ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಕರ್ಣಾಟಕ ಕಾವ್ಯಕಲಾನಿಧಿ ಮನವೊಲಿದು ತಾನಿತ್ತೆ ನಾತಗೆ | ದನುಜನನ್ನ ಯ ರೂಹಿನಲಿ ಬಂ || ದಿನಕುಲೋತ್ತಮರಿಬ್ಬರನು ಕದ್ದೊಯ್ದನವನೆಂದ ||೫೫] ಎಂದೆನಲು ಕಪಿಕಟಕ ನೀನತಿ | ಬಂಧುರದೆ ನುಡಿದಿದುವೆ ಸಮ್ಮತ | ವೆಂದು ಕೆಡೆನುಡಿದುತ್ತರವ ಸೈರಿಸಲು ಬೇಕೆನುತೆ || ಎಂದೊಡೆಂದ ವಿಭೀಷಣನು ತಾ | ನಿಂದು ಬಲ್ಲೆನೆ ಯಾಖಳನು ನೆರೆ || ಬಂದ ಮಾಯೆಯನ¥ಯೆ ನಾನೆನಲೆಂದನಾಹನುಮ ||೫೬|| ಆದಿಪುರುಷನನುಯ್ದ ದನುಜನ || ಛೇದಿಸುವೆನೀರೇ ಲೋಕದೊ | ಳಾದರಿಸಿ ಹೊಕ್ಕಲ್ಲಿ ಹೊಗುವೆನು ವೈರಿದಾನವನ || ಕಾದಿ ನೊಸಲಕ್ಕರವ ತೊಡೆವೆನು || ಹಾದಿದೋಕವೆ ಯಮನ ನಗರಿಗೆ | ಯಾದನುಜಸತಿಯರನು ದುಃಖದೊಳಿಂದು ಮುಗಿಸುವೆ || ಮೆಚ್ಚಿದನು ಮನದೊಳು ವಿಭೀಷಣ, | ದುಶ್ಚರಿತನಿದ್ದೆಡೆಯ ವಿವರಿಸೆ | ಬೆಚ್ಚುವರು ನಾನೇನ ಹೇಳುವೆ ಕೇಳಲದ್ಭುತವ || ನಿಚ್ಚಟದ ರೂಹಿಂದೆ ಹೊಗೆ ಬಲು | ನೆಚ್ಚಿತವು ಹೊಗಬಾರದೆನಲತಿ | ಚರ್ಚೆಯಿಂದಿರುತಿಹುದು ಘನಪಾತಾಳದೊಳು ಲಂಕೆ ||೫| ಇಳೆಯೊಳತಿ ಚೆಲ್ವಿಕೆಗೆ ಊಾಪುರ | ನೆಲೆಯೆನಿಸಿ ಮಯನಿರ್ಮಿತದ ಬಲು | ಬಲುಮೆಯಲಿ ಖಳಜನ್ಮದೆಡೆಯೆಂದೆನಿಸಿ ಮೆರೆದಿಹುದು || ವಿಲಸಿತದಲಂಕಾರರಚನೆಯ | ಬೆಳಗಿ ತೋರುತೆ ಮುದ್ಗರವನೊಳ | ಕೊಳುತಲು ಪಾತಾಳಲಂಕೆಯೆನಿಪ್ಪ ನಾಮದಲಿ ೫೯||