ಈ ಪುಟವನ್ನು ಪರಿಶೀಲಿಸಲಾಗಿಲ್ಲ.
|| ಶ್ರೀರಸ್ತು || ಮೈರಾವಣನ ಕಾಳಗ || ಭಾಮಿನಿ ಪ್ರದಿ || ಶ್ರೀಮದನುಪಮನಾಮ ಪುಣ್ಯ | ಸೈಮನಗಣಿತಮಹಿಮ ಭಕ್ತ | ಪ್ರೇಮ ಕರುಣಾಸಿಂಧು ಮಂಗಳಚರಿತ ನಿಮ್ಮ || ಕಾಮಪಿತ ಕಮಲಾಕ್ಷ ಸಾಸಿರ | ನಾಮ ಸುಲಲಿತ ನೀಲಮೇಘ || ಶ್ಯಾಮ ರಕ್ಷಿಸು ಜಗವ ಸುಮನೋರಾಮ ರಘುರಾಮ|||| ಸಿಡಿದ ಡಮರುಗ ಶೂಲ ಹಣೆಯೊಳ | ಗಡಗಿಸಿದ ಕಿಡಿ ಜಡೆಯ ಗಂಗೆಯ | ಒಡಲ ಭಸಿತದ ಕರಪಿನಾಕದ ಕರಿಯ ಪುಲಿದೊವಲ | ಉಡುಗೆ ಶಿರದ ಶಶಾಂಕ ವಾಮದ | ತೊಡೆಯ ಗಿರಿಜಾಲಿಂಗನದ ಜಗ | ದೊಡೆಯ ಕಡು ಚೆಲ್ಯಾಂತ ಮೃಡ ನೀಡೆನಗೆ ಮಂಗಳವ ||೨|| ಹರಿಯ ನಾಭೀಕಮಲದೊಳಗವ | ತರಿಸಿ ಶಿರ ನಾಲ್ಕಳು ವೇದವ | ಧರಿಸಿ ಸಚರಾಚರದ ಸೃಷ್ಟಿಗೆ ಮಲನೆಂದೆನಿಸಿ: || ಸುರನರೋರಗನಮಿತಪಾದಾಂ | ಬುರುಹ ನಿರ್ಮಲವಸ್ತು ವೆನಿಸಿದ | ಸರಸಿರು ಹಭವ ಬೊಮ್ಮ ಕರುಣಿಸು ಮತಿಗೆ ಮಂಗಳವ || ೩ || ಪಿಡಿದು ಪಾಶಾಂಕುಶವ ಕರದಲಿ | ಪಡೆದ ವೇದವ ಮುಖದಿ ಸೂಚಿಸಿ | ಯೊಡಲ ಸುತ್ತಿದ ಫಣಿಪತಿಯ ಮಣಿಮಯದ ಭೂಷಣದ ||