ಪುಟ:ಮಾತೃನಂದಿನಿ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

93 ಮಾತೃನಂದಿನಿ ಅವಿವೇಕಮಾರ್ಗದಲ್ಲಿಯೇ ತಿರುಗುವಂತಾದೀತು. ಹಾಗೆ ದಾರಿಯನ್ನು ತಪ್ಪಿಹೋದ ಬಳಿಕ ಆತನು ಮತ್ತೆ ತನ್ನ ನಿಜವಾದ ದಾರಿಗೆ ತಿರುಗಿ ಬರುವನೆಂಬುದು ಅಸಂಗತ. ಇದನ್ನು ಚೆನ್ನಾಗಿ ತಿಳಿದು, ಯಾವ ನಾರಿಯೂ ತನ್ನ ಭರ್ತಾರನಲ್ಲಿ ಉಪೇಕ್ಷೆಯನ್ನು ತೋರ........

  • ನಂದಿನಿಯ ಕಡೆಯ ಮಾತು ಪೂರೈಸುವಷ್ಟರಲ್ಲಿಯೇ ಹಿಂದಿನಿಂದ ಬಂದ ಮತ್ತೋರ್ವ ತರುಣಿಯು ನಂದಿನಿಯ ಕಣ್ಗಳನ್ನು ಮುಚ್ಚಿ,- "ಅಹುದು, ನಂದಿನಿ! ಅಹುದಹುದು!!ನೀನು ಎಲ್ಲವನ್ನೂ ತಿಳಿದವಳಂತೆ ಹೇಳಿಕೊಳ್ಳುವುದೂ, ನಾವು ಅದನ್ನೇ ಮಹಾಪ್ರಸಾದವೆಂದು ನಂಬುವುದೂ ಸಹಜವಾದುದೇಸರಿಯೆಂದು ಹೇಳಿದೆಯಲ್ಲವೆ? ಅಹುದು.”

ನಂದಿನಿ:-ಬಲವಂತದಿಂದ ಕಣ್ಗಳನ್ನು ಬಿಡಿಸಿಕೊಂಡು, ನಿಂತಿದ್ದವಳ ಕೈಗಳನ್ನು ಹಿಡಿದೆಳೆದು ಬಳಿಯಲ್ಲಿ ಕುಳ್ಳಿರಿಸಿ, "ಇದೇನು, ಪರಿಮಳೆ! ನೀನು ಬಂದುದಾವಾಗ ?” ಪರಿಮಳೆ:- ನಾನು ಯಾವಾಗ ಬಂದರೆ ನಿಮಗೇನು?ನಿಮ್ಮ ಮಾತಿಗೆ ಮೊದಲಾದಾಗಲೇ ನಾನು ಬಂದುದು. ನಂದಿನಿ:- ಅದೇಕೆ, ಪರಿಮಳೆಯಾಗಿದ್ದೂ, ನೀನು ಬಂದುದಕ್ಕೆ ಸೂಚನೆಯನ್ನು ಕೊಡಲಿಲ್ಲ? ಪರಿಮಳೆ:- ಕಿರುನಗೆಯಿ೦ದ-'ಪ್ರಮೋದವನ್ನುಂಟುಮಾಡುವ ಅನಂದ ರಸಗಳೆರಡೂ, ಬೇರೆಬೇರೆಯಾದ ರೂಪಾಂತರವನ್ನು ಹೊಂದಿ ಕುಳಿತಿದ್ದುದನ್ನು ನೋಡಿಯೂ, ಪರಿಮಳವು ಹೇಗೆ ತನ್ನ ಆಗಮನವನ್ನು ಸೂಚಿ ಸಲೆಳೆಸುವುದು?' ನಂದಿನಿ:-ಕೊಂಕುನುಡಿಯ ಬಿಂಕವಿದೇನು? ಪರಿಮಳೆ!ಈವರೆಗೂ ಏನು ಮಾಡುತ್ತಿದ್ದೆ? ಪರಿಮಳೆ:-ಮಾಡುವುದೇನು?ಮರೆಯಾಗಿದ್ದು ನಿಮ್ಮ ಮಾತುಗಳನ್ನು ಕೇಳುತ್ತಿದ್ದುದೇ......... ನಂದಿನಿ:-ಹೊಂಚಿನಿಂತೇ ಕೇಳಬೇಕಾಗಿತ್ತೇನು? ಇದಿರಿಗೆ ಬಂದಿದ್ದರಾಗುತ್ತಿರಲಿಲ್ಲವೋ? ಪರಿಮಳೆ;-ಹೇಗೆ?ನಾನು ಇದಿರಿಗೆ ಬಂದಿದ್ದರೆ ನಿಮ್ಮ ರಸನಾ