೧೫. ದ್ವಿತೀಯಾಶ್ವಾಸಂ ಕಂ|| ಕನ್ನಡದನಾಡು ನೆಗಳ್ತಾ | ಸನ್ನು ತಸಿಂಹಾಸನಾಧಿಪತಿಯಿಂ ಸೇರ || ತ್ಯುನ್ನ ತವಿಭವದೆ ಮಧುಮಾ | ಸಂ ನೆರೆದಾರವೆಯವೋಲದೇಂ ಸೊಗಯಿಸಿತೋ ||೧೬|| ವ|| ಇಂತಿರ್ಪಾಗಳುವರಾಜನಾದ ನರಸರಾಜಂ ಕಾಲಗತಿಯನೆಯ ಲಾರಾಜರಾಜಂ ನೀಡುಮಾತೃಭವಶೋಕದಿಂ ಪೀಡಿತವಾದ ನಿಜಮನವು ನಂತಿಂತು ವಿವೇಕದಿಂ ಸಂತವಿಟ್ಟು ಧರ ದಿಂದರಸುಗೆಯ್ಯುತಿರ್ಪಾಗಮನಿ ಸಿದ ನವರಾತ್ರೆಯಮೊದಲದಿನದೊಳ್ ಯಮದಿಂ ಮಂಗಳಮಜ್ಞನಂಬೊಕ್ಕಾ ಸ್ಥಾನೋಜಿತಭೂಷಣಾಂಬರಾದಿಗಳಿಂದಲಂಕೃತಾಂಗನಾಗಿ ಕುಲದೇವತೆಯಂ ಕುಶಲಮಂ ಪ್ರಾರ್ಥಿಸಿ ನಿಂಹಾಸನಾರೋಹಣಕ್ಕೆ ಕಂಕಣಧಾರಣಪೂರಕಂ ದೀಕ್ಷೆಯಂ ತಳೆದವನವಾಸ ಜನವಿತೀರ ಕರಾವಲಂಬನಾಗಿ ತನ್ನನ್ನು ಸಮುಚಿತಸ್ಥಾನಂಗಳೊಳ್ಳೆರೆದಿಪ್ಪ ಪುರೋಹಿತಾಮಾತ್ಯಪ್ರಮುಖನಿಖಿಲ ವೈದಿಕಲೌಕಿಕಸಾಮಾಜಿಕರಿಂದೆಯವನೇ ಕಸಾಮಂತ ನರಪತಿಗಳಿ೦ದೆಯು ಮಿಡಿಕಿರಿದಾಸ್ತಾನಮಂಟಪಕ್ಕೆ ನಡೆತಂದು ವಿಧಿವಿಹಿತಮಾರ್ಗದಿಂ ಕಲಶದೇ ವತಾರಾಧನಂಗೆಯ್ಯು ಕಾಳಿಕಾಪುರಾಣೋಕರೀತಿಯಿಂ ನಿಂಹಾಸನವನರಿಸಿ ನಮಸ್ಕರಿಸಿ ಪಟ್ಟ ಕೃಪಾಣಮಂ ಧರಿಸಿ ||೧೭|| ಕಂ|| ಕನಕಚ್ಚತ್ರಾವೃತಕಾಂ | ಚನಸಿಂಹಾಸನವನ್ನೇರಿದಂ ಮೇಲುದಯಾ || ರನಿರತಿದ್ರುಚಿಕವಿದುದ | ಯನಗೇಂದ್ರಮನೇರುವಂದದಿಂ ಮೃಗರಾಜಂ ||೧೮|| ಹಲವು ಶತಘ್ನಗಳೆರೆ | ಮೊಳಗಿತು ಶುಭವಾದ್ಯನಾದದೊಡನಾಗಳೂ || ಮಳೆಗರೆದುದದಿಂದಾ || ಯಿಳೆಯಾಣ್ಮನ ಮೇಲೆ ಸಕಲಲೌಕಿ ಕಲೋಕಂ ||೧೯|| ವ|| ಸಮನಂತರದೊಳ್ಳಹಾರಾಜಂ ವೈದಿಕವಿದ್ದಜ್ಜನಮಾಶೀರಾದ ಪೂರ್ವಕಮರ್ಪಿಸಿದ ಫಲಮಂತ್ರಾಕ್ಷತೆಗಳುಮಂ ಲೌಕಿಕಾಧಿಕಾರಿಗಳುಂ ಸಾಮಂತನರಪಾಲರುಂ ಚಮಪತಿಗಳುಂ ವಂದನಾಪೂರ್ವಕಮರ್ಪಿಸಿದ ಕಯ್ಯಾ ಣೆಗಳುಮಂ ಕಮ್ಮೊಳುದುಂ ಬಹಿರಂಗಣದೊಳೋರಣಂಗೊಂಡಿ ಒಳ
ಪುಟ:ಮಹಿಷೂರ ಮಹಾರಾಜ ಚರಿತ್ರಂ.djvu/೩೦
ಗೋಚರ