ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೭೭

ಇದೆಲ್ಲವನ್ನೂ ನಾವು ಈಗ ಒಪ್ಪುತ್ತೇವೆ. ಅದು ಎರಡು ಸಾವಿರ ವರ್ಷಗಳ ಹಿಂದಿನದು ಎನ್ನು ವದ ಕ್ಕಿಂತ ನಮ್ಮ ಕಾಲದ್ದೆ ನ್ನು ವಂತಿದೆ. ಈ ಭಾವನೆಗಳು, ಈ ಸಂಶಯ ಮತ್ತು ತಳಮಳಗಳು, ಸಾಂಪ್ರ ದಾಯಿಕ ಅಧಿಕಾರದ ವಿರುದ್ದದ ಈ ಮಾನಸಿಕ ದಂಗೆ ಹೇಗೆ ಉದ್ಭವಿಸಿತು ? ಅಂದಿನ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿ ನಮಗೆ ಏನೂ ತಿಳಿಯದು ; ಆದರೆ ಅದು ರಾಜಕೀಯ ಹೋರಾಟದ ಕಾಲ ; ಸಾಮಾಜಿಕ ವಿಜ್ಞ ವದ ಕಾಲ; ಧರ್ಮ ಶಿಥಿಲವಾಗುವ ಕಾಲ ; ಮಾನಸಿಕ ತೃಪ್ತಿಗಾಗಿ ಹೊಸ ಬೆಳಕಿಗಾಗಿ ವಿಶೇಷ ಬೌದ್ಧಿಕ ವಿಚಾರ ಮತ್ತು ಶೋಧನೆ ನಡೆದ ಕಾಲ ಎಂದು ಸ್ಪಷ್ಟವಾಗುತ್ತದೆ. ಈ ಒಂದು ಮಾನಸಿಕ ಕೋಭೆಯಿಂದ ಮತ್ತು ಸಾಮಾಜಿಕ ನ್ಯೂನತೆಯಿಂದ ಹೊಸ ದಾರಿ ಹಿಡಿದು ಹೊಸ ದರ್ಶನಗಳು ರೂಪುಗೊಂಡವು. ಕ್ರಮಬದ್ದ, ಉಪನಿಷತ್ತುಗಳ ಭಾವನಾತ್ಮಕ ಪ್ರವೇಶವಲ್ಲ, ಆದರೆ ಸೂಕ್ಷವಿಚಾರ ಮತ್ತು ವಾದಸರಣಿಯ ದರ್ಶನಗಳು ಅನೇಕ ರೂಪದಲ್ಲಿ ಹೊರ ಹೊಮ್ಮಿದವು ; ಜೈನ ಬೌದ್ದ ಮತ್ತು ಹಿಂದೂ ದರ್ಶನಗಳು ಅವತರಿಸುತ್ತವೆ. ಪುರಾಣಗಳು ಮತ್ತು ಭಗವದ್ಗೀತೆ ಇದೇ ಕಾಲದವು. ಈ ಕಾಲದಲ್ಲಿ ದರ್ಶನಗಳು ಮತ್ತು ಸಿದ್ಧಾಂತಗಳು ಒಂದರ ಮೇಲೊಂದು ತಡೆಯಿಲ್ಲದೆ ಬಂದು, ಪರಸ್ಪರ ಪ್ರತಿಕ್ರಿಯೆ ಮಾಡಿದ ಕಾಲವಾದ್ದರಿಂದ ನಿಶ್ಚಿತ ಕ್ರಮಾನುಗತ ಚರಿತ್ರೆಯನ್ನು ಬರೆಯಲು ಸಾಧ್ಯವಿಲ್ಲ. ಬುದ್ಧನ ಕಾಲ ಕ್ರಿಸ್ತಪೂರ್ವ ಆರನೆಯ ಶತಮಾನ. ಈ ಕೆಲವು ಘಟನೆಗಳು ಆತನಿಗೆ ಮೊದಲೇನಡೆದಿದ್ದವು. ಇನ್ನುಳಿದವು ಅನಂತರದವು ಅಥವ ಒಟ್ಟಿಗೆ ಬೆಳೆದವು.

ಬೌದ್ಧ ಧರ್ಮದ ಉಚ್ಛಾಯ ಸ್ಥಿತಿಯಲ್ಲಿ ಪರ್ಷಿಯ್ರ ಸಾಮ್ರಾಜ್ಯ ಸಿಂಧೂನದಿಯವರೆಗೆ ಹರಡಿತ್ತು. ಇಂಡಿಯದ ಗಡಿಯವರೆಗೂ ಒಂದು ದೊಡ್ಡ ಪರರಾಷ್ಟ ಬಂದದ್ದು ಜನಮನದ ಮೇಲೆ ಅಸಾಧ್ಯ ಪರಿಣಾಮ ಮಾಡಿರಬೇಕು. ಕ್ರಿಸ್ತ ಪೂರ್ವ ನಾಲ್ಕನೆಯ ಶತಮಾನದಲ್ಲಿ ವಾಯವ್ಯ ಮೂಲೆ ಯಲ್ಲಿ ಅಲೆಕ್ಸಾಂಡರ್ ಇಂಡಿಯದ ಮೇಲೆ ಸ್ವಲ್ಪ ಕಾಲ ದಂಡೆತ್ತಿ ಬಂದ. ಅದೇನೊ ಅಲ್ಪ ವಿಷಯ, ಆದರೆ ಇ೦ಡಿಯದಲ್ಲಿ ಅದರಿಂದ ಅದ್ಭುತ ಬದಲಾವಣೆಗಳಾದವು. ಅಲೆಕ್ಸಾಂಡರನ ಮರಣದ ಮರು ಕ್ಷಣದಲ್ಲಿಯೇ ಚಂದ್ರಗುಪ್ತ ಮೌಲ್ಯನು ಚಕ್ರಾಧಿಪತ್ಯವನ್ನು ಕಟ್ಟಿದ. ಐತಿಹಾಸಿಕ ದೃಷ್ಟಿಯಿಂದ ಇ೦ಡಿಯದಲ್ಲಿ ಅದೇ ಮೊದಲನೆಯ ಶಕ್ತಿಯುತ, ವಿಶಾಲ, ಕೇಂದ್ರೀಕೃತ ರಾಷ್ಟ್ರ, ಇ೦ಡಿಯದಲ್ಲಿ, ಇತಿಹಾಸದಲ್ಲಿ ಅಂಥ ಅನೇಕ ರಾಜರುಗಳು ಚಕ್ರವರ್ತಿಗಳು ಇದ್ದಾರೆ. ಮಹಾ ಪುರಾಣ ಒಂದರಲ್ಲಿ ಭಾರತದ ಪ್ರಾಯಶಃ ಉತ್ತರ ಹಿಂದೂಸ್ಥಾನದ ರಾಜ್ಯ ಪದವಿಗಾಗಿ ಒಂದು ಮಹಾಯುದ್ದವೂ ನಡೆದಿದೆ. ಪ್ರಾಯಶಃ ಪುರಾತನ ಭಾರತವೂ ಪುರಾತನ ಗ್ರೀಸಿನಂತೆ ಸಣ್ಣ ಸಣ್ಣ ರಾಜ್ಯಗಳ ಒಂದು ಗುಂಪಾಗಿರ ಬೇಕು. ಜನಗಳ ಪ್ರಜಾಪ್ರಭುತ್ವಗಳು ಕೆಲವು ಇದ್ದವು. ಕೆಲವು ಬಹು ದೊಡ್ಡವೂ ಇದ್ದವು, ಇನ್ನು ಕೆಲವು ಸಣ್ಣ ಪಾಳೆಯಪಟ್ಟುಗಳೂ ಇದ್ದವು. ಗ್ರೀಸಿನಲ್ಲಿದ್ದಂತೆ ಇನ್ನೂ ಕೆಲವು ಪ್ರಬಲ ವರ್ತಕ ಮಂಡಲ ಗಳ ನಗರ ರಾಜ್ಯಗಳಿದ್ದವು. ಬುದ್ಧನ ಕಾಲದಲ್ಲಿ ಈ ಬಗೆಯ ಗಣರಾಜ್ಯಗಳು ಅನೇಕವಿದ್ದ ವು. ಮಧ್ಯ ಮತ್ತು ಉತ್ತರ ಹಿಂದೂಸ್ಥಾನದಲ್ಲಿ ನಾಲ್ಕು ಮುಖ್ಯ ರಾಜ್ಯಗಳಿದ್ದವು. ಅವುಗಳಲ್ಲಿ ಗಾಂಧಾರ ಅಥವ ಆಹ್ವಾನಿಸ್ಥಾನವೂ ಸೇರಿತ್ತು. ರಚನೆ ಏನೇ ಇರಲಿ ನಗರಾಡಳಿತ ಮತ್ತು ಗ್ರಾಮ ಪಂಚಾ ಯಿತಿಯ ಪ್ರತಿಷ್ಠೆ ಅದ್ಭುತವಿತ್ತು. ಸಾಮ್ರಾಜ್ಯಾಧಿಕಾರವನ್ನು ಒಪ್ಪಿದರೂ ಸಾಮ್ರಾಟನಿಗೆ ರಾಜ್ಯದ ಒಳಾಡಳಿತದಲ್ಲಿ ಪ್ರವೇಶವಿರಲಿಲ್ಲ. ಗ್ರೀಸ್‌ನಲ್ಲಿದ್ದಂತೆ ಪ್ರಾಯಶಃ ಉತ್ತಮ ವರ್ಗದವರ ಸ್ವತ್ತಾ ಗಿದ್ದ ಒಂದು ವಿಧವಾದ ಅರೆಬರೆಯ ಪ್ರಜಾಪ್ರಭುತ್ವವಿತ್ತು.

ಪುರಾತನ ಗ್ರೀಸ್ ಮತ್ತು ಇಂಡಿಯಗಳು ಅನೇಕ ವಿಧದಲ್ಲಿ ಭಿನ್ನ ವಿದ್ದರೂ ಇನ್ನು ಕೆಲವು ವಿಷಯಗಳಲ್ಲಿ ಬಹಳ ಸಾಮ್ಯವಿರುವುದನ್ನು ನೋಡಿದರೆ ಎರಡು ನಾಗರಿಕತೆಗಳ ಹಿನ್ನೆಲೆಯೂ ಒಂದೇ ವಿಧವಾಗಿದ್ದಿರಬೇಕೆಂಬ ಭಾವನೆಯುಂಟಾಗುತ್ತದೆ. ಅಧಿನಿಯನ್ ಪ್ರಜಾ ಪ್ರಭುತ್ವದ ವಿನಾಶಕ್ಕೆ ಕಾರಣಭೂತವಾದ ಪೆಲೊಪೊನೇಷಿಯನ್ ಯುದ್ಧವನ್ನು ಪುರಾತನ ಭಾರತದ ಮಹಾಭಾರತ ಯುದ್ಧಕ್ಕೆ ಹೋಲಿಸಬಹುದು. ಹೆಲೆನಿಸಮ್ ಮತ್ತು ನಗರ ಪ್ರಜಾಪ್ರಭುತ್ವಗಳ ನಾಶವಾದನಂತರ ಜನರಲ್ಲಿ ಒಂದು ವಿಧವಾದ ಸಂಶಯ ಮತ್ತು ನಿರಾಶಾಭಾವನೆ ಉದ್ಭವಿಸಿತು. ಅದ್ಭುತಗಳು ಮತ್ತು