92 ಸತೀಹಿತೈಷಿಣೀ
ನನಗೆ ಅರ್ಥವೇ ಆಗಲಿಲ್ಲ. ನಿನ್ನ ಈಗಿನ ಒಗಟೆಯನ್ನು ಬಿಡಿಸಿ, ಅಭಿಪ್ರಾಯವನ್ನು ತಿಳಿದುಕೊಳ್ಳುವಷ್ಟು ಸೂಕ್ಷ್ಮಬುದ್ಧಿಯೂ ನನಗಿಲ್ಲ.ನೀನೇ ಬಿಡಿಸಿ ಹೇಳುವುದಾದರೆ ಕೇಳುತ್ತೇನೆ. ಸುಮ್ಮನೆ ಮಾಟಗಾರ್ತಿಯಂತೆ ಯಾವಾವುದೋ ಹೂಟದ ಆಟಗಳನ್ನು ಇಲ್ಲಿ ತೆಗೆದು ತೋರಿಸಬೇಡ.” ನಂದಿನಿ:-ತಲೆದೂಗಿ- 'ಅಬ್ಬ!ಇಷ್ಟು ಕೋಪವು ನಿನ್ನಲ್ಲಿರುವುದೆಂದು ತಿಳಿದಿರಲಿಲ್ಲ! ಇರಲಿ,ಸಂತೋಷ. ಸುರಸೆ!ನೋಡು; ಎಚ್ಚರಿಕೆಯಲ್ಲಿ ವಿಚಾರಮಾಡಿ ನೋಡು. ವಿಷಯಲಂಪಟನನ್ನು ಬುದ್ಧಿವಂತನನ್ನಾಗಿ ಮಾಡುವುದು ಆತನ ಅರ್ಧಾಂಗಿಯ ಕರ್ತವ್ಯವೇ ಸರಿ. ಅವಳು ತನ್ನ ಕರ್ತವ್ಯವನ್ನು ಸರಿಯಾಗಿ ಗಮನಿಸುವುದಾಗಿದ್ದರೆ, "ಪತಿಯು ವಿಷಯಾತುರನಾಗಿ ಕೆಟ್ಟು ಹೋಗುವನು.ಇವನು ತನ್ನ ಮುಕ್ತಿಮಾರ್ಗಕ್ಕೆ ಕಂಟಕನಾಗಿಯೇ ಇರುವುದರಿಂದ ಇವನಲ್ಲಿ ಹೊಡೆದಾಡುವುದನ್ನು ಬಿಟ್ಟು, ಹೇಗಾದರೂ ಬಂಧನಿರ್ಮುಕ್ತೆಯಾಗುವುದು ನನಗೆ ಲೇಸು” ಎಂಬೀ ತೆರದ ಅನರ್ಥಕರವಾದ ವೈರಾಗ್ಯವನ್ನು ಹಿಡಿಯಬಾರದು. ಪತಿಯಲ್ಲಿ ತಾನು ವಿರಕ್ತೆಯೆಂಬುದನ್ನು ಸ್ವಲ್ಪಮಟ್ಟಿಗೂ ಸೂಚಿಸಬಾರದು. ಆತನಲ್ಲಿ ತಾನು ಕೇವಲ ಅನುರಕ್ತೆಯಾಗಿರುವುದೂ, ಅದನ್ನೇ ಕಾರ್ಯ-ಕರಣ-ಕಲಾಪಗಳಲ್ಲಿಯೂ ತೋರುವುದೂ ಅವಶ್ಯವಾದುದೆಂದು ತಿಳಿದಿರಬೇಕು. ಅಲ್ಲದೆ, ಪತಿಯು ಯಾವಕಾಲದಲ್ಲಿ, ಹೇಗೆ, ನಡೆಯಬೇಕೆಂದು ಹೇಳುವನೋ, ತಕ್ಕ ಮಟ್ಟಿಗೆ ಜಾಗ್ರತೆಯಾಗಿಯೇ ಅದನ್ನು ಸಿದ್ಧಪಡಿಸಿ, ಆತನ ಮನಸ್ಸು ಅದರಿಂದ ತನ್ನಲ್ಲಿ ಪ್ರಸನ್ನವಾಗುವಂತೆ ಮಾಡಿಕೊಳ್ಳುವುದೂ, ಹಾಗೆ ಪ್ರಸನ್ನವಾಯಿತೆಂದು ತಿಳಿದ ಕೂಡಲೇ, ಅದೇ ವಿಷಯವನ್ನೇ ಸಪ್ರಮಾಣವಾಗಿ ಮುಂದಿಟ್ಟು, ಅದರ ಫಲಾನುಭವ ವಿಚಾರವು ಅತನ ಮನಸ್ಸಿಗೆ ಹಿಡಿದು, ಮುಂದೆ ಹೇಗೆ ನಡೆದರೆ ತನಗೆ ವಿಹಿತವೆಂಬ ಆಲೋಚನೆಯು ಅವನಿಗು೦ಟಾಗುವಂತೆ ನಯವಿನಯ ಮಾರ್ಗದಲ್ಲಿ ನಿವೇದಿಸುವುದೇ, ಪತಿಯ ಹಿತವನ್ನೇ ಕೋರುವ ಸತಿಗೆ ಸಹಜವಾದುದು. ಹಾಗಿಲ್ಲದೆ, ಅವನು ಆವ ವಿಷಯವನ್ನು ಕುರಿತು ಹೇಳಿದರೂ, ಅದಕ್ಕೆ ಯಾವದಾದರೂ ಒಂದು ಅಲ್ಲದಸಲ್ಲದ ನೆವಗಳನ್ನು ಕಲ್ಪಿಸಿ ಅತಂಕಪಡಿಸುವುದು ಸಹಜಗುಣವಲ್ಲ. ಹಾಗೆ ಮಾಡುವುದರಿಂದ ವಿಷಯಲಂಪಟನಾದ ಆತನ ಪ್ರಕೃತಿಯು,ವಿಚಾರಶೂನ್ಯತೆಯಿಂದ