ಪುಟ:ಭಾರತ ದರ್ಶನ.djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೮೨
ಭಾರತ ದರ್ಶನ

ಬಳಕೆಯಲ್ಲಿರುವುದು ವಿಕ್ರಮಶಕೆ. ಆದರೆ ಎಣಿಕೆ ಸೌರಮಾನ ರೀತ್ಯ, ಆದರೆ ತಿಂಗಳುಗಳೆಲ್ಲ ಚಾಂದ್ರ ಮಾನ, ಕಳೆದ ತಿಂಗಳು ೧೯೪೪ ನೆ ಏಪ್ರಿಲ್ ನಲ್ಲಿ ಈ ಶಕೆಯಂತೆ ಎರಡು ಸಾವಿರ ವರ್ಷಗಳಾಗಿ ಹೊಸ ಸಹಸ್ರಾಬ್ಲಿ ಆರಂಭವಾಯಿತು. ಭಾರತದಾದ್ಯಂತ ಈ ಉತ್ಸವವನ್ನು ಆಚರಿಸುತ್ತಿದ್ದಾರೆ. ಅದಕ್ಕೆ ಕಾರಣ ಯುಗದ ಎಣಿಕೆಯಲ್ಲಿ ಅದು ಒಂದು ದೊಡ್ಡ ಸಂಧ್ಯಾಕಾಲ, ಯುಗಪುರುಷನಾದ ವಿಕ್ರಮ ಅಥವ ವಿಕ್ರಮಾದಿತ್ಯ ಮಹದ್ಯಕ್ತಿ ಎಂದು ಜನಪ್ರಿಯನಾಗಿದಾನೆ. ಅವನ ಹೆಸರಿನಲ್ಲಿ ಅನೇಕ ಕತೆಗಳಿವೆ. ಮಧ್ಯಯುಗದಲ್ಲಿ ಅನೇಕ ಕತೆಗಳು ರೂಪಾಂತರ ಹೊಂದಿ ವಿವಿಧ ರೀತಿಯಲ್ಲಿ ಏಷ್ಯದ ಇತರ ಭಾಗಗಳಿಗೆ ಮತ್ತು ಯುರೋಪಿಗೆ ಸಹ ಹೋದವು.

ವಿಕ್ರಮ ಒಬ್ಬ ರಾಷ್ಟ್ರ ವೀರನೆಂದು, ಆದರ್ಶ ರಾಜಪುತ್ರನೆಂದು ಬಹುಕಾಲದ ಪ್ರತೀತಿ ಇದೆ. ಪರದಾಳಿಯನ್ನು ಎದುರಿಸಿ ವಿದೇಶೀಯರನ್ನು ಓಡಿಸಿದ ಮಹಾವೀರನೆಂದು ಜನ ಅವನನ್ನು ಸ್ಮರಿಸು ತ್ತಾರೆ. ಆದರೆ ಅವನ ಯಶಸ್ಸಿಗೆ ಮುಖ್ಯ ಕಾರಣ ಅವನ ರಾಜಾಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತಿಭೆ ; ಅವನ ಆಸ್ಥಾನದಲ್ಲಿದ್ದ ಮಹಾಕವಿಗಳು, ಕಲಾವಿದರು, ಗಾಯಕ ಶ್ರೇಷ್ಠರು, -ನವರತ್ನ ಗಳು. ಈ ಕತೆಗಳಲ್ಲೆಲ್ಲ ಅವನ ಪರೋಪಕಾರ ಬುದ್ದಿ, ಸ್ವಪ್ರಯೋಜನವನ್ನು ಬೆಳಸದೆ ತನ್ನ ಜನರಿಗಾಗಿ ಮಾಡಿದ ಅವನ ಆತ್ಮತ್ಯಾಗ, ಔದಾರ್ಯ, ಪರಸೇವೆ, ಧೈರ್ಯ ಇವುಗಳ ವರ್ಣನೆ ಇದೆ. ನಿರಹಂಕಾರಕ್ಕೆ ಆತ ತವರುಮನೆ. ಆದರೆ ಆತನ ಜನಪ್ರಿಯತೆಗೆ ಮುಖ್ಯ ಕಾರಣ ಅವನ ಸದ್ಗುಣ ಮತ್ತು ಕಲಾಭಿಜ್ಞತೆ. ಅವನ ಯುದ್ದ ಸಾಮರ್ಥ ಅಥವ ಅವನ ವಿಜಯೋತ್ಸವ ಗಳ ವರ್ಣನೆ ಆ ಕತೆಗಳಲ್ಲಿ ಸ್ವಲ್ಪವೂ ಇಲ್ಲ. ಆತನ ಸದ್ಗುಣ ಮತ್ತು ತ್ಯಾಗಬುದ್ದಿಗೆ ಕೊಟ್ಟಿರುವ ಪ್ರಾಮುಖ್ಯತೆ ಭಾರತೀಯ ಭಾವನೆ ಮತ್ತು ಆದರ್ಶಗಳ ವೈಶಿಷ್ಟ, ಸೀಸರ್‌ನಂತೆ ವಿಕ್ರಮಾದಿತ್ಯನ ಹೆಸರು ಒಂದು ಸಂಕೇತವಾಯಿತು, ಒಂದು ಬಿರುದು ಆಯಿತು. ಅನಂತರ ಬಂದ ಅನೇಕರು ಅವನ ಹೆಸರನ್ನು ಇಟ್ಟು ಕೊಂಡರು. ಚರಿತ್ರೆಯಲ್ಲಿ ವಿಕ್ರಮಾದಿತ್ಯ ಎಂಬ ಹೆಸರಿನ ಅನೇಕ ರಾಜರುಗಳಿರುವು ದರಿಂದ ಇನ್ನೂ ಹೆಚ್ಚು ತೊಡಕೆದ್ದಿತು,

ಆದರೆ ಈ ವಿಕ್ರಮ ಯಾರು ? ಅವನು ಇದ್ದು ದು ಯಾವಾಗ, ಚಾರಿತ್ರದೃಷ್ಟಿಯಿಂದ ಎಲ್ಲವೂ ಅಸ್ಪಷ್ಟ, ಕ್ರಿಸ್ತ ಪೂರ್ವ ೫೭ ರ ಸುಮಾರಿನಲ್ಲಿ. ವಿಕ್ರಮ ಸಂವತ್ಸರ ಆರಂಭವಾಗಬೇಕಾದಾಗ ಅಂತಹ ವ್ಯಕ್ತಿ ಯಾರೂ ಇಲ್ಲ. ಆದರೆ ಕ್ರಿಸ್ತಶಕ ನಾಲ್ಕನೆಯ ಶತಮಾನದಲ್ಲಿ ಉತ್ತರ ಇಂಡಿಯದಲ್ಲಿ ಒಬ್ಬ ವಿಕ್ರಮಾದಿತ್ಯ ಇದ್ದಾನೆ. ಹೂಣರೊಡನೆ ಯುದ್ಧ ಮಾಡಿ ಅವರನ್ನು ಓಡಿಸಿದವನು, ತನ್ನ ಆಸ್ಥಾನದಲ್ಲಿ ' ನವರತ್ನ ' ಗಳಿಗೆ ಆಶ್ರಯ ಕೊಟ್ಟವನೆಂಬುವವನೂ ಇವನೇ. ಈ ಕಥೆಗಳಲ್ಲೆಲ್ಲ ಬರುವವನೂ ಅವನೇ, ಹಾಗಾದರೆ ಕ್ರಿಸ್ತಶಕ ನಾಲ್ಕನೆಯ ಶತಮಾನದ ಈ ವಿಕ್ರಮಾದಿತ್ಯನಿಗೂ ಕ್ರಿಸ್ತಪೂರ್ವ ೫೭ ರಿಂದ ಆರಂಭವಾಗುವ ಯುಗಕ್ಕೂ ಸಂಬಂಧ ಕಲ್ಪಿಸುವುದು ಹೇಗೆ, ಮಧ್ಯ ಇಂಡಿಯದ ಮಾಳವ ದೇಶದಲ್ಲಿ ಕ್ರಿಸ್ತ ಪೂರ್ವ ೫೭ ರಿಂದ ಆರಂಭವಾದ ಯುಗ ಒಂದು ಬಳಕೆಯ ಲ್ಲಿತ್ತು. ಪ್ರಾಯಶಃ ವಿಕ್ರಮನನಂತರ ಅನೇಕ ವರ್ಷಗಳ ಮೇಲೆ ಈ ಯುಗಕ್ಕೂ ವಿಕ್ರಮನಿಗೂ ಸಂಬಂಧ ಕಲ್ಪಿಸಿ ಅವನ ಹೆಸರಿನಿಂದ ಕರೆದು ಇರಬೇಕು. ಎಲ್ಲವೂ ಅಸ್ಪಷ್ಟ ಮತ್ತು ಅನಿಶ್ಚಿತ.

೨,೦೦೦ ವರ್ಷಗಳ ಹಿಂದೆ ಆರಂಭವಾದ ಈ ಯುಗಕ್ಕೂ ಮತ್ತು ಈ ವಿಕ್ರಮನಿಗೂ ಹೇಗಾ ದರೂ ಗಂಟುಹಾಕಬೇಕೆಂದು ಭಾರತೀಯರಲ್ಲಿ ಅಗ್ರಗಣ್ಯರಾದವರು ಸಹ ಚರಿತ್ರೆಯೊಂದಿಗೆ ಹೇಗೆ ಜೂಜಾಡಿದ್ದಾರೆಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ದಂಡಯಾತ್ರೆ ಬಂದ ವಿದೇಶೀಯ ರೊಡನೆ ಆತನ ಹೋರಾಟ ಮತ್ತು ಭಾರತವನ್ನು ಒಂದುಗೂಡಿಸಿ ಒಂದು ರಾಷ್ಟ್ರೀಯ ರಾಜ್ಯವನ್ನು ಕಟ್ಟಲು ಆತನಿಗಿದ್ದ ಹಿರಿಯಾಸೆಗೆ ಕೊಟ್ಟಿರುವ ಪ್ರಾಮುಖ್ಯತೆ ಸಹ ಅದ್ಭುತವಾಗಿದೆ. ವಿಕ್ರಮನ ಕಾರ್ಯಕ್ಷೇತ್ರವೆಲ್ಲ ಉತ್ತರ ಮತ್ತು ಮಧ್ಯ ಹಿಂದೂಸ್ಥಾನದಲ್ಲಿ.

ಇತಿಹಾಸ ವೀಕ್ಷಣೆ ಮತ್ತು ಲೇಖನದಲ್ಲಿ ರಾಷ್ಟ್ರೀಯತೆಯ ಪ್ರಚೋದನೆ ಮತ್ತು ರಾಷ್ಟ್ರೀಯ ಉತ್ಸುಕತೆಯ ಪ್ರಭಾವಕ್ಕೊಳಗಾದವರು ಭಾರತೀಯರು ಮಾತ್ರವಲ್ಲ, ಪ್ರತಿಯೊಂದು ಜನಾಂಗ ಮತ್ತು