ಪುಟ:ಮಾತೃನಂದಿನಿ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನ೦ದಿನಿ 91 ಸಾಮಾನ್ಯವಾಗಿ ವಿಚಾರ ಮಾಡಿದರೆ ಗೊತ್ತಾಗುವುದೇನು? ಒಬ್ಬ ಪಾಮರನನ್ನು ಪಂಡಿತನನ್ನಾಗಿ ಮಾಡಬೇಕಾದರೆ, ಸಾಮಾನ್ಯರಿಗೆ ಸಾಧ್ಯವಲ್ಲ, ಪ್ರತಿಭಾಸಂಪನ್ನನಾದ ಪಂಡಿತನೇ ಬರಬೇಕು. ಹಾಗೂ ಪಂಡಿತನು ಒಂದ ಮಾತ್ರಕ್ಕೆ ಪಾಮರನ ಮನಸ್ಸು ಪಾಂಡಿತ್ಯಪ್ರಭೆಯನ್ನು ಹೊಂದಲಾರದು, ಅದಾಗಬೇಕಾದರೆ, ಪಂಡಿತನು ಅಧಿಕ ಪ್ರಯತ್ನ ಪಡಬೇಕು, ಮೊದಲು, ಪಾಮರನ ಜೊತೆಯಲ್ಲಿ ತಾನೂ ಪಾಮರನಂತೆ ನಟಿಸಬೇಕು. ಪಾಮರ ಭಾಷಣದಿಂದಲೇ ಅವನ ಮನಸ್ಸಿಗೆ ಪ್ರಿಯವಾದ ಮಾತುಗಳನ್ನು ಹೇಳಬೇಕು. ತಾನು ಮಾಡುವ ಕೆಲಸವು, ಪಾಮರನಿಗೆ ರುಚಿಸುವಂತೆಯೇ, ಕಾಲಕ್ಕೆ ತಕ್ಕಂತೆ ತುಣಕು-ಮಿಣಕುಗಳಿಂದ ಕೂಡಿದುದಾಗಿಯೂ ಇರಬೇಕು. ಹೀಗೆ ಮಾಡದಿದ್ದರೆ, ಅವನು ಬಳಿಗೆ ಸೇರುವುದೂ ಇಲ್ಲ; ನುಡಿಯುವುದೂ ಇಲ್ಲ. ಮನಸ್ಸನ್ನು ತಿರುಗಿಸುವುದಂತೂ ಇಲ್ಲವೇ ಇಲ್ಲ, ಮೇಲೆ ಹೇಳಿದಂತೆ ಮಾಡುವ ಮೊದಲನೆಯ ಪ್ರಯತ್ನದಲ್ಲಿ ಪಂಡಿತನು, ಕೇವಲ ನಟನೆಯಲ್ಲಿ ಮಾತ್ರವೇ ಪಾಮರನಂತಿರಬೇಕಲ್ಲದೆ, ಅಂತರಂಗದಲ್ಲಿಯೂ ಪಾಮರನಂತಾಗಿರಬಾರದು. ಯಾವ ಕಾಲದಲ್ಲಿ, ಯಾವ ಕಾರ್ಯಕಲಾಪಗಳಲ್ಲಿಯಾಗಲೀ, ತನ್ನ ಮನಸ್ಸು ವಿಕಾರವಾಗದಂತೆ ಜಾಗರೂಕತೆಯಿಂದಿದ್ದು, ವಿಚಾರಪೂರ್ವಕವಾಗಿ ಎಲ್ಲವನ್ನೂ ನಿರ್ವಹಿಸುತ್ತ ಬರಬೇಕು. ಹೀಗೆ ಮಾಡುವುದರಿಂದ ಸ್ವಲ್ಪಾವಧಿಯಲ್ಲಿಯೇ ಪಾಮರನ ಮನಸ್ಸು ಪ౦ಡಿತನ ಕಡೆಗೆ ತಿರುಗಿ, ಈತನ ಉಪದೇಶಕ್ಕೆ ಒಳಪಡುವಂತಾಗುವುದು. ಆಗಲೂ ತಾನು ಕಾಲವನ್ನು ನೋಡಿ, ಪಂಡಿತೋಕ್ತಿಗಳನ್ನು, ತಕ್ಕ ನಿದರ್ಶನಗಳೊಡನೆ ಹೇಳಿ ತಿಳಿಸುತ್ತಲೂ, ನಡುನಡುವೆ ಪಾಮರನ ವನಸ್ಸು ತನ್ನ ಕಡೆಯಿಂದ ಬೇರೆಕಡೆಗೆ ಹೋಗದಂತಿರಲು, ಆತನ ಮನೋವೃತ್ತಿಗೆ, ಮೊದಲು ಪ್ರಿಯವಾಗಿದ್ದ ವಿಚಾರದಲ್ಲಿ ಅಲ್ಪಸ್ವಲ್ಪವಾಗಿ ಪ್ರಸ್ತಾಪಿಸಿ, ಮತ್ತೆ ಉಪದೇಶಿಸುವುದಕ್ಕೆ ತೊಡಗುತ್ತಲೂ ಬಂದರೆ, ಕಡೆಗೆ ಪಾಮರನೂ ಪಂಡಿತನೇ ಆಗುವನು. ಹಾಗಿಲ್ಲದೆ, ಪಾಮರ ಬೋಧೆಗೆ ತಾನೇ ಕಿವಿಕೊಟ್ಟು, ಮನಸ್ಸನ್ನು ಸಡಿಲಮಾಡಿಟ್ಟರೆ, ಪಂಡಿತನ ಗತಿಯು, ಪಾಮರನಿಗಿಂತಲೂ ಕೀಳೆನ್ನಿಸುವುದರಲ್ಲಿ ಸಂಶಯವಿಲ್ಲ. ಸುರಸೆ:-ವಿಸ್ಮಯ ಕೌತುಕಗಳಿಂದ-" ಅದೇನನ್ನು ಹೇಳಿದೆಯೋ