ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೮
ಭಾರತ ದರ್ಶನ

ಅಪೌರುಷೇಯತೆಯ ಕಡೆಗೆ ಮನಸ್ಸು ತಿರುಗಿ ಜನತೆಯ ಮೂಲ ಆದರ್ಶಗಳು ಅಧೋಗತಿಗಿಳಿದವು. ಇಹಪ್ರಪಂಚಕ್ಕಿಂತ ಪರಲೋಕಕ್ಕೆ ಹೆಚ್ಚು ಪ್ರಾಧಾನ್ಯತೆ ದೊರೆಯಿತು. ಸ್ಕೋಯಿಕ್ ಮತ್ತು ಎಪಿಕ್ಯೂರಿಯನ್ ದರ್ಶನಗಳು ಜನ್ಮ ತಾಳಿದವು. ಅಲ್ಪ ಮತ್ತು ಅನೇಕವೇಳೆ ವಿರುದ್ಧ ಪ್ರಮಾಣಗಳಿಂದ ಐತಿಹಾಸಿಕ ತುಲನೆಮಾಡುವುದು ಅಪಾ ಯಕರ ಮತ್ತು ಅಡ್ಡ ದಾರಿಗೆಳೆದಂತೆ. ಆದರೂ ಆ ಚಾಪಲ್ಯ ಹೋಗುವುದಿಲ್ಲ. ಮಹಾಭಾರತ ಯುದ್ಧದ ನಂತರದ ಪ್ರಕ್ಷುಬ್ದ ಮಾನಸಿಕ ವಾತಾವರಣವನ್ನು ನೋಡಿದರೆ ಹೆಲೆನಿಕ್ ಕಾಲಾನಂತರದ ಗ್ರೀಸಿ ನಂತೆಯೇ ಕಾಣುತ್ತದೆ. ಆದರ್ಶಗಳಲ್ಲಿ ಅಸಭ್ಯತೆ ಮೂಡಿ ಹೊಸ ದರ್ಶನ ಮಾರ್ಗಾನ್ವೇಷಣೆಗಾರಂಭ ವಾಯಿತು. ರಾಜಕೀಯದಲ್ಲೂ, ಆರ್ಥಿಕ ಸ್ಥಿತಿಯಲ್ಲೂ ಇದೇಬಗೆಯ ಅಂತರ್ವಿಪ್ತ ವಗಳು ಆಗಿರ ಬೇಕು. ಗಣರಾಜ್ಯಗಳು, ನಗರ ರಾಷ್ಟ್ರಗಳು ನಾಶವಾಗಿ ರಾಜ್ಯ ಶಕ್ತಿಯ ಕೇಂದ್ರೀಕರಣ ಪ್ರಯತ್ನ ನಡೆದಿರಬೇಕು,

ಆದರೆ ಈ ಸಾಮ್ಯದಿಂದ ಹೆಚ್ಚು ಲಾಭವಿಲ್ಲ. ಇನ್ನು ಕೆಲವು ಶತಮಾನಗಳು ಮೆಡಿಟರೇನಿರ್ಯ ತೀರದಲ್ಲಿ ಗ್ರೀಕ್ ನಾಗರಿಕ ಜೀವಂತವಿದ್ದು ರೋಮ್ ಮತ್ತು ಯೂರೋಪಿನ ಮೇಲೆ ತನ್ನ ಪ್ರತಿಭೆ ಯನ್ನು ಬೀರಿದರೂ ಈ ಆಘಾತಗಳಿಂದ ಗ್ರೀಸ್ ಚೇತರಿಸಿಕೊಳ್ಳಲೇ ಇಲ್ಲ. ಆದರೆ ಭಾರತವು ಮಾತ್ರ ಅತ್ಯಾಶ್ಚರ್ಯಕರವಾಗಿ ತನ್ನ ಸ್ವಾಸ್ಥ್ಯವನ್ನು ಪಡೆಯಿತು, ಪುರಾಣ ಮತ್ತು ಬೌದ್ಧ ಯುಗಗಳ ಸಾವಿರಾರು ವರ್ಷಗಳಲ್ಲಿ ಅದ್ಭುತ ನಿರ್ಮಾಣಶಕ್ತಿಯನ್ನು ವ್ಯಕ್ತಪಡಿಸಿತು. ತತ್ವಶಾಸ್ತ್ರ, ಸಾಹಿತ್ಯ, ನಾಟಕ, ಗಣಿತಶಾಸ್ತ್ರ ಮತ್ತು ಕಲೆಗಳಲ್ಲಿ ಅಸಂಖ್ಯಾತ ಮಹಾ ವ್ಯಕ್ತಿಗಳು ಕಾಣುತ್ತಾರೆ. ಕ್ರಿಸ್ತಶಕೆಯ ಆರಂಭಕಾಲದ ಅದ್ಭುತಶಕ್ತಿ ಸ್ಫೋಟನದಿಂದ ವಲಸೆಸಾಹಸಗಳ ಪ್ರಯತ್ನ ನಡೆದು ಪೂರ್ವಸಮುದ್ರ ಗಳಾಚೆಯ ದೂರದ್ವೀಪಗಳಿಗೆ ಭಾರತೀಯರ ಮತ್ತು ಅವರ ಸಂಸ್ಕೃತಿಯ ಸೀಮೋಲ್ಲಂಘನವು ಸಹ ಆಯಿತು.

೧೨. ಪುರಾಣಗಳು, ಇತಿಹಾಸ, ಶಿಷ್ಟಾಚಾರ ಮತ್ತು ಕಾಲ್ಪನಿಕಕಥೆಗಳು

ಪ್ರಾಚೀನ ಭಾರತದ ಮಹಾ ಪುರಾಣಗಳಾದ ರಾಮಾಯಣ ಮಹಾಭಾರತಗಳು ಪ್ರಾಯಶಃ ಅನೇಕ ಶತಮಾನಗಳಲ್ಲಿ ರೂಪುಗೊಂಡಿರಬೇಕು. ಅನಂತರ ಪ್ರಕ್ರಿಗಳೂ ಆಗಿರಬೇಕು. ಇಂಡೊ ಆರರ ಆರಂಭದ ದಿನಗಳು, ಅವರ ವಿಜಯಗಳು, ಅವರು ವಿಸ್ತಾರಗೊಂಡು ಬಲ ಪಡಿಸಿಕೊಳ್ಳುತ್ತಿ ದ್ದಾಗ ನಡೆದ ಅಂತರ್ಯುದ್ದ ಗಳು ಇವುಗಳ ಕಥೆ. ಆದರೆ ಅವುಗಳ ರಚನೆ ಮತ್ತು ಸಂಕೀರ್ಣ ಅನಂ ತರ, ಭಾರತ ಜನಮನದ ಮೇಲೆ ಈ ಎರಡು ಗ್ರಂಥಗಳು ಮಾಡಿರುವ ಅದ್ಭುತ ಪ್ರಭಾವದಂತೆ ಬೇರೆಲ್ಲ ಯಾವ ಗ್ರಂಥದಿಂದಲೂ ಆಗಿಲ್ಲ. ಪ್ರಾಚೀನತೆಯ ದಿಗಂತದಲ್ಲಿ ಉದ್ಭವಿಸಿದ್ದರೂ ಭಾರತೀಯರ ಜೀವನದಲ್ಲಿ ಈ ಮಹಾ ಕಾವ್ಯಗಳು ಇಂದಿಗೂ ಸಜೀವಶಕ್ತಿಗಳಾಗಿವೆ, ಮೂಲ ಸಂಸ್ಕೃತ ಗ್ರಂಥಗಳು ಕೆಲವು ವಿದ್ವಾಂಸರಿಗೆ ಮಾತ್ರ ಪರಿಚಯವಿರಬಹುದು. ಆದರೆ ಅನುವಾದಗಳಲ್ಲಿ ರೂಪಾಂತರಗಳಲ್ಲಿ ಮತ್ತು ಸಂಪ್ರದಾಯ ಮತ್ತು ಪುರಾಣಗಳು ಜನಸಾಮಾನ್ಯದಲ್ಲಿ ಹರಡಿ, ಜನಜೀವನದ ಹಾಸುಹೊಕ್ಕಾ ಗಬಹುದಾದ ಅಸಂಖ್ಯಾತ ವಿಧಗಳಲ್ಲಿ ಭಾರತ ಜನತೆಗೆ ರಕ್ತಗತವಾಗಿವೆ. ಮಹಾಜ್ಞಾನಿಯಿಂದ ಮೊದಲುಗೊಂಡು ಓದು ಬರಹವಿಲ್ಲದ ಸರಳ ಹಳ್ಳಿಗನವರೆಗೆ ವಿವಿಧಮಟ್ಟದ ಸಂಸ್ಕೃತಿಯ ಎಲ್ಲ ಜನರಿಗೂ ಏಕಕಾಲದಲ್ಲಿ ಅವರವರ ಭಿನ್ನ ರುಚಿಗನುಗುಣವಾಗಿ ಮಾನ್ಯವಾದ ಭಾರತೀಯ ಸಂಸ್ಕೃ ತಿಯ ವೈಶಿಷ್ಟಗಳು ಅವು. ನಾನಾರೀತಿಯಲ್ಲಿ ವಿಂಗಡವಾಗಿ ವರ್ಣ ವಿಭಜನೆಯಿಂದ ಬಹು ಮುಖವಾದ ಸಮಾಜದಲ್ಲಿ ನೈತಿಕ ಜೀವನದ ಮತ್ತು ಸಾಹಸ ಪರಂಪರೆಯ ಸಾಮಾನ್ಯ ಹಿನ್ನೆಲೆ ಯನ್ನು ಕೊಟ್ಟು ಒಗ್ಗಟ್ಟನ್ನುಂಟುಮಾಡಿದ ಪುರಾತನ ಭಾರತೀಯರ ರಹಸ್ಯವನ್ನರಿತುಕೊಳ್ಳಲು ಈ ಮಹಾಕಾವ್ಯಗಳು ಸ್ವಲ್ಪ ಮಟ್ಟಿಗೆ ಸಹಾಯಕವಾಗಿವೆ. ಜನತೆಯ ದೃಷ್ಟಿ ಏಕತ್ರವಾಗಿರುವಂತೆ ಮನಃಪೂರ್ವಕವಾಗಿ ಸಾಹಸಪಟ್ಟರು. ಆ ಪ್ರಯತ್ನದಿಂದ ಎಲ್ಲ ಕಷ್ಟಗಳನ್ನೂ ಎದುರಿಸಿ ನಿವಾರಿಸಿ ಕೊಳ್ಳಲು ಸಾಧ್ಯವಾಯಿತು,