ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ಮೈರಾವಣನ ಕಾಳಗ ಸುತ್ತ ಬಳಸಿದ ದುರ್ಗ ಕೋಟೆಯ | ವಿಸ್ತರದ ನೆಲೆಗಾಣದಗಏನು | ಕಿತ್ಯ ಬತ್ತೀಸಾಯುಧದ ಶತಕೋಟಿ ರಾಕ್ಷಸರು || ಮುತ್ತಿಕೊಂಡಿಹರೆಂಟುದೆಸೆಯಲಿ | ಯೊತ್ತಿ ಬಂದಡೆ ವೈರಿಜನಗಳ | ಕತ್ತ ಕೊಯ್ತಾಡಾಡುವರು ಬಲುಭಟರು ಕೇಳೆಂದ ||೬೦|| ಆಹೋಲ ಮಧ್ಯದೊಳಗಿರ್ಪುದು | ಕಾಹಿನಿಂದರ್ಚಿಸಿದ ಮಂಟಪ, | ದೋಹರಿಯೊಳೆಸೆದಿರ್ದಳಾಮಣಿಮಯದ ಕಾಂತಿಯಲಿ || ಬೋಹರಿಸಿ ನೆರೆ ಹೊಳೆವ ಭವನದಿ | ಬಾಹುಗಳ ಜಡಿಯುತೆ ನೋಡಲು | ನೇಹದಿಂ ನೆಲಸಿಹಳು ನಿಜದಿಂ ಕಂಕಣಾದೇವಿ (೬೧1 ಹರನಿಗಿಂ ಬಲ್ಲಿದನು ಬಲದಲಿ | ಸಿರಿಪತಿಗೆ ಬಲ್ಲಿದನು ಸಿರಿಯಲಿ ಸರಸಿಜಾಸನನಿಂದೆ ಬಲ್ಲಿದ ಸಕಲವಿದ್ಯೆಯಲಿ || ಸ್ಮರನಿಗಿಂ ಬಲ್ಲಿದನು ರೂಪದಿ | ಸುರಪನಿಂ ಬಲ್ಲಿದನು ಭೋಗದಿ | ಧರೆಯೊಳಗೆ ಮೈರಾವಣನಿಗೆಣೆಯಿಲ್ಲ ಹೊಗಳುವೊಡೆ ||೬೨|| ಶಿವನ ನಗರಿಗೆ ದಾಳಿಯಿಡುವಾ | ಜವನ ದಂಡವ ತುಡುಕಿ ಸೆರೆಯುವ | ಧ್ರುವನ ಮಂಡಲಕುರವಣಿಸಿಯಾತನನು ಭಂಗಿಸುವ || ತವಕದಲಿ ವಡಬನನು ಹಿಡಿಯುವ | ಭುವನವೇನು ಮುರುಟಿ ನುಂಗುವ | ಅವಗಡೆಯ ರಾಕ್ಷಸರ ನಾಯಕರಿಹರು ಶತಕೋಟಿ ||೬೩|| ಒಬ್ಬರೊಬ್ಬರ ಗುಹುತಿನವರಲಿ | ಕೊಬ್ಬಿದಗ್ಗದ ವೀರ ವೀರರ || ನಬ್ಬರಿಷ ಕರಿತುರಗರಥಕೋಟಿಗಳ ಲೆಕ್ಕದಲಿ ||