ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
೧೯
೧೪೫
ಮರಾಟರ ಅವನತಿ

ಭಾವೂಸಾಹೇಬನು ಕೆಲವು ಪ್ರಸಂಗಗಳನ್ನು ಹೊರತುಪಡಿಸಿ ಆಚರಿಸಿದ ಆಚರಣೆ
ಗಳು ಪ್ರಸಂಗೋಚಿತವಾದವುಗಳೆಂತಲೇ ಹೇಳಬಹುದು. ಒಂದುವೇಳೆ ಪಾನಿಪತ್ತ
ಸಂಗ್ರಾಮದ ಪರಿಣಾಮವು ಅವನತಿಕರವಾಗದೆ ಉನ್ನತಿಕರವಾಗಿದ್ದರೆ ಭಾವೂಸಾ
ಹೇಬನಂಥ ಚಾಣಾಕ್ಷಮುತ್ಸದ್ದಿಯು ಹುಟ್ಟಿಬೆಳೆಯಲಿಕ್ಕೆ ಆಪರೂಪವೆಂದು ಎಲ್ಲರೂ
ಏಕಕಂಠದಿಂದ ಅಭಿಪ್ರಾಯಪಡದೆ ಇರುತ್ತಿದ್ದಿಲ್ಲ. ಆದರೆ ದೈವದುರ್ವಿಲಾಸ
ದಿಂದಲೋ ಅಥವಾ ಈಶ್ವರೇಚ್ಛೆಯಿಂದಲೋ ಆತನಪಾಲಿಗೆ ಕೀರ್ತಿಬರಲಿಲ್ಲ;
'ಆದರೂ ಆತನು ಪಟ್ಟ ಸಾಹಸವನ್ನು ನೋಡಿದರೆ ಯತೇಕೃತೆಯದಿನಸಿಧ್ಯತಿ
ಕೋತ್ರದೋಷಃ” ಎಂಬಂತೆ ಅವನು ನಿರ್ದೋಷಿಯೇ ಎಂದು ನಿರ್ವಿವಾದವಾಗಿ
ಹೇಳಬಹುದು!
ಭಾವೂಸಾಹೇಬನು ಕೈಮುಟ್ಟಿ ಬರೆದ ಪತ್ರಗಳು ಬರದಿದ್ದರೂ ವಿಶ್ವಾಸ
ರಾಯನ ಗುಪ್ತಚಾರರು ತಿಳಿಸಿದ ಸುದ್ದಿಯಿಂದ ಶ್ರೀಮಂತ ನಾನಾಸಾಹೇಬನು ಪುಣೆ
ಯಿಂದ ಹೊರಟು ಈ ಕಾಲಕ್ಕೆ ನರ್ಮದೆಯವರೆಗೆ ಬಂದಿದ್ದನು. ಆತನು ಯಾವ
ಪಾಪವನ್ನೂ ಅರಿಯದೆ ನರ್ಮದೆಯತೀರದಲ್ಲಿ ವಿಶ್ರಾಂತಿಗಾಗಿ ಬೀಡುಬಿಟ್ಟಕೊಂ
ಡಿರಲು ಸಂಗ್ರಾಮದಲ್ಲಿ ಬದುಕಿ ಉಳಿದೆ ಮರಾಟರು ಒಬ್ಬೊಬ್ಬರೇ ಬರಹತ್ತಿದರು.
ಅವರ ಕೃಷ್ಣಮುಖವನ್ನು ನೋಡಿ ನಾನಾಸಾಹೇಬನ ದಂಡಿನವರು ಬೆದರಿ
ದರು. ಆಗ ಇತ್ಥಂಭೂತಸಂಗತಿಯು ತಿಳಿಯಲು ಸೈನಿಕರು ಗಾಬರಿಪಟ್ಟು
ಶ್ರೀಮಂತರಿಗೆ ಎಲ್ಲ ಸಂಗತಿಯನ್ನು ನಿವೇದಿಸಿದರು. ಭ್ರತೃವತ್ಸಲನೂ, ಪುತ್ರ
ವತ್ಸಲನೂ ಆದ ಆ ಹೆಣ್ಣುಗಳ್ಳಿನ ನಾನಾಸಾಹೇಬನು ಸಿಡಿಲುಬಡಿದ ಕದಳೀ
ವೃಕ್ಷದಂತೆ ಕಂದಿ ನೆಲಕ್ಕೆ ಬಿದ್ದನು. ಕ್ಷಣಹೊತ್ತಿನವರೆಗೆ ಆತನ ಮೈಮೇಲೆ
ಸ್ಮೃತಿಯಿರಲಿಲ್ಲ. ಸೇವಕರು ಧಾವಿಸಿಬಂದು ನೆತ್ತಿಗೆ ನೀರು ಹಿಡಿದು ಶೈತ್ಯೋ
ಪಚಾರಗಳನ್ನು ಮಾಡುತ್ತಿರಲು, ಆತನು ಶುದ್ಧಿಯ ಮೇಲೆ ಬಂದು . ಹಾಯ್!
ವಿಶ್ವಾಸ, ಹಾಯ್! ಭಾವೂ ನನ್ನನ್ನು ಆಗಲಿ ಹೋದಿರ ! ರಾಜಕಾರಣದಲ್ಲಿ
ನೀವು ನನಗೆಷ್ಟು ನೆರವಾಗುತ್ತಿದಿರಿ? ನಿಮ್ಮಂಥ ರತ್ನಗಳನ್ನು ಕಳಕೊಂಡು
ನಾನು ಹ್ಯಾಗೆ ಜೀವಧಾರಣಮಾಡಲಿ? ಹರ! ಹರ! ಎಂದು ಪ್ರಲಾಪಿಸತೊಡ
ಗಿದನು.
ಹೀಗೆ ಹೊರಗೆ ಓಲಗದಲ್ಲಿ ನಾನಾಸಾಹೇಬನು ಗೋಳಿಡುತ್ತಿರಲು ಈದುಷ್ಟ
ವಾರ್ತೆಯು ಅಂತಃಪುರವನ್ನು ಪ್ರವೇಶಿಸಿತು. ಶ್ರೀಮಂತ ಗೋಪಿ ಕಾಬಾಯಿ
ಯವರು. ಆಗ ಮೈತೊಳಿಯುತ್ತ ಕುಳಿತಿದ್ದರು. ದಾಸಿಯರು ಬೆಳ್ಳಿಯ ತಂಬಿ
ಗೆಯಿಂದ ನೀರುಹಣಿಸುತ್ತಿದ್ದರು. ಕೆಲವರು ಗಂಧದ್ರವ್ಯಗಳನ್ನು ಹಚ್ಚಿ