ಪೀಠಿಕೆ. +++ ಈ ಕವಿಯ ತಂದೆಗೆ ಗುರುಭಕ್ತನೆಂದು (ಸಂ ೧, ೧೫) ಹೆಸರು; ಪಿತಾಮಹನಿಗೆ ಗುಬ್ಬಿಮಲ್ಲಣಾನರನೆಂದು ಹೆಸರು. ಆತನು ( ವಾತೂಲ ತಂತ್ರಕ್ಕೆ ಟೀಕು ಬರೆದಂತೆಯೂ, “ ಆಗಮಗ್ರಂಧವಚನದಿಂ `ಗಣ ಭಾವರತ್ನ ಮಾಲೆ” ಯನ್ನು ರಚಿಸಿದಂತೆಯ (ಸ. ೧, ೧೩) ತಿಳಿಯಬರುತ್ತದೆ. ಈ ಕವಿಯ ನಿಜವಾದ ಹೆಸರು “ ಬಸವಣ್ಣ ರಾಣದುರುಮಲ್ಲಣಾರ” ಎಂಬುದು; ಆದರೂ ಪಿತಾಮಹನ ಹೆಸರಿನಿಂ ದಲೆ ಕರೆಯಲ್ಪಡುತ್ತಿರುವನು. ಡಕ್ಷರಿದೇವನ “ “ ರಾಜಶೇಖ ರವಿಲಾಸ” ದಲ್ಲಿ- ಆ ಕಧೆಯಂ ಕೃತಾರ್ಥಸುವನೋಲತೆಯಂ ವರನ 'ಸಾರೈರು | ರ್ವೀಕವಿರಾಜರಾಜಿನುತನಾಗಿರೆ ವರ್ಣಕದಿಂದೆ ಇಾವರ! ತಾಕರವಾಗಿ ಹೇಳಿಕೆ” ಎಂದು ಸ್ತುತಿಸಿರುವುದರಿಂದ, ಈ ಕವಿಯು ಪ್ರಡಕ್ಷರಿದೇವನಿಗಿಂತ ಹಿಂದಿನವನೆಂದು ವ್ಯಕ್ತವಾಗುತ್ತದೆ. ಮೇ 1 ರೈಸ್ ಸಾಹೇಬರವರು ಸುಮಾರು ಕ್ರಿ. ಶ. ೧೩೬೯ ರಲ್ಲಿ ಇದ್ದವನೆಂದು ಅಭಿಪ್ರಾಯಪಡುತ್ತಾರೆ. - ಕವಿಯು ತನ್ನ ಭಕ್ತನಾದ ಚೆರವಾಂಕನ ಪ್ರಾರ್ಥನೆಯ ಮೇರೆ ಈ ಗ್ರಂಥವನ್ನು ಬರೆದುದಾಗಿ ಹೇಳುತ್ತಾನೆ. ಈ ಗ್ರಂಥದ ಕಥೆಯನ್ನು ತಿರುಜ್ಞಾನಿಸಂಬಂಧಿಯು” “ ಕುಲಚ್ಚರಿಯಗೆ ” ಪ್ರಣವ ಪಂಚಾಕ್ಷರೀಮಹಿಮೋಪದೇಶಾರ್ಧವಾಗಿ ದ್ರಾವಿಡಭಾಷೆಯಲ್ಲಿ ಹೇಳಿದಂ ತೆಯೂ, ಅದನ್ನು ತಾನು ಕನ್ನಡಿಸಿದಂತೆಯ ಸಂಧಿ ೧, ೨೧ ನೆಯ ಸದ್ಯದಲ್ಲಿ ಹೇಳುತ್ತಾನೆ. ಈಗ್ರಂಥಕ್ಕೆ (ಭಾವಚಿಂತಾರ ವೆಂದು ಹೆಸರು ಬರುವುದಕ್ಕೆ “ಕೃತಿಯ ಪಲ್ಲವಿ ತೊಡಗಿ ಪೂರ್ಣಮಪ್ಪನ್ನ ಮೀ ! ಕೃತಿ ಯೊಳುತ್ತೆ ಕೈಯಿಲ್ಲದುದೊಂದು ಪದವಿಲ್ಲ | ಕೃತಿಗದುನಿಮಿತ್ತದಿಂ ಭಾವ ಚಿಂತಾರತ್ನ ವೆಂಬಸರೀಕಾವೃಕ್” ಎಂದು ಕಾರಣವನ್ನು ತಿಳಿಸುತ್ತಾನೆ. ಗ್ರಂಧಾದಿಯಲ್ಲಿ ಭೋಗಮಲ್ಲೇಶನನ್ನು ಸ್ತುತಿಸಿದ್ದಾನೆ. ಬಳಿಕ ಈ
ಪುಟ:ಭಾವ ಚಿಂತಾರತ್ನಂ.djvu/೮
ಗೋಚರ