ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ರ ದಾ . ಮಾನಸಂಕ್ರಮಣವು, ಹೀಗೆ ಪೂರ್ವಾಪರಾಧಿಕ ಮಾಸದಯದಿಂದೊಡ ಗೂಡಿರುವ ಕ್ಷಯಮಾಸವು ಯಾವವರ್ಷದಲ್ಲಿ ಒದಗುವುದೋ ಆಗ ಹದಿ ಮೂರು ತಿಂಗಳುಗಳ ರೂಪವಾಗಿ ಸ್ವಲ್ಪ ಕಡಮೆ ಮುನ್ನೂರುತೊಂಭ ತ್ತು ದಿನಗಳಿಂದ ವರ್ಷವಾಗುವುದು, ಅದರಲ್ಲಿ ಕ್ಷಯಮಾಸಕ್ಕಿಂತಲೂ ಮೊದಲನೆಯದಾದ ಅಧಿಕಮಾಸವು ಸಂಸರ್ಪ ಸಂಜ್ಞೆಯುಳ್ಳದ್ದು. ಸ ರ್ವಕರ್ಮಗಳಿಗೂ ಅರ್ಹವಾದದ್ದು. ಅದರಲ್ಲಿ ಶುಭಕರ್ಮಗಳನ್ನೂ ಬಿಡಕೂಡದು. ಕ್ಷಯಮಾಸವಾದರೋ ಅಂಹಸ್ಪತಿ ಸಂಜ್ಞೆಯುಳ್ಳದ್ದು , ಅದರ ಮುಂದೆ ಬರುವ ಅಧಿಕ ಮಾಸವಾದರೋ ಸರ್ವಕರ್ಮಗಳಲ್ಲಿ ಯೂ ತ್ಯಾಜ್ಯವಾದದ್ದು. ಹೀಗೆ ಮೂರುವರ್ಷಗಳೊಳಗೆ ಸಂಭ ವಿಸುವ ಅಧಿಕಮಾಸವೂ ವರ್ಜ್ಯವೆಂದು ತಿಳಿಯತಕ್ಕದ್ದು. ೪. ವರ್ಜ್ಜಾವರ್ಜ್ಯನಿರ್ಣಯ. ೪ ಅನಗತಿಕವಾದ (ಬೇರೆ ದಾರಿಯಿಲ್ಲದ) ನಿತ್ಯನೈಮಿತ್ತಿಕ ಕಾಮೃಕರಗಳನ್ನು ಅಧಿಕಮಾಸಕ್ಷಯಮಾಸಗಳಲ್ಲಿ ಆಚರಿಸತ ಕದ್ದು. ಸಗತಿಕವಾದ (ಅವಕಾಶವುಳ) ನಿತ್ಯನೈಮಿತ್ತಿಕ ಕಾವ್ಯಕ ರ್ಮಗಳನ್ನು ಬಿಡಬೇಕು, ಹೇಗೆಂದರೆ-ಸಂಧ್ಯಾಗ್ನಿ ಹೋತ್ರಾದಿಗಳು ನಿ ತೃಗಳು, ಗ್ರಹಣಸ್ನಾನಾದಿಗಳು ನೈಮಿತ್ತಿಕಗಳು, ಕಾರೀರಾದಿಗಳು (ಮಳೆಯುಬಾರದಿದ್ದಾಗ ಮಾಡುವಕರ್ಮ) ರಕ್ಕಸ್ಸಿನಿಂದ ಹಿಡಿಯಲ್ಪಟ್ಟ ವರ ಸಂರಕ್ಷಣೆಗಾಗಿ ಆಚರಿಸುವರಕ್ಷೇಪ್ಲಾದಿಕಾವ್ಯಗಳೂ ಮಲಮಾಸದಲ್ಲಿಯೂ ಮಾಡಲ್ಪಡತಕ್ಕವುಗಳೇ, ಜ್ಯೋತಿಷ್ಟೋಮಾದಿ ನಿತ್ಯಕರ್ಮಗಳನ್ನೂ, ಜಾತೇಚ್ಛಾದಿನೈಮಿತ್ತಿಕ ಕರವನ್ನೂ, ಪುತ್ರ ಕಾಮೇಚ್ಛಾದಿ ಕಾವ್ಯಕರ್ಮವನ್ನೂ, ಮಲಮಾಸಾನಂತರದಲ್ಲಿ ಶು ಮಾಸದೊಳಗೇ ಆಚರಿಸಬೇಕು. ಶುದ್ದ ಮಾಸದಲ್ಲಿ ಆರಂಭಿಸಿ ದ್ದರೆ ಮಲಮಾಸದಲ್ಲಿಯೂ ಆಚರಿಸಬಹುದು. ನೂತನಾರಂಭವೂ ಸಮಾಪ್ತಿಯೂ ಮಾಡತಕ್ಕದ್ದಲ್ಲ. ಪೂಜಾಲೋಪಾದಿಸಿಮಿತ್ತಕವಾಗಿ ರುವ ಪುನರೂರಿ ಪ್ರತಿಷ್ಠೆಯನ್ನೂ, ಗರ್ಭಾದಾನಾನ್ನ ಪ್ರಾಶನಾಂ ತ ಸಂಸ್ಕಾರಗಳನ್ನೂ, ಕಾಲಪ್ರಾಪ್ತಗಳಾಗಿರುವ ಅನಗತಿಗಳು ದವುಗಳನ್ನೂ, ಜರಾದಿಶಾಂತಿ ಕರವನ್ನೂ, ಅಲಭ್ಯೋಗವುಳ್ಳ ಶ್ರಾದ್ಧವತಾದಿಗಳನ್ನೂ, ನೈಮಿತ್ತಿಕ ಪ್ರಾಯಶ್ಚಿತ್ತ ಕರವನ್ನೂ