ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ 90 ಸತೀಹಿತೈಷಿಣಿ ಲಕ್ಷ್ಯಕ್ಕೆ ತಾರದೆ, ಅದರಂತೆ, ಮನಬಂದಂತೆ ಮೆರೆಯುತ್ತಿರುವ ಸ್ತ್ರೀಪುರುಷರನ್ನು ಕುರಿತು ಹೇಳಿದ ಮಾತು; ಅಷ್ಟೆ ! ಹೋಗಲಿ, ಬಿಡು; ಸುರಸೆ! ನಿನ್ನ ಮನಸ್ಸಿನಲ್ಲಿ ಈಗ ಉಂಟಾಗಿರುವ ಸಂತಾಪವನ್ನು ದಯೆಯಿಟ್ಟು ಬಿಟ್ಟು ಬಿಡು.

 ಸುರಸೆ:- ನಿಟ್ಟುಸಿರಿಟ್ಟು,-ನಂದಿನಿ! ನಿನ್ನ ಮಾತಿಗೆ ನಾನು ಬೇರೆ ಬೇರೆ ಬೇರೆಯಾಗಿ ತಿಳಿದುಕೊಳ್ಳುವೆನೆಂದೆಣಿಸಬೇಡ. ಈಗ ನಾನು ನನ್ನ ಸ್ವಾಮಿಯ ವಿಚಾರದಲ್ಲಿ ಹೇಗಿರಬೇಕು? ಮನೆಯವರ ವಿಚಾರವಾಗಿ ಹೇಗಿರಬೇಕು? ಅದನ್ನು ಮೊದಲು ತಿಳಿಯಹೇಳು. '
 ನಂದಿನಿ:-ಹೇಗಿರಬೇಕೆನ್ನುವೆಯಾ, ಸುರಸೆ? ಸೋಮಾರಿತನವನ್ನು ಬಿಟ್ಟು, ಪ್ರತಿಯೊಂದು ಸಣ್ಣ ಕೆಲಸವನ್ನೂ ವಿಚಾರಣೆಗೆ ತೆಗೆದುಕೊಂಡು, ನಯ ನೀತಿ ಮಾರ್ಗದಿಂದಲೇ ಅದನ್ನು ತೃಪ್ತಿಕರವಾಗಿರುವಂತೆ ಮಾಡಿಸುವುದರಿಂದ, ನಿಮ್ಮ ಮನೆಯವರ ಆದರಕ್ಕೂ ಮತ್ತು ಹೊರಗಿನವರ ಹೊಗಳಿಕೆಗೂ ಕಾರಣಳಾಗಬೇಕು. ಅದರಲ್ಲಿ ನಿನಗೆ ಅಲಸ್ಯ-ಉದಾಸೀನ-ಅಭಿ ಮಾನಪರತೆಗಳೆಂಬುದು ಸ್ವಲ್ಪವೂ ಇರಬಾರದು. ಪತಿಯ ವಿಚಾರವಾಗಿ ನಡೆಯಬೇಕಾದುದು ಹೇಗೆಂದರೆ-ನಾನು ಹೇಳುವುದು ಹೇಗೆ?-ತಂಗಿ!
  ಸುರಸೆ:-" ಹೇಗೆ ಹೇಳುವುದೆಂದರೆ, ಈವರೆಗೂ ಹೇಳಿದುವನ್ನು ಹೇಗೆ ಹೇಳಿದೆಯೊ, ಇದನ್ನೂ ಹಾಗೆಯೇ ಹೇಳು. ಅದನ್ನು ಹೇಳಲಾರದವಳಿಗೆ ಇದನ್ನು ಹೇಳಲಾದುದು ಹೇಗೆ?"                                                                                   ನಂದಿನಿ:- ಹೇಗಾದರೂ ಆಗಲಿ, ನಾನು ಹೇಳುವದನ್ನೇನೋ ಹೇಳದೆ ಬಿಡುವುದಿಲ್ಲ. ಇನ್ನಿದರಮೇಲೆ ನೀನು ನಿನ್ನ ಬುದ್ಧಿಯನ್ನೂ ಖರ್ಚುಮಾಡಿ,                                                                                                                               ಸಾಧಕ-ಬಾಧಕಗಳನ್ನು ಗೊತ್ತುಮಾಡಿಟ್ಟುಕೊಳ್ಳುವುದು ಯುಕ್ತವಾಗಿದೆ.

ಸುರಸೆ:-ಸರಿ; ಬಿಡು ! ನೀನು ಈ ಕಣಿಯಲ್ಲಿಯೇ ಹೊತ್ತು ಕಳೆಯುತ್ತಿರುವೆ, ವಿಷಯಲಂಪಟರಾದ ಗಂಡಂದಿರನ್ನು ಹೆಂಡಿರು ಹೇಗೆ ದಾರಿಗೆ ತರಬೇಕೋ, ಅದನ್ನು ಹೇಳುವೆಯೋ-ಇಲ್ಲವೊ?

  ನಂದಿನಿ:-ಗಂಭೀರವಾಗಿ-ಸುರಸೆ! ಸ್ವಲ್ಪ ನಿಧಾನಿಸಿ, ಕಿವಿಕೊಟ್ಟು ಕೇಳು. ಮನಸ್ಸಿಟ್ಟು ವಿಚಾರಮಾಡು, ವಿಷಯಲಂಪಟನಾದ ಗಂಡನನ್ನು ಸ್ಥಿರಚಿತ್ರನನ್ನಾಗಿ ಮಾಡಬೇಕಾದ ಹೆಂಡಿತಿಯಲ್ಲಿ ಹೆಚ್ಚಾದ ಚಾಣತನವಿರ ಬೇಕು. ಏಕೆನ್ನುವೆಯೋ-