ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ ಸಿನ್ನು ಸಾರ. (ರಸವರ್ಗ), ವೃಶ್ಚಿಕದಲ್ಲಿ ದೀಪದಾನವನ್ನು ಮಾಡಬೇಕು. ಧನುಸ್ಸಿ ನಲ್ಲಿ ವಸ್ತ್ರ ಮತ್ತು ಯಾನಮಕರದಲ್ಲಿ ಕಾವ್ಯ (ಕಟ್ಟಿಗೆ) ಅಗ್ನಿ ಕೆ, ಕುಂಭದೊಳಗೆ ಆಕಳು, ನೀರು, ಹಾಲು, ವಿಾನದಲ್ಲಿ ಭೂಮಿ (ಪೀಠ) ಪುಪ್ಪಹಾರ. ಹೀಗೆಯೇ ಇತರದಾನಗಳನ್ನೂ ತಿಳಿದುಕೊಳ್ಳತ ಕುದು, ಮಕರ, ಮೇಷ, ತುಲ, ಈ ಸಂಕ್ರಾಂತಿಗಳೊಳಗೆ ಹಿಂದೆ, ಮೂರು ಅಥವಾ ಒಂದುರಾತ್ರಿಯಾದರೂ ಉಪವಾಸಮಾಡಿ ಸ್ನಾನದಾ ನಾದಿಗಳನ್ನು ಮಾಡಬೇಕು. ಕಡೆಯ ಉಪವಾಸವು ಸಂಕ್ರಮಣವುಳ ದಿವಸದ ಅಹೋರಾತ್ರಿಗಳಲ್ಲಾಗಲಿ, ಪುಣ್ಯಕಾಲವಿರುವ ಅಹೋರಾತ್ರಿಯ ಲ್ಲಾಗಲೀ ಹೇಗೆ ಸಂಭವಿಸುವುದೋ ಹಾಗೆ ಮಾಡಬೇಕು. ಈಯು ಪವಾಸವು ಪುತ್ರವಂತನಲ್ಲದ ಪುರುಷನು ಪಾಪಪರಿಹಾರಕ್ಕಾಗಿ ಮಾಡ ಬೇಕು, ಆದ್ದರಿಂದ ಇದು ಕಾವ್ಯವೇ ಹೊರತು ನಿತ್ಯವಲ್ಲ. ಎಲ್ಲಾ ಸಂ ಕ್ರಮಣಗಳಲ್ಲಿಯೂ ಪಾರ್ವಣ (ವಿಂಡ) ವಿಲ್ಲದ ಶ್ರಾದ್ಧವನ್ನೂ ಮಾಡ ಬೇಕು. ಅಯನದಯದಲ್ಲಿ ಇದು ನಿತ್ಯ, ಸಂಕ್ರಾಂತಿಗಳಲ್ಲಿ ದಾನಗ ಳನ್ನು ಹೇಗೆ ಮಾಡಬೇಕೋ ಹಾಗೆಯೇ ಆಯಾಸಂಕ್ರಮಣಗಳಿಗಿಂತ ಮೊದಲು ಅಯನಾಂಶ ಪ್ರವೃತ್ತಿಯಲ್ಲಿಯೂ ಆಯಾಸಂಕ್ರಾಂತಿಗಳಿಗುಚಿ ತವಾದ ಸ್ನಾನದಾನಾದಿಗಳನ್ನು ಮಾಡತಕ್ಕದ್ದು. ಅಯನಾಂಶಗಳು ಜ್ಯೋತಿಶ್ಯಾಸ್ತ್ರದಲ್ಲಿ ಪ್ರಸಿದ್ಧ ಗಳಾಗಿವೆ. ಅಯನಾಂಶ ನಿರ್ಣಯ, ಆ ಅಯನಾಂಶಗಳು ಈಗ ಎಂದರೆ ೧೭೧೨ ನೆಯ ಶಾಲಿವಾಹನ ಶಕೆಯಲ್ಲಿ ಇಪ್ಪತ್ತೊಂದು ಅಯನಾಂಶಗಳು. ಆದುದರಿಂದ ಇಪ್ಪತ್ತೊಂ ದನೆಯ ದಿವಸದಲ್ಲಿ ಮೊದಲು ಅಯನಾಂಶ ಪರ್ವಕಾಲವೆಂದು ಪರ್ಯ ವಸಾನವಾಗುತ್ತದೆ, ಹೀಗೆ ಶಕೆಯತಾರತಮ್ಯದಿಂದ ಊಹಿಸಿ ತಿಳಿದು ಕೊಳ್ಳತಕ್ಕದ್ದು. ವೃಷಭ, ಸಿಂಹ, ವೃಶ್ಚಿಕ, ಕುಂಭಗಳು ವಿಷ್ಣುಪ ದಸಂಜ್ಞೆಯುಳ್ಳವುಗಳು, ಮಿಥುನ, ಕನ್ಯ, ಧನುಸ್ಸು, ಮಾನಸಂಕ್ರಾನಿ ಗಳು ಷಡಶೀತಿಸಂಜ್ಞೆಯನ್ನು ಪಡೆದಿವೆ. ಮೇಷತುಲಗಳಿಗೆ ವಿಸುವ ಸಂಜ್ಞೆಯು, ಕರ್ಕಮಕರಗಳಿಗೆ ಅಯನವೆಂದು ಹೆಸರು. ಈ ನಾ ಲ್ಕು ವಿಧಗಳಲ್ಲಿ ಮುಂದಮುಂದಣದು ಪುಣ್ಯಾಧಿಕ್ಯವುಳ್ಳದ್ದು. ದಿ