಿಷತ್ತುಗಳಲ್ಲಿ ಮೇಲಿಂದ ಮೇಲೆ ಒತ್ತಾಯ ಮಾಡಿದ್ದಾರೆ. ಜ್ಞಾನ ಸಂಪಾದನೆಗೇ ಆಗಲಿ, ಅಥವ ಬೇರೆ ಯಾವ ಸಾಧನೆಗೇ ಆಗಲಿ ಆತ್ಮ ಸಂಯಮ, ದೇಹ ದಂಡನ ಮತ್ತು ಆತ್ಮತ್ಯಾಗ ಅತ್ಯಗತ್ಯ. ಈ ಬಗೆಯ ಒಂದು ವಿಧವಾದ ದೇಹ ದಂಡನೆ ಅಥವ ತಪಸ್ಸಿನ ಕಲ್ಪನೆ ಭಾರತೀಯ ಮಹಾಜ್ಞಾನಿಗಳಲ್ಲಿ ಮತ್ತು ಸಾಮಾನ್ಯ ಜನರಲ್ಲಿ ಅಂತರ್ಗತವಾಗಿದೆ. ಸಾವಿರ ವರ್ಷಗಳ ಹಿಂದೆ ಇದ್ದಂತೆ ಈಗಲೂ ಈ ಭಾವನೆ ಇದೆ ; ಗಾಂಧೀಜಿಯ ವರ ನಾಯಕತ್ವದಲ್ಲಿ ಇಂಡಿಯಾ ದೇಶವನ್ನು ತಲ್ಲಣಿಸಿದ ಮಹಾ ಹೋರಾಟಗಳ ಹಿಂದಿನ ಮನೋ ಭಾವನೆಯನ್ನು ಅರ್ಥಮಾಡಿಕೊಳ್ಳಲು ಇದು ಅತ್ಯಾವಶ್ಯಕ.
ಉಪನಿಷತ್ಕಾರರ ಉನ್ನತ ಭಾವನೆಗಳು, ಅವರು ಚಲಿಸುತ್ತಿದ್ದ ಶುದ್ದ ಮಾನಸಿಕ ವಾತಾವರಣ ಆ ಭಾವನೆಗಳ ಅರ್ಥವನ್ನು ಗ್ರಹಿಸಲು ಸಮರ್ಥರಾದ ಕೆಲವು ನಿಯೋಜಿತ ವ್ಯಕ್ತಿಗಳಗೆ ಮಾತ್ರ ಸಾಧ್ಯ ವಿತ್ತು. ಇದೆಲ್ಲ ಜನ ಸಾಮಾನ್ಯರ ತಿಳಿವಿನ ಮಟ್ಟವನ್ನು ಮಾರಿದ್ದು, ರಚನಾತ್ಮಕ ವ್ಯಕ್ತಿಗಳ ಸಂಖ್ಯೆ ಯಾವಾಗಲೂ ಅತ್ಯಲ್ಪ ; ಆದರೆ ಬಹು ಸಂಖ್ಯಾತರ ಶ್ರುತಿಗನುಗುಣವಾಗಿರುತ್ತದೆ ಮತ್ತು ಸದಾ ಬಹು ಸಂಖ್ಯಾತರನ್ನು ಮೇಲುಮಟ್ಟ ಕೊಯ್ದು ಇಬ್ಬರ ಮಧ್ಯದ ಅಂತರ ಆದಷ್ಟು ಕಡಮೆಯಾಗುವಂತೆ, ಮತ್ತು ಒಂದು ಸಾಂಸ್ಕೃತಿಕ ಸಮತೂಕ ಮತ್ತು ಪ್ರಗತಿ ಫಲಿಸುವಂತೆ ಅವರನ್ನು ಮುಂದಕ್ಕೊಯ್ಯು ತದೆ. ಈ ರಚನಾತ್ಮಕ ಅಲ್ಪಸಂಖ್ಯಾತರಿಲ್ಲದೆ ಹೋದರೆ ಎಲ್ಲ ನಾಗರಿಕತೆಗಳಿಗೂ ನಾಶ ಖಂಡಿತ. ಆದರೆ ರಚನಾತ್ಮಕ ದೃಷ್ಟಿ ಯ ಅಲ್ಪಸಂಖ್ಯಾತರಿಗೂ, ಬಹುಸಂಖ್ಯಾತರಿಗೂ ಇರಬೇಕಾದ ಮಧುರ ಬಾಂಧವ್ಯ ಕಡಿದರೂ ನಾಶವಾಗುತ್ತದೆ. ಸಮಾಜದಲ್ಲಿ ಅತ್ಯವಶ್ಯವಾದ ಸಾಮಾಜಿಕ ಒಗ್ಗಟ್ಟು ಹಾಳಾಗುತ್ತದೆ. ಕೊನೆಯಲ್ಲಿ ಆ ಅಲ್ಪ ಸಂಖ್ಯಾತರೇ ತಮ್ಮ ರಚನಾತ್ಮಕ ದೃಷ್ಟಿಯನ್ನು ನಾಶಮಾಡಿ ಕೊಂಡು ಬರಡು ಜನರಾಗುತ್ತಾರೆ.
ಎಲ್ಲರಂತೆ ನನಗೆ ಸಹ ಉಪನಿಷತ್ತುಗಳ ಕಾಲಸ್ಥಿತಿಯನ್ನು ಊಹಿಸುವುದಕ್ಕೆ ಮತ್ತು ಅ೦ದು ಘರ್ಷಣೆಯಲ್ಲಿದ್ದ ನಾನಾ ಶಕ್ತಿಗಳನ್ನು ವಿಭಜನೆ ಮಾಡುವದಕ್ಕೆ ಆಗದು. ಆದರೂ, ಸೂಕ್ಷ್ಮಮತಿಗ ಳಾದ ಅಲ್ಪಸಂಖ್ಯಾತರಿಗೂ ಮಂದಮತಿಗಳಾದ ಜನಸಾಮಾನ್ಯಕ್ಕೂ ಮಾನಸಿಕ ಸಂಸ್ಕೃತಿ ಭೇದ ಅಜಗಜಾಂತರವಿದ್ದರೂ ಇಬ್ಬರಿಗೂ ಮಧ್ಯೆ ಒಂದು ಬಾಂಧವ್ಯವಿತ್ತೆಂದೂ ವೈಷಮ್ಯವಂತೂ ಇರಲಿಲ್ಲ ವೆಂದೂ ನಾನು ಊಹಿಸುತ್ತೇನೆ. ಅವರ ವರ್ಣಾಶ್ರಮ ಧರ್ಮದ ಸಮಾಜದಲ್ಲಿ ಬೇರೆ ಬೇರೆ ಮಾನಸಿಕ ಮಟ್ಟಗಳೂ ಇದ್ದವು. ಸಮಾಜ ಅದನ್ನೊ ಸ್ಪಿ ಅದಕ್ಕೆ ಅವಕಾಶವನ್ನೂ ಕಲ್ಪಿಸಿತ್ತು. ಇದರಿಂದ ಒಂದು ವಿಧವಾದ ಸಾಮಾಜಿಕ ಸಮರಸತೆಯುಂಟಾಗಿ, ವಿರಸಗಳನ್ನು ತಪ್ಪಿಸುತ್ತಿದ್ದರು. ಉಪನಿಷತ್ತುಗಳ ಹೊಸ ಭಾವನೆಗಳನ್ನು ಸಹ, ಅದರ ಬಹುಮಟ್ಟಿನ ಒಳ ಅರ್ಥ ಕಡಮೆಯಾದರೂ ಜನಸಾಮಾನ್ಯರಲ್ಲಿ ರೂಢಿ ಯಿರುವ ಕುರುಡುನಂಬಿಕೆಗಳು ಮತ್ತು ಪಕ್ಷಪಾತಗಳಿಗೆ ಅನ್ವಯಿಸುವಂತೆ ಅನುವಾದಿಸುತ್ತಿದ್ದರು, ವರ್ಣಾಶ್ರಮ ಧರ್ಮಕ್ಕೆ ಯಾವ ಲೋಪವೂ ಬರಲಿಲ್ಲ ; ಹಾಗೆಯೇ ಉಳಿಯಿತು. ಏಕತ್ವವಾದದ ಭಾವನೆ ಧಾರ್ಮಿಕ ಉದ್ದೇಶಗಳಿಗಾಗಿ ಏಕದೇವತಾ ವಾದವಾಯಿತು. ಯಾವುದೋ ಒಂದು ಮಟ್ಟಕ್ಕೆ ಅವಶ್ಯವೆಂದು ಅನಾಗರಿಕ ನಂಬಿಕೆಗಳು ಮತ್ತು ಪೂಜಾ ಪದ್ಧತಿಗಳಿಗೆ ಸಹ ಮನ್ನಣೆ ಮಾತ್ರ ವಲ್ಲ, ಪ್ರೋತ್ಸಾಹವೂ ದೊರೆಯಿತು.
ಈ ರೀತಿ ಉಪನಿಷದ್ಭಾವನೆಗಳು ಜನಸಾಮಾನ್ಯದಲ್ಲಿ ಹರಡಿದರೂ ಯಾವ ಪ್ರಭಾವವನ್ನೂ ಬೀರಲಿಲ್ಲ. ರಚನಾತ್ಮಕ ಅಲ್ಪಸಂಖ್ಯಾತರಿಗೂ, ಬಹುಸಂಖ್ಯಾತರಿಗೂ ಮಧ್ಯದ ಬೌದ್ದಿಕ ಅಂತರ ಹೆಚ್ಚುತ್ತ ಬಂದಿತು. ಕಾಲಕ್ರಮೇಣ ಹೊಸ ಪ್ರವೃತ್ತಿಗಳಿಗೆ ಅವಕಾಶವಾಯಿತು. ಭೌತವಾದ, ಅಜೇಯತಾವಾದ, ನಿರೀಶ್ವರವಾದಗಳ ಪ್ರಚಂಡಮಾರುತಗಳಿದ್ದವು. ಇದರಿಂದ ಪುನಃ ಬೌದ್ಧ ಜೈನ ಮತಗಳು, ರಾಮಾಯಣ ಮತ್ತು ಮಹಾಭಾರತ ಸಂಸ್ಕೃತ ಮಹಾಪುರಾಣಗ್ರಂಥಗಳು ಹುಟ್ಟಿ ದವು. ಇಲ್ಲಿ ಪುನಃ ಭಿನ್ನ ಭಿನ್ನ ಮತಗಳ ಮತ್ತು ಭಾವನಾಮಾರ್ಗಗಳ ಸಮಿಾಕರಣ ಪ್ರಯತ್ನ ಮತ್ತೆ ನಡೆದಿದೆ, ಜನರ ಅಥವ ರಚನಾತ್ಮಕ ಅಲ್ಪಸಂಖ್ಯಾತರ ರಚನಾಶಕ್ತಿ ಪುನಃ ಈ ಕಾಲಗಳಲ್ಲಿ