ಪುಟ:ಭಾರತ ದರ್ಶನ.djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಭಾರತ ದರ್ಶನ

ಉಪನಿಷತ್ತುಗಳಲ್ಲಿನ ಗೂಢತತ್ವದೃಷ್ಟಿ ಆತನ ಮೇಲೆ ವಿಶೇಷ ಪರಿಣಾಮ ಮಾಡಿತು. ಈ ಅನೇಕ ತಾತ್ವಿಕ ವಿಚಾರಗಳು ಪ್ರೋಟನಸ್‌ನಿಂದ ಸಂತ ಅಗಸ್ಟೀನ್‌ಗೆ ಹೋಗಿ ಅವನ ಮೂಲಕ ಇಂದಿನ ಕ್ರೈಸ್ತ ಮತದ ಮೇಲೆ ಪ್ರಭಾವ ಬೀರಿದವು.

ಕಳೆದ ಒಂದೂವರೆ ಶತಮಾನಗಳ ಯೂರೋಪಿಯನರ ಭಾರತೀಯ ತತ್ವಶಾಸ್ತ್ರದ ಪುನರ್ದಶ್ರ ನವು ಯೂರೋಪಿನ ದಾರ್ಶನಿಕರು ಮತ್ತು ವಿದ್ವಾಂಸರ ಮೇಲೆ ಬಲವತ್ತರ ಪರಿಣಾಮಮಾಡಿದೆ. ನಿರಾಶಾವಾದಿಯಾದ ಶೋಪನ್ಸರನು ಈ ಸಂದರ್ಭದಲ್ಲಿ " ಉಪನಿಷತ್ತುಗಳ ಪ್ರತಿಯೊಂದು ವಾಕ್ಯ ದಿಂದಲೂ ಅಗಾಧವೂ, ಸ್ವತಂತ್ರವೂ, ಭವ್ಯವೂ ಆದ ಭಾವನೆಗಳು ಉದ್ಭವಿಸುತ್ತವೆ. ಎಲ್ಲಿ ನೋಡಿ ದರೂ ಉನ್ನತವೂ, ಪವಿತ್ರವೂ ಮತ್ತು ಶ್ರದ್ಧಾ ಪೂರ್ಣವೂ ಆದ ಭಾವನೆ ಇದೆ....ಪ್ರಪಂಚದಲ್ಲೆಲ್ಲ ಅಷ್ಟು ಉಪಯುಕ್ತವೂ ಉತ್ಕರ್ಷಕವೂ ಆದ ಅಧ್ಯಯನ ಬೇರೊಂದಿಲ್ಲ....ಅವು ಉತ್ತುಂಗ ಜ್ಞಾನದ ಮುಕ್ತಾ ಫಲಗಳು.....ಇಂದೋ ನಾಳೆಯೋ ವಿಶ್ವದ ಜನತೆಯ ಧರ್ಮವಾಗಲು ಯೋಗ್ಯವಾದವುಗಳು " ಎಂದಿದಾನೆ. ಪುನಃ “ ಉಪನಿಷತ್ತುಗಳ ಅಧ್ಯಯನ ನನ್ನ ಜೀವನಕ್ಕೆ ಶಾಂತಿಯನ್ನು ಕೊಟ್ಟಿದೆ ; ಮರಣದ ಮುಕ್ತಿಯನ್ನೂ ಕೊಡುತ್ತದೆ.” ಎಂದಿದಾನೆ. ಇದರ ಮೇಲೆ ಮ್ಯಾಕ್ಸ್ ಮುಲ್ಲರ್ “ಶೋಪ ನೌರನು ಹುಚ್ಚಾ ಬಟ್ಟೆ ಬರೆಯುವ ವ್ಯಕ್ತಿಯಲ್ಲ. ಗೂಢ ಅಸ್ಪಷ್ಟ ಭಾವನೆಗಳಿಂದ ಮೋಸಹೋಗಿ ಮನ ಸೋಲುವವನಲ್ಲ. ವೇದಾಂತ ವಿಷಯದಲ್ಲಿ ನನಗೂ ಅದೇ ಉತ್ಸಾಹವಿದೆ ಎಂದು ಹೇಳಲು ನನಗೆ ನಾಚಿಕೆಯೂ ಇಲ್ಲ ; ಭಯವೂ ಇಲ್ಲ. ನನ್ನ ಜೀವನ ಪಥದಲ್ಲಿ ವೇದಾಂತವು ನನಗೆ ತೋರಿದ ಸಹಾಯಕ್ಕಾಗಿ ನಾನು ಎಷ್ಟು ಋಣಿಯಾಗಿದ್ದರೂ ತೀರದು ” ಎಂದಿದ್ದಾನೆ.

ಇನ್ನೊಂದು ಕಡೆ ಮ್ಯಾಕ್ಸ್ ಮುಲ್ಲರ್ “ ವೇದಾಂತ ದರ್ಶನಕ್ಕೆ ಉಪನಿಷತ್ತುಗಳು ಮೂಲ. ಈ ವೇದಾಂತ ಪದ್ದತಿಯಲ್ಲಿ ಮಾನವ ಭಾವನೆ ತನ್ನ ಅತ್ಯುನ್ನತ ಶಿಖರವನ್ನು ಮುಟ್ಟಿದೆ. ನನ್ನ ಅತ್ಯಂತ ಸುಖನಿಮಿಷಗಳು ನಾನು ವೇದಾಂತವನ್ನು ಪಠಿಸುವಾಗ, ಅವು ನನಗೆ ನವ ಅರುಣೋದಯದ ಹೊಂಬೆಳಕಂತೆ, ಉನ್ನತ ಗಿರಿತಟದ ಶುಭ್ರ ಗಾಳಿಯಂತೆ, ಒಂದು ಬಾರಿ ಅರ್ಥವಾಯಿತೆಂದರೆ ಅಷ್ಟು ಸರಳಸತ್ಯ” ಎಂದಿದಾನೆ.

ಆದರೆ ಉಪನಿಷತ್ತುಗಳನ್ನು ಮತ್ತು ಇತ್ತೀಚಿನ ಭಗವದ್ಗೀತೆಯನ್ನು ಅತ್ಯಂತ ಮುಕ್ತಕಂಠ ದಿಂದ ಹೊಗಳಿರುವುದೆಂದರೆ ಇಲ್ಲೆ೦ಡಿನ ಕವಿಯಾದ ಜಿ. ಡಬ್ಬು , ರಸ್ಸೆಲ್ ರು. “ ಆಧುನಿಕರಲ್ಲಿ ಗೈಟೆ, ವ‌ವರ್ತ್, ಎಮಲ್ಸನ್, ಥೋರೊ ಮುಂತಾದ ಕೆಲವರಲ್ಲಿ ಈ ಅಂತಃಸತ್ವ ಮತ್ತು ವಿವೇಕದ ಕೆಲವಂಶ ಇವೆ, ಆದರೆ ಅವರು ಹೇಳಿರುವುದೆಲ್ಲವನ್ನು ಮತ್ತು ಇನ್ನೂ ಇತರ ಅನೇಕ ವಿಷಯಗಳನ್ನು ಭಾರತೀಯರ ಮಹಾ ಪವಿತ್ರ ಗ್ರಂಥಗಳಲ್ಲಿ ಕಾಣಬಹುದು. ಭಗವದ್ಗೀತೆ ಮತ್ತು ಉಪನಿಷತ್ತು ಗಳಲ್ಲಿನ ಸರ್ವಸಂಪೂರ್ಣ ಜ್ಞಾನ ಸಂಪತ್ತು ದೈವಿಕವಾದದ್ದು. ವಾಸ್ತವಿಕ ದೃಷ್ಟಿಯಿಂದ ಇದು ನಿಶ್ಚಿತ ಎಂದು ಒಂದು ಆತ್ಮ ನಿರ್ಣಯದಿಂದ ಬರೆಯುವ ಮುನ್ನ ಉಪನಿಷತ್ಕಾರರು ಸಹಸ್ರಾರು ವಿಭೂತಿ ಪುರುಷರು ಯಾವುದೋ ಕಾಣದ ವಸ್ತುವಿನೊಡನೆ ಅವಿಶ್ರಾಂತ ಹೋರಾಡಿ ಪಡೆದ ಅನುಭವವನ್ನು ಒಂದು ಪ್ರಶಾಂತಸ್ಮರಣೆಯಿಂದ ನೋಡಿ ಬರೆದಿರಬೇಕು ” ಎಂದಿದಾನೆ.*

೧೦. ವ್ಯಕ್ತಿ ಪ್ರಾಧಾನ್ಯ ತತ್ವಶಾಸ್ತ್ರದ ಅನುಕೂಲ ಪ್ರತಿಕೂಲಗಳು.

ಫಲದಾಯಕ ಪ್ರಗತಿಯಾಗಬೇಕಾದರೆ ದೈಹಿಕ ಮತ್ತು ಮಾನಸಿಕ ಶಿಕ್ಷಣ ಆವಶ್ಯಕ, ದೇಹ

——————

*ಛಾಂದೋಗ್ಯ ಉಪನಿಷತ್ತಿನ ಈ ಶ್ಲೋಕ ಅರ್ಥಗರ್ಭಿತವಿದೆ “ ಸೂರ್ಯನು ಹುಟ್ಟುವುದೂ ಇಲ್ಲ; ಮುಳುಗು ವುದೂ ಇಲ್ಲ. ಸೂರ್ಯ ಮುಳುಗುತ್ತಾನೆಂದು ಜನ ಯೋಚಿಸಿದಾಗ ದಿನದ ಅಂತ್ಯವನ್ನು ಮುಟ್ಟಿ ರಾತ್ರಿಯಾಗುತ್ತದೆ, ಅಲ್ಲಿ ರಾತ್ರಿಯಾದದ್ದು ಹಗಲಾಗುತ್ತದೆ. ಬೆಳಗ್ಗೆ ಜನ ಎದ್ದಾಗ ಸೂರ ಹುಟ್ಟಿದ ಎಂದರೆ ರಾತ್ರಿಯನ್ನು ಮುಗಿಸಿ ಇಲ್ಲಿ ಹಗಲು ; ಅಲ್ಲಿ ಹಗಲು ಮುಗಿದು ರಾತ್ರಿ. ಸೂರ ಮುಳುಗುವುದೇ ಇಲ್ಲ.”