೧೮೩ ಶಾಂತೀಶ್ವರ ಪುರಾಣಂ ವ|| ಆಸಮಯದೊಳೊರ್ವ ವಿದ್ಯಾಧರ ಜಲಧರಮಾರ್ಗದೊಳ್ ನಿಂದು ನೀಮಿರ್ವರುಂ ಕಾವಲಾಗದನಂತಮತಿಯೆಂಬ ಕಾಂತೆ ನಿಮ್ಮ ಸಹೋ ದರಿಯೆಂದು ನುಡಿಯೆ ಕೇಳು ಮುನಿಸನುದು ನೋಡಿ ನೀನಾವನೀವೃತ್ತ ಕಮನೆತ್ತಬಲ್ಲೆ ನೀನಿಲ್ಲಿಗೆ ಬಂದ ಕಾರಣವಾವುದು ಪೇಚಿನಲಾಂ ಧಾತಕಿ ಪಂಡರೀಸದ ಪೂರ್ವಮಂದಿರದ ಪೂರ್ವ ವಿದೇಹದ ಸೀತಾತರಂಗಿಣಿಯ ಬಡಗಣ ತಡಿಯ ಪುಷ್ಕಳಾವತೀವಿಷಯದ ವಿಜಯಾರ್ಧಪರ್ವತದ ದಕ್ಷಿಣ ತೆನೆಯೊಳರ್ಗಾ ದಿತ್ಯಾಭನೆಂಬ ಪೊಳಲನಾ ಸುಕುಂಡಲನೆಂಬ ವಿದ್ಯಾ ಧರಂಗಂ ಸೇನಾದೇವಿಗಂ ಪುಟ್ಟದೆನೆನ್ನ ಸೆಸರ್ ಮಣಿಕುಂಡಲನಾನೊಂದು ದಿವಸಮಸ್ಮದಿಷಯದ ಪುಂಡರೀಕಿಣೀಪುರದ ಬಹಿರುದ್ಯಾನದೊಳಿರ್ದ ಮಿತ್ರ, ಪ ಭತೀರ್ಥಕರರಂ ಬಂದಿಸಿ ಧರ್ಮಶ್ರವಣಾನಂತರಮೆನ್ನ ಪೂರ್ವಭವಮಂ ಬೆಸಗೊಂಡೊಡವರಿಂತೆಂದರ್ : - * ಪುದಿದೆಸೆವ ಪುಷ್ಕರದೀ | ಪದ ಪಡುವಣ ಮಂದರಾದಿ ವರದಪರವಿದೆ ! ಹದ ನೀದಾನದಿಯ || ಗ್ಗದ ತೆಂಕಣ ತಡಿಯೊಳಿರ್ಪುದು ಸರದ್ವಿಷಯಂ 11 ||೬ || ಪೆಸರ್ವೆಸರದ್ವಿಷಯದೊ | ಳಸವುದು ತಾಂ ವೀತಕಮೆಂಬ ಪ್ರರಂ ಶೋ || ಭಿಸುವಾಪುರದರಸಂ ರಾ | ಜಿಸುವ ಚಕ್ರ ಧ್ವಜಾಭಿಧಾನನರೇಂದ್ರ ||ರ್೬ ಆಚಕ ( ಜನರೇಂದಗಂ ಕನಕಮಾಳಾದೇವಿಗನಂ ಕನಕಲತೆ ಪದ್ಮಲತೆಯೆಂಬ ಮಗಳಿರಾದರ್. ಅನೃಪನ ಕಿರಿಯರಸಿ ವಿದ್ಯುನ್ಮಾಳಗಂ ಪದ್ಮಾವತಿಯೆಂಬ ಮಗಳಾದಳ, ಇಂತು ಸುಖದಿನಿರುತ್ಸು ಒಂದು ದಿವಸ ಏರಿಯರನಿಯರಪ್ಪ ಕನಕಮಾಲಾದೇವಿ ಕನಕಲತೆ ಪದ್ಯಲತೆ ಪದ್ಮಾವತಿಸ ಹಿತಂ ಅಮಿತಸೇನರೆಂಬಾಚಾರ್ಯರ ಪಾರ್ಶ್ವದೊಳ್ ಧರ್ಮಮಂ ಕೇಳು ತಂಗಳ೦ಕೈ ಕೊಂಡು ನೆಗುತ್ತು೦ಜೀವಿತಾಂತದೊ ಕನಕಮಾಲಾದೇ ವಿಯ ಮಗಳ್ರಪ್ಪ ಕನಕಲತೆಯುಂ ಪದ್ಮಲತೆಯುಂ ಬೆರಸು ಸೌಧರ್ಮಕಲ್ಪ ದೊಳ್ ಮೂವರುಂ ದೇವಿಯರಾಗಿ ಪುಟ್ಟ ಕಿರಿಯರಸಿಯ ಮಗಳಪ್ಪು ಪದ್ಮಾ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೯೩
ಗೋಚರ