ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಕರ್ಣಾಟಕ ಕಾವ್ಯಕಲಾನಿಧಿ ಬಿಡದೆ ಭಜಿಸುವ ಸುಜನರಿಷ್ಟವ | ಕುಡುವ ಮೂಲೋಕಂಗಳೊಡೆಯನೆ | ಕಡು ಚೆಲುವ ಗಣನಾಧ ಪಾಲಿಪ್ರದೊಲಿದು ಸಜ್ಜನರ ೪!! ವಾಣಿ ಪ್ರಸ್ತಕಲಲಿತವೀಣಾ | ಪಾಣಿ ನಿಗಮಾ ಬಿಳಶಾಸ್ತ್ರ | ಶ್ರೇಣಿ ಮಂತ್ರಸುತಂತ್ರಯಂತ್ರಾಕರ್ಷಣತ್ರಾಣೆ || ಜಾಣೆ ವಿದ್ಯಾ ಕಲೆಗಳೊಳು | ತಾಣೆ ಸರಸಿಜಭವನ ಪಟ್ಟದ | ರಾಣಿಯೊಲವಿ೦ ಮಾಡುವುದು ಮನ್ಮತಿಗೆ ಮಂಗಳವ ||೫|| ನಿರುಪಮಿತ ಸಿರ್ಲೇಪ ನಿರ್ಮದ | ನಿರವಯವ ನಿಶ್ಚಿಂತ ನಿರ್ಮಲ | ನಿರತಿಶಯ ನಿಷ್ಕಾಮ ನಿತ್ಯಾನಂದ ನಿರ್ದ್ವಂ || ಪರಮಹಂಸ ಪರೇಶ ಪಾವನ | ಚರಿತ ವಿದ್ಯಾಶಂಕರೋತ್ತಮ || ಗುರುಪದಾಂಬುಜಯುಗಳಕಾಂನಮಿಸುವೆನು ಭಕ್ತಿಯಲಿ||೬|| ಧರೆಯೊಳಗೆ ರಾಮಾಯಣಾಖ್ಯೆಯ || ವರಕಥೆಯನೊಲವಿಂದೆ [ಜನಗಳು | ದುರಿತನಾಶನವೆಂದೆರೆದ ವಾಲ್ಮೀಕಿ ಮುನಿರಾಯ | ವರಮುನೀಶನ ಕರುಣೆಯಿಂದಲಿ | ವಿರಚಿಸಿದ ಬುಧವಂಶಜನು ನರ | ಹರಿಯೆನಿಪನಿಳೆಯೊಳಗೆ ಮೈರಾವಣನ ಕಾಳಗವ |೭|| ಅಂತು ಪೀಠಿಕಾಸಂಧಿ