ಪುಟ:ಭಾವ ಚಿಂತಾರತ್ನಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರನನ್ನೂ, ಸಿದ್ಧ ಮಲ್ಲಿಕಾರ್ಜನಗುರುವನ್ನೂ, ನಂದೀಶಲಗೀಶವೀರೇ ಶರನ್ನೂ, ಅಲ್ಲಮಪ್ರಭು ಬಸವ ಚೆನ್ನ ಬಸನರನ್ನೂ, ಶಿವಲೆಂಕಮಂ ಚಣ್ಣಪಂಡಿತ ಶ್ರೀಪತಿಪಂಡಿತ ಮಲ್ಲಿಕಾರ್ಜುನಪಂಡಿತರೆಂಬ ಪಂಡಿತ ಯವನ್ನೂ, ಸಿದ್ದರಾವು ಏಾಲ್ಕುರಿಕೆ ಸೋಮರನ್ನೂ, ಬಳಿಕ ಕಾಳಿದಾಸ ಬಾಣ ಮಯರರೆಂಬ ಸಂಸ್ಕೃತಕವಿಗಳನ್ನೂ, ಪದ್ಮರಸ ಹರಿಹರರೆಂಬ ಕರ್ಣಾಟಕಕವಿಗಳನ್ನೂ ಸ್ಮರಿಸುತ್ತಾನೆ. ಅನಂತರ ಗೂಳೂರಶಂ ತಿದೇವ, ಗುಮ್ಮಳಾದ ಶಾಂತೀಶಗುರು, ನಾಗವಲ್ಲಿಯ ಶಿವಪೂಜೆಯಾ , ಚಿಕ್ಕಬಸವರೆಂಬ ಗುರುಗಳನ್ನು ಸ್ಮರಿಸುತ್ತಾನೆ. ಈತನ ಗುರು ಸಿದ್ಧಮಲ್ಲೇಶ. ಈ ಗ್ರಂಧದ ಆಧಾಗರ್ಭವನ್ನು - - ( ತರುಣಿ ಪೊರೆದಣುಗನಕ್ಷದ ಖುರದು ಪತಿಯಿಂದ ಹರಭಕ್ಷನಲ್ ಯಲದ ಕೇಳು ಕೊಲೆಯಂದನಂ | ಪರಿಕಿಸಿ ನಿಜಾತ್ಮಜಂ ಮೊದಲ ವಿಗೆಂದ ನುಡಿಗಾಮುದ್ದು ಮಗನ ತಲೆಯ | ಅನಿಸುವೆಡೆಯೊಳು ಮತ್ತೆ ಭಕವಧೆಯೆಂದು ನಿಜ | ಶಿರದೊಡನೆ ತಮದೆಂಟು ತಲೆಗಳಂ ಪಡೆದು ಶಂ | ಕರನೂರ್ಗೆ ಪೋದ ಸತ್ಯೇಂದ್ರ ಚೋಳನ ಕಥೆಯನಿದ ಬೆಳಸಿ ಕೃತಿ ಮಾಲ್ಪೆನು ?” (ಸಂ. ೧, ೨೨)ಎಂಬ ಪದ್ಯದಲ್ಲಿ ಹೇಳುತ್ತಾನೆ. ಮತ್ತು ಪ್ರತಿ ಆಶ್ವಾಸದ ಕೊನೆಯಲ್ಲಿ, “ ಇದು ಸಕಲಭಕ್ಕೆಪದಪಂಕೇಜರೇಮ | ಸ್ವದ ಮಲ್ಲಣಾರ್ ನಾಚೇರಮಾಂಕಂಗೆ ಬೆಸ | ಸಿದ ಭಕ್ತಸತ್ಯೇಂದ್ರ ಚೋಳ ಕೃತಿ ಭಾವಚಿಂ ತಾರತ್ನ ನಮುಲಕರ್ಣ | ಪ್ರಗಯರುಸ್ತಕವದನಸರ್ವಾಂಗಸಂಕಾ | ಸ್ಪದವಖಿಳಸುಜನರ್ಗೆ ಪಂಚಾಕ್ಷರಿಯು ಮಹ | ತದ ಬೋಧೆಯೆಂದೋದಿ ದೊಡೆ ಕೇಳಿದರಿಗಿಸ್ಮಸಿದ್ಧಿ ಸರ್ವರಿಗಪ್ಪುದು | ? ಎಂಬ ಪದವನ್ನು ಬರೆಯುತ್ತಾನೆ. ಈ ಗ್ರಂಥದಲ್ಲಿ ೩೬೧ ವಾರ್ಧಿಕಷಟ್ನದಿಗಳಿವೆ. ಕವಿಯು ಪ್ರತಿ ದಿನವೂ ಒಂದೊಂದು ಪದ್ಯವನ್ನು ವಿರಚಿನಿ ಶಿವಪೂಜಾಕಾಲದಲ್ಲಿ ಶಿವನಿಗೆ ಸಮರ್ಪಣೆ ಮಾ ಡುತ್ತ ಒಂದು ವರ್ಷ ಕಾಲ ನಡೆಸುತ್ತ ಬಂದುದರಿಂದ ಈ ಗ್ರಂಥದಲ್ಲಿ ೩೬೦ ಪದ್ಧಗಳಾದುವೆಂದು ಒಂದು ಪ್ರವಾದಂಟು,